Subscribe to Gizbot

ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್ ..!

Written By:

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಇಡೀ ಜಗತ್ತಿನ ಮೂಲೆ ಮೂಲೆಗೆ ಇಂಟರ್‌ನೆಟ್ ಸೇವೆಯನ್ನು ನೀಡಬೇಕು ಎಂಬ ಹೆಬ್ಬಯಕೆಯಿಂದ ಕಡಿಮೆ ವೆಚ್ಚದಾಯಕವಾದ ಹೊಸ ಹೊಸ ಪಯತ್ನ ಮಾಡುತ್ತಿರುವ ದಿನದಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್. ಇಡೀ ಭೂಮಿಗೆ ಸ್ಯಾಟಿಲೆಟಿನ ಹೊದಿಕೆ ಹೊದ್ದಿಸಿ, ಎಲ್ಲೆಡೆಗೆ ಇಂಟರ್‌ನೆಟ್‌ ಸೇವೆ ನೀಡುವ ಪ್ರಯತ್ನಕ್ಕೆ ಮುಂದಾಗಿದೆ.

ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್

ಓದಿರಿ..: ಇಂದಿನಿಂದ ಪ್ಲಿಪ್‌ಕಾರ್ಟ್‌ನಲ್ಲಿ 'ರೆಡ್‌ಮಿ ನೋಟ್ 4' ಸೇಲ್ ಆರಂಭ

ದೊಡ್ಡ ದೊಡ್ಡ ಪ್ರಯತ್ನಕ್ಕೆ ಮುಂದಾಗುತ್ತಿರುವ ಗೂಗಲ್, ಇಂಟರ್‌ನೆಟ್‌ನ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸುತ್ತಿದೆ. ಗೂಗಲ್ ಇಲ್ಲದೇ ಬೇರೆ ಯಾವುದು ಇಲ್ಲ ಎನ್ನುವ ಮಟ್ಟಕ್ಕೆ ಬೆಳೆಯುವ ಪ್ರಯತ್ನದಲ್ಲಿದೆ. ಇದೇ ಪ್ರಯತ್ನದ ಅಂಗವಾಗಿ ಇಡೀ ಭೂಮಿಯನ್ನು ಸುತ್ತುವರೆಯುವಂತೆ ಸ್ಯಾಟಿಲೆಟ್ಗಳನ್ನು ಬಿಟ್ಟು, ಎಲ್ಲೆಡೆ ಇಂಟರ್ನೆಟ್ ಸೌಲಭ್ಯ ದೊರೆಯುವಂತೆ ಮಾಡುವ ಯೊಜನೆಯೊಂದನ್ನು ಹಾಕಿಕೊಂಡಿದೆ.

ಗೂಗಲ್ ತನ್ನ ಯೋಜನೆಯನ್ನು ಸಾಕಾರಗೊಳಿಸುವ ಸಲುವಾಗಿ ಈ ಬಾರಿ 1000 ಸ್ಯಾಟಿಲೈಟ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆಯಂತೆ. ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ 'Loon' ಎಂದು ನಾಮಕರಣ ಮಾಡಿದ್ದು, ಭೂಮಿಯ ಸುತ್ತ ಗಿರಕಿ ಹೊಡೆಯುವ ಈ ಸ್ಯಾಟಿಲೆಟ್‌ಗಳು ಮೂಲೆ ಮೂಲೆಗೂ ಇಂಟರ್‌ನೆಟ್ ಸೇವೆಯನ್ನು ಓದಗಿಸಲಿದೆ ಎನ್ನಲಾಗಿದೆ.

ಭೂಮಿಗೆ ಸ್ಯಾಟಿಲೆಟ್ ಹೊದಿಕೆ ಹೊದ್ದಿಸಿ, ಇಂಟರ್‌ನೆಟ್ ಸೇವೆ ನೀಡಲು ಮುಂದಾದ ಗೂಗಲ್

ಓದಿರಿ..: ಜೂನ್ 30ರವರೆಗೂ ಜಿಯೋ ಫುಲ್ ಫ್ರೀ, ಆದರೆ ತಿಂಗಳು ತಿಂಗಳು ಹಣ ಕಟ್ಟಬೇಕು..!

ಈ ಸ್ಯಾಟಿಲೆಟ್‌ಗಳು ಗ್ಲೋಬಲ್ ಇಂಟರ್‌ನೆಟ್ ಸಂಪರ್ಕವನ್ನು ಇನಷ್ಟು ವಿಸ್ತರಿಸಲಿದ್ದು, ಹವಾಮಾನ ವೈರಿತ್ಯಗಳನ್ನು ಗುರುತಿಸುವಲ್ಲಿ ಮತ್ತು ಮಿಲಿಟರಿ ಕಾರ್ಯಗಳಿಗೂ ಸಹಾಯಕಾರಿಯಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲಾ ಜನರಿಗೂ ಇಂಟರ್‌ನೆಟ್ ಸೇವೆ ಲಭ್ಯವಾಗಬೇಕು ಎನ್ನುವ ಕನಸು ಇನ್ನು ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ.

Read more about:
English summary
Google is building a constellation of satellites moving along specified trajectories across the globe to provide Internet connectivity across the world. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot