ಹಳೆಯ ವರ್ಷ ಸ್ಮರಿಸಿಕೊಂಡ ಗೂಗಲ್‌; ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಡೂಡಲ್‌ ಕ್ಲಿಕ್‌ ಮಾಡಿ!

|

ಕಳೆದ ಎರಡು ವರ್ಷದಿಂದ ಕೊರೊನಾದ ಆರ್ಭಟ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಅದಾಗ್ಯೂ ಗೂಗಲ್‌ ಪ್ರತಿವರ್ಷವೂ ತನ್ನದೇ ಆದ ರೀತಿಯಲ್ಲಿ ಈ ಹೊಸ ವರ್ಷದ ಸಂಭ್ರಮವನ್ನು ಮಾಡಿಕೊಂಡು ಬರುತ್ತಿದೆ. ಹಾಗೆಯೇ ಈ ವರ್ಷವೂ ಸಹ ಗೂಗಲ್‌ ತನ್ನ ಡೂಡಲ್‌ ಮೂಲಕ ಬಳಕೆದಾರರಿಗೆ ಮೈ ರೋಮಾಂಚನ ಆಗುವ ಹಾಗೆ ಮಾಡದೆ. ಜೊತೆಗೆ ಹೊಸ ವರ್ಷಕ್ಕೆ ಒಂದು ದಿನ ಬಾಕಿ ಇದ್ದು, ಹಳೆಯ ವರ್ಷವನ್ನು ನೆನಪಿಸಿಕೊಳ್ಳುವುದಕ್ಕೆ ಅವಕಾಶ ನೀಡಿದೆ.

ಜನ್ಮದಿನ

ಹೌದು, ಗೂಗಲ್‌ ಯಾವುದೇ ಪ್ರಮುಖ ಘಟನೆ ಅಥವಾ ಪ್ರಮುಖ ವ್ಯಕ್ತಿಗಳ ಜನ್ಮದಿನ ಸಂಬಂಧ ತನ್ನ ಡೂಡಲ್‌ ಮೂಲಕ ವಿಶೇಷ ಗೌರವ ಸಲ್ಲಿಸುವ ಪ್ರವೃತ್ತಿಯನ್ನು ಮುಂದುವರೆಸುಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಹೊಸ ವರ್ಷಕ್ಕೆ ಕಾಲಿಡುವ ಒಂದು ದಿನ ಮುಂಚೆ ಹಳೆಯ ವರ್ಷವನ್ನು ಸ್ಮರಿಸಿಕೊಳ್ಳುವಂತೆ ಮಾಡಿದೆ. ಅದರಂತೆ ಈ ಡೂಡಲ್‌ನಲ್ಲಿ ಕಂಡು ಬರುವ ಐಕಾನ್‌ ಕ್ಲಿಕ್‌ ಮಾಡಿದ ತಕ್ಷಣ ರೋಮಾಂಚನಕಾರಿ ಅನುಭವ ನಿಮ್ಮದಾಗುತ್ತದೆ.

ವರ್ಷ

ಕಳೆದುಹೋಗುವ ವರ್ಷವನ್ನು ನೆನಪಿಸುವ ಜೊತೆಗೆ 2023 ರ ಆಶಾದಾಯಕ ವರ್ಷವನ್ನು ಸ್ವಾಗತಿಸುವ ಕ್ರಮವಾಗಿ ಈ ಡೂಡಲ್‌ ರಚಿಸಲಾಗಿದೆ. ಅಂತೆಯೇ ಡಿಸೆಂಬರ್ 31, 2022 ರ ಅಂದರೆ ಇಂದಿನ ಡೂಡಲ್‌ ಈ ಹಿಂದೆ ಪಡೆದುಕೊಂಡಿದ್ದ ಡೂಡಲ್‌ಗಳಿಗಿಂತ ಬಹಳ ವಿಭಿನ್ನವಾಗಿದೆ. ಇದನ್ನು ಕ್ಲಿಕ್‌ ಮಾಡಿದ ತಕ್ಷಣ ಹೊಸ ಪುಟ ತೆರೆದುಕೊಳ್ಳಲಿದ್ದು, ಗೂಗಲ್‌ನಲ್ಲೇ ಹೊಸ ವರ್ಷದಲ್ಲಿ ಮಿಂದೇಳುವಂತೆ ಮಾಡುತ್ತದೆ.

ಸ್ವಾಗತ

ಹಲವಾರು ಕಡೆ ಹೊಸ ವರ್ಷವನ್ನು ಸ್ವಾಗತ ಮಾಡಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಇದರ ಭಾಗವಾಗಿಯೇ ಹೊಸ ವರ್ಷದ ಮುನ್ನಾದಿನ 2022 ಗೂಗಲ್‌ ಡೂಡಲ್ ಅನ್ನು ಕ್ಲಿಕ್‌ ಮಾಡಿದಾಗ ಸರ್ಚ್‌ ಎಂಜಿನ್‌ ನಿಮ್ಮ ಡಿಸ್‌ಪ್ಲೇಯಾದ್ಯಂತ ವರ್ಚುವಲ್ ಕಾನ್ಫೆಟ್ಟಿಯನ್ನು ಶೂಟ್ ಮಾಡುತ್ತದೆ. ಇದನ್ನು ವೀಕ್ಷಣೆ ಮಾಡುತ್ತಿದ್ದರೆ ನಿಜವಾಗಿಯೂ ಯಾರೋ ನಿಮ್ಮ ಮುಂದೆ ಕಾನ್ಫೆಟ್ಟಿಗಳನ್ನು ಸುರಿದಂತೆ ಭಾಸವಾಗುತ್ತದೆ.

ಡೂಡಲ್‌

ಒಮ್ಮೆ ಈ ಡೂಡಲ್‌ಮೇಲೆ ಕ್ಲಿಕ್ ಮಾಡಿದ ತಕ್ಷಣ ವರ್ಚುವಲ್ ಕಾನ್ಫೆಟ್ಟಿಯನ್ನು ಶೂಟ್ ಮಾಡುತ್ತದೆ. ಅದಾಗ್ಯೂ ಇನ್ನೂ ಹೆಚ್ಚಿನ ಅನಂದ ಪಡೆಯಬೇಕು ಎಂದಾದರೆ ಡಿಸ್‌ಪ್ಲೇನ ಎಡ ಭಾಗದಲ್ಲಿ ಹೊಸ ವರ್ಷದ ಸಂಜೆ ಎಂಬ ಆಯ್ಕೆಯ ಪಕ್ಕದಲ್ಲಿ ಕಾಣಿಸಿಕೊಳ್ಳುವ ಕಾನ್ಫೆಟ್ಟಿ ಕೋನ್ ಅನ್ನು ಕ್ಲಿಕ್ ಮಾಡಬಹುದು. ಇದರಿಂದ ನಿಮ್ಮ ಡಿಸ್‌ಪ್ಲೇ ತುಂಬೆಲ್ಲಾ ಕಾನ್ಫೆಟ್ಟಿ ಸ್ಫೋಟವಾಗುತ್ತದೆ.

ಕ್ಯಾಲೆಂಡರ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 31 ವರ್ಷದ ಕೊನೆಯ ದಿನವಾಗಿದ್ದು, ಪ್ರಪಂಚದಾದ್ಯಂತ ಶತಕೋಟಿ ಜನರು ಮಧ್ಯರಾತ್ರಿಯ ವೇಳೆ ಸಂಭ್ರಮಾಚರಣೆ ಮಾಡುತ್ತಾರೆ. ಇನ್ನು ಕೋವಿಡ್ ನಿರ್ಬಂಧಗಳಿಂದ ಸತತ ಎರಡು ಆಚರಣೆಗಳು ನಡೆದಿರಲಿಲ್ಲ. ಆದರೆ ಈಗ 2023 ದೊಡ್ಡ ರೀತಿಯ ಅಬ್ಬರದೊಂದಿಗೆ ಆರಂಭವಾಗಲಿದೆ. ಆದರೂ ಈಗಾಗಲೇ ಕೊರೊನಾದ ಮತ್ತೊಂದು ಅಲೆಯ ಸದ್ದು ಸುದ್ದಿಯಾಗುತ್ತಿದೆ. ಇದರ ಕಡೆ ಗಮನಹರಿಸಿಕೊಂಡು ಸಂಭ್ರಮಾಚರಣೆ ಮಾಡಿದರೆ ಒಳಿತು.

ಮುಂಜಾನೆ

ಪಂಚದಾದ್ಯಂತ 2023 ರ ಮುಂಜಾನೆಯು ಅದ್ಭುತವಾದ ಪಟಾಕಿಗಳು ಮತ್ತು ಲೈಟ್‌ಗಳು ಹಾಗೂ ದೊಡ್ಡ ಪಾರ್ಟಿಗಳಿಂದ ಆರಂಭವಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಸಾಂಪ್ರದಾಯಿಕವಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಿಶೇಷ ಆಚರಣೆಯೊಂದು ನಡೆಯುತ್ತದೆ. ಈ ಮೂಲಕ ಅಲ್ಲಿ 1,00,000 ಪೈರೋಟೆಕ್ನಿಕ್‌ಗಳು ಆಕಾಶವನ್ನು ಬೆಳಗಿಸುತ್ತವೆ. ಇದನ್ನು ವೀಕ್ಷಣೆ ಮಾಡಲು ಸಿಡ್ನಿ ಬಂದರಿನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ನ್ಯೂಯಾರ್ಕ್

ಹಾಗೆಯೇ ನ್ಯೂಯಾರ್ಕ್ ನಗರದಲ್ಲಿ ಇಂದು ಮಧ್ಯರಾತ್ರಿ 12 ಗಂಟೆ ವೇಳೆಗೆ ಹೊಳೆಯುವ ಚೆಂಡು ನೆಲಕ್ಕೆ ಬೀಳಲಿದೆ. ಇದನ್ನು ವೀಕ್ಷಣೆ ಮಾಡಲು ಲಕ್ಷಾಂತರ ಜನರು ಟೈಮ್ಸ್ ಸ್ಕ್ವೇರ್‌ ಬಳಿ ಆಗಮಿಸಲಿದ್ದಾರೆ. ಈ ವಿಶೇಷ ಸಂಭ್ರಮವನ್ನು ನೀವು ರಾಷ್ಟ್ರೀಯ ದೂರದರ್ಶನಗಳಲ್ಲಿ ವೀಕ್ಷಣೆ ಮಾಡಬಹುದು.

Best Mobiles in India

English summary
Google kicks in new year celebrations with a special doodle.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X