Subscribe to Gizbot

ಅಮೆಜಾನ್‌ ಇಕೋಗೆ ಸೆಡ್ಡು: ಭಾರತದಲ್ಲಿ ಹೋಮ್ ಸ್ಮಾರ್ಟ್‌ಸ್ಪೀಕರ್ ಲಾಂಚ್ ಮಾಡಿದ ಗೂಗಲ್...!

Written By:

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರುವ ಗೂಗಲ್, ಈ ಬಾರಿ ತನ್ನ ಸ್ಮಾರ್ಟ್‌ ಸ್ಪೀಕರ್‌ಗಳಾದ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಗಳನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಗೂಗಲ್ ವಾಯ್ಸ್ ಅಸಿಸ್ಟೆಂಟ್ ನೊಂದಿಗೆ ಕಾರ್ಯನಿರ್ವಹಿಸುವ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಗಳು ಬಿಡುಗಡೆಗೊಂಡಿವೆ.

ಅಮೆಜಾನ್‌ ಇಕೋಗೆ ಸೆಡ್ಡು: ಭಾರತದಲ್ಲಿ ಹೋಮ್ ಸ್ಮಾರ್ಟ್‌ಸ್ಪೀಕರ್ ಲಾಂಚ್

ಫ್ಲಿಪ್‌ಕಾರ್ಟ್‌ ಮತ್ತು ಆಫ್‌ಲೈನ್‌ ಸ್ಟೋರ್ ಗಳಲ್ಲಿ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಲಭ್ಯವಿರಲಿದೆ ಎನ್ನಲಾಗಿದ್ದು, ಗೂಗಲ್ ಹೋಮ್ ರೂ.9999ಕ್ಕೆ ಮಾರಾಟವಾಗಲಿದ್ದು, ಇದರೊಂದಿಗೆ ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ರೂ.4499ಕ್ಕೆ ಲಭ್ಯವಿರಲಿದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ಸ್ಮಾರ್ಟ್‌ ಸ್ಪೀಕರ್ ಗಳಿಗೆ ಇದು ಸೆಡ್ಡು ಹೊಡೆಯಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಖರೀದಿಸುವವರಿಗೆ ಜಿಯೋ ಫೈ ರೌಟರ್ ಉಚಿತವಾಗಿ ದೊರೆಯಲಿದ್ದು, ಇದೇ ಮಾದರಿಯಲ್ಲಿ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಸ್ಟೋರ್ ಗಳಲ್ಲಿ ಗೂಗಲ್ ಹೊಮ್ ಮತ್ತು ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ಖರೀದಿಸಿದರೆ 100GB ಡೇಟಾ ಸಹ ಜಿಯೋ ಫೈ ನೊಂದಿಗೆ ದೊರೆಯಲಿದೆ ಎನ್ನಲಾಗಿದ್ದು, ಈ ಆಪರ್ ಏಪ್ರಿಲ್ 30ರ ವರೆಗೆ ಮಾತ್ರವೇ ಲಭ್ಯವಿರಲಿದೆ.

ಅಮೆಜಾನ್‌ ಇಕೋಗೆ ಸೆಡ್ಡು: ಭಾರತದಲ್ಲಿ ಹೋಮ್ ಸ್ಮಾರ್ಟ್‌ಸ್ಪೀಕರ್ ಲಾಂಚ್

ಗೂಗಲ್ ಹೋಮ್‌ನಲ್ಲಿ ಪ್ಲೇ ಬ್ಯಾಕ್ ಕಂಟ್ರೋಲ್, ವಾಲ್ಯೂಮ್ ಮತ್ತು ಗೂಗಲ್ ಅಸಿಸ್ಟೆಂಟ್ ಆಕ್ಟಿವ್ ಬಟನ್ ಕಾಣಬಹುದಾಗಿದೆ. ಆಪ್ ಮೂಲಕವೂ ಕಾರ್ಯನಿರ್ವಹಿಸಲಿದೆ. ವೈಫೈನಿಂದ ಮಾತ್ರವೇ ಕಾರ್ಯನಿರ್ವಹಿಸಲಿದ್ದು, ಬ್ಲೂಟೂತ್ ಇಲ್ಲ. ಇದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ನೊಂದಿಗೆಯೂ ಕನೆಕ್ಟ್ ಮಾಡಬಹುದಾಗಿದೆ. ಮನೆಯಲ್ಲಿರುವ ಇತರೆ ಸ್ಮಾರ್ಟ್ ವಸ್ತುಗಳೊಂದಿಗೆ ಸಿಂಕ್ ಆಗಲಿದೆ. ಗಾತ್ರದಲ್ಲಿ ಕೊಂಚ ದೊಡ್ಡದಾಗಿದೆ. ಗೂಗಲ್ ಹೋಮ್ ರೂ.9999ಕ್ಕೆ ಮಾರಾಟವಾಗಲಿದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಗೂಗಲ್ ಹೊಮ್ ಮಿನಿ, ಹೆಸರೇ ಹೇಳುವಂತೆ ಇದು ಚಿಕ್ಕ ಸ್ಪೀಕರ್ ಆಗಿದ್ದು, ಇದು ಆಪ್ ಮೂಲಕ ಕಾರ್ಯನಿರ್ವಹಿಸಲಿದ್ದು, ಅನೇಕ ಕಾರ್ಯಗಳಿಗೆ ಸಹಾಯಕಾರಿಯಾಗಲಿದೆ. ಇದು ಸಹ ಸ್ಮಾರ್ಟ್ ಡಿವೈಸ್‌ಗಳೊಂದಿಗೆ ಕನೆಕ್ಟ್ ಆಗಲಿದೆ. ದನ್ನು ಟಿವಿ ಮತ್ತು ಕ್ರೊಮ್ ಕಾಸ್ಟ್ ನೊಂದಿಗೆಯೂ ಕನೆಕ್ಟ್ ಮಾಡಬಹುದಾಗಿದೆ. ಗಾತ್ರದಲ್ಲಿ ಕೊಂಚ ಚಿಕ್ಕದಾಗಿದೆ. ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್ ರೂ.4499ಕ್ಕೆ ಲಭ್ಯವಿರಲಿದೆ.

English summary
Google Home, Home Mini Smart Speakers Launched in India: Price, Specifications. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot