Subscribe to Gizbot

ಸಿಇಓ ಸುಂದರ ಪಿಚೈಗೆ ಬರೋಬ್ಬರಿ ರೂ.2,524 ಕೋಟಿ ಬಹುಮಾನ ಕೊಟ್ಟ ಗೂಗಲ್: ಶಾಕ್ ನಲ್ಲಿ ಟೆಕ್‌ ಲೋಕ

Written By:

ಜಾಗತಿಕವಾಗಿ ಹೆಸರು ಮಾಡಿರುವ ಟಾಪ್ ಟೆಕ್ ಕಂಪನಿಗಳಲ್ಲಿ ಭಾರತೀಯ ಪ್ರಬಲ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ಮಾದರಿಯಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಿಇಓ ಪಟ್ಟ ಅಂಕರಿಸಿರುವ ಭಾರತ ಮೂಲದ ಸುಂದರ ಪಿಚೈ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ ಗೂಗಲ್ ಭಾರೀ ಮೊತ್ತದ ಶೇರುಗಳನ್ನು ಬಹುಮಾನದ ರೂಪದಲ್ಲಿ ನೀಡಲು ಮುಂದಾಗಿದೆ ಎನ್ನಲಾಗಿದೆ.

ಸಿಇಓ ಸುಂದರ ಪಿಚೈಗೆ ಬರೋಬ್ಬರಿ ರೂ.2,524 ಕೋಟಿ ಬಹುಮಾನ ಕೊಟ್ಟ ಗೂಗಲ್

ಸದಾ ಹೊಸತನಗಳಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದ ಸುಂದರ ಪಿಚೈ, ಈ ಬಾರಿ ರೂ.2,524 ಕೋಟಿ ಮೌಲ್ಯದ ಶೇರುಗಳನ್ನು ತನ್ನ ಕಾರ್ಯದಕ್ಷತೆಗಾಗಿ ಸಂಸ್ಥೆಯಿಂದ ಬಹುಮಾನವಾಗಿ ಪಡೆಯುವ ಮೂಲಕ ಜಾಗತಿಕವಾಗಿ ಸುದ್ದಿಯಲ್ಲಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೇ ಡೇ ಗಿಫ್ಟ್:

ಪೇ ಡೇ ಗಿಫ್ಟ್:

ಸಾಮಾನ್ಯವಾಗಿ ಕಂಪನಿಗಳ ಉತ್ತಮವಾಗಿ ಕಾರ್ಯನಿರ್ವಹಿಸಿದ ಕಾರ್ಯನಿರ್ವಹಣಾಧಿಕಾರಿ (ಸಿಇಓ)ಗೆ ಬಹುಮಾನಗಳನ್ನು, ಇಲ್ಲವೇ ಬೋನಸ್ ಗಳನ್ನು ನೀಡುವುದು ಸಾಮಾನ್ಯ. ಇದನ್ನು ಕಂಪನಿ ಶೇರುಗಳ ಮಾದರಿಯಲ್ಲಿ ನೀಡುತ್ತಾರೆ. ಇದೇ ಮಾದರಿಯಲ್ಲಿ ಗೂಗಲ್ ಸಿಇಓ ಸುಂದರ ಪಿಚೈಗೆ ಪೇ ಡೇ ಗಿಫ್ಟ್ ದೊರೆಯುತ್ತಿದೆ ಎನ್ನಲಾಗಿದೆ.

ಭಾರಿ ಲಾಭ:

ಭಾರಿ ಲಾಭ:

ಗೂಗಲ್‌ ಒಡೆತನವನ್ನು ಹೊಂದಿರುವ ಆಲ್ಫಾಬೆಟ್‌ನ ತ್ತೈಮಾಸಿಕದಲ್ಲಿ ಭಾರೀ ಪ್ರಮಾಣದ ಲಾಭವನ್ನು ಗಳಿಸಿರುವ ಕಾರಣದಿಂದಾಗಿ ಗೂಗಲ್ ಸಿಇಓ ಸುಂದರ ಪಿಚೈಗೆ ಪೇ ಡೇ ಗಿಫ್ಟ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಶೇ.70ರಷ್ಟು ಲಾಭ

ಶೇ.70ರಷ್ಟು ಲಾಭ

ಆಲ್ಫಾಬೆಟ್‌ ಕಂಪೆನಿಯೂ ಮಾರುಕಟ್ಟೆಯಲ್ಲಿ ನಿರೀಕ್ಷಿದ್ದ ಲಾಭಕ್ಕಿಂತಲೂ ಹೆಚ್ಚಿನದನ್ನು ಸುಂದರ ಪಿಚೈ ಸಾಧಿಸಿ ತೋರಿಸಿದ್ದಾರೆ ಎನ್ನಲಾಗಿದ್ದು, 2018ರ ಮೊದಲ ಮೂರು ತಿಂಗಳಲ್ಲಿ ಕಂಪೆನಿಯ ಲಾಭ 9.4 ಶತಕೋಟಿ ಡಾಲರ್‌ ತಲುಪಿದ್ದು, ಇದು ಶೇ.70ಕ್ಕಿಂತಲೂ ಅಧಿಕ ಎನ್ನಲಾಗಿದ್ದು, ಇದು ಮಾರುಕಟ್ಟೆ ನಿರೀಕ್ಷೆಯನ್ನು ಮೀರಿದೆ.

380 ದಶಲಕ್ಷ ಡಾಲರ್‌

380 ದಶಲಕ್ಷ ಡಾಲರ್‌

ಆಲ್ಫಾಬೆಟ್‌ ಸಂಸ್ಥೆ, ತನಗೆ ಹೆಚ್ಚಿನ ಲಾಭ ಮಾಡಿಕೊಟ್ಟ ಸುಂದರ ಪಿಚೈಗೆ 380 ದಶಲಕ್ಷ ಡಾಲರ್‌, ಅಂದರೆ ಭಾರತೀಯ ರೂಪಾಯಿಗಳಲ್ಲಿ ರೂ. 2,524 ಕೋಟಿ ಮೌಲ್ಯದ ನೋಂದಾಯಿತ ಶೇರುಗಳನ್ನು ನೀಡಲಿದೆ ಎನ್ನಲಾಗಿದೆ. ಸುಂದರ್ ಪಡೆದಿರುವ ಪೇ ಡೇ ಗಿಫ್ಟ್ ಸದ್ಯ ಭಾರೀ ಸದ್ದು ಮಾಡುತ್ತಿದೆ.

ಆಲ್ಫಾಬೆಟ್ ಲಾಭ:

ಆಲ್ಫಾಬೆಟ್ ಲಾಭ:

ಭಾರೀ ಪ್ರಮಾಣದ ಲಾಭವನ್ನು ತಂದು ಕೊಟ್ಟ ಗೂಗಲ್ ಸಿಇಓ ಸುಂದರ ಪಿಚೈಗೆ ಭಾರೀ ಮೊತ್ತದ ಪೇ ಡೇ ಗಿಫ್ಟ್ ನೀಡಿದ್ದು ಆಲ್ಫಾಬೆಟ್‌ ಸಂಸ್ಥೆಗೆ ಒಂದು ರೀತಿಯಲ್ಲಿ ಲಾಭವಾಗಿದೆ ಎನ್ನಲಾಗಿದೆ. ಈ ಭಾರಿ ಪ್ರಮಾಣ ಗಿಫ್ಟ್ ನೀಡಿದ ಸುದ್ದಿ ವೈರಲ್ ಆಗುತ್ತಿದ್ದಂತೆ ಆಲ್ಫಾಬೆಟ್‌ ಕಂಪೆನಿಯ ಶೇರಿನ ಮಾರುಕಟ್ಟೆ ಧಾರಣೆ ಶೇ.90ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

ಅತೀ ದೊಡ್ಡ ಬಹುಮಾನ:

ಅತೀ ದೊಡ್ಡ ಬಹುಮಾನ:

ಕಳೆದ ಹಲವು ವರ್ಷಗಳ ಬೆಳವಣಿಗೆಯನ್ನು ಗಮನಿಸಿದರೆ ಸಾರ್ವಜನಿಕ ರಂಗದ ಕಂಪೆನಿಯೊಂದರ ಕಾರ್ಯನಿರ್ವಹಣಾಧಿಕಾರಿಗೆ ಇಷ್ಟು ಪ್ರಮಾಣದ ಬಹುಮಾನವನ್ನು ಯಾರು ನೀಡಿಲ್ಲ ಎನ್ನಲಾಗಿದೆ. ಸುಂದರ್ ಪಿಚೈಗೆ ದೊರೆಯುತ್ತಿರುವುದು ಅತೀ ದೊಡ್ಡ ಶೇರು ಎಂದು ವರದಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
How to Send a WhatsApp Message Without Saving the Contact in Your Phone - GIZBOT KANNADA

ಓದಿರಿ: ಈ ವಿಚಾರದಲ್ಲಿ ಭಾರತ-ಅಮೆರಿಕಾ ಒಂದಾದರೂ ಚೀನಾವನ್ನು ಮೀರಿಸಲು ಸಾಧ್ಯವೇ ಇಲ್ಲ..!

English summary
Google CEO Pichai Set to Cash In $380 Million Award This Week. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot