Subscribe to Gizbot

ಗೂಗಲ್ ನಿಂದ ಇದೇ ಮೊದಲ ಬಾರಿಗೆ ಕೋಡಿಂಗ್ ಡೂಗಲ್ ಲಾಂಚ್..!

Written By: Lekhaka

ಪ್ರತಿ ವಿಶೇಷ ದಿನಗಳಲ್ಲಿ ತನ್ನದೇ ಆದ ವಿಶೇಷ ಡೂಗಲ್ ನೊಂದಿಗೆ ಗೂಗಲ್ ಕಾಣಿಸಿಕೊಳ್ಳಲಿದೆ. ಇದೆ ಮಾದರಿಯಲ್ಲಿ ಮಕ್ಕಳ ಪ್ರೋಗ್ರಾಮಿಂಗ್ ಲಾಗ್ವೇಜ್ ಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ವಿಶೇಷವಾದ ಡೂಗಲ್ ನೊಂದಿಗೆ ಕಾಣಿಸಿಕೊಂಡಿತ್ತು. ಬೇರೆ ಎಲ್ಲಾ ಡೂಗಲ್ ಗಳಿಗಿಂತಲೂ ಇದು ತೀರಾ ವಿಶೇಷವಾಗಿತ್ತು.

ಗೂಗಲ್ ನಿಂದ ಇದೇ ಮೊದಲ ಬಾರಿಗೆ ಕೋಡಿಂಗ್ ಡೂಗಲ್ ಲಾಂಚ್..!

ಗೂಗಲ್ ಇದೇ ಮೊದಲ ಬಾರಿಗೆ ಕೋಡಿಂಗ್ ಡೂಗಲ್ ಅನ್ನು ಪರಿಚಯಿಸಿದ್ದು, ಇದನ್ನು ಕೋಡಿಂಗ್ ಫಾರ್ ಕಾರೆಟ್ಸ್ ಎಂದು ಕರೆದಿದೆ. ಇದನ್ನು ಮಕ್ಕಳ ಪ್ರೋಗ್ರಾಮಿಂಗ್ ಗೊಲ್ಡನ್ ಜೂಬ್ಲಿ ಸಂಭ್ರಮವಾಗಿ ವಿಶೇಷವಾಗಿ ವಿನ್ಯಾಸವನ್ನು ಮಾಡಿತ್ತು ಎನ್ನಲಾಗಿದೆ.

ಈ ಡೂಗಲ್ ನಲ್ಲಿ ಬಳಕೆದಾರರು ಗೇಮ್ ಆಡಬಹುದಾಗಿದೆ. ಇದೇ ಸಂಧರ್ಭದಲ್ಲಿ ಪ್ರೋಗ್ರಾಂ ಮೂಲಕ ರಾಬಿಟ್ ವಿವಿಧ ಹಂತಗಳನ್ನು ತಲುಪುವುದನ್ನು ಮಾಡಬಹುದಾಗಿತ್ತು. ಇದರಲ್ಲಿ ಒಟ್ಟು ಆರು ಲೆವೆಲ್ ಗಳು ಇದ್ದು, ಇದನ್ನು ಆಡುವ ಮೂಲಕ ರಾಬಿಟ್ ಗೆ ಕ್ಯಾರೆಟ್ ಅನ್ನು ಹುಡುಕಿಕೊಡಬಹುದಾಗಿತ್ತು.

ಈ ಡೂಗಲ್ ಅನ್ನು ಗೂಗಲ್ ಡೂಗಲ್. ಗೂಗಲ್ ಬ್ಲಾಕಿ ಮತ್ತು ಎಂಐಟಿ ಸ್ಕ್ರಾಚ್ ಸಂಶೋಧಕರು ಗಳು ಸೇರಿ ಒಟ್ಟಾಗಿ ಡಿಸೈನ್ ಮಾಡಿದ್ದರು ಎನ್ನಲಾಗಿದೆ. ಈ ಹೊಸ ವಿನ್ಯಾಸದ ಡೂಗಲ್ ಸಾಕಷ್ಟು ಗಮನ ಸೆಳೆದಿರುವುದಲ್ಲದೇ ಹೊಸ ಮಾದರಿಗೆ ಹಲವು ಮಂದಿ ಫಿದಾ ಆಗಿದ್ದಾರೆ.

ಆಂಡ್ರಾಯ್ಡ್ ನಲ್ಲೂ ಇಲ್ಲದೇ ಗೂಗಲ್‌ನ ಈ ಸೇವೆ ಜಿಯೋ ಫೋನಿನಲ್ಲಿ..!!

ಮೊದಲ ಬಾರಿಗೆ 1960ರ ದಶಕದಲ್ಲಿ ಮೊದಲ ಬಾರಿ ಮಕ್ಕಳಿಗಾಗಿ ವಿಶೇಷವಾಗಿ ಕೋಡಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಈ ಹೊಸ ಮಾದರಿಯ ಡೂಗಲ್ ಅಂದಿನಿಂದ ಇಂದಿನ ವರೆಗೂ ಟೆಕ್ನಾಲಜಿ ಹೇಗೆ ಬೆಳೆದುಕೊಂಡು ಬಂದಿದೆ ಎಂಬುದನ್ನು ತಿಳಿಸುವುದಾಗಿತ್ತು.

English summary
Google has introduced its first-ever coding doodle known as 'Coding for Carrots' on the golden jubilee of children learning to code.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot