ಗೂಗಲ್ ಪೇ ಬಳಕೆದಾರನಿಗೆ 2.7 ಲಕ್ಷ ರೂ.ವಂಚಿಸಿದ ಒಂದು ತಪ್ಪು ಕರೆ!!

|

ಜನಪ್ರಿಯ ಗೂಗಲ್ ಪೇ ಆಪ್ ಮೂಲಕ ಹಣ ವ್ಯವಹಾರ ನಡೆಸಿದ ಬೆಂಗಳೂರಿನ ವ್ಯಾಪಾರಿಯೊರ್ವರಿಗೆ ಗೂಗಲ್ ಕಂಪೆನಿಯ ಗ್ರಾಹಕ ಪ್ರತಿನಿಧಿ ಎಂದು ಹೇಳಿಕೊಂಡು ವಂಚಿಸಿರುವ ಪ್ರಕರಣ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕುಂದನ್ ಕುಮಾರ್ ಎಂಬ ವ್ಯಾಪಾರಿಯೋರ್ವರು ಸೈಬರ್ ವಂಚಕರನ್ನು ನಂಬಿ 2.7 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ ಎಂದು ಸೈಬರ್ ಠಾಣೆಯ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗೂಗಲ್ ಪೇ ಮೂಲಕ ಮಾಡಲಾದ ಹಣ ವ್ಯವಾರವೂ ಸರಿಯಾಗಿ ಪೂರ್ಣಗೊಂಡಿಲ್ಲ ಎಂದು ಕುಂದನ್ ಕುಮಾರ್ ಅವರು ಗೂಗಲ್ ಗ್ರಾಹಕ ಪ್ರತಿನಿಧಿಯ ಸಂಪರ್ಕಕ್ಕೆ ಯತ್ನಿಸಿದ್ದಾರೆ. ಈ ವೇಳೆ ಗೂಗಲ್‌ನಲ್ಲಿ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಲು ಯತ್ನಿಸಿದ ಅವರಿಗೆ ಮೊಬೈಲ್ ನಂಬರ್ ಒಂದು ಸಿಕ್ಕಿದೆ. ಆ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಅವರು ಬರೋಬ್ಬರಿ 2.7 ಲಕ್ಷ ರೂ. ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಗೂಗಲ್ ಪೇ ಬಳಕೆದಾರನಿಗೆ 2.7 ಲಕ್ಷ ರೂ.ವಂಚಿಸಿದ ಒಂದು ತಪ್ಪು ಕರೆ!!

ಕುಂದನ್ ಕುಮಾರ್ ಅವರು ನೀಡಿರುವ ದೂರಿನಲ್ಲಿ ಇರುವಂತೆಯೇ, ಗೂಗಲ್ ಪೇ ಮೂಲಕ ಹಣವನ್ನು ಕಳುಹಿಸುವ ಯತ್ನ ವಿಫಲಾವಾಗಿತ್ತು. ಆದರೆ, ಹಣ ಮಾತ್ರ ಕಡಿತವಾಗಿತ್ತು. ಹಾಗಾಗಿ, ಈ ಬಗ್ಗೆ ದೂರು ಸಲ್ಲಿಸಲು ಗೂಗಲ್ ಪೇ ಗ್ರಾಹಕ ಕೇಂದ್ರವನ್ನು ಸಂಪರ್ಕಿಸಲು ಯತ್ನಿಸಿದೆ. ಅಂತರ್ಜಾಲದಲ್ಲಿ ಗೂಗಲ್ ಪೇ ಗ್ರಾಹಕ ಕೇಂದ್ರದ ಸಂಪರ್ಕ ಸಂಖ್ಯೆ ಹುಡುಕಾಡಿದಾಗ ಸಿಕ್ಕ ನಂಬರ್‌ಗೆ ಕರೆ ಮಾಡಿದ ನಂತರ ತನಗೆ ವಂಚನೆಯಾಗಿದೆ ಎಂದು ದೂರಿದ್ದಾರೆ.

ನಂತರ ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರು, ಗೂಗಲ್ ಪೇ ಗ್ರಾಹಕ ಕೇಂದ್ರದ ಸಂಪರ್ಕ ಸಂಖ್ಯೆ ಹುಡುಕಾಡಿದಾಗ ಸಿಕ್ಕ ನಂಬರ್‌ ವಂಚಕನದ್ದಾಗಿದ್ದು, ಆ ವಂಚಕನು ಕುಂದನ್ ಕುಮಾರ್ ಅವರಿಂದ ಬ್ಯಾಂಕ್ ಮಾಹಿತಿ ಮತ್ತು ಒಟಿಪಿಯನ್ನು ಪಡೆದು ವಂಚಿಸಿದ್ದಾನೆ ಎಂದು ಹೇಳಿದ್ದಾರೆ. ನಂದನ್ ಕುಮಾರ್ ಅವರು ಗೂಗಲ್‌ನಲ್ಲಿ ಹುಡುಕಾಡಿದಾಗ ಅವರಿಗೆ ವಂಚಕನ ನಂಬರ್ ಗೂಗಲ್ ಪೇ ಗ್ರಾಹಕ ಕೇಂದ್ರದ ಸಹಾಯವಾಣಿಯಾಗಿ ಕಂಡಿದೆ ಎಂದು ಹೇಳಿದ್ದಾರೆ.

ಗೂಗಲ್ ಪೇ ಬಳಕೆದಾರನಿಗೆ 2.7 ಲಕ್ಷ ರೂ.ವಂಚಿಸಿದ ಒಂದು ತಪ್ಪು ಕರೆ!!

ಗೂಗಲ್‌ನಲ್ಲಿ ಸಂಪರ್ಕ ಬದಲಾವಣೆ ಮಾಡಬಹುದಾದ ಆಯ್ಕೆಯು ಇರುವುದರಿಂದ ವಂಚಕನು ತನ್ನ ನಂಬರ್ ಅನ್ನು ಗೂಗಲ್ ಪೇ ಗ್ರಾಹಕ ಕೇಂದ್ರದ ನಂಬರ್ ಎಂದು ನಮೂದಿಸಿರಬಹುದು. ದೂರುದಾರರು ಈ ಬಗ್ಗೆ ಹುಡುಕಾಡಿದಾದ ಆ ವಂಚಕನ ನಂಬರ್ ಕಂಡಿದೆ. ನಂತರ ಆತನಿಗೆ ಕಾಲ್ ಮಾಡಿದಾಗ ಅಕೌಂಟ್ ನಂಬರ್ ಮತ್ತು ಒಟಿಪಿಯನ್ನು ಪಡೆದು ಹಣ ವಾಪಸ್ ಮಾಡುವುದಾಗಿ ಹೇಳಿದ್ದಾನೆ. ಆದರೆ, ಆತನ ಹಣವನ್ನು ಎಗರಿಸಿದ್ದಾರೆ ಎಂದು ಪೊಲೀಸರು ಊಹಿಸಿದ್ದಾರೆ.

ಓದಿರಿ: ನಿಮ್ಮ ಮೊಬೈಲ್ 'ಸಿಮ್' ಜೋಪಾನ!..ಈ ಒಂದು ತಪ್ಪಿನಿಂದ ನೀವು ಮನೆ ಮಠ ಕಳೆದುಕೊಳ್ಳಬಹುದು!!

Best Mobiles in India

English summary
As per the complaint, Kundan Kumar, 29, from Hoige Bazar in the city, was cheated of Rs 2.7 lakh while trying to get money refunded.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X