ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

Written By:

ಇಂಟರ್‌ನೆಟ್ ಸರ್ಚ್ ಎಂಜಿನ್‌ ದೈತ್ಯ "ಗೂಗಲ್" ಸಂಸ್ಥೆ ಎರಡು ಸಾವಿರ ರೂಪಾಯಿಗಳಿಗೆ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಯೂಚನೆಯಲ್ಲಿದೆ.!! ಇತ್ತೀಚಿಗಷ್ಟೆ ಭಾರತದಲ್ಲಿ ಆಫ್‌ಲೈನ್‌ ಸ್ಟಾರ್ಟಪ್ ಬ್ಯಸಿನೆಸ್‌ಗೆ ಆನ್‌ಲೈನ್ ಟ್ರೈನಿಂಗ್ ನೀಡುವುದಾಗಿ ಹೆಳಿದ್ದ ಕೆಲವೇ ದಿನಗಳಲ್ಲಿ ಗೂಗಲ್ ಈ ಸುದ್ದಿಯನ್ನು ಹೊರಹಾಕಿದೆ.

ಗೂಗಲ್ ಸಿಇಒ ಆಗಿರುವ ಭಾರತದ ಸಂಜಾತ ಸುಂದರ್‌ ಪಿಚೈ ಅವರು ತಾವು ಓದಿದ್ದ ತಮ್ಮ ಹಳೆ ಕಾಲೆಜಿಗೆ ಭೇಟಿ ನೀಡಿದ್ದ ಸಮಯದಲ್ಲಿ ವಿಧ್ಯಾರ್ಥಿಗಳ ಬಳಿ ತಮ್ಮ ಮುಂದಿನ ಯೋಜನೆಯನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಸುಂದರ್‌ ಪಿಚೈ ಅವರು ತಾವು ಓದಿದ್ದ ಐಐಟಿ ಖರಗ್‌ಪುರ ಕಾಲೇಜಿಗೆ ಭೇಟಿ ನೀಡಿ 30 ಡಾಲರ್‌ ಒಳಗೆ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

ಓದಿರಿ: ಲಾಂಚ್‌ ಆಯ್ತು ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!! ಊಹಾಪೋಹಕ್ಕೆ ತೆರೆಎಳೆದ "ನೋಕಿಯಾ 6"!!!

ಈ ಬಗ್ಗೆ ಮಾತನಾಡಿರುವ ಅವರು, ನಾವು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಬಳಕೆ ಮೆಲೆ ದೂರದೃಷ್ಟಿ ಹಾಯಿಸಿದ್ದೇವೆ. ಡಿಜಿಟಲ್ ಇಂಡಿಯಾ ಸಾಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ದೇಶ ಪ್ರಪಂಚದಲ್ಲಿಯೇ ಮುಂಚೂಣಿಗೆ ಬರಲಿದೆ ಎಂದು ಹೇಳಿದ್ದಾರೆ.

 ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

ಭಾರತದ ಡಿಜಿಟಲ್ ಆರ್ಥಕತೆಯು ಕಡಿಮೆ ದರದ ಸ್ಮಾರ್ಟ್‌ಫೊನ್‌ಗಳ ಮೆಲೆ ನಿಂತಿದೆ. ಗಾಗಾಗಿ, ಗೂಗಲ್ ಕಡಿಮೆ ಬೆಲೆಯ ಸ್ಮಾರ್ಟ್‌ಪೊನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಸಾಹಕವಾಗಿದೆ. ನಾವು ( ಗೂಗಲ್) ಕೆವಲ 30 ಡಾಲರ್‌ ಬೆಲೆಗಿಂತಲೂ ಕಡಿಮೆ ದರಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

 ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

ಭಾರತದ ಗ್ರಾಮೀಣ ಮಹೀಳೆಯರ ಇಂಟರ್‌ನೆಟ್‌ ಉಪಯೋಗದ ಪ್ರಮಾಣ ಪುರುಷರಿಗಿಂತ ಅತ್ಯಂತ ಕಡಿಮೆ ಇದ್ದು ಗ್ರಾಮೀಣ ಭಾಗದ ಮಹಿಳೆಯರು ಇಂಟರ್‌ನೆಟ್‌ ಉಪಯೋಗ ಪಡೆಯಬೇಕಾಗಿರುವುದು ನಮ್ಮ ಆಶಯ ಹಾಗಾಗಿ, ನಾವು ಗ್ರಾಮೀಣ ಮಹಿಳೆಯರಿಗೆ ಇಂಟರ್‌ನೆಟ್‌ ಉಪಯೋಗದ ಬಗ್ಗೆ ತಿಳಿಸಿಕೊಡುತ್ತೇವೆ ಎಂದು ಹೇಳಿದ್ದಾರೆ.

English summary
interacting with the students of IIT Kharagpur, Sundar Pichai slip the fact that Google was working on a $30 or Rs 2000 Android smartphone for India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot