ಉದ್ಯೋಗ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್!!

ಭಾರತದಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಹುಡುಕಲು ಹೆಚ್ಚು ಜನರು ಪ್ರಯತ್ನಿಸುವುದರಿಂದ ಗೂಗಲ್ ಹೊಸ ಹೊಸ ಸೇವೆಗಳನ್ನು ಭಾರತೀಯರಿಗಾಗಿ ತಂದಿದೆ.

|

ಭಾರತದಲ್ಲಿ ಆನ್‌ಲೈನ್ ಮೂಲಕ ಉದ್ಯೋಗ ಹುಡುಕಲು ಹೆಚ್ಚು ಜನರು ಪ್ರಯತ್ನಿಸುವುದರಿಂದ ಗೂಗಲ್ ಹೊಸ ಹೊಸ ಸೇವೆಗಳನ್ನು ಭಾರತೀಯರಿಗಾಗಿ ತಂದಿದೆ. ಭಾರತದಲ್ಲಿರುವ ಆನ್‌ಲೈನ್ ಬಳಕೆದಾರರು ಗೂಗಲ್‌ ಮುಖಾಂತರ ಕೆಲಸ ಹುಡುಕುವುದು ಈಗ ಇನ್ನಷ್ಟು ಸುಲಭವಾಗಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದೆ.

ಗೂಗಲ್ ಕಂಪೆನಿಯೂ ಜಾಬ್ಸ್‌ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಸಂಸ್ಥೆಯ ವೆಬ್‌ಪುಟದಲ್ಲಿ ಸೂಕ್ತ ಉದ್ಯೋಗದ ಅವಕಾಶಗಳನ್ನು ಹುಡುಕುವುದು ಇನ್ನು ಸುಲಭವಾಗಲಿದೆ. 'ಜಾಬ್ಸ್ ನಿಯರ್ ಮಿ' ಅಥವಾ 'ಜಾಬ್ಸ್ ಫಾರ್ ಫ್ರೆಷರ್ಸ್' ಎಂದು ಗೂಗಲ್‌ನಲ್ಲಿ ಹುಡುಕಿದಾಗ, ಉದ್ಯೋಗದ ಪಟ್ಟಿಯೇ ತೆರೆದುಕೊಳ್ಳುತ್ತದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಉದ್ಯೋಗ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್!!

ಆಸಾನ್‌ಜಾಬ್ಸ್, ಫ್ರೆಷರ್ಸ್ ವರ್ಲ್ಡ್, ಹೆಡ್‌ಹೊನ್‌ಚೋಸ್, ಐಬಿಎಂ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್, ಲಿಂಕ್ಡ್‌ಇನ್, ಕ್ವೆಝ್, ಕ್ವಿಕರ್ ಜಾಬ್ಸ್, ಶೈನ್ ಡಾಟ್‌ಕಾಮ್, ಟಿ-ಜಾಬ್ಸ್, ಟೈಮ್ಸ್ ಜಾಬ್ಸ್ ಮತ್ತು ವಿಸ್ಡಮ್‌ಜಾಬ್ಸ್‌ ಸಂಸ್ಥೆಗಳ ಜೊತೆ ಗೂಗಲ್ ಒಪ್ಪಂದ ಮಾಡಿಕೊಂಡಿದ್ದು, ಉದ್ಯೋಗದ ಅವಕಾಶಗಳನ್ನು ಗೂಗಲ್ ಕ್ಷಣಾರ್ಧದಲ್ಲಿ ಕಲ್ಪಿಸಿಕೊಡಲಿದೆ.

'ಜಾಬ್ಸ್ ನಿಯರ್ ಮಿ' ಅಥವಾ 'ಜಾಬ್ಸ್ ಫಾರ್ ಫ್ರೆಷರ್ಸ್' ಎಂದು ಹುಡುಕಿ, ಯಾವುದಾದರೂ ಹುದ್ದೆಯ ಮೇಲೆ ಕ್ಲಿಕ್ ಮಾಡಿದಾಗ, ಆ ಹುದ್ದೆಯ ಹೆಸರು, ಸ್ಥಳ ಮೊದಲಾದ ವಿವರವಾದ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಆನ್‌ಲೈನ್ ಮುಖಾಂತರ ಉದ್ಯೋಗ ಹುಡುಕುವವರಿಗೆ ಆ ಉದ್ಯೋಗದ ಮಾಹಿತಿ ಬಹಳ ಸುಲಭವಾಗಿ ತಿಳಿಯಲಿದೆ.

ಉದ್ಯೋಗ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಗೂಗಲ್‌ನಿಂದ ಗುಡ್‌ನ್ಯೂಸ್!!

2017ನೇ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಆನ್‌ಲೈನ್ ಮೂಲಕ ಉದ್ಯೋಗಕ್ಕಾಗಿ ಹುಡುಕಾಟವು ಶೇ 45ರಷ್ಟು ಹೆಚ್ಚಾಗಿತ್ತು ಎಂದು ಗೂಗಲ್ ತಿಳಿಸಿದೆ. ಹಾಗಾಗಿಯೆ, ಭಾರತೀಯ ಆನ್‌ಲೈನ್ ಬಳಕೆದಾರರಿಗೆ ಗೂಗಲ್‌ ಮುಖಾಂತರ ಕೆಲಸ ಹುಡುಕುವುದು ಸುಲಭವಾಗುವಂತೆ ಗೂಗಲ್ ಈ ಸೌಲಭ್ಯವನ್ನು ತನ್ನ ವೆಬ್‌ಪುಟದಲ್ಲಿ ಅಳವಡಿಸಿಕೊಂಡಿದೆ.

ಓದಿರಿ: ನೋಕಿಯಾ 7 ಪ್ಲಸ್ ಸ್ಮಾರ್ಟ್‌ಪೋನ್ ಪ್ರೀ ಬುಕ್ಕಿಂಗ್ ಶುರು!!..ಆಕರ್ಷಕ ಲಾಂಚ್ ಆಫರ್ಗಳು!!

Best Mobiles in India

English summary
Google launches its job search engine in India, listings will appear on search results. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X