ವಿದ್ಯಾರ್ಥಿಗಳಿಗೆ ಸಿಹಿಸುದ್ದಿ!..ಮೂರು ತಿಂಗಳು ಉಚಿತ 'ಯೂಟ್ಯೂಬ್ ಪ್ರೀಮಿಯಮ್'!

|

ಪ್ರಸ್ತುತ ಹಲವು ವಿಡಿಯೊ ಸ್ಟ್ರಿಮಿಂಗ್ ಅಪ್ಲಿಕೇಶನ್‌ಗಳು ಲಗ್ಗೆ ಇಟ್ಟಿದ್ದು, ಅವುಗಳ ಜನಪ್ರಿಯತೆಯ ನಡುವೆಯೂ ಗೂಗಲ್‌ನ ಯೂಟ್ಯೂಬ್ ವಿಡಿಯೊ ತಾಣ ತನ್ನ ಜನಪ್ರಿಯತೆಯನ್ನು ಮಾತ್ರ ಕಳೆದುಕೊಂಡಿಲ್ಲ. ಯೂಟ್ಯೂಬ್ ಉಚಿತ ಸೇವೆ ಆಗಿದ್ದು, ಆದ್ರೆ ಯೂಟ್ಯೂಬ್ ಆಪ್‌ನ 'ಯೂಟ್ಯೂಬ್ ಪ್ರೀಮಿಯಮ್'‌ ಮತ್ತು 'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಮ್'‌ ಸೇವೆಗಳಿಗೆ ಶುಲ್ಕವಿದೆ. ಆದರೆ ಕಂಪನಿಯು ಸ್ಟೂಡೆಂಟ್‌ಗಳಿಗೆ ಮೂರು ತಿಂಗಳು ಉಚಿತ ಸೇವೆ ನೀಡಲು ಸಜ್ಜಾಗಿದೆ

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ!..ಮೂರು ತಿಂಗಳು ಉಚಿತ 'ಯೂಟ್ಯೂಬ್ ಪ್ರೀಮಿಯಮ್'!

ಹೌದು, ಯೂಟ್ಯೂಬ್‌ ಇದೀಗ 'ಬ್ಯಾಕ್‌ ಟು ಸ್ಕೂಲ್' ಆಫರ್‌ ಅನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿದ್ದು, ಈ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಪ್ರೀಮಿಯಮ್'‌ ಅಥವಾ 'ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಮ್'‌ ಸೇವೆಗಳು ಮೂರು ತಿಂಗಳ ಉಚಿತವಾಗಿ ಲಭ್ಯವಾಗಲಿವೆ. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ರಿಯಾಯಿತಿ ಬೆಲೆಯಲ್ಲಿ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿತ್ತು. ಹಾಗದರೇ ಯೂಟ್ಯೂಬ್ ಪ್ರೀಮಿಯಮ್‌ನ ಇತ್ತೀಚಿನ ಪ್ಲ್ಯಾನ್‌ಗಳ ಬಗ್ಗೆ ಮತ್ತು ಹೊಸ ಕೊಡುಗೆ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ಮೂರು ತಿಂಗಳು ಉಚಿತ

ಮೂರು ತಿಂಗಳು ಉಚಿತ

ಗೂಗಲ್ ಇದೀಗ ವಿದ್ಯಾರ್ಥಿಗಳನ್ನು ಆಕರ್ಷಿಸಲು ಮುಂದಾಗಿದ್ದು, ತನ್ನ 'ಯೂಟ್ಯೂಬ್ ಪ್ರೀಮಿಯಮ್' ಸೇವೆಯನ್ನು ಹೊಸದಾಗಿ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ಮೂರು ತಿಂಗಳು ಉಚಿತ ಸೇವೆ ದೊರೆಯಲಿದೆ. ಈ ಟ್ರೈಯಲ್ ಅವಧಿಯಲ್ಲಿ ಯೂಟ್ಯೂಬ್ ಪ್ರೀಮಿಯಮ್, ಯೂಟ್ಯೂಬ್ ಮ್ಯೂಸಿಕ್, ಯೂಟ್ಯೂಬ್ ಕಿಡ್ಸ್‌, ಯೂಟ್ಯೂಬ್ ಗೇಮಿಂಗ್ ಸೇವೆಗಳು ಸಹ ಲಭ್ಯವಾಗಲಿವೆ. ಆಯ್ದ ನಗರಗಳಿಗೆ ಮಾತ್ರ ಈ ಕೊಡುಗೆ ಲಭ್ಯ.

59ರೂ.ಗಳ ಪ್ಲ್ಯಾನ್‌

59ರೂ.ಗಳ ಪ್ಲ್ಯಾನ್‌

ಯೂಟ್ಯೂಬ್‌ ಸ್ಟ್ರೀಮಿಂಗ್‌ ಸೇವೆಗಳ ಚಂದಾದಾರತ್ವ ಹೊಂದಲು ಆರಂಭಿಕ 59ರೂ.ಗಳ ಪ್ಲ್ಯಾನ್‌ ಅನ್ನು ಕಂಪನಿಯು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಕೇವಲ ಯೂಟ್ಯೂಬ್‌ ಮ್ಯೂಸಿಕ್‌ ಸೇವೆ ಮಾತ್ರ ಲಭ್ಯ ಇರಲಿದೆ. ಒಂದು ತಿಂಗಳ ವ್ಯಾಲಿಡಿಟಿಯನ್ನು ಒಳಗೊಂಡಿರಲಿದ್ದು, ವಾಯ್ದೆ ಮುಗಿಯುವವರೆಗೂ ಅನಿಯಮಿತವಾಗಿ ಮನರಂಜನೆ ಪಡೆದುಕೊಳ್ಳಬಹುದು.

79ರೂ.ಗಳ ಪ್ಲ್ಯಾನ್‌

79ರೂ.ಗಳ ಪ್ಲ್ಯಾನ್‌

ಸ್ಟೂಡೆಂಟ್‌ ಡಿಸ್ಕೌಂಟ್‌ ಆಫರ್‌ನಡಿ ಕೇವಲ 79ರೂ.ಗಳ ಶುಲ್ಕ ಪಾವತಿಸಿ ಯೂಟ್ಯೂಬ್‌ ಪ್ರೀಮಿಯಮ್ ವಿಡಿಯೊ ಸ್ಟ್ರೀಮಿಂಗ್‌ ಸೇವೆಯ ಚಂದಾದಾರರಾಗಬಹುದು. ಗ್ರಾಹಕರು ಈ ಸೇವೆಯಲ್ಲಿ ಸಂಪೂರ್ಣ ವಿಡಿಯೊಗಳ ಮನರಂಜನೆಯನ್ನು ಪಡೆಯಬಹುದಾಗಿದ್ದು, ಒಂದು ತಿಂಗಳ ವ್ಯಾಲಿಟಿಡಿಯನ್ನು ಹೊಂದಿದೆ. ಅವಧಿ ಮುಗಿಯುವವರೆಗೂ ಸ್ಟ್ರೀಮಿಂಗ್ ಲಭ್ಯವಿರುತ್ತದೆ.

ಸಾಮಾನ್ಯ ಪ್ಲ್ಯಾನ್‌

ಸಾಮಾನ್ಯ ಪ್ಲ್ಯಾನ್‌

ಆಂಡ್ರಾಯ್ಡ್‌ ಓಎಸ್‌ ಗ್ರಾಹಕರಿಗೆ ಯೂಟ್ಯೂಬ್‌ ಮ್ಯೂಸಿಕ್‌ ಸೇವೆಗೆ 99ರೂ ಮತ್ತು ವಿಡಿಯೊ ಸ್ಟ್ರೀಮಿಂಗ್‌ ಸೇವೆಗೆ 129ರೂ ಚಂದಾದಾರತ್ವ ಶುಲ್ಕ ನಿಗದಿಮಾಡಲಾಗಿದೆ. ಹಾಗೆಯೇ ಐಓಎಸ್‌ ಗ್ರಾಹಕರಿಗೆ 129ರೂ.ಗೆ ಯೂಟ್ಯೂಬ್‌ ಮ್ಯೂಸಿಕ್‌ ಸೇವೆ ಮತ್ತು 169ರೂ.ಗೆ ವಿಡಿಯೊ ಸ್ಟ್ರೀಮಿಂಗ್‌ ಸೇವೆಯ ಚಂದಾದಾರತ್ವ ಪಡೆಯಬಹುದಾಗಿದೆ.

ಟಫ್‌ ಪೈಪೋಟಿ

ಟಫ್‌ ಪೈಪೋಟಿ

ಮ್ಯೂಸಿಕ್‌ ಮತ್ತು ವಿಡಿಯೊ ಸ್ಟ್ರೀಮಿಂಗ್‌ ಸೇವೆ ಒದಗಿಸುವ ಕಂಪನಿಗಳ ನಡುವೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇದೆ. ಮಾರುಕಟ್ಟೆಯಲ್ಲಿ ಸದ್ಯ ಸ್ಪಾಟಿಫೈ, ಗಾನಾ, ಸಾವನ್‌, ಅಮೆಜಾನ್‌ ಪ್ರೈಮ್‌, ಆಪಲ್‌ ಮ್ಯೂಸಿಕ್‌ ಸೇರಿದಂತೆ ಹಲವು ಕಂಪನಿಗಳು ಸೇವೆ ಒದಗಿಸುತ್ತಿವೆ. ಪ್ರಸ್ತುತ ಗೂಗಲ್‌ ಒಡೆತನದ ಯೂಟ್ಯೂಬ್‌ ಸಹ ಈ ಪೈಪೋಟಿಗೆ ಇಳಿಯುವಂತಾಗಿದೆ.

ಫ್ಯಾಮಿಲಿ ಪ್ಲ್ಯಾನ್‌

ಫ್ಯಾಮಿಲಿ ಪ್ಲ್ಯಾನ್‌

ಸದ್ಯ ಯೂಟ್ಯೂಬ್‌ ಆಫರ್‌ ನೀಡಿರುವುದು ವಿದ್ಯಾರ್ಥಿಗಳಿಗೆ ಮಾತ್ರ(ಸಿಂಗಲ್‌ ಸಬ್‌ಸ್ಕ್ರಿಪ್ಶನ್‌). ಒಂದು ವೇಳೆ ಕುಟುಂಬದ ಎಲ್ಲ ಸದಸ್ಯರಿಗೂ ಯೂಟ್ಯೂಬ್‌ ಸ್ಟ್ರೀಮಿಂಗ್‌ ಲಭ್ಯವಾಗಬೇಕಿದ್ದರೇ ಫ್ಯಾಮಿಲಿ ಪ್ಲ್ಯಾನ್‌ ಪಡೆಯಬಹುದು. 6 ಸದಸ್ಯರ ಕುಟುಂಬಕ್ಕೆ ಯೂಟ್ಯೂಬ್‌ ಮ್ಯೂಸಿಕ್‌ ಶುಲ್ಕ 149ರೂ. ಮತ್ತು ವಿಡಿಯೊ ಸೇವೆಗೆ 189ರೂ.ಗಳು ಆಗಿದೆ.(ಆಂಡ್ರಾಯ್ಡ್‌ ಓಎಸ್‌).

Best Mobiles in India

English summary
Google had announced special plans for students in India back in May this year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X