ಗೂಗಲ್ i/o 2017...ಪ್ರಕಟಣೆಯಾದ ಅತ್ಯದ್ಬುತ ಅವಿಷ್ಕಾರಗಳು ಯಾವುವು ಗೊತ್ತಾ?

2017 ನೇ ಸಾಲಿನಲ್ಲಿ ಕೆವಲ ಸಾಫ್ಟ್‌ವೇರ್‌ಗಳ ಅಭಿವೃಧ್ಧಿಗೆ ಮಾತ್ರ ಹೆಚ್ಚು ಒಲವು ತೋರಿಸಿರುವ ಗೂಗಲ್ ಈ ವರ್ಷ ಯಾವುದೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿಲ್ಲ.!!

|

2017 ನೇ ಗೂಗಲ್ i/o(input and output) ವಾರ್ಷಿಕ ಸಮಾರಂಭದಲ್ಲಿ ಗೂಗಲ್ ತನ್ನ ಹಲವು ಹೊಸ ಸೇವೆಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದೆ. ಗೂಗಲ್ ಸಿಇಒ ಮತ್ತು ಭಾರತದ ಸಂಜಾತ ಸುಂದರ್‌ ಪಿಚೈ ವಾರ್ಷಕ ಸಮಾರಂಭದಲ್ಲಿ ಗೂಗಲ್‌ ಹೊಸ ಸೇವೆಗಳ ಬಗ್ಗೆ ವಿವರಿಸಿದ್ದಾರೆ.!!

ಕಳೆದ ಎಲ್ಲಾ ವರ್ಷಗಳಿಗಿಂತ ಈ ವರ್ಷ ವಿಭಿನ್ನವಾಗಿ ಗೂಗಲ್ ಹೊಸ ಸೇವೆಗಳನ್ನು ಬಿಡುಗಡೆ ಮಾಡಿದೆ. 2017 ನೇ ಸಾಲಿನಲ್ಲಿ ಕೆವಲ ಸಾಫ್ಟ್‌ವೇರ್‌ಗಳ ಅಭಿವೃಧ್ಧಿಗೆ ಮಾತ್ರ ಹೆಚ್ಚು ಒಲವು ತೋರಿಸಿರುವ ಗೂಗಲ್ ಈ ವರ್ಷ ಯಾವುದೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿಲ್ಲ.!!ಹಾಗಾದರೆ, ಗೂಗಲ್ ಈ ವರ್ಷ ಬಿಡುಗಡೆ ಮಾಡಿರುವ ನೂತನ ಅವಿಷ್ಕಾರಗಳು ಯಾವುವು? ಏನದರ ವಿಶೇಷತೆಗಳು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹೊಸ ಹೋಂ ಸ್ಕ್ರೀನ್

ಹೊಸ ಹೋಂ ಸ್ಕ್ರೀನ್

ಗೂಗಲ್ ಕಂಪೆನಿಯು ಭಾರತದ ಬಳಕೆದಾರರಿಗಾಗಿ ಹೊಸ ಹೋಂ ಸ್ಕ್ರೀನ್ ಪರಿಚಯಿಸಿದೆ. ಇದರ ಮೂಲಕ ಗೆಳೆಯರು, ಪರಿಚಿತರು ಮತ್ತು ಸಂಬಂಧಿಕರನ್ನು ಸುಲಭವಾಗಿ ಗುರುತಿಸಬಹುದು. ಮತ್ತು ಮಹಾನಗರಗಳಲ್ಲಿ ವಾಸಿಸುವ ನಾಗರಿಕರು ಗೂಗಲ್ ಮ್ಯಾಪ್ ಸಹಾಯದಿಂದ ಯಾವ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದು ಆಂಡ್ರಾಯ್ಡ್‌ ಮಾದರಿಗೆ ಮಾತ್ರ ಲಭ್ಯವಿದೆ.

'ಆಂಡ್ರಾಯ್ಡ್ 0'

'ಆಂಡ್ರಾಯ್ಡ್ 0'

ಆಂಡ್ರಾಯ್ಡ್ ಹರಿಕಾರ ಗೂಗಲ್ ಇದೀಗ ಹೊಸದಾಗಿ 'ಆಂಡ್ರಾಯ್ಡ್ 0' ಸಾಫ್ಟ್‌ವೇರ್ ಅಭಿವೃದ್ದಿ ಮಾಡಿದೆ. ಈಗಾಗಲೇ ಬೀಟಾ ವರ್ಷನ್ 'ಆಂಡ್ರಾಯ್ಡ್ 0'ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದ್ದು,ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ೦ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ಬರುವ ನಿರೀಕ್ಷೆ ಇದೆ.!!

ಗೂಗಲ್ ಜಾಬ್ಸ್.!!

ಗೂಗಲ್ ಜಾಬ್ಸ್.!!

ಈಗಾಗಲೇ ಲಿಂಕ್‌ಡಿನ್, ಮಾನ್‌ಸ್ಟಾರ್ ಅಂತದ ಅಪ್ಲಿಕೇಷನ್‌ಗಳಲ್ಲಿ ಕೆಲಸ ಹುಡುಕುವವರಿಗೆ ಗೂಗಲ್ ಸಹಾಯ ಮಾಡುತ್ತಿದೆ.! ಖಾಸಾಗಿ ಕಂಪೆನಿಗಳ ಮತ್ತು ಉದ್ಯೋಗಿಗಳ ನೆಟ್‌ವರ್ಕ್ ಹೆಚ್ಚಿಸಲು ಗೂಗಲ್ ಪ್ಲಾನ್ ಮಾಡಿದೆ.!!

ಜಿ-ಮೇಲ್ ಸ್ಮಾರ್ಟ್‌ ರಿಪ್ಲೇ!!

ಜಿ-ಮೇಲ್ ಸ್ಮಾರ್ಟ್‌ ರಿಪ್ಲೇ!!

ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಳಕೆಯಲ್ಲಿರುವ ಜಿ-ಮೇಲ್ ಅನ್ನು ಮತ್ತಷ್ಟು ಸ್ಮಾರ್ಟ್‌ ಮಾಡಲು ಗೂಗಲ್ ಮುಂದಾಗಿದ್ದು, ಜಿ-ಮೇಲ್ ಸ್ಮಾರ್ಟ್‌ ರಿಪ್ಲೇ ಆಯ್ಕೆಯನ್ನು ನೀಡುತ್ತದೆ. ಇದರಿಂದಾಗಿ ಜಿ-ಮೇಲ್ ಬಳಕೆ ಮತ್ತಷ್ಟು ಸರಳವಾಗಲಿದೆ.

ಗೂಗಲ್ ಲೆನ್ಸ್!!

ಗೂಗಲ್ ಲೆನ್ಸ್!!

ಗೂಗಲ್ ಪರಿಚಯಿಸಿರುವ ನೂತನ ಸಾಫ್ಟ್ವೇರ್ ಗೂಗಲ್ ಲೆನ್ಸ್.! ಅತ್ಯಾಧುನಿಕವಾದ ಈ ಸಾಫ್ಟ್‌ವೇರ್ ಮೂಲಕ ನೀವು ಯಾವ ವಸ್ತುಗಳ ಹೆಸರನ್ನು ಕ್ಷಣದಲ್ಲಿಯೆ ತಿಳಿದುಕೊಳ್ಳಬಹುದು. ಉದಾಹರಣೆಗೆ ಒಂದು ಹೂ ಚಿತ್ರವನ್ನು ನೀವು ತೆಗೆದರೆ, ಆ ಹೂವಿನ ಹೆಸರು ಮತ್ತು ಸಂಪೂರ್ಣ ಜಾತಕವನ್ನೇ ಅದು ನಿಮಗೆ ನೀಡುತ್ತದೆ.!!

Best Mobiles in India

English summary
All the key Google I/O announcements are listed here. to know more vist to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X