ಬಹುನಿರೀಕ್ಷಿತ 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಬೆಲೆ ಲೀಕ್!..ಎಷ್ಟು ಗೊತ್ತಾ?

|

ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಸರಣಿಯು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಇತ್ತೀಚಿಗಷ್ಟೆ ಫೀಚರ್ಸ್‌ಗಳನ್ನು ಲೀಕ್ ಆಗಿದ್ದವು. ಗೂಗಲ್‌ ಪಿಕ್ಸಲ್ 4 ಫೋನಿನ ಫೀಚರ್ಸ್‌ಗಳು ಗ್ರಾಹಕರನ್ನು ಅಚ್ಚರಿಗೊಳಿಸಿದ್ದು, ಬೆಲೆ ಎಷ್ಟು ಎನ್ನುವ ಪ್ರಶ್ನೇ ಕಾಡುತ್ತಿದೆ. ಆದರೆ ಇದೀಗ ಗೂಗಲ್ ಪಿಕ್ಸಲ್ 4 ಸ್ಮಾರ್ಟ್‌ಫೋನ್ ಸರಣಿಯ ಬೆಲೆಗಳು ಲೀಕ್ ಆಗಿದ್ದು, ಕೇಳಿದರೇ ನೀವು ಹುಬ್ಬೆರಿಸುತ್ತಿರಿ.

ಗೂಗಲ್

ಹೌದು, ಜನಪ್ರಿಯ ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ 'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ ಲಾಂಚ್‌ಗೆ ತಯಾರಾಗುತ್ತಿವೆ. ಈ ಸರಣಿಯು 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿರಲಿದೆ. ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿರಲಿದ್ದು, ಜೊತೆಗೆ ಪಿಕ್ಸಲ್ ನ್ಯೂರಲ್‌ ಕೋರ್ ಆಯ್ಕೆಯ ಬೆಂಬಲವನ್ನು ಪಡೆದಿರಲಿದೆ. ಇದೇ ಅಕ್ಟೋಬರ್ 15 ರಂದು ಲಾಂಚ್ ಆಗಲಿದೆ ಎಂದು ಲೀಕ್ ಸುದ್ದಿಗಳು ಸುಳಿವು ನೀಡಿವೆ.

ಗೂಗಲ್ ಪಿಕ್ಸಲ್

ಗೂಗಲ್ ಪಿಕ್ಸಲ್ 4 ಸ್ಮಾರ್ಟ್‌ಫೋನ್ 64GB ವೇರಿಯಂಟ್‌ ಬೆಲೆಯು 56,000ರೂ.ಗಳು, ಹಾಗೆಯೇ ಗೂಗಲ್ ಪಿಕ್ಸಲ್ 4, 128GB ವೇರಿಯಂಟ್ ಬೆಲೆಯು 64,000ರೂ.ಗಳು ಎನ್ನಲಾಗಿದೆ. ಇನ್ನು ಗೂಗಲ್ ಪಿಕ್ಸಲ್ 4XL ಸ್ಮಾರ್ಟ್ಫೋನ್ 64GB ವೇರಿಯಂಟ್ 64,000ರೂ.ಗಲ ಪ್ರೈಸ್‌ಟ್ಯಾಗ್‌ನಲ್ಲಿರಲಿದ್ದು, ಮತ್ತು 128GB ವೇರಿಯಂಟ್‌ನ ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ 72,500ರೂ.ಬೆಲೆ ಇರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದಿದೆ. ಹಾಗಾದರೇ ಗೂಗಲ್ ಪಿಕ್ಸಲ್ 4 ಸ್ಮಾರ್ಟ್‌ಫೋನ್ ಸರಣಿ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿರಬಹುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 5.7 ಇಂಚಿನ ಫೂರ್ಣ ಹೆಚ್‌ಡಿ ಪ್ಲಸ್‌ OLED ಪ್ಯಾನೆಲ್ ಡಿಸ್‌ಪ್ಲೇ ಇರಲಿದ್ದು, ಡಿಸ್‌ಪ್ಲೇಯ ರಿಫ್ರೇಶ್‌ ರೇಟ್ 90Hz ಆಗಿರಲಿದೆ. ಇನ್ನು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್ 6.3 Qಹೆಚ್‌ಡಿ ಪ್ಲಸ್‌ OLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿರಲಿದ್ದು, ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ರಿಫ್ರೇಶ ರೇಟ್‌ ಸಹ 90Hz ಆಗಿರಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ.

ಪ್ರೊಸೆಸರ್‌ ಸಾಮರ್ಥ್ಯ

ಪ್ರೊಸೆಸರ್‌ ಸಾಮರ್ಥ್ಯ

ಗೂಗಲ್ ಸಂಸ್ಥೆಯ 'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು 'ಆಕ್ಟಾಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌' ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರ ಜೊತೆಗೆ ಪಿಕ್ಸಲ್ ನ್ಯೂರಲ್‌ ಕೋರ್ ಸಪೋರ್ಟ್ ಪಡೆದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 6GB RAM ಸಾಮರ್ಥ್ಯವನ್ನು ಹೊಂದಿರಲಿದ್ದು, 64GB ಅಥವಾ 128GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಹೊಂದಿರಲಿವೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು ಹಿಂಬದಿಯಲ್ಲಿ 12ಎಂಪಿಯ ಸೆನ್ಸಾರ್‌ನಲ್ಲಿ ಡ್ಯುಯಲ್ ಪಿಕ್ಸಲ್ ಕ್ಯಾಮೆರಾ ಹೊಂದಿರಲಿದ್ದು, ಜೊತೆಗೆ ಸೆಲ್ಫಿಗಾಗಿ 16ಎಂಪಿ ಟೆಲಿಫೋಟೊ ಲೆನ್ಸ್‌ ಕ್ಯಾಮೆರಾ ಹೊಂದಿರಲಿವೆ. ಈ ಎರಡು ಸ್ಮಾರ್ಟ್‌ಫೋನ್ ಸ್ಟಿತಿಯೊ ಸ್ಪೀಕರ್ಸ್‌ಗಳನ್ನು, ಮೋಷನ್ ಸೆನ್ಸ್‌, ಫೇಸ್‌ ಅನ್‌ಲಾಕ್ ಫೀಚರ್‌, ಡಿಸ್‌ಪ್ಲೇ ಫಿಂಗರಪ್ರಿಂಟ್ ಸ್ಕ್ಯಾನರ್‌ ಸೌಲಭ್ಯಗಳು ಇರಲಿವೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

'ಗೂಗಲ್ ಪಿಕ್ಸಲ್ 4' ಸ್ಮಾರ್ಟ್‌ಫೋನ್ 2,800mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರಲಿದೆ. ಇನ್ನು ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ 3,700mAh ಸಾಮರ್ಥ್ಯದ ಬ್ಯಾಟರಿ ಲೈಫ್‌ ಪಡೆದುಕೊಂಡಿರಲಿದೆ. ಇದರೊಂದಿಗೆ ಈ ಎರಡು ಸ್ಮಾರ್ಟ್‌ಫೋನ್‌ಗಳು ಫಾಸ್ಟ್‌ ಚಾರ್ಜಿಂಗ್ ಸೌಲಭ್ಯದ ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರಲಿವೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

'ಗೂಗಲ್ ಪಿಕ್ಸಲ್ 4' ಮತ್ತು 'ಗೂಗಲ್ ಪಿಕ್ಸಲ್ 4XL' ಸ್ಮಾರ್ಟ್‌ಫೋನ್‌ಗಳು, ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಚಾರ್ಜಿಂಗ್ ಅಡಾಪ್ಟರ್(18wat), ಸಿಮ್ ಇಜೇಕ್ಷನ್ ಟೂಲ್, ಸೌಲಭ್ಯಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಟೈಟಾನ್ ಎಂ ಸೆಕ್ಯುರಿಟಿ ಮಾಡ್ಯುಲ್ ಆಯ್ಕೆಗಳನ್ನು ಪಡೆದಿರುತ್ತವೆ ಎನ್ನಲಾಗುತ್ತಿದೆ.

Best Mobiles in India

English summary
Google Pixel 4 will be priced at CAD 1,049.95 for the 64GB variant. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X