ಭಾರತಕ್ಕಾಗಿ ಮತ್ತೊಂದು ಹೊಚ್ಚ ಹೊಸ ವೈಶಿಷ್ಟ್ಯ ತಂದಿತು 'ಗೂಗಲ್ ಮ್ಯಾಪ್‌'!

|

ಭಾರತೀಯರ ಅಚ್ಚುಮೆಚ್ಚಿನ ಗೂಗಲ್ ಮ್ಯಾಪ್ ದೇಶದಲ್ಲಿ ಮತ್ತೊಂದು ಹೊಚ್ಚ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೇ ಬುಧವಾರದಿಂದ ಗೂಗಲ್ ಮ್ಯಾಪ್‌ನಲ್ಲಿ 'ಸ್ಟೇ ಸೇಫ್' ಎಂಬ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಲಭ್ಯವಾಗಿದ್ದು, ಚಾಲನೆ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ಆಫ್-ರೂಟ್‌ನಲ್ಲಿ ಹೋಗುತ್ತಿದ್ದರೆ ಎಚ್ಚರಿಸಲು ಕೆಲಸ ಮಾಡಲಿದೆ.

ಭಾರತಕ್ಕಾಗಿ ಮತ್ತೊಂದು ಹೊಚ್ಚ ಹೊಸ ವೈಶಿಷ್ಟ್ಯ ತಂದಿತು 'ಗೂಗಲ್ ಮ್ಯಾಪ್‌'!

ಹೌದು, ಗೂಗಲ್ ಮ್ಯಾಪ್ ಬಳಕೆದಾರರು ಸ್ವಯಂ ಚಾಲನೆ ಮಾಡುವಾಗ ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ತಮ್ಮ ಲೈವ್ ಸ್ಥಳವನ್ನು ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಫೀಚರ್ ಅನುಮತಿಸುತ್ತದೆ. ಇದರಿಂದ ಸುರಕ್ಷಿತವಾಗಿರುವುದು ಸೇರಿದಂತೆ ಆಫ್ ರೂಟ್ ಅಲರ್ಟ್ ಪಡೆಯಲು ಸಾಧ್ಯವಾಗುತ್ತದೆ ಎಂದು ಗೂಗಲ್ ಮ್ಯಾಪ್ಸ್ ತಿಳಿಸಿದೆ.

ಗೂಗಲ್ ಮ್ಯಾಪ್‌ನಲ್ಲಿ ಬಳಕೆದಾರರು ತಾವು ಹೋಗಬೇಕಿರುವ ಸ್ಥಳವನ್ನು ಆಯ್ಕೆ ಮಾಡಿ ಮಾರ್ಗವನ್ನು ಆರಿಸಿದ ನಂತರ, ಗೂಗಲ್ ಮ್ಯಾಪ್‌ನ ಮೆನು ಕ್ಲಿಕ್ ಮಾಡಿ 'ಸುರಕ್ಷಿತವಾಗಿರಿ' ಮತ್ತು 'ಆಫ್-ರೂಟ್ ಅಲರ್ಟ್ " ಆಯ್ಕೆಗಳನ್ನು ಕ್ಲಿಕ್ ಮಾಡಿ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಹೀಗೆ ಮಾಡಿದ ನಂತರ ಈ ಕೆಳಗೆ ತಿಳಿಸಿದಂತೆ ಗೂಗಲ್ ಮ್ಯಾಪ್ ಕೆಲಸ ಮಾಡಲಿದೆ.

ಭಾರತಕ್ಕಾಗಿ ಮತ್ತೊಂದು ಹೊಚ್ಚ ಹೊಸ ವೈಶಿಷ್ಟ್ಯ ತಂದಿತು 'ಗೂಗಲ್ ಮ್ಯಾಪ್‌'!

ಬಳಕೆದಾರರು ಸೂಚಿಸಿದ ಮಾರ್ಗದಿಂದ ವಾಹನವು 0.5 ಕಿ.ಮೀ ಗಿಂತ ಹೆಚ್ಚು ದೂರ ಹೋದರೆ ಫೋನ್ ಸ್ವಯಂಚಾಲಿತವಾಗಿ ರಿಂಗಣಿಸಲಿದೆ ಮತ್ತು ಸೂಚಿಸಿದ ಮಾರ್ಗಕ್ಕೆ ಹೋಲಿಸಿದರೆ ವಾಹನ ಎಲ್ಲಿದೆ ಎಂದು ನೋಡಹುದಾಗಿದೆ. ಟ್ಯಾಕ್ಸಿಗಳಲ್ಲಿ ವಂಚನೆ ಕಂಡುಬಂದರೆ ಸಹಾಯ ಮಾಡಲು ಫೋನ್ ಪರದೆಯನ್ನು ಇತರರೊಂದಿಗೆ ನೇರವಾಗಿ ಹಂಚಿಕೊಳ್ಳಬಹುದಾಗಿದೆ.

ಓದಿರಿ: ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳು!

ಮ್ಯಾಪ್‌ನಲ್ಲಿನ ಹೊಸ 'ಸುರಕ್ಷಿತವಾಗಿರಿ' ವೈಶಿಷ್ಟ್ಯವು ಟ್ಯಾಕ್ಸಿಗಳು, ಆಟೋರಿಕ್ಷಾ ಇತ್ಯಾದಿಗಳಲ್ಲಿ ಪ್ರಯಾಣಿಸುವ ಬಳಕೆದಾರರಿಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ನಾವು ನಮ್ಮ ಬಳಕೆದಾರರಿಗೆ ಹೆಚ್ಚು ಪ್ರಸ್ತುತ ಮತ್ತು ವಿಶ್ವಾಸಾರ್ಹ ಅನುಭವವನ್ನು ನೀಡುವ ವೈಶಿಷ್ಟ್ಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಗೂಗಲ್ ಮ್ಯಾಪ್ಸ್ ಉತ್ಪನ್ನ ವ್ಯವಸ್ಥಾಪಕ ಅಮಂಡಾ ಬಿಷಪ್ ಅವರು ತಿಳಿಸಿದ್ದಾರೆ.

Best Mobiles in India

English summary
The feature alerts users travelling in autos or taxis if their vehicle is moving off-route. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X