ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅಗತ್ಯವಾಗಿದ್ದು, ಅದರಲ್ಲಿಯೂ ಇತ್ತೀಚಿಗೆ ಫೋನ್‌ಗಳಲ್ಲಿ ವಾಯಿಸ್‌ ಕಮಾಂಡ್‌ಗಳ ಸೌಲಭ್ಯಗಳು ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿವೆ. ಆಂಡ್ರಾಯ್ಡ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಕಾರ್ಯನಿರ್ವಹಿಸುತ್ತಿದ್ದು, ನೂತನ ಅಪ್‌ಡೇಟ್‌ಗಳನ್ನು ಸೇರಿಸುತ್ತ ಸಾಗಿದೆ. ಆದ್ರೆ ಇದೀಗ ಮತ್ತೊಂದು ಹೊಸ ಫೀಚರ್ಸ್‌ ಸೇರಿಕೊಂಡಿದ್ದು, ಬಳಕೆದಾರರಿಗೆ ಖುಷಿ ನೀಡಿದೆ.

ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!

ಹೌದು, ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್‌ ಸೇವೆಯಲ್ಲಿ ಹೊಸದಾಗಿ ಥರ್ಡ್‌ಪಾರ್ಟಿ ಮೆಸೆಜ್‌ ಅಪ್ಲಿಕೇಶನ್‌ಗಳನ್ನು ಓದುವ ಆಯ್ಕೆ ಸೇರಿದೆ. ಹೀಗಾಗಿ ಇನ್ಮುಂದೆ ವಾಟ್ಸಪ್, ಟೆಲಿಗ್ರಾಂ, ಸ್ಲಾಕ್‌ ಸೇರಿದಂತೆ ಇನ್ನಿತರೆ ಗೂಗಲೇತರ ಆಪ್ಸ್‌ಗಳಿಗೆ ಬೆಂಬಲ ನೀಡಲಿದೆ. ಈ ಆಪ್ಸ್‌ಗಳಲ್ಲಿ ಬಳಕೆದಾರರಿಗೆ ಬರುವ ಮೆಸೆಜ್‌ಗಳನ್ನು ಅಸಿಸ್ಟಂಟ್ ಓದುವ ಸೌಲಭ್ಯವು ಗ್ರಾಹಕರಿಗೆ ಹೆಚ್ಚು ಪ್ರಯೋಜನೆ ನೀಡಲಿದೆ.

ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!

ಗೂಗಲ್ ಅಸಿಸ್ಟಂಟ್ ವಾಯಿಸ್‌ ಕಮಾಂಡ್‌ ಸೇವೆಯು ಈ ಮೊದಲು ಗೂಗಲ್ ಸಂಸ್ಥೆಗೆ ಸೇರಿದ ಹ್ಯಾಂಗ್‌ಔಟ್‌ ಮೆಸ್ಸೆಜ್‌ ಅಪ್ಲಿಕೇಶನ್‌ಗೆ ಮಾತ್ರ ಮೆಸ್ಎಜ್ ಓದುವ ಬೆಂಬಲ ನೀಡುತ್ತಿತ್ತು. ಆದ್ರೆ ಇದೀಗ ಗೂಗಲ್ ಸಂಸ್ಥೆಗೆ ಸೇರಿರದ ಜನಪ್ರಿಯ ಮೆಸ್ಸೆಜ್ ಅಪ್ಲಿಕೇಶನ್‌ಗಳ ಮೆಸೆಜ್‌ ಓದುವ ಸೌಲಭ್ಯವನ್ನು ನೀಡುತ್ತಿದೆ. ಹಾಗೆಯೇ ಮೆಸೆಜ್‌ ಓದುವುದರೊಂದಿಗೆ ಆ ಮೆಸ್ಸೆಜ್‌ಗಳಗೆ ಪ್ರತಿಕ್ರಿಯೇ ಸಹ ನೀಡುವ ಸೌಲಭ್ಯವನ್ನು ಸೇರಿಕೊಂಡಿರುವುದು ವಿಶೇಷ.

ಮೆಸೆಜ್‌ ಪ್ರಿಯರಿಗೆ 'ಗೂಗಲ್‌ ಅಸಿಸ್ಟಂಟ್‌ನಿಂದ ಹೊಸ ಗಿಫ್ಟ್‌!

ವಾಟ್ಸಪ್‌, ಸ್ಲಾಕ್‌, ಟೆಲಿಗ್ರಾಂ ನಂತಹ ಮೆಸೆಜ್‌ ಅಪ್ಲಿಕೇಶನ್‌ಗಳು ಕೇವಲ ಟೆಕ್ಸ್‌ ಮೆಸೆಜ್‌ಗೆ ಅನ್ನು ಮಾತ್ರ ಒಳಗೊಂಡಿರುವುದಿಲ್ಲ. ಫೋಟೊ, ವಿಡಿಯೊ, GIF, ಆನಿಮೇಶನ್, ಸೇರಿದಂತೆ ಪಿಡಿಎಫ್‌ ಹಾಗೂ ಇತರೆ ಫಾರ್ಮೇಟ್‌ ಫೈಲ್‌ಗಳನ್ನು ಒಳಗೊಂಡಿರುತ್ತವೆ. ಇಂಥಹ ಸಂದರ್ಭದಲ್ಲಿ ಗೂಗಲ್ ಅಸಿಸ್ಟಂಟ್‌ ಟೆಕ್ಸ್ಟ್‌ ಮೆಸೆಜ್‌ ಮಾತ್ರ ಓದುತ್ತದೆ ಮತ್ತು ಮೀಡಿಯಾ ಫೈಲ್‌ಗಳು ಸೇರಿದ್ದರೇ ಅದರ ಬಗ್ಗೆ ಮಾಹಿತಿ ನೀಡುತ್ತದೆ.

ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!ಓದಿರಿ : ಆಂಡ್ರಾಯ್ಡ್‌ v/s ಸ್ಮಾರ್ಟ್‌ಟಿವಿ ಯಾವುದು ಬೆಸ್ಟ್‌?.ಖರೀದಿಸುವ ಮುನ್ನ ತಿಳಿಯಿರಿ!

ಅಂದಹಾಗೇ ಗೂಗಲ್ ಅಸಿಸ್ಟಂಟ್‌ನ ಈ ಹೊಸ ಸೇವೆ ಶೀಘ್ರವೇ ಅಪ್‌ಡೇಟ್‌ ವರ್ಷನ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಹಾಗೆಯೇ ವಿವಿಧ ಪ್ರಮೂಖ ಭಾಷೆಗಳಿಲ್ಲಿಯೂ ಮೆಸೆಜ್ ಓದುವ ಸೇವೆ ಸೇರಿಕೊಳ್ಳಲಿದೆ. ಸ್ಮಾರ್ಟ್‌ಫೋನ್‌ ಬಳಕೆದಾರರು ಗೂಗಲ್ ಅಸಿಸ್ಟಂಟ್‌ಗೆ ಮೆಸೆಜ್‌ ಓದಲು ಅನುಮತಿ ಕೊಟ್ಟಾಗ ಅದು ಓದುತ್ತದೆ. ಹಾಗೆಯೇ ಅದಕ್ಕೆ ನೀವು ರಿಪ್ಲೇ ನೀಡಿದರೇ ನಿಮ್ಮ ಧ್ವನಿ ಗ್ರಹಿಸಿ ಆಟೋಮ್ಯಾಟಿಕ್ ಟೈಪ್‌ ಮಾಡಿ ಕಳುಹಿಸುತ್ತದೆ.

ಓದಿರಿ : ದೇಶಿಯ ಬಜಾರ್‌ಗೆ ಎಂಟ್ರಿ ಕೊಟ್ಟ ಅಮೆರಿಕಾದ 'ಫೊರ್‌ರನ್ನರ್‌ 45' ಸ್ಮಾರ್ಟ್‌ವಾಚ್!ಓದಿರಿ : ದೇಶಿಯ ಬಜಾರ್‌ಗೆ ಎಂಟ್ರಿ ಕೊಟ್ಟ ಅಮೆರಿಕಾದ 'ಫೊರ್‌ರನ್ನರ್‌ 45' ಸ್ಮಾರ್ಟ್‌ವಾಚ್!

Best Mobiles in India

English summary
The Google Assistant can now read and reply to messages from third-party apps. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X