Subscribe to Gizbot

'ಗೂಗಲ್‌ ಮ್ಯಾಪ್‌' ಮಲ್ಟಿಪಲ್‌ ಡೆಸ್ಟಿನೇಷನ್‌ ಫೀಚರ್ ಐಓಎಸ್‌'ಗೆ

Written By:

ಗೂಗಲ್‌ ಇತ್ತೀಚೆಗೆ ತಾನೆ ಮಲ್ಟಿಪಲ್ ಸ್ಥಳಗಳ ನಾವಿಗೇಟ್ ವೈಶಿಷ್ಟವನ್ನು ಗೂಗಲ್‌ ಮ್ಯಾಪ್‌ನಲ್ಲಿ ಬಿಡುಗಡೆ ಮಾಡಿತ್ತು. ಆದರೆ ಈ ಫೀಚರ್‌ ಇದುವರೆಗೆ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಇದೀಗ ಗೂಗಲ್, 'ಐಫೋನ್'‌ ಬಳಕೆದಾರರಿಗೂ ಸಹ ಹಲವು ಸ್ಥಳಗಳನ್ನು ನಾವಿಗೇಟ್ ಮಾಡುವ ಫೀಚರ್‌ ಅನ್ನು ಅಭಿವೃದ್ದಿಗೊಳಿಸಿದೆ. ಮಲ್ಟಿಪಲ್‌ ಸ್ಥಳಗಳ ನಾವಿಗೇಟ್‌ ಫೀಚರ್ ಮುಖಾಂತರ ಬಳಕೆದಾರರು ಒಂದೇ ಟ್ರಿಪ್‌ನಲ್ಲಿ ಹಲವು ಸ್ಥಳಗಳನ್ನು ಸೇರಿಸಬಹುದಾಗಿದೆ.

'ಗೂಗಲ್‌ ಮ್ಯಾಪ್‌' ಮಲ್ಟಿಪಲ್‌ ಡೆಸ್ಟಿನೇಷನ್‌ ಫೀಚರ್ ಐಓಎಸ್‌'ಗೆ

ಐಫೋನ್‌ ಬಳಕೆದಾರರು ಗೂಗಲ್‌ ಮ್ಯಾಪ್‌ನಲ್ಲಿ 'ಎ' ಇಂದ 'ಬಿ' ಗೆ ನಾವಿಗೇಟ್‌ ಮಾಡುವ ಆಯ್ಕೆ ಜೊತೆಗೆ ಇನ್ನುಮುಂದೆ 'ಬಿ' ಪಾಯಿಂಟ್‌ನಿಂದ ಸಿ,ಡಿ,ಇ ಮತ್ತು ಇನ್ನು ಹೆಚ್ಚಿನ ಪಾಯಿಂಟ್‌ಗಳನ್ನು ಒಂದೇ ಟ್ರಿಪ್‌ನಲ್ಲಿ ಭೇಟಿ ನೀಡಲು ನಾವಿಗೇಟ್‌ ಮಾಡಬಹುದಾಗಿದೆ. ಹಲವು ಸ್ಥಳಗಳನ್ನು ನಾವಿಗೇಟ್‌ ಮಾಡುವ ಫೀಚರ್‌ ಈ ಹಿಂದೆ ಕೇವಲ ಡೆಸ್ಕ್‌ಟಾಪ್‌ ಸೈಟ್‌ಗಳಲ್ಲಿ ಮಾತ್ರ ಲಭ್ಯವಿತ್ತು.

18ನೇ ಶತಮಾನದ ನ್ಯೂಯಾರ್ಕ್‌ನ ಗೂಗಲ್‌ ಸ್ಟ್ರೀಟ್ ವ್ಯೂ ಅದ್ಭುತ ಫೋಟೋಗಳು

'ಗೂಗಲ್‌ ಮ್ಯಾಪ್‌' ಮಲ್ಟಿಪಲ್‌ ಡೆಸ್ಟಿನೇಷನ್‌ ಫೀಚರ್ ಐಓಎಸ್‌'ಗೆ

ಐಫೋನ್'ಗೆ, ಗೂಗಲ್‌ ತನ್ನ 'ಗೂಗಲ್‌ ಮ್ಯಾಪ್‌'ನಲ್ಲಿ ಹಲವು ಬದಲಾವಣೆಗಳನ್ನು ಸಹ ನೀಡುತ್ತಿದೆ. ಹೊಸ ವೈಶಿಷ್ಟದಿಂದ ಬಳಕೆದಾರ ತನ್ನ ಪ್ರವಾಸದ ಹೆಸರು ಮತ್ತು ಸೈಡ್‌ ನೋಟ್‌ ಅನ್ನು ಸಹ ಸೇರಿಸಬಹುದಾಗಿದೆ. ಅಪ್‌ಡೇಟ್‌ನಲ್ಲಿ ಟೈಮ್‌ಲೈನ್‌ ಮರುವಿನ್ಯಾಸ ನೀಡಲಾದ ಫೀಚರ್‌ ಸಹ ಇದ್ದು, ಹಿಂದೆ ಭೇಟಿ ನೀಡಿದ ಸ್ಥಳಗಳ ವಿವರವು ಸಹ ಇರಲಿದೆ. ಜೊತೆಗೆ ಇತರೆ ಪ್ರಯಾಣದ ಅಂಕಿಅಂಶಗಳು ಸಹ ಇರಲಿವೆ. ಈ ಫೀಚರ್‌ ತಿಂಗಳ ಹಿಂದೆಯಷ್ಟೇ ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಬಿಡುಗಡೆಯಾಗಿತ್ತು.

ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

 

English summary
Rather than giving an option to navigate just from point A to point B, as it did till recently, the Maps now bring a user from point B to points C, D, E, and so on, making it much easier to navigate more than one stops at once.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot