ಗೂಗಲ್‌ ಕ್ರೋಮ್‌ನಲ್ಲಿ ಹೊಸ ಫೀಚರ್ಸ್‌... ಪಾಸ್‌ವರ್ಡ್‌ ಇಲ್ಲದೆ ಲಾಗಿನ್ ಆಗಬಹುದು!?

|

ಗೂಗಲ್‌ ಕ್ರೋಮ್ ಅತ್ಯಂತ ವೇಗದ ವೆಬ್ ಬ್ರೌಸರ್ ಆಗಿ ಕೆಲಸ ಮಾಡುತ್ತಿದ್ದು, ಯಾವುದೇ ಮಾಹಿತಿ ಬೇಕೆಂದರೂ ಮೊದಲು ಬಳಕೆದಾರರು ಇಣುಕಿ ನೋಡುವುದು ಗೂಗಲ್ ಕ್ರೋಮ್‌ಗೆ. ಈ ಕ್ರೋಮ್ ಒಂದೇ ಕ್ಲಿಕ್‌ನಲ್ಲಿ ವೆಬ್ ಪೇಜ್‌‌, ಮಲ್ಟಿ ಟ್ಯಾಬ್‌ಗಳು ಹಾಗೂ ಆಪ್‌ಗಳನ್ನು ಮಿಂಚಿನ ವೇಗದಲ್ಲಿ ಲೋಡ್ ಮಾಡುತ್ತದೆ. ಇದರ ನಡುವೆಯೇ ಈಗ ಈ ಗೂಗಲ್‌ ಹೊಸ ಫೀಚರ್ಸ್‌ ನೀಡಲು ಮುಂದಾಗಿದ್ದು, ಎಲ್ಲಾ ಬಳಕೆದಾರರಿಗೂ ಇದು ಸಹಾಯಕವಾಗಲಿದೆ.

ಕ್ರೋಮ್

ಹೌದು, ಗೂಗಲ್‌ ಕ್ರೋಮ್ (Google Chrome) ನವೀಕರಣದ ಮೂಲಕ ಬಳಕೆದಾರರು ಪಾಸ್‌ವರ್ಡ್‌ಗಳನ್ನು ಟೈಪ್ ಮಾಡದೆಯೇ ಲಾಗಿನ್ ಮಾಡಲು ಅನುಮತಿಸಲಾಗುತ್ತದೆ. ಅಂದರೆ ಈ ಹೊಸ ಭದ್ರತಾ ಫೀಚರ್ಸ್‌ನಲ್ಲಿ ಬಳಕೆದಾರರು ಪಾಸ್‌ಕೀಗಳೊಂದಿಗೆ ಲಾಗ್ ಇನ್ ಆಗಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ, ಈ ಫೀಚರ್ಸ್‌ ಅನ್ನು ಗೂಗಲ್‌ ಯಾಕೆ ಪರಿಚಯಿಸಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪಾಸ್‌ಕೀ ಪರಿಚಯಿಸಿದ ಗೂಗಲ್

ಪಾಸ್‌ಕೀ ಪರಿಚಯಿಸಿದ ಗೂಗಲ್

ಕ್ರೋಮ್ ಬಳಕೆದಾರರಿಗೆ ಗೂಗಲ್ ಪಾಸ್‌ಕೀಗಳನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ಪಾಸ್‌ವರ್ಡ್‌ ಇಲ್ಲದೆ ಲಾಗ್‌ ಇನ್‌ ಮಾಡಬಹುದಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಈ ಸಂಬಂಧ ಪರೀಕ್ಷೆಗಳು ನಡೆದಿದ್ದವು. ಅದರಂತೆ ಗೂಗಲ್ ಉತ್ತಮ ಭದ್ರತೆಗಾಗಿ ಸ್ಥಿರವಾದ M108 ಆವೃತ್ತಿಯೊಂದಿಗೆ ಕ್ರೋಮ್‌ ನಲ್ಲಿ ಪಾಸ್‌ಕೀ ಬೆಂಬಲವನ್ನು ಹೊರತರಲು ಪ್ರಾರಂಭಿಸಿದೆ. ಪಾಸ್‌ಕೀ ಎಂಬುದು ಪಾಸ್‌ವರ್ಡ್‌ಗಳು ಮತ್ತು ಇತರೆ ಫಿಶ್ ಮಾಡಬಹುದಾದ ದೃಢೀಕರಣ ಅಂಶಗಳಿಗೆ ಸುರಕ್ಷಿತ ಬದಲಿ ಮಾರ್ಗವಾಗಿದೆ.

ಪಾಸ್‌ಕೀ

ಪಾಸ್‌ಕೀ

ಈ ಪಾಸ್‌ಕೀ ಗಳನ್ನು ಮರುಬಳಕೆ ಮಾಡಲಾಗದ ಕಾರಣ ಹೆಚ್ಚು ಸುರಕ್ಷಿತವಾಗಿರುತ್ತವೆ, ಇದಿಷ್ಟೇ ಅಲ್ಲದೆ ಸರ್ವರ್ ಉಲ್ಲಂಘನೆಗಳಲ್ಲಿ ಸೋರಿಕೆಯಾಗುವುದಿಲ್ಲ ಮತ್ತು ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತವೆ. ಪಾಸ್‌ಕೀಗಳನ್ನು ಉದ್ಯಮದ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದ್ದು, ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕೆಲಸ ಮಾಡುತ್ತದೆ. ಹಾಗೆಯೇ ಪಾಸ್‌ಕೀ ಮೂಲಕ ಸೈನ್ ಇನ್ ಮಾಡಲು ಬಳಕೆದಾರರು ಡಿವೈಸ್‌ ಅನ್ನು ಅನ್‌ಲಾಕ್ ಆಗಿರುವ ರೀತಿಯಲ್ಲಿಯೇ ದೃಢೀಕರಿಸಬೇಕಿದೆ ಎಂದು ಗೂಗಲ್ ಹೇಳಿದೆ.

ಯಾವೆಲ್ಲಾ ಡಿವೈಸ್‌ಗಳಿಗೆ ಬೆಂಬಲ

ಯಾವೆಲ್ಲಾ ಡಿವೈಸ್‌ಗಳಿಗೆ ಬೆಂಬಲ

ಈ ಪಾಸ್‌ಕೀಗಳು ಕ್ರೋಮ್‌ನ ಇತ್ತೀಚಿನ ಆವೃತ್ತಿ ಹೊಂದಿರುವ ವಿಂಡೋಸ್‌ 11, ಮ್ಯಾಕ್‌ ಓಎಸ್‌ ಹಾಗೂ ಇತರೆ ಆಂಡ್ರಾಯ್ಡ್‌ ಬೆಂಬಲಿತ ಡಿವೈಸ್‌ಗಳಲ್ಲಿ ಕೆಲಸ ಮಾಡಲಿವೆ. ಹಾಗೆಯೇ ಗೂಗಲ್‌ ತನ್ನ ಸ್ವಂತ ಪಾಸ್‌ವರ್ಡ್ ನಿರ್ವಾಹಕ ಅಥವಾ ಯಾವುದೇ ಬೆಂಬಲಿತ ಥರ್ಡ್‌ ಪಾರ್ಟಿ ಆಪ್‌ ಮೂಲಕ ಕ್ರೋಮ್‌ ನಲ್ಲಿ ಸಕ್ರಿಯವಾಗಿರುವಾಗ ಆಂಡ್ರಾಯ್ಡ್‌ ನಿಂದ ಇತರ ಡಿವೈಸ್‌ಗಳಿಗೆ ಭದ್ರತಾ ಕೀಲಿಯನ್ನು ಸಿಂಕ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

ಪಾಸ್‌ಕೀಗಳು ಅನನ್ಯ ಡಿಜಿಟಲ್ ಗುರುತು

ಪಾಸ್‌ಕೀಗಳು ಅನನ್ಯ ಡಿಜಿಟಲ್ ಗುರುತು

ಪಾಸ್‌ಕೀಗಳು ಒಂದು ಅನನ್ಯ ಡಿಜಿಟಲ್ ಗುರುತಾಗಿದ್ದು, ನಿಮ್ಮ ಕಂಪ್ಯೂಟರ್, ಫೋನ್ ಅಥವಾ ಯುಎಸ್‌ಬಿ ಸೆಕ್ಯುರಿಟಿ ಕೀಯಂತಹ ಇತರ ಡಿವೈಸ್‌ಗಳಿಗೆ ಸುರಕ್ಷಿತ ಪ್ರವೇಶವನ್ನು ಒದಗಿಸುತ್ತವೆ. ಜೊತೆಗೆ ಡಿವೈಸ್‌ನಲ್ಲಿರುವ ಬಯೋಮೆಟ್ರಿಕ್ಸ್ ಅಥವಾ ಇತರ ಸುರಕ್ಷಿತ ಪರಿಶೀಲನೆಯೊಂದಿಗೆ ತ್ವರಿತ ಮತ್ತು ಸುಲಭವಾದ ದೃಢೀಕರಣದ ಮೂಲಕ ವೆಬ್‌ಸೈಟ್‌ಗಳು ಅಥವಾ ಆಪ್‌ಗಳಿಗೆ ಲಾಗ್ ಇನ್ ಇದನ್ನು ಬಳಕೆ ಮಾಡಬಹುದು. ಕ್ರೋಮ್‌ ನಲ್ಲಿ ಪಾಸ್‌ಕೀಗಳನ್ನು ಗೂಗಲ್‌ ಪಾಸ್‌ವರ್ಡ್ ಮ್ಯಾನೇಜರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇದು ಅದೇ ಗೂಗಲ್‌ ಖಾತೆಗೆ ಸೈನ್ ಇನ್ ಆಗಿರುವ ಬಳಕೆದಾರರ ಆಂಡ್ರಾಯ್ಡ್‌ ಡಿವೈಸ್‌ಗಳ ನಡುವೆ ಪಾಸ್‌ಕೀಗಳನ್ನು ಸಿಂಕ್ರೊನೈಸ್ ಮಾಡುತ್ತದೆ ಎಂದು ಗೂಗಲ್‌ ತಿಳಿಸಿದೆ.

ಪಾಸ್‌ವರ್ಡ್‌ಗಿಂತ ಇವು ಉತ್ತಮ

ಪಾಸ್‌ವರ್ಡ್‌ಗಿಂತ ಇವು ಉತ್ತಮ

ಸಾಮಾನ್ಯವಾಗಿ ಬಳಕೆದಾರರು ಬಯೋಮೆಟ್ರಿಕ್ ಸೆನ್ಸರ್‌, ಪಿನ್ ಅಥವಾ ಪ್ಯಾಟರ್ನ್ ಅನ್ನು ಬಳಸಿಕೊಂಡು ಆಪ್‌ ಹಾಗೂ ವೆಬ್‌ಸೈಟ್‌ಗಳಿಗೆ ಸೈನ್ ಇನ್ ಮಾಡುತ್ತಾರೆ. ಆದರೆ ಈ ಎಲ್ಲಾ ಪಾಸ್‌ವರ್ಡ್‌ ಆಯ್ಕೆಗಿಂತ ಪಾಸ್‌ಕೀಗಳು ಉತ್ತಮವೆಂದು ಹೇಳಲಾಗುತ್ತಿದೆ. ಯಾಕೆಂದರೆ ಹಲವಾರು ಖಾತೆಗಳಿಗೆ ಭಿನ್ನ ವಿಭಿನ್ನ ಪಾಸ್‌ವರ್ಡ್‌ ರಚಿಸಿಕೊಂಡಿರುವವರು ಅವುಗಳನ್ನು ನೆನಪಿಟ್ಟುಕೊಳ್ಳಲು ಸಾಕಷ್ಟು ತೊಂದರೆ ಪಡಬೇಕಿದೆ. ಆದರೆ, ಇದರಲ್ಲಿ ಆ ಸಮಸ್ಯೆ ಕಂಡುಬರುವುದಿಲ್ಲ.

ಬಯೋಮೆಟ್ರಿಕ್ಸ್

ಇದರ ನಡುವೆ ಬಯೋಮೆಟ್ರಿಕ್ಸ್ ಬಳಕೆ ಮಾಡಿಕೊಂಡು ನಿಮ್ಮ ಡಿವೈಸ್‌ನಲ್ಲಿ ಪಾಸ್‌ಕೀಗಳನ್ನು ಹೊಂದಿಸಿದರೆ ಪಾಸ್‌ವರ್ಡ್‌ಗಳು ಸೋರಿಕೆಯಾಗುವ ಸಾಧ್ಯತೆಗಳು ತುಂಬಾ ಕಡಿಮೆಯಾಗುತ್ತವೆ. ಹಾಗೆಯೇ ಹೊಸ ತಂತ್ರಜ್ಞಾನವನ್ನು ಈ ಪ್ರಕ್ರಿಯೆ ಸುರಕ್ಷಿತಗೊಳಿಸುತ್ತದೆ. ಅದರಲ್ಲೂ ಎಸ್‌ಎಂಎಸ್ ಅಥವಾ ಆಪ್‌ ಆಧಾರಿತ ಒನ್ ಟೈಮ್ ಪಾಸ್‌ವರ್ಡ್‌ ಸೇರಿದಂತೆ ಫಿಶಿಂಗ್ ದಾಳಿಗಳ ವಿರುದ್ಧ ಬಲವಾದ ರಕ್ಷಣೆ ಇದರಿಂದ ಲಭ್ಯವಾಗುತ್ತದೆ.

ಪಾಸ್‌ಕೀಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಪಾಸ್‌ಕೀಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಈ ಪಾಸ್‌ಕೀಗಳು ಪಾಸ್‌ವರ್ಡ್‌ಗಳಂತೆಯೇ ಕೆಲಸ ಮಾಡಲಿವೆ. ಬಳಕೆದಾರರು ಗೂಗಲ್‌ ಖಾತೆಗೆ ಸೈನ್ ಇನ್ ಮಾಡಿದಾಗಲೆಲ್ಲಾ, ಡಿವೈಸ್‌ ಅಥವಾ ವೆಬ್‌ಸೈಟ್ ಪಾಸ್‌ಕೀಯನ್ನು ಕೇಳುತ್ತದೆ. ಈ ಮೂಲಕ ನಿಮ್ಮ ಲಾಗಿನ್ ಅನ್ನು ದೃಢೀಕರಿಸಲು ಫಿಂಗರ್‌ಪ್ರಿಂಟ್ ಅಥವಾ ಉಳಿಸಿದ ಪಾಸ್‌ಕೀಗಳನ್ನು ಬಳಸಬೇಕಾಗುತ್ತದೆ. ಲಾಗಿನ್ ಅನ್ನು ಪೂರ್ಣಗೊಳಿಸಲು ಬಳಕೆದಾರರು ಡಿವೈಸ್‌ನ ಸ್ಕ್ರೀನ್ ಅನ್‌ಲಾಕ್ ಆದ ರೀತಿಯಲ್ಲಿಯೇ ಇಡಬೇಕಿದೆ.

Best Mobiles in India

English summary
Google Chrome users login without typing passwords.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X