ಜಿಮೇಲ್‌ನಲ್ಲೂ ವಾಟ್ಸಾಪ್‌ನಲ್ಲಿನ ಈ ಫೀಚರ್ಸ್‌ ಲಭ್ಯ; ಇದರಿಂದ ಬಳಕೆದಾರರು ಇನ್ನಷ್ಟು ಸೇಫ್‌

|

ಗೂಗಲ್‌ ಸಂಸ್ಥೆಯ ಪ್ರಮುಖ ಸೇವೆಗಳಲ್ಲಿ ಒಂದಾದ ಜಿಮೇಲ್‌ ಅನ್ನು ಯಾರು ತಾನೆ ಬಳಸೋದಿಲ್ಲ ಹೇಳಿ. ಈಗಂತೂ ಯಾವುದೇ ಕೆಲಸಗಳಿಗೂ ಜಿಮೇಲ್‌ ಕಡ್ಡಾಯವಾಗಿದೆ. ಜಿಮೇಲ್‌ ಇಲ್ಲವಾದರೆ ಇತರೆ ಪ್ಲಾಟ್‌ಫಾರ್ಮ್‌ಗಳನ್ನು ಬಳಕೆ ಮಾಡುವುದು ಕಷ್ಟಕರವಾದ ಕೆಲಸ. ಈ ಕಾರಣಕ್ಕಾಗಿಯೇ ಗೂಗಲ್‌ ಈಗಾಗಲೇ ಹಲವಾರು ಫೀಚರ್ಸ್‌ಗಳನ್ನು ಜಿಮೇಲ್‌ಗೆ ನೀಡಿದೆಯಾದರೂ ಈ ಪ್ರಮುಖ ಸೌಲಭ್ಯವನ್ನು ಸಾಮಾನ್ಯ ಬಳಕೆದಾರರಿಗೆ ಈವರೆಗೂ ನೀಡಿರಲಿಲ್ಲ. ಆದರೆ ಇನ್ಮುಂದೆ ಬಳಕೆದಾರರಿಗೆ ಈ ಅಗತ್ಯ ಫೀಚರ್ಸ್‌ ಲಭಿಸಲಿದೆ.

ಜಿಮೇಲ್‌

ಹೌದು, ಜಿಮೇಲ್‌ನಲ್ಲಿ ಈಗಾಗಲೇ ಹಲವಾರು ಭದ್ರತಾ ಫೀಚರ್ಸ್‌ಗಳು ಇದ್ದು, ಇದರ ನಡುವೆ ಇಮೇಲ್‌ಗಳನ್ನು ಉಲ್ಲಂಘಿಸಲು ಕಷ್ಟವಾಗುವಂತೆ ಮಾಡಲು ಗೂಗಲ್‌ ಹೊಸ ನವೀಕರಣವನ್ನು ಹೊರತರುತ್ತಿದೆ. ಈ ಫೀಚರ್ಸ್‌ ವಾಟ್ಸಾಪ್‌, ಸಿಗ್ನಲ್‌, ಟೆಲಿಗ್ರಾಮ್‌ನಲ್ಲಿ ಕೆಲಸ ಮಾಡುವ ರೀತಿಯಲ್ಲೇ ಇದರಲ್ಲೂ ಕೆಲಸ ಮಾಡುತ್ತದೆ. ಇದರಿಂದಾಗಿ ಯಾರೇ ಆದರೂ ಸಹ ನಿಮಗೆ ಬಂದ ಸಂದೇಶಗಳನ್ನು ಅಥವಾ ನೀವು ಕಳುಹಿಸುವ ಸಂದೇಶವನ್ನು ನೀವು ಸೂಚಿಸಿದವರನ್ನು ಬಿಟ್ಟು ಬೇರೆ ಯಾರೂ ಓದಲು ಸಾಧ್ಯವಿಲ್ಲ. ಹಾಗಿದ್ರೆ ಏನದು ಫೀಚರ್ಸ್‌?, ಇದರಿಂದ ಏನೆಲ್ಲಾ ಉಪಯೋಗ? ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಅನ್ನು ಈ ಮೊದಲೇ ವಾಟ್ಸಾಪ್‌ ಹಾಗೂ ಇನ್ನಿತರೆ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಪ್‌ಗಳಲ್ಲಿ ಇರುವುದನ್ನು ನೀವು ನೋಡಿರಬಹುದು. ಇದೇ ಫೀಚರ್ಸ್‌ ಅನ್ನು ಈಗ ಜಿಮೇಲ್‌ಗೆ ಪರಿಚಯಿಸಲು ಗೂಗಲ್‌ ಮುಂದಾಗಿದೆ. ಈಗಾಗಲೇ ಗೂಗಲ್‌ ಡ್ರೈವ್, ಡಾಕ್ಸ್, ಶೀಟ್ಸ್‌, ಸ್ಲೈಡ್ಸ್‌, ಗೂಗಲ್‌ ಮೀಟ್‌ ಮತ್ತು ಗೂಗಲ್‌ ಕ್ಯಾಲೆಂಡರ್ (ಬೀಟಾ) ನಾದ್ಯಂತ ಕ್ಲೈಂಟ್-ಸೈಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಅನ್ನು ಗೂಗಲ್‌ ನೀಡುತ್ತಿರುವುದು ಗಮನಾರ್ಹ.

ಗೌಪ್ಯತೆ

ಗೌಪ್ಯತೆಯನ್ನು ವರ್ಧಿಸುವುದು ಮತ್ತು ಇಮೇಲ್ ವಿತರಣೆಗಳನ್ನು ಹೆಚ್ಚು ಸುರಕ್ಷಿತವಾಗಿಸುವುದು ಗೂಗಲ್‌ಗೆ ಪ್ರಮುಖವಾದ ಮಾನದಂಡವಾಗಿದ್ದು, ಇದರ ಆಧಾರದಲ್ಲೇ ಈ ಕೆಲಸ ಮಾಡಲು ಮುಂದಾಗಿದೆ. ಅದರಂತೆ ಗೂಗಲ್‌ ವೆಬ್‌ ಆವೃತ್ತಿಯಲ್ಲಿನ ಜಿಮೇಲ್‌ಗೆ ಈ ಫೀಚರ್ಸ್‌ ಅನ್ನ ಪರಿಚಯಿಸಲು ಮುಂದಾಗಿದೆ. ಈಗಾಗಲೇ ಈ ಫೀಚರ್ಸ್‌ ಬೀಟಾ ಆವೃತ್ತಿಯಲ್ಲಿ ಬಳಕೆಯಲ್ಲಿ. ಹಾಗೆಯೇ ಬೀಟಾ ಆವೃತ್ತಿಯಲ್ಲಿ ಎಂಟರ್‌ಪ್ರೈಸ್ ಪ್ಲಸ್, ಎಜುಕೇಶನ್‌ ಪ್ಲಸ್ ಹಾಗೂ ಎಜುಕೇಶನ್‌ ಸ್ಟ್ಯಾಂಡರ್ಡ್ ಖಾತೆಗಳಲ್ಲಿ ಮಾತ್ರ ಬಳಕೆ ಮಾಡಬಹುದಾಗಿದೆ.

ಎಂಟರ್‌ಪ್ರೈಸ್

ಎಂಟರ್‌ಪ್ರೈಸ್ ಬಳಕೆದಾರರು ಜನವರಿ 20, 2022 ರವರೆಗೆ ಜಿಮೇಲ್‌ ಕ್ಲೈಂಟ್-ಸೈಡ್ ಎನ್‌ಕ್ರಿಪ್ಶನ್ ಬೀಟಾಗೆ ಸೈನ್ ಅಪ್ ಮಾಡಲು ಅರ್ಹರಾಗಿದ್ದಾರೆ ಎಂದು ಗೂಗಲ್‌ ಘೋಷಣೆ ಮಾಡಿತ್ತು. ಜಿಮೇಲ್‌ ವೆಬ್‌ಗಾಗಿ ಹೊಸ ಕ್ಲೈಂಟ್-ಸೈಡ್ ಎನ್‌ಕ್ರಿಪ್ಶನ್ ಬಳಕೆದಾರರ ಡೇಟಾ ಮತ್ತು ಲಗತ್ತುಗಳನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಹಾಗೆಯೇ ಅದನ್ನು ಓದಲಾಗುವುದಿಲ್ಲ ಯಾವುದೇ ಮೂರನೇ ವ್ಯಕ್ತಿಗೆ ಅನುವು ಮಾಡಿಕೊಡುವುದಿಲ್ಲ. ಅದರಲ್ಲೂ ಗೂಗಲ್‌ ಸಹ ಇದನ್ನು ವೀಕ್ಷಿಸುವುದಿಲ್ಲ ಎಂದು ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿತ್ತು. ಹಾಗೆಯೇ ಈ ಫೀಚರ್ಸ್‌ನಿಂದ ಬಳಕೆದಾರರ ಡೇಟಾ ತುಂಬಾ ಸುರಕ್ಷತೆಯಿಂದ ಕೂಡಿರುತ್ತವೆ ಎಂದು ಸಹ ಹೇಳಿತ್ತು.

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಈಗೇಕೆ?

ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಈಗೇಕೆ?

ಜಿಮೇಲ್‌ ನಲ್ಲಿನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಬಳಕೆದಾರರ ಇಮೇಲ್ ಸಂದೇಶಗಳನ್ನು ಕಳುಹಿಸುವವರಿಂದ ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ತಿಳಿಸಿದ್ದು, ಉದ್ದೇಶಿತ ಸ್ವೀಕರಿಸುವವರು ಮಾತ್ರ ಆ ಮೆಸೆಜ್‌ಗಳನ್ನು ಡೀಕ್ರಿಪ್ಟ್ ಮಾಡಬಹುದು. ಯಾವುದೇ ಮೂರನೇ ವ್ಯಕ್ತಿ, ಸಂಸ್ಥೆ ಮತ್ತು ಇಮೇಲ್ ಸರ್ವರ್ ಗೂಗಲ್‌ ಕಳುಹಿಸಲಾದ ಸಂದೇಶಗಳು ಮತ್ತು ಲಗತ್ತುಗಳನ್ನು ಡೀಕ್ರಿಪ್ಟ್ ಮಾಡಲು ಅಥವಾ ಓದಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.

ಇಮೇಲ್‌ನ ಹೆಡರ್ ಎನ್‌ಕ್ರಿಪ್ಟ ಆಗುವುದಿಲ್ಲ

ಇಮೇಲ್‌ನ ಹೆಡರ್ ಎನ್‌ಕ್ರಿಪ್ಟ ಆಗುವುದಿಲ್ಲ

ಕ್ಲೈಂಟ್-ಸೈಡ್ ಎನ್‌ಕ್ರಿಪ್ಶನ್‌ಗಾಗಿ ಒಮ್ಮೆ ಕಾರ್ಯಸ್ಥಳದ ಬಳಕೆದಾರರು ಸೈನ್-ಅಪ್ ಮಾಡಿದರೆ, ಅವರು ತಮ್ಮ ಡೊಮೇನ್ ಒಳಗೆ ಅಥವಾ ಹೊರಗೆ ಎನ್‌ಕ್ರಿಪ್ಟ್ ಮಾಡಿದ ಇಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ. ಇನ್‌ಲೈನ್ ಚಿತ್ರಗಳನ್ನು ಒಳಗೊಂಡಂತೆ ಎಲ್ಲಾ ಇಮೇಲ್ ಬಾಡಿ ಮತ್ತು ಲಗತ್ತಿಸಿದ ಫೈಲ್‌ಗಳನ್ನು ಹೊಸ ಫೀಚರ್ಸ್‌ ಮೂಲಕ ಎನ್‌ಕ್ರಿಪ್ಟ್ ಮಾಡಲಾಗುತ್ತದೆ ಎಂದು ಗೂಗಲ್ ತಿಳಿಸಿದೆಯಾದರೂ ಟೈಮ್‌ಸ್ಟ್ಯಾಂಪ್‌ಗಳು ಮತ್ತು ಸ್ವೀಕರಿಸುವವರ ಲಿಸ್ಟ್‌ ಒಳಗೊಂಡಂತೆ ಇಮೇಲ್‌ನ ಹೆಡರ್ ಅನ್ನು ಗೂಗಲ್‌ ಎನ್‌ಕ್ರಿಪ್ಟ್ ಮಾಡುವುದಿಲ್ಲ ಎಂದು ತಿಳಿಸಿದೆ.

ಯಾವಾಗ ಲಭ್ಯ?

ಯಾವಾಗ ಲಭ್ಯ?

ಗೂಗಲ್‌ ಡ್ರೈವ್, ಡಾಕ್ಸ್, ಶೀಟ್‌ಗಳು, ಸ್ಲೈಡ್‌ಗಳು, ಗೂಗಲ್‌ ಮೀಟ್‌ ಮತ್ತು ಗೂಗಲ್‌ ಕ್ಯಾಲೆಂಡರ್‌ (ಬೀಟಾ) ನಲ್ಲಿ ಕ್ಲೈಂಟ್-ಸೈಡ್ ಎನ್‌ಕ್ರಿಪ್ಶನ್ ಅನ್ನು ಗೂಗಲ್‌ ಈಗಾಗಲೇ ನೀಡುತ್ತಿದ್ದು, ಈ ಫೀಚರ್ಸ್‌ ಅನ್ನು ವೈಯಕ್ತಿಕ ಜಿಮೇಲ್‌ ಖಾತೆಯಲ್ಲಿ ಬಳಕೆ ಮಾಡಲು ಬಳಕೆದಾರರು ಸ್ವಲ್ಪ ಸಮಯದ ವರೆಗೆ ಕಾಯಬೇಕಿದೆ.

Best Mobiles in India

English summary
Gmail will to get end-to-end encryption very soon .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X