ಮಿಸ್ ಮಾಡದಿರಿ: ರಿಲಾಯನ್ಸ್ ಜಿಯೋದಿಂದ ಇನ್ನಷ್ಟು ಆಕರ್ಷಕ ಆಫರ್‌ಗಳು

ಜಿಯೋ ತನ್ನ ಉಚಿತ 4ಜಿ ಡೇಟಾ ಆಫರ್‌ಗಳೊಂದಿಗೆ ಭಾರತವನ್ನು ಡಿಜಿಟಲ್ ಯುಗದಲ್ಲಿ ಕೊಂಡೊಯ್ಯುವ ಪ್ರಯತ್ನವಾಗಿ ಇನ್ನಷ್ಟು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಅದೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳಲಿದ್ದೇವೆ.

By Shwetha
|

ಉಚಿತ ಕರೆಗಳಿಗಾಗಿ ಮತ್ತು 4ಜಿ ಡೇಟಾ ಯೋಜನೆಗಳಿಂದ ಜಿಯೋ ದೇಶದಲ್ಲಿ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಿದೆ. ಸ್ಪರ್ಧೆಗೆ ತಕ್ಕಂತೆ ಸಮನಾಗಿ ಕಾರ್ಯನಿರ್ವಹಿಸಲು ಮತ್ತು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ವೊಡಾಫೋನ್, ಏರ್‌ಟೆಲ್, ಏರ್‌ಸೆಲ್, ಬಿಎಸ್‌ಎನ್‌ಎಲ್ ಕೂಡ ಇಂತಹುದೇ ಯೋಜನೆಗಳನ್ನು ಈಗೀಗ ಪ್ರಸ್ತುತಪಡಿಸುತ್ತಿವೆ.

ಓದಿರಿ: ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ಗಳಲ್ಲಿ ಬಳಸುವುದು ಹೇಗೆ?

ಜಿಯೋ ತನ್ನ ವೆಲ್‌ಕಮ್ ಆಫರ್ ಅನ್ನು ಡಿಸೆಂಬರ್ 31, 2016 ರವರೆಗೆ ಜಾರಿಯಲ್ಲಿರಿಸಲಿದೆ ಎಂಬುದು ನಿಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಇದೀಗ ಬಂದ ಸುದ್ದಿ ಎಂಬಂತೆ ಜಿಯೋ ಕರೆಗಳು ಎಂದಿಗೂ ಉಚಿತವಾಗಿಯೇ ಇನ್ನೂ ಉಳಿಯಲಿದೆ ಎಂದಾಗಿದೆ. ಇಂಟರ್ ಕನೆಕ್ಟ್ ಬಳಕೆಯ ತಲೆನೋವನ್ನು ನಿವಾರಿಸಿದಲ್ಲಿ ಇನ್ನು ಮುಂದೆ ಜಿಯೋ ಕರೆಗಳು ಉಚಿತವಾಗಿಯೇ ಬಳಕೆದಾರರಿಗೆ ಲಭ್ಯವಾಗಲಿದೆ.

ಓದಿರಿ: ಜಿಯೋದ ಕುರಿತು ಇದೀಗ ಬಂದ ಲೇಟೆಸ್ಟ್ ಸುದ್ದಿ!!!

ರಿಲಾಯನ್ಸ್‌ನಿಂದ ಡಿಜಿಟಲ್ ಇಕೋಸಿಸ್ಟಮ್

ರಿಲಾಯನ್ಸ್‌ನಿಂದ ಡಿಜಿಟಲ್ ಇಕೋಸಿಸ್ಟಮ್

ಭಾರತದಲ್ಲಿ ಡಿಜಿಟಲ್ ಇಕೋ ಸಿಸ್ಟಮ್ ಅನ್ನು ಸಿದ್ಧಪಡಿಸುವ ಇರಾದೆಯನ್ನು ರಿಲಾಯನ್ಸ್ ಹೊಂದಿದೆ. ಇದು ಉಚಿತ ಕರೆಗಳು ಮತ್ತು ಉಚಿತ 4ಜಿ ಇಂಟರ್ನೆಟ್ ಅನ್ನು ಒದಗಿಸಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಬಳಕೆದಾರರಿಗೆ ನೀಡಲಿರುವ ಸವಲತ್ತುಗಳೇನು?

ಜಿಯೋ ಬಳಕೆದಾರರಿಗೆ ನೀಡಲಿರುವ ಸವಲತ್ತುಗಳೇನು?

ನಿಮ್ಮ ಸಾಮಾನ್ಯ ಹಳೆಯ ಕಾರನ್ನು ಸ್ಮಾರ್ಟ್ ಕಾರನ್ನಾಗಿ ಇದು ಮಾರ್ಪಡಿಸಲಿದೆ.

ಆನ್ ಬೋರ್ಡ್ ಡಯಾಗ್ನಾಸ್ಟಿಕ್

ಆನ್ ಬೋರ್ಡ್ ಡಯಾಗ್ನಾಸ್ಟಿಕ್

ಮುಂದಿನ ಕೆಲವೇ ತಿಂಗಳುಗಳಲ್ಲಿ, ಒಬಿಡಿಯನ್ನು (ಆನ್ ಬೋರ್ಡ್ ಡಯಾಗ್ನಾಸ್ಟಿಕ್) ಆಧಾರಿತ ಡಿವೈಸ್ ಅನ್ನು ಲಾಂಚ್ ಮಾಡಲಿದ್ದು ಇದು ಹಾಟ್‌ಸ್ಪಾಟ್‌ನಂತೆ ಕಾರ್ಯನಿರ್ವಹಿಸಲಿದೆ ಇದು ಒಮ್ಮೆಗೆ 10 ಡಿವೈಸ್‌ಗಳನ್ನು ಸಂಪರ್ಕಪಡಿಸಲಿದ್ದು ಇಂಟರ್ನೆಟ್‌ಗೆ ಆಕ್ಸೆಸ್ ಅನ್ನು ನೀಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್

ಕಾರ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್

ಒಬಿಡಿಯೊಂದಿಗೆ, ಜಿಯೋ ಜಿಯೋ ಕಾರ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು ಇದು ಕಾರಿನ ಮಾಲೀಕರಿಗೆ ಕಾರಿನ ಬಗ್ಗೆ ಎಲ್ಲಾ ಮಾಹಿತಿಗಳನ್ನು ಒದಗಿಸಲಿದೆ ಅಂದರೆ ಬ್ಯಾಟರಿಯಿಂದ ಇಂಧನದವರೆಗೆ ಮಾಹಿತಿ ದೊರೆಯಲಿದೆ.

ಇನ್ನಷ್ಟು ಸೌಲಭ್ಯ

ಇನ್ನಷ್ಟು ಸೌಲಭ್ಯ

ಜೊತೆಗೆ ಡಿವೈಸ್ ಮತ್ತು ಅಪ್ಲಿಕೇಶನ್ ಬಳಕೆದಾರರಿಗೆ ರಿಮೋಟ್ ಲೊಕೇಶನ್ ಟ್ರ್ಯಾಕರ್, ರಿಮೋಟ್ ಲಾಕ್ - ಅನ್‌ಲಾಕ್, ಪವರ್ ವಿಂಡೋಸ್, ಹೆಡ್‌ಲೈಟ್ ಆನ್ ಆಫ್ ಮತ್ತು ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಜಿಟಲ್ ಸ್ಮಾರ್ಟ್ ಹೋಮ್ ಸೊಲ್ಯೂಶನ್

ಡಿಜಿಟಲ್ ಸ್ಮಾರ್ಟ್ ಹೋಮ್ ಸೊಲ್ಯೂಶನ್

ಇದಲ್ಲದೆ, ಜಿಯೋ ಡಿಜಿಟಲ್ ಸ್ಮಾರ್ಟ್ ಹೋಮ್ ಸೊಲ್ಯೂಶನ್ ಯೋಜನೆಗಳನ್ನು ಲಾಂಚ್ ಮಾಡಲಿದ್ದು ಆರೋಗ್ಯ, ವಿದ್ಯಾಭ್ಯಾಸ ಮತ್ತು ಮನರಂಜನೆಗಾಗಿ ಹಲವಾರು ಯೋಜನೆಗಳನ್ನು ಪ್ರಸ್ತುತಪಡಿಸಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Jio is hopeful that TRAI will end the archaic rule of interconnect charges to draw the new dynamics of Indian telecom space.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X