ಇಂದಿನ ಗೂಗಲ್ 'ಡೂಡಲ್' ಕ್ಲಿಕ್ ಮಾಡಿ ನೋಡಲೇಬೇಕು!..ಏಕೆ ಗೊತ್ತಾ?

|

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ 17ನೇ ಲೋಕಸಭೆ ಚುನಾವಣೆ ಇಂದು ಆರಂಭಗೊಂಡಿರುವುವ ಹಿನ್ನಲೆಯಲ್ಲಿ ಪ್ರಖ್ಯಾತ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ತನ್ನ ಡೂಡಲ್ ಮೂಲಕ ಜಾಗೃತಿ ಮೂಡಿಸಿದೆ. ಪ್ರಪಂಚ ಸೇರಿದಂತೆ ದೇಶದಲ್ಲೇ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ಚ್ ಇಂಜಿನ್ ದೈತ್ಯ ಮತದಾರರಲ್ಲಿ ಮತದಾನದ ಅಗತ್ಯತೆಯನ್ನು ತಿಳಿದಿದೆ.

ಹೌದು, 2019ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಗೂಗಲ್‌ ಡೂಡಲ್‌ನಲ್ಲಿ ರಚಿಸಿರುವ ಕೈ ಚಿತ್ರದಲ್ಲಿ ತೋರು ಬೆರಳಿಗೆ ಶಾಯಿ ಹಾಕಿರುವ ಚಿತ್ರದ ಮೂಲಕ ಮತದಾನದ ಜಾಗೃತಿ ಮೂಡಿಸಲು ಗೂಗಲ್ ಮುಂದಾಗಿದೆ. ತೋರು ಬೆರಳನ್ನು ಕ್ಲಿಕ್‌ ಮಾಡಿದರೆ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಲಭ್ಯ ಇವೆ.

ಇಂದಿನ ಗೂಗಲ್ 'ಡೂಡಲ್' ಕ್ಲಿಕ್ ಮಾಡಿ ನೋಡಲೇಬೇಕು!..ಏಕೆ ಗೊತ್ತಾ?

ಗೂಗಲ್ ತನ್ನ ಡೂಡಲ್ ಮೂಲಕ ಹೇಗೆ ಮತದಾನ ಮಾಡಬೇಕು, ವೋಟಿಂಗ್ ಬೂತ್‌ನಲ್ಲಿ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ, ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡುವುದು, ನಮ್ಮ ಮತದಾನದ ಬೂತ್‌ ಯಾವುದೆಂದು ಕಂಡುಹಿಡಿಯುವುದು ಹೇಗೆ, ಇವಿಎಂಅನ್ನು ಬಳಕೆ ಮಾಡುವುದು ಹೇಗೆ ಮತ್ತು ಯಾವಾಗೆಲ್ಲ ಚುನಾವಣೆ ನಡೆಯಲಿದೆ ಎಂಬೆಲ್ಲಾ ಮಾಹಿತಿಗಳನ್ನು ನೀಡಿದೆ.

ಏಪ್ರಿಲ್ 11ರಿಂದ ಆರಂಭವಾಗಿರುವ 2019ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 18, ಏಪ್ರಿಲ್ 23, ಎಪ್ರಿಲ್ 29, ಮೇ 6, ಮೇ 12 ಮತ್ತು ಮೇ 19 ಹೀಗೆ ಏಳು ಹಂತಗಳಲ್ಲಿ ಮತದಾನವಾಗಲಿದ್ದು, ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನದ ಒಟ್ಟು ಫಲಿತಾಂಶ ಮೇ 23 ರಂದು ಮತಎಣಿಕೆಯಲ್ಲಿ ಬಹಿರಂಗವಾಗಲಿದೆ.

ಇಂದಿನ ಗೂಗಲ್ 'ಡೂಡಲ್' ಕ್ಲಿಕ್ ಮಾಡಿ ನೋಡಲೇಬೇಕು!..ಏಕೆ ಗೊತ್ತಾ?

ಇನ್ನು ನಮ್ಮ ರಾಜ್ಯ ಕರ್ನಾಟಕದಲ್ಲಿ ಒಟ್ಟು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 18ಕ್ಕೆ ಮೊದಲ ಹಂತ ಹಾಗೂ ಏಪ್ರಿಲ್ 23ಕ್ಕೆ ಎರಡನೇ ಹಂತದಲ್ಲಿ ತಲಾ ಹದಿನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇಂದಿನ ಡೂಡಲ್ ಕ್ಲಿಕ್‌ ಮಾಡಿದರೆ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಲಭ್ಯವಿರುವುದನ್ನು ನೀವು ಒಮ್ಮೆ ಕ್ಲಿಕ್ ಮಾಡಿ ನೋಡಲೇಬೇಕು.

ಓದಿರಿ: ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಗಾಗಿ ತಿಳಿಯಲೇಬೇಕಾದ 10 ಮಾಯಾ ಸೂತ್ರಗಳು!!

Best Mobiles in India

English summary
Lok Sabha Elections 2019: Voting for 543 Lok Sabha seats will be held in seven phases: April 11, April 18, April 23, April 29, May 6, May 12 and May 19. Counting will be done on May 23. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X