ಬಹುನಿರೀಕ್ಷಿತ ಗೂಗಲ್ 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ರಿಲೀಸ್‌! ಬೆಲೆ 39,999ರೂ!

|

ವಿಶ್ವದ ಟೆಕ್‌ ದೈತ್ಯ ಗೂಗಲ್ ಕಂಪನಿಯ ಬಹುನಿರೀಕ್ಷಿತ 'ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL' ಸ್ಮಾರ್ಟ್‌ಫೋನ್‌ಗಳು ಇಂದು (ಮೇ 8) ಲಾಂಚ್ ಆಗಿದ್ದು, ನಿರೀಕ್ಷೆಯಂತೆ ಈ ಸ್ಮಾರ್ಟ್‌ಫೋನ್‌ಗಳು ಮಿಡ್‌ರೇಂಜ್‌ ಪ್ರೀಮಿಯರ್‌ ಮಾದರಿಯಲ್ಲಿವೆ. 39,999ರೂ.ಗಳ ಆರಂಭಿಕ ಪ್ರೈಸ್‌ಟ್ಯಾಗ್‌ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಸರಣಿ ಹಲವು ವಿಶೇಷತೆ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಲಿವೆ.

ಬಹುನಿರೀಕ್ಷಿತ ಗೂಗಲ್ 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ರಿಲೀಸ್‌!

ಹೌದು, ಕ್ಯಾಲಿಫೊರ್ನಿಯದಲ್ಲಿ ನಡೆಯುತ್ತಿರುವ ಮೂರುದಿನಗಳ ಗೂಗಲ್ I/O ಸಮ್ಮೇಳನದಲ್ಲಿ ತನ್ನ ಹೊಸ 'ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದೇ ಮೇ 15 ರಂದು ಭಾರತೀಯ ಮಾರುಕಟ್ಟೆಗೆ ಸಹ ರಿಲೀಸ್‌ ಆಗಲಿವೆ. ಪ್ರೀ ರಿಜಿಸ್ಟ್ರೆಶನ್‌ ಇದೇ ಮೇ 8ರಂದು ಆರಂಭವಾಗಲಿದೆ ಎಂದು ತಿಳಿದಿದೆ. 4GB RAM ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ.

ಬಹುನಿರೀಕ್ಷಿತ ಗೂಗಲ್ 'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ರಿಲೀಸ್‌!

ಬ್ಲ್ಯಾಕ್‌, ವೈಟ್‌ ಮತ್ತು ಐರಿಶ್ ಕಲರ್‌ ಸೇರಿದಂತೆ ಮೂರು ಕಲರ್‌ ಆಯ್ಕೆಗಳನ್ನು ಹೊಂದಿರುವ ಗೂಗಲ್‌ನ ಈ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ಆಂಡ್ರಾಯ್ಡ್‌ Q ಬೀಟಾ ಓಎಸ್‌ ಕಾರ್ಯನಿರ್ವಹಿಸಲಿದ್ದು, ಹಾಗಾದರೇ ಗೂಗಲ್ ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಡಿಸೈನ್‌

ಡಿಸೈನ್‌

ಪಿಕ್ಸಲ್ 3a ಮತ್ತು ಪಿಕ್ಸಲ್‌ 3a XL ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸೈನ್‌ನಲ್ಲಿ ಇದ್ದು, ಡ್ರಾಗನ್‌ ಗ್ಲಾಸ್‌ ಜೊತೆಗೆ ಕಡಿಮೆ ಅಂಚು ಹೊಂದಿವೆ.ಹಿಂಬದಿಯಲ್ಲಿ ಸಿಂಗಲ್‌ ರೇರ್ ಕ್ಯಾಮೆರಾ ರಚನೆ ಇದ್ದು, ಫಿಂಗರ್‌ ಸೆನ್ಸಾರ್‌ ಆಯ್ಕೆಯನ್ನು ಸಹ ಹೊಂದಿದೆ. ಹಾಗೇ ಆಕ್ಟಿವ ಎಡ್ಜ್‌ ಸೆನ್ಸಾರ್‌ ಸಹ ಒದಗಿಸಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1080x2220 ಪಿಕ್ಸಲ್‌ ರೆಸಲ್ಯೂಶನ್ ನೊಂದಿಗೆ 5.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ gOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಡ್ರಾಗನ್‌ ಟ್ರೈಯಲ್‌ ಗ್ಲಾಸ್‌ ರಕ್ಷಣೆಯನ್ನು ಪಡೆದಿದೆ. ಹಾಗೇ 24 ಬಿಟ್‌ ಕಲರ್‌ ಡೆಪ್ತ್‌ ಸಾಮರ್ಥ್ಯವನ್ನು ಡಿಸ್‌ಪ್ಲೇ ಹೊಂದಿದ್ದು, 18.5:9 ಅನುಪಾತದಲ್ಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್‌ 670 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ವೇಗದ ಕೆಲಸಗಳನ್ನು ನಿರ್ವಹಿಸಬಲ್ಲದು. ಇದರೊಂದಿಗೆ 4GB ಸಾಮರ್ಥ್ಯ RAM ಜೊತೆಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಮಲ್ಟಿಟಾಸ್ಕ್‌ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲಿವೆ.

ಕ್ಯಾಮೆರಾ

ಕ್ಯಾಮೆರಾ

ಗೂಗಲ್ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯದ ರೇರ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದ್ದು, 1.12 ಮೈಕ್ರಾನ್‌ ಹೈ ರೆಸಲ್ಯೂಶನ ಶಕ್ತಿಯನ್ನು ಪಡೆದಿವೆ. ಇದರೊಂದಿಗೆ LED ಫ್ಲ್ಯಾಶ್ ಇರಲಿದೆ. ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ. ಸೂಪರ್‌ RES ಜೂಮ್‌, ಸ್ಲೋ ಮೋಷನ್, ನೈಟ್‌ ಮೋಡ್‌ ಆಯ್ಕೆಗಳು ಇವೆ.

ಬ್ಯಾಟರಿ

ಬ್ಯಾಟರಿ

ಗೂಗಲ್ ಪಿಕ್ಸಲ್ 3a ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಹಾಗೇ ಪಿಕ್ಸಲ್ 3a XL ಸ್ಮಾರ್ಟ್‌ಪೋನ್‌ಗೆ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದರೊಂದಿದೆ 18 ವ್ಯಾಟ್‌ ಸಾಮರ್ಥ್ಯದ ಚಾರ್ಜಿಂಗ್‌ ಸೌಲಭ್ಯವನ್ನು ನೀಡಲಾಗಿದೆ. ಫಾಸ್ಟ್‌ ಚಾರ್ಜೀಂಗ್‌ಗೆ ಬೆಂಬಲ ನೀಡಲಿದ್ದು, 15ನಿಮಿಷದ ಚಾರ್ಜ್‌ 7ಗಂಟೆಯ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸುತ್ತದೆ.

ಲಭ್ಯತೆ ಮತ್ತು ಬೆಲೆ

ಲಭ್ಯತೆ ಮತ್ತು ಬೆಲೆ

ಪಿಕ್ಸಲ್ 3a ಮತ್ತು ಗೂಗಲ್ ಪಿಕ್ಸಲ್ 3a XL' ಸ್ಮಾರ್ಟ್‌ಫೋನ್‌ಗಳಿ ಆಸ್ಟ್ರೇಲಿಯಾ, ಕೆನಡ್, ಯುಕೆ, ರಾಷ್ಟ್ರಗಳಲ್ಲಿ ಲಭ್ಯವಿದ್ದು, ಇದೇ ಮೇ 15ರಂದು ದೇಶಿತ ಮಾರುಕಟ್ಟೆಗೆ ಲಾಂಚ್ ಆಗಲಿದೆ. ಭಾರತದಲ್ಲಿ ಗೂಗಲ್ ಪಿಕ್ಸಲ್ 3a ಆರಂಭಿಕ ಬೆಲೆಯು 39,999ರೂ.ಗಳು ಮತ್ತು ಗೂಗಲ್ ಪಿಕ್ಸಲ್ 3a XL' 44,999ರೂ.ಗಳು.

Best Mobiles in India

English summary
Google Pixel 3a, Pixel 3a XL With Snapdragon 670 SoC Launched at I/O 2019: Price in India, Specifications.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X