ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಗಮನಿಸಿ!.ಗೂಗಲ್ ಪರಿಚಯಿಸಲಿದೆ ಹೊಸ ಶಾಪಿಂಗ್ ಫೀಚರ್!

|

ಸರ್ಚ್ ಇಂಜಿನ ದೈತ್ಯ ಗೂಗಲ್ ಹೊಸ ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತ ಬಳಕೆದಾರರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ. ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿರುವ ಗೂಗಲ್ ಆನ್‌ಲೈನ್‌ ಶಾಪಿಂಗ್ ಪ್ರಿಯರನ್ನು ಸೆಳೆಯಲು ಮುಂದಾಗಿದೆ. ಸದ್ಯ ಆನ್‌ಲೈನ್‌ ಶಾಪಿಂಗ್ ಹೆಚ್ಚು ಟ್ರೆಂಡಿಂಗ್‌ ಪಡೆದುಕೊಳ್ಳುತ್ತಿದ್ದು, ಈನಿಟ್ಟಿನಲ್ಲಿ ಗೂಗಲ್ ಸಹ ಹೊಸದಾಗಿ ಶಾಪಿಂಗ್ ಆಯ್ಕೆಯನ್ನು ತನ್ನ ಫೀಡ್‌ನಲ್ಲಿ ಸೇರಿಸಿಕೊಳ್ಳುವ ಸಕಲ ತಯಾರಿಯಲ್ಲಿದೆ.

ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಗಮನಿಸಿ!.ಗೂಗಲ್ ಪರಿಚಯಿಸಲಿದೆ ಹೊಸ ಶಾಪಿಂಗ್ ಫೀಚರ್

ಹೌದು, ಗೂಗಲ್ ಹೊಸದಾಗಿ ಶಾಪಿಂಗ್ ಆಯ್ಕೆಯನ್ನು ಪರಿಚಯಿಸುವ ಕುರಿತು ಅಧಿಕೃತವಾಗಿ ತಿಳಿಸಿದ್ದು, ಅತೀ ಶೀಘ್ರದಲ್ಲೇ ಶಾಪಿಂಗ್ ಫೀಚರ್ಸ್‌ ಆಯ್ಕೆ ಬಳಕೆದಾರರಿಗೆ ಲಭ್ಯವಾಗಲಿದೆ. ಶಾಪಿಂಗ್ ಆಯ್ಕೆಯು ಗ್ರಾಹಕರಿಗೆ ಇಮೇಜ್‌ ಫೀಡ್‌ ನಲ್ಲಿ ಕಾಣಿಸಿಕೊಳ್ಳಲಿದೆ. ಗೂಗಲ್ ಸರ್ಚ್‌ನಲ್ಲಿ ಬಳಕೆದಾರರು ಏನಾದರೂ ಉತ್ಪನ್ನವನ್ನು ಸರ್ಚ್‌ ಮಾಡಿದರೇ ಇಮೇಜ್ ವಿಭಾಗದಲ್ಲಿ ಉತ್ಪನ್ನಗಳನ್ನು ಖರೀದಿಸುವ ಮಾಹಿತಿ ಬಳಕೆದಾರರಿಗೆ ಕಾಣಿಸಲಿದ್ದು, ಬೇಕಿದ್ದರೇ ಆನ್‌ಲೈನ್‌ ಮೂಲಕ ವಸ್ತುಗಳ ಖರೀದಿಸಬಹುದಾಗಿದೆ.

ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಗಮನಿಸಿ!.ಗೂಗಲ್ ಪರಿಚಯಿಸಲಿದೆ ಹೊಸ ಶಾಪಿಂಗ್ ಫೀಚರ್

ಗೂಗಲ್ ಶಾಪಿಂಗ್ ಹೊಸ ಆಯ್ಕೆಯನ್ನು ಪರಿಚಯಿಸಲು ಕಂಪನಿಯು ಉತ್ಸುಕವಾಗಿದ್ದು, ಈ ಆಯ್ಕೆ ಆನ್‌ಲೈನ್‌ ಶಾಪಿಂಗ್ ಪ್ರಿಯರಿಗೆ ಒನ್‌ಟಚ್‌ ಮಾದರಿಯಲ್ಲಿ ಬೇಕಾಗಿರುವ ಉತ್ಪನ್ನಗಳ ಮಾಹಿತಿ ಸೀಗಲಿದೆ. ಹಾಗೇ ಬೇರೆ ಬೇರೆ ರಿಟೈಲ್‌ಗಳಲ್ಲಿ ಆ ಉತ್ಪನ್ನಗಳ ಬೆಲೆ ಎಷ್ಟಿದೆ? ಲಭ್ಯವಿರುವ ಆಫರ್‌, ಎಲ್ಲವನ್ನು ತಿಳಿಸುತ್ತದೆ. ಬಳಕೆದಾರರು ಅವುಗಳಲ್ಲಿ ಸೂಕ್ತವಾದದನ್ನು ಸೆಲೆಕ್ಟ್‌ ಮಾಡಿ ಆನ್‌ಲೈನ್‌ ಮೂಲಕ ಉತ್ಪನ್ನವನ್ನು ಆರ್ಡ್‌ರ ಮಾಡಬಹುದು.

ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?ಓದಿರಿ : ಒನ್‌ಪ್ಲಸ್ 'ಬುಲೆಟ್ ವಾಯರ್‌ಲೆಸ್‌ ಇಯರ್‌ಫೋನ್ 2' ಲಾಂಚ್!.ಸೌಂಡ್ ಹೇಗಿದೆ?

ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಗಮನಿಸಿ!.ಗೂಗಲ್ ಪರಿಚಯಿಸಲಿದೆ ಹೊಸ ಶಾಪಿಂಗ್ ಫೀಚರ್

ಗೂಗಲ್ ಸಂಸ್ಥೆ ಈಗಾಗಲೇ ಶಾಪಿಂಗ್ ಫೀಚರ್ಸ್‌ ಪರಿಚಯಿಸುವ ಕುರಿತು ಸಿದ್ಧತೆಗಳಲ್ಲಿ ತೊಡಗಿದ್ದು, ಬಳಕೆದಾರರಿಗೆ ಎಲ್ಲ ಅಗತ್ಯ ಉತ್ಪನ್ನಗಳನ್ನು ದೊರೆಯುವಂತೆ ಮಾಡಲಿದೆ. ಗ್ರಾಹಕರು ತಮಗೆ ಬೇಕಾಗಿರುವ ಉತ್ಪನ್ನವನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದರೇ ಇಮೇಜ್ ಆಯ್ಕೆಯಲ್ಲಿ ಲಭ್ಯವಿರುವ ಆ ಉತ್ಪನ್ನಗಳ ಪೋಟೋ ಸಹಿತ ಪೂರ್ಣ ವಿವರ ಮತ್ತು ಬೆಲೆ ಎಲ್ಲವೂ ಕಾಣಿಸಿಕೊಳ್ಳುತ್ತವೆ. ಕೆಲವು ಉತ್ಪನ್ನಗಳನ್ನು ಸೇರವಾಗಿ ಗೂಗಲ್‌ನಿಂದ ಖರೀದಿಸಬಹುದಾಗಿದೆ.

ಕಂಪನಿಯ ಗೂಗಲ್ ಎಕ್ಸ್‌ಪ್ರೆಸ್‌ ಆಪ್‌ ಇದ್ದು, ಅದನ್ನು ಸದ್ಯದಲ್ಲಿಯೇ ಹೊಸ ಲುಕ್‌ನಲ್ಲಿ ಅಪ್‌ಡೇಟ್ ಮಾಡಲಿದೆ. ಬಳಕೆದಾರರು ಸರ್ಚ್‌ ಮಾಡುವ ಉತ್ಪನ್ನಗಳಿಗೆ ಸಂಬಂಧಿಸದ ಉತ್ಪನ್ನಗಳ ಲಿಂಕ್ ಗೂಗಲ್ ಫೀಡ್‌ನಲ್ಲಿ, ಗೂಗಲ್ ಇಮೇಜ್‌ನಲ್ಲಿ ಮತ್ತು ಯೂಟ್ಯೂಬ್‌ಗಳಲ್ಲಿಯೂ ಸಹ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಅಲೆ ; 'ಒನ್‌ಪ್ಲಸ್‌ 7 ಪ್ರೊ' ಬಿಡುಗಡೆ!ಓದಿರಿ : ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಅಲೆ ; 'ಒನ್‌ಪ್ಲಸ್‌ 7 ಪ್ರೊ' ಬಿಡುಗಡೆ!

Best Mobiles in India

English summary
Google Express is now Google Shopping, Feed and YouTube integration coming soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X