ಜಾಹಿರಾತುಗಳನ್ನು ಬ್ಲಾಕ್ ಮಾಡಲು ಆಯ್ಕೆ ನೀಡುತ್ತಿದೆ 'ಗೂಗಲ್' !!

|

ಗೂಗಲ್ ಬಳಕೆದಾರರಿಗೆ ಜಾಹಿರಾತುಗಳಿಂದ ತಾಪತ್ರಯ ತಪ್ಪಿದ್ದಲ್ಲ, ಹಾಗೆಯೇ, ಜಾಹಿರಾತುಗಳನ್ನು ನೀಡದೇ ಗೂಗಲ್ ಬದುಕಲು ಸಾಧ್ಯವಿಲ್ಲ ಎಂಬ ಮಾತು ಸತ್ಯಕ್ಕೆ ಹತ್ತಿರವಾದದ್ದು. ಹಾಗಾಗಿಯೇ, ಗೂಗಲ್‌ ಕಂಪೆನಿ ಯಾವುದೇ ಸೇವೆಗಳನ್ನು ನೀಡುವಾಗಲೂ ಅದರ ಜೊತೆ ತನ್ನ ಬಹುತೇಕ ಆದಾಯದ ಮೂಲವಾದ ಜಾಹಿರಾತುಗಳನ್ನು ಪ್ರಕಟಿಸುತ್ತದೆ.

ಹಾಗಾಗಿ, ನಾವು ಗೂಗಲ್ ಸೇವೆಗಳನ್ನು ಬಳಸುವಾಗ ಗೂಗಲ್ ಜಾಹಿರಾತುಗಳನ್ನು ಪಡೆಯದಂತೆ ಇರಲು ಸಾಧ್ಯವಿಲ್ಲ. ಆದರೆ, ಇನ್ಮುಂದೆ ಕೆಲವು ಜಾಹಿರಾತುಗಳನ್ನು ಬ್ಲಾಕ್ ಮಾಡಬಹುದು. ಹೌದು, ಗೂಗಲ್ ಸೇವೆಗಳಲ್ಲಿ ಕಾಣಿಸುವ ಬೇಡ ಎನಿಸಿದ ಕಂಪೆನಿಗಳ ಜಾಹೀರಾತುಗಳು ನಿಮಗೆ ಇಷ್ಟವಾಗದಿದ್ದರೆ ನೀವು ಅವುಗಳನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಗೂಗಲ್ ನೀಡಿದೆ.

ಜಾಹಿರಾತುಗಳನ್ನು ಬ್ಲಾಕ್ ಮಾಡಲು ಆಯ್ಕೆ ನೀಡುತ್ತಿದೆ 'ಗೂಗಲ್' !!

2012ರಿಂದಲೂ ಜಾಹೀರಾತು ಬ್ಯಾನರ್‌ಗಳನ್ನು ಮ್ಯೂಟ್ ಮಾಡುವ ಆಯ್ಕೆ ನೀಡಿರುವ ಗೂಗಲ್ ಕಂಪೆನಿ, ಈಗ ಜಾಹೀರಾತನ್ನು ಸ್ಥಗಿತ ಮಾಡುವ ಫೀಚರ್ಸ್ ಅನ್ನು ಅಳವಡಿಸಿಕೊಳ್ಳುತ್ತಿದೆ. ಹಾಗಾಗಿ, ಬಳಕೆದಾರರಿನ್ನು ನೇರವಾಗಿ ನಿರ್ದಿಷ್ಟ ಕಂಪನಿಗಳ, ಬ್ರಾಂಡ್‌ಗಳ ಜಾಹೀರಾತುಗಳನ್ನು ಶಾಶ್ವತವಾಗಿ ಬರದ ಹಾಗೆ ಮಾಡಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರತಿದಿನ ಶತಕೋಟಿ ಜನರು ಡೇಟಾದೊಂದಿಗೆ ನಮ್ಮ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಅಂತರ್ಜಾಲ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹೇಗೆ ಬಳಸುತ್ತಾರೆ ಎಂಬ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಉನ್ನತ ಮಟ್ಟದ ಪರಿಶೀಲನೆ ನಡೆಸುತ್ತಿದೆ ಎಂದು ಗೂಗಲ್‌ನ ಪ್ರದರ್ಶನ ಜಾಹೀರಾತು ವ್ಯವಹಾರ ನಡೆಸುತ್ತಿರುವ ಉಪಾಧ್ಯಕ್ಷ ಬ್ರಾಡ್ ಬೆಂಡರ್ ಹೇಳಿದ್ದಾರೆ.

ಜಾಹಿರಾತುಗಳನ್ನು ಬ್ಲಾಕ್ ಮಾಡಲು ಆಯ್ಕೆ ನೀಡುತ್ತಿದೆ 'ಗೂಗಲ್' !!

ಕಳೆದ ವರ್ಷ ಜಾಹೀರಾತು ಮಾರಾಟದಲ್ಲಿ $ 95.4 ಬಿಲಿಯನ್ ಗಳಿಸಿದ ಗೂಗಲ್, ಆನ್‌ಲೈನ್‌ ಮಾರ್ಕೆಟಿಂಗ್ ಮೂಲಕ ಬಳಕೆದಾರರಿಂದ ಹಣ ಗಳಿಸುವ ವಿಷಯದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು ಎಂದು ಹೇಳಲಾಗಿತ್ತು. ಹಾಗಾಗಿಯೇ, ಈ ಹೊಸ ವಿಶೇಷತೆಗಳನ್ನೊಳಗೊಂಡ ವಿಶೇಷ ಸಾಪ್ಟವೇರ್ ಅನ್ನು ಗೂಗಲ್ ಪರಿಚಯಿಸುತ್ತದೆ ಎನ್ನಲಾಗಿದೆ.

ಓದಿರಿ: ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಭರ್ಜರಿ ಡಿಸ್ಕೌಂಟ್ ಪ್ರಕಟಣೆ!!

Best Mobiles in India

Read more about:
English summary
It happens all the time: search for some product online, and suddenly advertisements for that item follow you everywhere around the web.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X