Subscribe to Gizbot

ಹೊಸ ನವೀಕರಣಗಳ ಮೂಲಕ ಗೂಗಲ್ ಮ್ಯಾಪ್ಸ್ ನಿಮ್ಮ ಮುಂದೆ

Written By:

ಇತ್ತೀಚೆಗೆ ತಾನೇ ಗೂಗಲ್ ತನ್ನ ಮ್ಯಾಪ್‌ಗಳಲ್ಲಿ ಹೆಚ್ಚು ಮುಖ್ಯವಾದ ನವೀಕರಣಗಳನ್ನು ಹೊರಬಿಟ್ಟಿದೆ. ಯುಐ ಸುಧಾರಣೆಗಳು, ಮ್ಯಾಪ್ ಶೇರಿಂಗ್ ಆಯ್ಕೆ ಮತ್ತು ಇನ್ನಷ್ಟು ಸೌಲಭ್ಯಗಳು ಒಳಗೊಂಡಂತೆ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಹೊಸ ನವೀಕರಣ ಹೊತ್ತು ತಂದಿದೆ. ಮ್ಯಾಪ್ಸ್ 9.1 ನವೀಕರಣದೊಂದಿಗೆ, ಕೆಲವೊಂದು ಅನಗತ್ಯ ಇಂಟರ್ಫೇಸ್ ನಿವಾರಣೆ ಅಂದರೆ ಸರ್ಚ್ ಬಾರ್ ಅಥವಾ ಕ್ವಿಕ್ ಲಾಂಚ್‌ನೊಂದಿಗೆ ಯುಐಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ಓದಿರಿ: ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

ಇಂದಿನ ಲೇಖನದಲ್ಲಿ ಗೂಗಲ್ ಮ್ಯಾಪ್ಸ್‌ನಲ್ಲಿ ನವೀಕರಣವಾಗಿರುವ ಕೆಲವೊಂದು ಅಪ್‌ಡೇಟ್‌ಗಳತ್ತ ಗಮನಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮುಖ ನವೀಕರಣ

ಸರಳ ಯುಐ

ಸರಳ ಯುಐನೊಂದಿಗೆ ಇದು ಬಂದಿರುವುದು ಹೆಚ್ಚು ಪ್ರಮುಖ ನವೀಕರಣವಾಗಿದ್ದು ಮ್ಯಾಪ್ ವ್ಯೂ ಬಳಸಿ ಕೆಲವೊಂದು ಅನಗತ್ಯ ಅಂಶಗಳನ್ನು ನಿವಾರಿಸಿದೆ.

ಇಂಟರ್ಫೇಸ್‌ ಅಂಶ

ಸರಳ ಟ್ಯಾಪ್‌

ಸರಳ ಟ್ಯಾಪ್‌ನೊಂದಿಗೆ ಹುಡುಕಾಟ ಪಟ್ಟಿ, ಕ್ವಿಕ್ ಲಾಂಚ್ ಫಾರ್ ಡೈರೆಕ್ಶನ್, ಮತ್ತು ಮರೆಮಾಡಿದ ಎಲ್ಲಾ ಅಂಶಗಳನ್ನು ಪುನಃ ತರುವ ಪರದೆ ಸ್ಪರ್ಶ ಮೊದಲಾದ ಇಂಟರ್ಫೇಸ್‌ ಅಂಶಗಳನ್ನು ತೆಗೆದುಹಾಕಬಹುದಾಗಿದೆ.

ಹೆಚ್ಚು ಸಂಘಟಿತ

ಟ್ರಾನ್ಸಿಟ್ ಡೈರೆಕ್ಶನ್ಸ್

ಹೆಚ್ಚು ಸಂಘಟಿತ ಮತ್ತು ಮರುವಿನ್ಯಾಸಗೊಳಿಸಿದ ಟ್ರಾನ್ಸಿಟ್ ಡೈರೆಕ್ಶನ್ಸ್ ಅನ್ನು ತಂದಿದೆ. ರಿಯಲ್ ಟೈಮ್, ಆಗಮನ ಮಾಹಿತಿ ಒಳಗೊಂಡಂತೆ ಹೆಚ್ಚು ರೂಟ್ ಆಯ್ಕೆಗಳನ್ನು ಮ್ಯಾಪ್ ನಿಮಗೆ ತೋರಿಸಬಹುದು.

ಇತ್ತೀಚಿನ ನವೀಕರಣ

ಸ್ಥಾನ ಹಂಚಿಕೆ

ಮ್ಯಾಪ್‌ನ ಇತ್ತೀಚಿನ ನವೀಕರಣವನ್ನು ಬಳಸಿಕೊಂಡು ಇತರ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಸ್ಥಾನವನ್ನು ಹಂಚಿಕೊಳ್ಳಬಹುದಾಗಿದೆ.

ಫೇಸ್‌ಬುಕ್ ಮತ್ತು ಮೆಸೆಂಜರ್‌

ಹಂಚಿಕೆ ಆಯ್ಕೆ

ಗೂಗಲ್ ಅಧಿಕೃತವಾಗಿ ಈ ಬಗ್ಗೆ ಘೋಷಿಸಿದ್ದು ಮ್ಯಾಪ್‌ಗಳಲ್ಲಿ ಹಂಚಿಕೆ ಆಯ್ಕೆಯ ಬಗ್ಗೆ ಕಾರ್ಯನಿರ್ವಹಿಸುತ್ತಿದ್ದು ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿ ಸ್ಥಾನವನ್ನು ಹಂಚಲು ಬಳಕೆದಾರರಿಗೆ ಅನುಮತಿಸುತ್ತದೆ.

ಫೋಟೋಸ್ ಇಂಟಿಗ್ರೇಶನ್

ಗೂಗಲ್ ಫೋಟೋಸ್ ಇಂಟಿಗ್ರೇಶನ್

ಮ್ಯಾಪ್ಸ್ ಅಪ್ಲಿಕೇಶನ್‌ನಲ್ಲಿ ನೇರವಾಗಿ ಜಿಯೊ ಟ್ಯಾಗ್ ಆಗಿರುವ ಕ್ಯಾಪ್ಶನ್‌ಗಳನ್ನು ಸಂಪಾದಿಸಲು ಬಳಕೆದಾರರಿಗೆ ಗೂಗಲ್ ಫೋಟೋಸ್ ಇಂಟಿಗ್ರೇಶನ್ ಅನುಮತಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Google recently rolled out some important updates to the Maps app. The new update brings some significant changes including UI improvements, map sharing option and much more.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot