Subscribe to Gizbot

ಇನ್ನು ಗೂಗಲ್‌ನಲ್ಲಿ ಸ್ಕ್ರಿನ್‌ಶಾಟ್ ತೆಗೆಯುವುದು ಸುಲಭ: ಇಲ್ಲಿದೆ ಹೊಸ ಆಪ್‌ಡೇಟ್..!

Written By:

ಗೂಗಲ್ ತನ್ನ ಬಳಕೆದಾರರನ್ನು ತುಂಬ ಉತ್ತಮವಾಗಿ ಅರ್ಥ ಮಾಡಿಕೊಳ್ಳಲಿದ್ದು, ಅವರಿಗೆ ಬೇಕಾದಂತಹ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದೇ ಹಿನ್ನಲೆಯಲ್ಲಿ ಇಷ್ಟು ದಿನ ಕೇಲವ ಸ್ಕ್ರಿನ್ ಶಾಟ್ ತೆಗೆಯುವಂತಹ ಆಯ್ಕೆಯನ್ನು ನೀಡುತ್ತಿದ್ದ ಗೂಗಲ್ ಇನ್ನು ಮುಂದೆ ಅದನ್ನು ಎಡಿಟ್ ಮಾಡಿ ಕಳುಹಿಸುವಂತಹ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ಓದಿರಿ: ನೋಟ್ 5 ಮಾತ್ರವಲ್ಲ..! ಶಿಯೋಮಿಯಿಂದ ಮತ್ತೇ ಮೂರು ಫೋನ್‌...!

ಇನ್ನು ಗೂಗಲ್‌ನಲ್ಲಿ ಸ್ಕ್ರಿನ್‌ಶಾಟ್ ತೆಗೆಯುವುದು ಸುಲಭ: ಇಲ್ಲಿದೆ ಹೊಸ ಆಪ್‌ಡೇಟ್.

ಈಗಾಗಲೇ ಹಲವು ಮಂದಿ ಸ್ಮಾರ್ಟ್‌ಫೋನ್ ಬಳಕೆದಾರರು ಈ ಸ್ಕ್ರಿನ್ ಶಾಟ್‌ಗಳನ್ನು ಎಡಿಟ್ ಮಾಡುವ ಸಲುವಾಗಿ ಹೊಸದೊಂದು ಆಪ್ ಅನ್ನು ಹಾಕಿಕೊಳ್ಳಬೇಕಾದ ಅನಿರ್ವಾಯತೆ ಇತ್ತು. ಇನ್ನು ಮುಂದೆ ಗೂಗಲ್ ಆಪ್ ಈ ಹೊಸ ಆಯ್ಕೆಯನ್ನು ನೀಡಲಿದ್ದು, ಇದರಲ್ಲಿ ಬಳಕೆದಾರರು ತಾವು ತೆಗೆದ ಸ್ಕ್ರಿನ್ ಶಾಟ್ ಗಳನ್ನು ಅಲ್ಲಿಯೇ ಎಡಿಟ್ ಮಾಡಬಹುದಾಗಿದೆ.

ಇದಕ್ಕಾಗಿಯೇ ಹೊಸದಾಗಿ ಆಪ್ ಡೇಟ್ ನೀಡಲು ಗೂಗಲ್ ಮುಂದಾಗಿದೆ. ಈಗಾಗಲೇ ಬೀಟಾ ಬಳಕೆದಾರರಿಗೆ ಈ ಹೊಸ ಆಯ್ಕೆಯೂ ಲಭ್ಯವಾಗಿದ್ದು, ಸ್ಕ್ರಿನ್ ಶಾಟ್ ತೆಗೆದ ನಂತರದಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಆಕೌಂಟ್ ಮತ್ತು ಸೆಟ್ಟಂಗ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಎಡಿಟ್ ಅಂಡ್ ಶೇರ್ ಸ್ಕ್ರಿನ್ ಶಾಟ್ ಆಯ್ಕೆಯನ್ನು ಕಾಣಬಹುದಾಗಿದೆ.

ಓದಿರಿ: ಜಿಯೋಗೆ ಸೆಡ್ಡು: ನೋಕಿಯಾ-ಏರ್‌ಟೆಲ್‌ ಒಪ್ಪಂದ: ಶಾಕಿಂಗ್ ಬೆಲೆಗೆ ನೋಕಿಯಾ 2 & ನೋಕಿಯಾ 3..!

ಇದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಗೂಗಲ್ ನೀಡಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವಾಗಲಿದ್ದು, ಈ ಕಾರ್ಯಕ್ಕಾಗಿ ಮತ್ತೊಂದು ಆಪ್ ಹಾಕಿಕೊಳ್ಳುವುದು ತಪ್ಪಲಿದೆ.

ಇನ್ನು ಗೂಗಲ್‌ನಲ್ಲಿ ಸ್ಕ್ರಿನ್‌ಶಾಟ್ ತೆಗೆಯುವುದು ಸುಲಭ: ಇಲ್ಲಿದೆ ಹೊಸ ಆಪ್‌ಡೇಟ್.

ಶೀಘ್ರವೇ ಈ ಆಪ್‌ಡೇಟ್ ಸಾಮಾನ್ಯ ಬಳಕೆದಾರರಿಗೆ ದೊರೆಯಲಿದ್ದು, ಇನ್ನು ಮುಂದೆ ಹೆಚ್ಚುವರಿ ಆಪ್ ಬಳಕೆಗೆ ಕತ್ತರಿ ಬೀಳಲಿದೆ ಎನ್ನಲಾಗಿದೆ. ಈ ಹೊಸ ಆಯ್ಕೆಯೂ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿದೆ. ಈ ಮೂಲಕ ಗೂಗಲ್ ದಿನದಿಂದ ದಿನಕ್ಕೆ ಬಳಕೆದಾರರ ಸ್ನೇಹಿಯಾಗುತ್ತಿದೆ.

English summary
Google App Gets Option to Edit and Share Screenshots. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot