ಗೂಗಲ್ ತೆಕ್ಕೆಗೆ HTC: ಯಾಕಾಗಿ? ಭಾರತೀಯರಿಗೇನು ಲಾಭ?

Written By:

ಸರ್ಚ್ ಇಂಜಿನ್ ದೈತ್ಯ ಗೂಗಲ್ ಒಂದೊಂದಾಗಿ ಎಲ್ಲಾವನ್ನು ಕ್ರಮಿಸುತ್ತಾ ಬರುತ್ತಿದ್ದು, ಮೂಲಗಳ ಪ್ರಕಾರ ಮೊಬೈಲ್ ತಯಾರಕಾ ಕಂಪನಿ HTCಯನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಗೂಗಲ್ ಮತ್ತು HTC ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಗೂಗಲ್ ತೆಕ್ಕೆಗೆ HTC: ಯಾಕಾಗಿ? ಭಾರತೀಯರಿಗೇನು ಲಾಭ?

ಓದಿರಿ: ವಾಟ್ಸ್‌ಆಪ್‌ನಿಂದ ನೀವು ನಿರೀಕ್ಷಿಸದ ಮತ್ತೊಂದು ಆಚ್ಚರಿಯ ಆಯ್ಕೆ

ಈಗಾಗಲೇ HTC ಸಹ ಮಾರುಕಟ್ಟೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡುತ್ತಿಲ್ಲ ಮತ್ತು ಸ್ಪರ್ಧೆಯಲ್ಲಿ ಇತರ ಕಂಪನಿಗಳ ಮುಂದೆ ನಿಲ್ಲಲು ಆಗದೆ ಇರುವ ಸ್ಥಿತಿಯನ್ನು ತಲುಪಿದೆ ಈ ಹಿನ್ನಲೆಯಲ್ಲಿ ಗೂಗಲ್ ನೊಂದಿಗೆ ಸೇರಿಕೊಳ್ಳುವ ಆಲೋಚನೆಯಲ್ಲಿದೆ. ಇದರಿಂದ ಭಾರತೀಯರಿಗೆ ಲಾಭವಾಗುವ ಲಕ್ಷಣಗಳು ಕಾಣಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಫೋನ್ ನಿರ್ಮಿಸಿದ್ದ HTC:

ಗೂಗಲ್ ಫೋನ್ ನಿರ್ಮಿಸಿದ್ದ HTC:

ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಗೂಗಲ್ ಫೋನ್ ಗಳಲ್ಲಿ ಕೆಲವನ್ನು HTC ನಿರ್ಮಿಸಿದ್ದು, ಈ ಹಿನ್ನಲೆಯಲ್ಲಿ HTCಯೊಂದಿಗೆ ಈಗಾಗಲೇ ಸಂಬಂಧವನ್ನು ಹೊಂದಿರುವ ಗೂಗಲ್ ಈಗಾಗಲೆ ತನ್ನ ತೆಕ್ಕೆಗೆ HTC ಯನ್ನು ಸೇರಿಸಿಕೊಳ್ಳಲು ಮುಂದಾಗಿದೆ.

HTCಗೆ ಮರು ಜೀವ:

HTCಗೆ ಮರು ಜೀವ:

ಈ ಹಿಂದೆ ಮುಚ್ಚುವ ಹಂತದಲ್ಲಿದ್ದ ಮೊಟೊ ಸ್ಮಾರ್ಟ್‌ಫೋನ್‌ಗಳಿಗೆ ಮರುಜೀವ ನೀಡಿದ್ದ ಗೂಗಲ್ ಈ ಬಾರಿ HTCಗೆ ಮರುಜೀವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಮತ್ತೇ HTC ಆರ್ಭಟ ಶುರುವಾಗಲಿದೆ.

ಗೂಗಲ್ ಅವಶ್ಯಕತೆ:

ಗೂಗಲ್ ಅವಶ್ಯಕತೆ:

ಈ ಹಿಂದೆ ತನ್ನ ಬಳಕೆಗಾಗಿ ಮೊಟೊ ಖರೀದಿಸಿದ್ದ ಗೂಗಲ್ ಕೊನೆಗೆ ಅದನ್ನು ಲಿಮೋವೊಗೆ ಮಾರಾಟ ಮಾಡಿತ್ತು. ಆದರೆ ಈ ಬಾರಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಲುವಾಗಿ HTC ಖರೀದಿಸಲಿದೆ.

All about Nokia 3310 Phone - GIZBOT KANNADA
ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌:

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌:

ಈ ಹಿಂದೆ ಭಾರತದಂತಹ ರಾಷ್ಟಗಳಲ್ಲಿ ರೂ.2000ಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ಗೂಗಲ್ ಅದನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ HTCಯನ್ನು ಖರೀದಿಸಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
recent years, HTC has struggled to reach the numbers it needs to make it an attractive business. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot