ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

|

ತಂತ್ರಜ್ಞಾನ ದೈತ್ಯ ಸಂಸ್ಥೆ ಗೂಗಲ್‌ ಇದೀಗ ತನ್ನ ಗೂಗಲ್‌ ಮ್ಯಾಪ್‌ನಲ್ಲಿ ಮತ್ತೆ ಹೊಸ ಫೀಚರ್ಸ್‌ಗಳನ್ನು ಅಳವಡಿಸಲು ಮುಂದಾಗಿದ್ದು, ಆ ಫೀಚರ್ಸ್‌ಗಳಿಗ ಪ್ರಾಯೋಗಿಕ ಹಂತದಲ್ಲಿವೆ. ಗೂಗಲ್ ಮ್ಯಾಪ್‌ ಈಗಾಗಲೇ ಭಾರತೀಯ ಬಳಕೆದಾರರಿಗೆ ಅನುಕೂಲಕರ ಸೇವೆಗಳನ್ನು ಪರಿಚಯಿಸಿದ್ದು, ಆದ್ರೆ ಇದೀಗ ಬಳಕೆದಾರರಿಗೆ ಮತ್ತಷ್ಟು ಉಪಯುಕ್ತವಾಗುವಂತಹ ಮೂರು ಫೀಚರ್ಸ್‌ಗಳನ್ನು ಸೇರಿಸಲು ಸಕಲ ರೀತಿ ಸಜ್ಜಾಗಿದೆ.

ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

ಹೌದು, ಗೂಗಲ್ ಸಂಸ್ಥೆಯು ಭಾರತೀಯ ಬಳಕೆದಾರರಿಗೆ ಈಗಾಗಲೇ ಚಾಲ್ತಿ ಇದ್ದ 'ಎಕ್ಸ್‌ಪ್ಲೋರರ್' ಆಯ್ಕೆಯಲ್ಲಿ ಬದಲಾವಣೆ ಮಾಡಿದ್ದು, ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಸೇರಿಸಲಿದೆ. ಹೊಸ ಆಯ್ಕೆಯನ್ನು 'ಇಂಡಿಯಾ ಇನ್‌ಸ್ಪೈಯರ್ಡ್‌ ಟ್ಯಾಬ್‌ ಹೆಸರಿನಲ್ಲಿ ಕರೆಯಲಾಗಿದ್ದು, ಮೂರು ಪ್ರಮುಖ ಫೀಚರ್ಸ್‌ ಸೇರಿಕೊಳ್ಳಲಿವೆ. ಹಾಗೆಯೇ ಈ ಆಯ್ಕೆಯಲ್ಲಿ ಬಳಕೆದಾರರಿಗೆ ಏಳು ಅಗತ್ಯ ಮಾಹಿತಿಗಳ ಶಾರ್ಟ್‌ಕಟ್‌ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿವೆ.

ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

ಬಳಕೆದಾರರಿಗೆ ಅಗತ್ಯವಾದ ಹೋಟೆಲ್‌ಗಳು, ಪೆಟ್ರೋಲ್‌ ಬಂಕ್‌ಗಳು, ಎಟಿಎಮ್‌ಗಳು, ರೆಸ್ಟೋರಂಟ್ಸ್‌ಗಳು, ಔಷಧ ಅಂಗಡಿಗಳು, ಶಾಪಿಂಗ್ ಮತ್ತು ಆಫರ್‌ ಸೇರಿದಂತೆ ಹಲವು ಮಾಹಿತಿಗಳು ಗೂಗಲ್‌ ಮ್ಯಾಪ್‌ನ ಇಂಡಿಯಾ ಇನ್‌ಸ್ಪೈಯರ್ಡ್‌ ಟ್ಯಾಬ್‌ನಲ್ಲಿ ಸೇರಿಕೊಳ್ಳಲಿವೆ. ಹಾಗಾದರೇ ಇವುಗಳೊಂದಿಗೆ ಗೂಗಲ್‌ ಮ್ಯಾಪ್‌ನಲ್ಲಿ ಸೇರಲಿರುವ ಮೂರು ಹೊಸ ಫೀಚರ್ಸ್‌ಗಳಾವವು ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್ ಈಗ ಮತ್ತಷ್ಟು ಸುಲಭ!..ಸೇರಲಿದೆ ಮತ್ತೆ ಹೊಸ ಫೀಚರ್! ಓದಿರಿ : ವಾಟ್ಸಪ್ ಈಗ ಮತ್ತಷ್ಟು ಸುಲಭ!..ಸೇರಲಿದೆ ಮತ್ತೆ ಹೊಸ ಫೀಚರ್!

ಫಾರ್‌ ಯು ಟ್ಯಾಬ್‌

ಫಾರ್‌ ಯು ಟ್ಯಾಬ್‌

ಗೂಗಲ್‌ ಮ್ಯಾಪ್‌ನಲ್ಲಿ ಹೊಸದಾಗಿ ಸೇರಲಿರುವ 'ಫಾರ್‌ ಯು ಟ್ಯಾಬ್‌' ಆಯ್ಕೆಯು ಹೊಸ ಹೋಟೆಲ್, ರೆಸ್ಟೋರೆಂಟ್ಸ್‌ ಮತ್ತು ಟ್ರೆಂಡಿಂಗ್‌ನಲ್ಲಿರುವ ಸ್ಥಳಗಳು ಸೇರಿದಂತೆ ವೈಯಕ್ತಿ ಆಸಕ್ತಿ ಆಧಾರಿತ ಮಾಹಿತಿಗಳನ್ನು ಸಹ ಸೂಚಿಸಲಿದೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಚೆನ್ನೈ, ಕೋಲ್ಕತಾ, ಗೋವಾ, ಅಹಮದಾಬಾದ್, ಜೈಪುರ, ಚಂಡೀಗಡ್ ಮತ್ತು ಹೈದರಾಬಾದ್ ನಗರಗಳಲ್ಲಿ ಈ ಆಯ್ಕೆ ಕಾಣಿಸಿಕೊಳ್ಳಲಿದೆ.

ಆಫರ್‌ ಟ್ಯಾಬ್

ಆಫರ್‌ ಟ್ಯಾಬ್

ಗೂಗಲ್‌ ಮ್ಯಾಪ್‌ನಲ್ಲಿ ಹೊಸದಾಗಿ ಆಫರ್‌ ಟ್ಯಾಬ್‌ ಶಾರ್ಟ್‌ಕಟ್‌ ಆಯ್ಕೆಯು ಸೇರಿಕೊಳ್ಳಲಿದ್ದು, ಯಾವೆಲ್ಲಾ ರೆಸ್ಟೋರಂಟ್‌ಗಳಲ್ಲಿ ಆಫರ್‌ ಲಭ್ಯವಿದೆ ಎನ್ನುವುದನ್ನು ಈ ಆಯ್ಕೆಯು ತಿಳಿಸಲಿದೆ. ಈಜಿ ಡಿನ್ನರ್‌ ಫಾರ್‌ ಆಫರ್ ಸೇವೆಯು ಕಾಣಿಸಿಕೊಳ್ಳಲಿದ್ದು, ವಿವಿಧ ಫುಡ್‌ ಕ್ಯಾಟಗರಿಯಲ್ಲಿ ಸುಮಾರು 4000 ರೆಸ್ಟೋರೆಂಟ್ಸ್‌ಗಳನ್ನು ಲಿಸ್ಟ್‌ಗೆ ಸೇರಿಸಲಿದೆ.

ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ! ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

ಈಜಿ ಡಿನ್ನರ್‌ ಫಾರ್‌ ಆಫರ್

ಈಜಿ ಡಿನ್ನರ್‌ ಫಾರ್‌ ಆಫರ್

ಗೂಗಲ್‌ ಮ್ಯಾಪ್‌ನಲ್ಲಿ ಈಜಿ ಡಿನ್ನರ್‌ ಫಾರ್‌ ಆಫರ್ ಆಯ್ಕೆಯು ಸೇರಿಕೊಂಡಿದ್ದು, ಸದ್ಯ 15 ದಿನಗಳಿಗೆ 'ಈಜಿ ಡಿನ್ನರ್‌ ಪ್ರೈಮ್‌ ಆಫರ್'‌ ಲಭ್ಯವಿದೆ. ಸುಮಾರು 1500ಕ್ಕೂ ಅಧಿಕ ರೆಸ್ಟೋರೆಂಟ್ಸ್‌ಗಳು ಈ ವ್ಯಾಪ್ತಿಗೆ ಒಳಪಟ್ಟಿದ್ದು, ಬಳಕೆದಾರರಿಗೆ ಸುಮಾರು ಶೇ.25% ರಷ್ಟು ಡಿಸ್ಕೌಂಟ್‌ ದೊರೆಯುವ ಸಾಧ್ಯತೆಗಳಿವೆ.

ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?ಓದಿರಿ : ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ಗೂಗಲ್‌ನ ಹೊಸ ಇಂಡಿಯಾ ಇನ್‌ಸ್ಪೈಯರ್ಡ್‌ ಟ್ಯಾಬ್‌ನಲ್ಲಿ ಬಳಕೆದಾರರಿಗೆ ಅವರ ಲೊಕೇಶನ್ ವ್ಯಾಪ್ತಿಯಲ್ಲಿ ಅಗತ್ಯ ಸೌಕರ್ಯಗಳ ಕುರಿತು ಮಾಹಿತಿಗಳು ಮತ್ತು ಆಯ್ದ ನಗರ ಪ್ರದೇಶಗಳಲ್ಲಿ ಲಭ್ಯವಿರುವ ಆಫರ್‌ಗಳ ಮಾಹಿತಿಗಳು ಲಭ್ಯವಾಗಲಿವೆ. ಒಟ್ಟಾರೇ ನೂತನ ಫೀಚರ್ಸ್‌ಗಳು ಬಳಕೆದಾರರ ಆಸಕ್ತಿಯ ಆಧಾರದಲ್ಲಿ ಕೆಲಸಮಾಡಲಿವೆ.

ಓದಿರಿ : 'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!ಓದಿರಿ : 'ಒನ್‌ಮೋರ್‌' ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಲಾಂಚ್!.ಆಫರ್ ಇದೆ!

Best Mobiles in India

English summary
The Explore tab in Google Maps is an aggregator point where you see dining suggestions, events, offers and other things to do in the area around you. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X