ವಿಕ್ರಮ್ ಸಾರಾಭಾಯ್ ಜನ್ಮಶತಮಾನೋತ್ಸವಕ್ಕೆ ಗೂಗಲ್ ಡೂಡಲ್ ಗೌರವ!

|

ಗೂಗಲ್ ತನ್ನ ಆಕರ್ಷಕ ಡೂಡಲ್ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದ ಅಚ್ಚಳಿಯದ ಹೆಸರಾದ ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ನೆನಪು ಮಾಡಿಕೊಂಡಿದೆ. ಆಗಸ್ಟ್ 12 ಸೋಮವಾರದಂದು ಡಾ.ವಿಕ್ರಮ್ ಸಾರಾಭಾಯ್ ಅವರ ಜನ್ಮಶತಮಾನೋತ್ಸವದ ಸಂಭ್ರಮವಾಗಿದ್ದು, ಸಾರಾಭಾಯ್ ಹೆಸರನ್ನು ಚಿರಸ್ಥಾಯಿಯನ್ನಾಗಿಸಲು ಗೂಗಲ್ ಮತ್ತೆ ಭಾರತೀಯರನ್ನೆಲ್ಲ ಎಚ್ಚರಿಸಿದೆ.

ವಿಕ್ರಮ್ ಸಾರಾಭಾಯ್ ಜನ್ಮಶತಮಾನೋತ್ಸವಕ್ಕೆ ಗೂಗಲ್ ಡೂಡಲ್ ಗೌರವ!

ಹೌದು, ತಮ್ಮ 20ನೇ ವಯಸ್ಸಿನಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ 'ಪ್ರಕೃತಿವಿಜ್ಞಾನ'ದಲ್ಲಿ ಟ್ರೈಪಾಸ್ ಎಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಮುಂದೆ ಭಾರತದ ಬಾಹ್ಯಾಕಾಶ ಮತ್ತು ಅಣು ತಂತ್ರಜ್ಞಾನವನ್ನು ವಿಶ್ವದೆತ್ತರ ಕೊಂಡೊಯ್ದ ಮಹಾನ್ ವ್ಯಕ್ತಿಗೆ ಗೂಗಲ್ ಗೌರವ ಸಲ್ಲಿಸಿದೆ. ಅಣು ಶಕ್ತಿ ಆಯೋಗದ ಅಧ್ಯಕ್ಷರಾಗಿದ್ದ ಹೋಮಿ ಜಹಾಂಗೀರ್ ಭಾಭಾ ನಿಧನ ಹೊಂದಿನ ನಂತರ ಈ ಸ್ಥಾನದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಸಾರಾಭಾಯ್ ಅವರು ದೇಶದ ಮಹಾನ್ ಆಸ್ತಿಯಾಗಿದ್ದರು.

1919ರ ಆಗಸ್ಟ್ 12ರಂದು ಅಹಮದಾಬಾದ್‌ನಲ್ಲಿ ಜನಿಸಿದ ವಿಕ್ರಮ್ ಸಾರಾಭಾಯ್ ಅವರುಮ್ ಗುಜರಾತಿನಲ್ಲಿ ಕಾಲೇಜು ವ್ಯಾಸಂಗ ಪೂರ್ಣಗೊಳಿಸಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದರು ತದನಂತರ ಭಾರತಕ್ಕೆ ಮರಳಿ 1947 ರ ನವೆಂಬರ್ 11 ರಂದು ತಮ್ಮ 28ನೇ ವಯಸ್ಸಿನಲ್ಲಿ ಅಹಮದಾಬಾದ್‌ನಲ್ಲಿ ಭೌತಿಕ ಸಂಶೋಧನಾ ಪ್ರಯೋಗಾಲಯ(ಪಿಆರ್‌ಎಲ್)ವನ್ನು ಸ್ಥಾಪಿಸಿ ದೇಶಕ್ಕೆ ಮಹಾನ್ ಕೊಡುಗೆಗಳನ್ನು ನೀಡಿದರು.

ವಿಕ್ರಮ್ ಸಾರಾಭಾಯ್ ಜನ್ಮಶತಮಾನೋತ್ಸವಕ್ಕೆ ಗೂಗಲ್ ಡೂಡಲ್ ಗೌರವ!

ರಷ್ಯಾದ ಸ್ಪುಟ್ನಿಕ್ ಉಡಾವಣೆಯ ನಂತರ ಬಾಹ್ಯಾಕಾಶ ಕಾರ್ಯಕ್ರಮದ ಮಹತ್ವವನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಡಾ. ವಿಕ್ರಮ್ ಸಾರಾಭಾಯ್ಅವರು, "ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ ಕೆಲವರು ಇದ್ದಾರೆ. ನಮಗೆ, ಉದ್ದೇಶದ ಯಾವುದೇ ಅಸ್ಪಷ್ಟತೆಯಿಲ್ಲ. ಮನುಷ್ಯ ಮತ್ತು ಸಮಾಜದ ನೈಜ ಸಮಸ್ಯೆಗಳಲ್ಲದೆ ಸುಧಾರಿತ ತಂತ್ರಜ್ಞಾನಗಳ ಅನ್ವಯದಲ್ಲಿ ನಾವು ಎರಡನೆಯವರಾಗಿರಬೇಕು ಎಂದು ಅವರು ಹೇಳಿದ್ದರು.

ಇಂದು ಬಹಿರಂಗಗೊಳ್ಳಲಿವೆ ಜಿಯೋ ಗಿಗಾ ಫೈಬರ್‌ ಮತ್ತು ಜಿಯೋ ಫೋನ್ 3!

ಭಾರತದಲ್ಲಿ ಮೊದಲ ರಾಕೆಟ್ ಉಡಾವಣಾ ಕೇಂದ್ರವನ್ನು ಸ್ಥಾಪಿಸುವಲ್ಲಿ ವಿಕ್ರಮ್ ಸಾರಾಭಾಯ್ ಅವರಿಗೆ ಭಾರತದ ಪರಮಾಣು ವಿಜ್ಞಾನ ಕಾರ್ಯಕ್ರಮದ ಪಿತಾಮಹ ಎಂದೇ ಪರಿಗಣಿಸಲ್ಪಟ್ಟ ಡಾ.ಹೋಮಿ ಬಾಬಾ ಅವರು ಸಾಕಷ್ಟು ಬೆಂಬಲ ನೀಡಿದ್ದರು. ಅಂತೆಯೇ ನವೆಂಬರ್ 21, 1963 ರಂದು ಸೋಡಿಯಂ ವೇಪರ್ ಪೇಲೋಡ್‌ನೊಂದಿಗೆ ಮೊದಲ ಉದ್ಘಾಟನಾ ಹಾರಾಟವನ್ನು ಪ್ರಾರಂಭಿಸಲಾಯಿತು.

ಇನ್ನು ಚಂದ್ರಯಾನ 2 ಯೋಜನೆಯಲ್ಲಿ ಆ. 20ರಂದು ವಿಕ್ರಂ ಹೆಸರಿನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಯಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ವಿಕ್ರಂ ಸಾರಾಭಾಯ್ ಅವರಿಗೆ ಸಲ್ಲುತ್ತದೆ. ತಿರುವನಂತಪುರಂನಲ್ಲಿ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಅಲ್ಲಿ ವಿವಿಧ ತಂತ್ರಜ್ಞಾನ, ಸಂಶೋಧನೆ ಕೈಗೊಳ್ಳಲಾಗುತ್ತದೆ.

Best Mobiles in India

English summary
Google on Monday celebrated Indian Space Research Organisation founder Vikram Sarabhai’s 100th birth anniversary with a doodle. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X