Subscribe to Gizbot

ಇನ್ನಷ್ಟು ಸ್ಮಾರ್ಟ್‌ವಿಧಾನದಲ್ಲಿ ಜಿಮೇಲ್ ಬಳಕೆ ಹೇಗೆ?

Written By:

ಜಿಮೇಲ್ ವರವೂ ಹೌದು ಶಾಪವೂ ಹೌದು. ಗ್ಯಾಲಕ್ಸಿ ಎಸ್‌5 ನಂತಹ ಡಿವೈಸ್ ಅನ್ನು ನೀವು ಹೊಂದಿದ್ದು ಇಮೇಲ್ ಮಾಡಬೇಕಾದ ಕ್ಷಣದಲ್ಲಿ ಜಿಮೇಲ್ ನಿಮಗೆ ತೊಂದರೆಯನ್ನುಂಟು ಮಾಡುವುದು ಖಂಡಿತ. ಹೌದು ಬರಿಯ ತೊಂದರೆಯನ್ನು ಮಾತ್ರ ಇಂದಿನ ಲೇಖನದಲ್ಲಿ ನಾವು ತಿಳಿಸದೇ ಇದಕ್ಕೆ ಪರಿಹಾರವನ್ನು ನಾವು ತಿಳಿಸುತ್ತಿದ್ದೇವೆ.

ಓದಿರಿ: 10 ಅತ್ಯದ್ಭುತ ಜಿಮೇಲ್ ಲ್ಯಾಬ್ ಫೀಚರ್‌ಗಳು

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್‌ಗಾಗಿ ಜಿಮೇಲ್ ಪರಿಹಾರ ಸಲಹೆಗಳನ್ನು ನಾವು ನೋಡಲಿದ್ದು ಇದು ಹೆಚ್ಚು ಧನಾತ್ಮಕವಾಗಿದೆ ಅಂತೆಯೇ ನಿಮ್ಮ ಸ್ಮಾರ್ಟ್‌ಫೋನ್‌ನ ಪ್ರಗತಿಗೆ ಇನ್ನಷ್ಟು ಅತ್ಯಗತ್ಯವಾಗಿದೆ. ನಿಮ್ಮಲ್ಲಿ ಜಿಮೇಲ್‌ನ ಇತ್ತೀಚಿನ ಆವೃತ್ತಿ ಇರುವುದು ಅತ್ಯವಶ್ಯಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇನ್‌ಬಾಕ್ಸ್‌ ಮರ್ಜ್ ಮಾಡಿ

ನಿಮ್ಮ ಇನ್‌ಬಾಕ್ಸ್‌ಗಳನ್ನು ಮರ್ಜ್ ಮಾಡಿ

ಹಲವಾರು ಗೂಗಲ್ ಖಾತೆಗಳಿಂದ ಒಮ್ಮೆಲೆ ಸಂದೇಶಗಳನ್ನು ಓದುವ ಫೀಚರ್ ಅನ್ನು ಜಿಮೇಲ್‌ನ ಅತ್ಯಾಧುನಿಕ ಆವೃತ್ತಿ ಹೊಂದಿದೆ.

ಜಿಮೇಲ್ ಅಪ್ಲಿಕೇಶನ್

ತ್ವರಿತ ಕ್ರಿಯೆಗಳು

ಆಂಡ್ರಾಯ್ಡ್‌ಗಾಗಿ ಜಿಮೇಲ್ ಅಪ್ಲಿಕೇಶನ್ ಇನ್ನಷ್ಟು ಕ್ಷಿಪ್ರವಾಗಿ ನಿಮ್ಮ ಕೆಲಸಗಳನ್ನು ಮಾಡುವಂತಿದ್ದು ನಿಮಗೆ ಎಡ ಅಥವಾ ಬಲಭಾಗದಲ್ಲಿ ಕೂಡ ಇಮೇಲ್ ಸ್ವೈಪ್ ಮಾಡಬಹುದು.

ಜಿಮೇಲ್ ಸಿಂಕಿಂಗ್

ಸಿಂಕ್ ಸಮಸ್ಯೆಗಳು

ಸೆಟ್ಟಿಂಗ್ಸ್ ಇಲ್ಲಿ ಖಾತೆಗಳನ್ನು ಸ್ಪರ್ಶಿಸಿದಾಗ ನಿಮ್ಮ ಗೂಗಲ್ ಖಾತೆ ಫೋನ್‌ಗೆ ಸಂಯೋಜನೆಗೊಂಡಿರುವುದನ್ನು ಕಾಣಬಹುದು. ಇದರಲ್ಲಿ ಒಂದನ್ನು ಸ್ಪರ್ಶಿಸಿದಾಗ ಜಿಮೇಲ್ ಸಿಂಕಿಂಗ್ ಆರಂಭಗೊಳ್ಳುತ್ತದೆ.

ಸರ್ಚ್ ಆಪರೇಟರ್‌

ಸರ್ಚ್ ಸ್ಮಾರ್ಟರ್

ಅಪ್ಲಿಕೇಶನ್ ಒಳಭಾಗದಲ್ಲಿ ಸರ್ಚ್ ವಿಧಾನಗಳು ಸರಳವಾಗಿವೆ. ಸರ್ಚ್ ಆಪರೇಟರ್‌ಗಳ ಪಟ್ಟಿಯನ್ನು ಗೂಗಲ್ ಹೊಂದಿದೆ.

ಮ್ಯೂಟ್ ಆಗುತ್ತವೆ

ಸಂವಾದಗಳನ್ನು ಮ್ಯೂಟ್ ಮಾಡಲು

ನೀವು ಪ್ರಯಾಣದಲ್ಲಿರುವಾಗ, ಜಿಮೇಲ್‌ನೊಳಗೆ ಅತಿಮುಖ್ಯವಾದ ಸಂದೇಶಗಳು ಮಾತ್ರವೇ ಬರಲಿ ಎಂಬುದನ್ನು ನೀವು ಹೊಂದಿಸಬಹುದಾಗಿದೆ. ಇದು ಮ್ಯೂಟ್ ಫೀಚರ್ ಅನ್ನು ಹೊಂದಿದ್ದು, ಹೊಸ ಸಂದೇಶಗಳು ಸ್ವಯಂಚಾಲಿತವಾಗಿ ಮ್ಯೂಟ್ ಆಗುತ್ತವೆ.

ಆಟೊ ಅಡ್ವಾನ್ಸ್

ಆಟೊ ಅಡ್ವಾನ್ಸ್

ಇಮೇಲ್‌ನಲ್ಲಿ ಒಮ್ಮೆಗೆ ಹಲವಾರು ಕಾರ್ಯಗಳನ್ನು ನಿಮಗೆ ಸಾಧಿಸಬೇಕು ಎಂದಾದಲ್ಲಿ ಆಟೊ ಅಡ್ವಾನ್ಸ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಆರ್ಕೈವ್ ಇಲ್ಲವೇ ಡಿಲೀಟ್ ಮಾಡಿದ ಸಂದೇಶ ವಿಭಾಗಕ್ಕೆ ನಿಮ್ಮನ್ನು ಕೊಂಡೊಯ್ಯದೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ನಿಮ್ಮನ್ನು ಮುಂದಿನ ಇಮೇಲ್‌ಗೆ ಕರೆದೊಯ್ಯುತ್ತದೆ.

ಸಾರ್ಟ್

ನಿಮ್ಮ ಮೇಲ್ ಸಾರ್ಟ್ ಮಾಡಲು ಜಿಮೇಲ್‌ಗೆ ಟ್ರೈನಿಂಗ್ ನೀಡಿ

ಪ್ರಿಯಾರಿಟಿ ಇನ್‌ಬಾಕ್ಸ್, ಇನ್‌ಬಾಕ್ಸ್, ಸ್ಪ್ಯಾಮ್ ಹೀಗೆ ವಿಭಾಗಗಳಿದ್ದು ನಿಮ್ಮ ಯಾವ ಸಂದೇಶಗಳು ಯಾವ ವಿಭಾಗವನ್ನು ತಲುಪಬೇಕು ಎಂಬ ಮಾಹಿತಿಯನ್ನು ಜಿಮೇಲ್‌ಗೆ ನೀಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Email is a blessing and a curse. Even if you've got a device that's perfectly equipped for email like the Galaxy S5, managing all your emails is still a task and a half. Gmail from Google certainly makes email easy, but how many tricks do you know for making it even easier.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot