ಗೂಗಲ್‌ ಪೇ: ಅಗತ್ಯ ವಸ್ತುಗಳು ದೊರೆಯುವ ಅಂಗಡಿ ಹುಡುಕಲು ಹೊಸ ಫೀಚರ್‌!

|

ಕೊರೊನಾ ವೈರಸ್‌ ವಕ್ಕರಿಸಿ ದೇಶದ ವ್ಯವಸ್ಥೆಯನ್ನೆ ಬದಲಿಸಿದೆ. ಕೋವಿಡ್-19 ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಜನರು ಮನೆಯಲ್ಲಿಯೇ ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿರುವ ಜನರಿಗೆ ಅನುಕೂಲವಾಗಲೆಂದು ಟೆಕ್‌ ಸಂಸ್ಥೆಗಳು ಹೊಸ ಆನ್‌ಲೈನ್‌ ಸೇವೆಗಳನ್ನು, ಸೌಲಭ್ಯಗಳನ್ನು ಪರಿಚಯಿಸುತ್ತಿವೆ. ಆ ಪೈಕಿ ಗೂಗಲ್ ಇದೀಗ ನೂತನ ಸೇವೆಯೊಂದನ್ನು ಪರಿಚಯಿಸಿದೆ.

'Nearby Spot

ಹೌದು, ಗೂಗಲ್‌ ಸಂಸ್ಥೆಯು ಲಾಕ್‌ಡೌನ್‌ ಅವಧಿಯಲ್ಲಿ ದಿನಸಿ ಸೇರಿದಂತೆ ದೈನಂದಿನ ಅಗತ್ಯ ಉತ್ಪನ್ನಗಳು ಜನರಿಗೆ ಅವರ ಮನೆಯ ಸನಿಹದಲ್ಲಿ ಎಲ್ಲಿ ಸಿಗುತ್ತವೆ ಎಂಬುದನ್ನು ತಿಳಿಸಲು ನೆರವಾಗಲು 'Nearby Spot' ನಿಯರ್‌ಬೈ ಸ್ಪಾಟ್‌ ಫೀಚರ್‌ ಅನ್ನು ಗೂಗಲ್‌ ಪೇ ಆಪ್‌ನಲ್ಲಿ(ಅಪ್‌ಡೇಟ್ ಆವೃತ್ತಿ) ಸೇರ್ಪಡೆ ಮಾಡಿದೆ. ಬೆಂಗಳೂರು ವ್ಯಾಪ್ತಿಯಲ್ಲಿನ ಗೂಗಲ್ ಪೇ ಆಪ್ ಬಳಕೆದಾರರಿಗೆ ಈ ಫೀಚರ್ ಬಳಕೆಗೆ ಲಭ್ಯ ಇದೆ.

ದಿನಸಿ ವಸ್ತುಗಳು

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇರುವ ಜನರಿಗೆ ಅವರ ಮನೆಯ ಸಮೀಪದ ಸ್ಥಳದಲ್ಲಿಯೇ ದಿನಸಿ ವಸ್ತುಗಳು ಸಿಗುವ ಬಗ್ಗೆ 'Nearby Spot' ಫೀಚರ್‌ನಲ್ಲಿ ಮಾಹಿತಿ ಲಭ್ಯವಾಗುತ್ತದೆ. ಗೂಗಲ್‌ ಪೇ ನಲ್ಲಿನ ಈ ಹೊಸ ಫೀಚರ್‌ ಈಗಾಗಲೆ ಬೆಂಗಳೂರು ವ್ಯಾಪ್ತಿಯಲ್ಲಿ ಈ ಫೀಚರ್ ಲಭ್ಯ ಇದ್ದು, ಶೀಘ್ರದಲ್ಲೇ ಹೈದರಾಬಾದ್, ಚೆನ್ನೈ, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿಯೂ ಲಭ್ಯವಾಗಲಿದೆ.

ಆನ್‌ಲೈನ್ ಸೇವೆ

ಈ ಲಾಕ್‌ಡೌನ್‌ ಸಂದರ್ಭದಲ್ಲಿ ಆನ್‌ಲೈನ್ ಸೇವೆಗಳು ಬಳಕೆದಾರರ ಅಗತ್ಯ ಕೆಲಸಗಳನ್ನು ಸರಳವಾಗಿಸಿದ್ದು, ಸ್ಮಾರ್ಟ್‌ಫೋನ್ ಮೂಲಕವೇ ಎಲ್ಲ ಕಾರ್ಯಗಳನ್ನು ಮಾಡಿ ಬಿಡಬಹುದು. ವಿದ್ಯುತ್ ಬಿಲ್, ನೀರಿನ ಬಿಲ್, ಪ್ರಾಪರ್ಟಿ ಟ್ಯಾಕ್ಸ್‌, ಇನ್ಸೂರೆನ್ಸ್‌ ಕಂತು ಪಾವತಿ, ರೀಚಾರ್ಜ್ ನಂತಹ ಸೇವೆಗಳನ್ನು ಆನ್‌ಲೈನ್ ಮೂಲಕ ಮನೆಯಿಂದಲೇ ಪಾವತಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಪಾವತಿಸುವ ಪ್ರತಿ ಶುಲ್ಕ ಹಾಗೂ ಕಂತಿಗೂ ಇ-ರಶೀದಿ ಸಹ ಲಭ್ಯವಾಗುತ್ತದೆ. ಆನ್‌ಲೈನ್‌ ಸೇವೆಗಳಿಗೆ ಅಗತ್ಯವಾಗಿರುವ ಆಪ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಗೂಗಲ್‌ ಪೇ

ಗೂಗಲ್‌ ಪೇ

ಟೆಕ್ ದೈತ್ಯ ಗೂಗಲ್ ಸಂಸ್ಥೆಯ ಗೂಗಲ್‌ ಪೇ ಬಹುತೇಕ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ನೀಡಿದೆ. ಬಳಕೆದಾರರು ಇಲ್ಲಿ ವಿದ್ಯುತ್ ಬಿಲ್, ಇನ್ಸೂರೆನ್ಸ್‌ ಪ್ರೀಮಿಯಂ, ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್, ಕೆಲವು ಮೆಟ್ರೊ ಸಿಟಿಗಳಲ್ಲಿ ಸಿಲಿಂಡರ್/ಗ್ಯಾಸ್ ಬುಕ್ಕಿಂಗ್ ಸೇವೆಗಳನ್ನು ಒಳಗೊಂಡಿದೆ. ಈಗಾಗಲೇ ಹಣ ವರ್ಗಾವಣೆಗೆ ಈ ಆಪ್‌ ಅನ್ನು ಅನೇಕರು ಬಳಕೆ ಮಾಡುತ್ತಿದ್ದಾರೆ.

ಪೋನ್‌ ಪೇ-PhonePe

ಪೋನ್‌ ಪೇ-PhonePe

ಪೋನ್ ಪೇ ಸಹ ಒಂದು ಉತ್ತಮ ಆನ್‌ಲೈನ್ ಪೇಮೆಂಟ್ ಮಾಡುವ ಆಪ್‌ ಆಗಿದ್ದು, ಮೊದಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಪ್‌ನಲ್ಲಿ ಲಿಂಕ್ ಮಾಡಿಕೊಂಡು ನಂತರ ನೀವು ಈ ಆಪ್‌ನಲ್ಲಿ ವಿದ್ಯುತ್ ಬಿಲ್, ನೀರಿನ ಬಿಲ್, ಇನ್ಸೂರೆನ್ಸ್‌ ಕಂತು, ಹಣ ವರ್ಗಾವಣೆ. ಸೇರಿದಂತೆ ಇನ್ನು ಅನೇಕ ಅಗತ್ಯ ಸೇವೆಗಳು ಲಭ್ಯ ಇವೆ. ಬಳಕೆಯು ಸಹ ಸರಳ ಮತ್ತು ಸುರಕ್ಷಿತವಾಗಿದೆ. ಪೇಮೆಂಟ್ ನಂತರ ಫೋನ್ ಪೇ ವತಿಯಿಂದ ಗಿಫ್ಟ್ ಕಾರ್ಡ್‌(ಸ್ಕ್ರಾಚ್ ಕಾರ್ಡ್‌) ಸಿಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಲ್ಲಿ ಕ್ಯಾಶ್ ಬ್ಯಾಕ್ ಹಣ ಕೂಡ ದೊರೆಯಬಹುದು.

ಪೇಟಿಎಮ್-PayTM

ಪೇಟಿಎಮ್-PayTM

ಪೆಟಿಎಮ್ ಮುಖಾಂತರ ನೀವು ವಿದ್ಯುತ್ ಬಿಲ್, ನೀರಿಲ್ ಬಿಲ್, ಮತ್ತು ಡಿಟಿಎಚ್, ರೀಚಾರ್ಜ್ ಇತರೆ ಯಾವುದೇ ಬಿಲ್ ಪೇಮೆಂಟ್ ಸಹ ಮಾಡಬಹುದಾಗಿದೆ. ಪ್ರತಿ ಪೇಮೆಂಟ್ ಕಾರ್ಯವೂ ಸುರಕ್ಷಿತವಾಗಿ ನಡೆಯುತ್ತದೆ. ಇದರೊಂದಿಗೆ ಪೇಟಿಎಮ್ ನವರು ಪೇಟಿಎಮ್ ಮಾಲ್ ಎಂಬ ಆನ್‌ಲೈನ್‌ ಶಾಪಿಂಗ್ ತಾಣವನ್ನು ಸಹ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಆಪ್ ಅನ್ನು ಅತ್ಯುತ್ತಮ ಆನ್‌ಲೈನ್ ಪೇಮೆಂಟ್ ತಾಣ ಎನ್ನಬಹುದು.

Best Mobiles in India

English summary
Google has launched 'Nearby Spot' under Google Pay using which users in Bengaluru can see local stores selling essentials like groceries that are open, amid the lockdown.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X