ಟ್ರ್ಯಾಕಿಂಗ್ ಟ್ಯಾಗ್‌ ಲಾಂಚ್‌ಗೆ ಮುಂದಾದ ಗೂಗಲ್‌; ಇದರಿಂದಾಗುವ ಪ್ರಯೋಜನ ಏನು!?

|

ದೈತ್ಯ ಸರ್ಚ್ ಇಂಜಿನ್ ಆಗಿರುವ ಗೂಗಲ್ ಈಗಾಗಲೇ ಹಲವಾರು ರೀತಿಯ ಹಾಗೂ ವಿವಿಧ ಫೀಚರ್ಸ್‌ ಇರುವ ಪ್ರಮುಖ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರೊಂದಿಗೆ ತನ್ನ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಂಡುವ ಆರೋಪವನ್ನು ಎದುರಿಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್‌ ಹೊಸ ಸೇವೆಯೊಂದನ್ನು ನೀಡಲು ಮುಂದಾಗಿದ್ದು, ಈ ಮೂಲಕ ಆಪಲ್‌ಗೆ ಪೈಪೋಟಿ ನೀಡಲಿದೆ.

ಟ್ರ್ಯಾಕಿಂಗ್ ಟ್ಯಾಗ್‌ ಲಾಂಚ್‌ಗೆ ಮುಂದಾದ ಗೂಗಲ್‌; ಇದರಿಂದಾಗುವ ಪ್ರಯೋಜನ ಏನು!?

ಹೌದು, ಈ ಹಿಂದೆ ಆಪಲ್‌ ಮಾತ್ರ ಟ್ರ್ಯಾಕಿಂಗ್ ಟ್ಯಾಗ್ ಅನ್ನು ಪರಿಚಯಿಸಿದ್ದು, ಇದು ಬಹಳ ದುಬಾರಿ ಬೆಲೆಯ ಡಿವೈಸ್‌ ಆಗಿತ್ತು. ಈ ಕಾರಣಕ್ಕೆ ಬಹುಪಾಲು ಮಂದಿ ಇದನ್ನು ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಇದಕ್ಕೆ ಪರಿಹಾರವಾಗಿ ಗೂಗಲ್‌ ತನ್ನದೇ ಆದ ಹೊಸ ಟ್ರ್ಯಾಕಿಂಗ್ ಟ್ಯಾಗ್ ಪರಿಚಯಿಸುತ್ತಿದ್ದು, ಇನ್ಮುಂದೆ ಎಲ್ಲಾ ಬಳಕೆದಾರರು ಸುಲಭವಾಗಿ ಇದನ್ನು ಬಳಕೆ ಮಾಡಬಹುದಾಗಿದೆ. ಹಾಗಿದ್ರೆ, ಇದರ ಪ್ರಯೋಜನ ಏನು?, ಯಾವಾಗ ಲಾಂಚ್‌ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಗೂಗಲ್‌ ಟ್ರ್ಯಾಕಿಂಗ್ ಟ್ಯಾಗ್
ನಿಮ್ಮ ಕೀಗಳಾಗಿರಲಿ ಅಥವಾ ಪರ್ಸ್ ಆಗಿರಲಿ ಅಥವಾ ಏನೇ ಆದರೂ ಕಳೆದುಹೋದರೆ ತಕ್ಷಣಕ್ಕೆ ಸಾಕಷ್ಟು ತೊಂದರೆ ಎದುರಾಗುತ್ತದೆ. ಈ ಕಾರಣಕ್ಕೆ ಇದನ್ನು ಪತ್ತೆ ಮಾಡುವ ಉದ್ದೇಶದಿಂದ ಎಲ್ಲರೂ ಆಪಲ್‌ನ ಟ್ರ್ಯಾಕಿಂಗ್ ಟ್ಯಾಗ್ ಗಳನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಬದಲಾಗಿ ಈ ಪರಿಸ್ಥಿತಿಯಲ್ಲಿ ಸಹಾಯಮಾಡಲು ಮಾಡಲು ಗೂಗಲ್‌ ಮುಂದಾಗಿದೆ.

ಇನ್ಮುಂದೆ ಬಳಕೆದಾರರು ಈ ಟ್ರ್ಯಾಕಿಂಗ್ ಟ್ಯಾಗ್‌ಗಳನ್ನು ಬಳಕೆ ಮಾಡಿಕೊಂಡು ಕಾರ್, ಬೈಕ್ ಕೀಗಳು, ಪರ್ಸ್, ಸಾಕುಪ್ರಾಣಿಗಳು ಅಥವಾ ಯಾವುದೇ ವಿಷಯಕ್ಕೂ ಇದನ್ನು ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಸ್ಥಳವನ್ನು ಟ್ರ್ಯಾಕ್ ಮಾಡಬಹುದಾಗಿದೆ. ಟ್ರ್ಯಾಕಿಂಗ್ ಕೋಡ್‌ನಲ್ಲಿ ಗೂಗಲ್ ಕಾರ್ಯನಿರ್ವಹಿಸುತ್ತಿದೆ ಎಂದು ಡೆವಲಪರ್‌ಗಳು ಮಾಹಿತಿ ನೀಡಿದ್ದಾರೆ. ಹಾಗೆಯೇ ಇದರಲ್ಲಿ ಬಿಲ್ಟ್ ಇನ್ ಸ್ಪೀಕರ್‌ ಆಯ್ಕೆ ನೀಡಲಾಗಿದ್ದು, ವಿಭಿನ್ನ ಬಣ್ಣದ ವೇರಿಯಂಟ್‌ನಲ್ಲಿ ಇದು ಲಭ್ಯವಾಗುತ್ತದೆ ಎಂದು ತಿಳಿದುಬಂದಿದೆ.

ಟ್ರ್ಯಾಕಿಂಗ್ ಟ್ಯಾಗ್‌ ಲಾಂಚ್‌ಗೆ ಮುಂದಾದ ಗೂಗಲ್‌; ಇದರಿಂದಾಗುವ ಪ್ರಯೋಜನ ಏನು!?

ಗೂಗಲ್‌ನ ಮುಂಬರುವ ಉತ್ಪನ್ನವು ಅಲ್ಟ್ರಾ ವೈಡ್ ಬ್ಯಾಂಡ್ ಮತ್ತು ವಿಶೇಷ ಶಕ್ತಿಯ ಬ್ಲೂಟೂತ್ ಆವೃತ್ತಿಯನ್ನು ಬಳಕೆ ಮಾಡುತ್ತದೆ. ಈ ತಂತ್ರಗಳನ್ನು ಬಳಸುವುದರಿಂದ ನಿಖರವಾದ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ನೀಡಲು ಮಾಡಲು ಸಾಧ್ಯವಾಗುತ್ತದೆ ಎಂದು ಕಂಪೆನಿ ತಿಳಿಸಲಾಗಿದೆ.

ಗೂಗಲ್‌ I / O ನಲ್ಲಿ ಲಾಂಚ್‌ ಆಗಬಹುದು
ಈ ಗೂಗಲ್‌ ಟ್ಯಾಗ್‌ ಅನ್ನು ನಿಖರವಾಗಿ ಯಾವಾಗ ಲಾಂಚ್‌ ಮಾಡಲಾಗುತ್ತದೆ ಎಂಬ ಬಗ್ಗೆ ಇದುವರೆಗೂ ಗೂಗಲ್‌ ಎಲ್ಲಿಯೂ ಉಲ್ಲೇಖ ಮಾಡಿಲ್ಲ. ಆದರೆ, ಈ ವರ್ಷ ನಡೆಯಲಿರುವ ಗೂಗಲ್‌ I/O ಡೆವಲಪರ್ ಸಮ್ಮೇಳನದಲ್ಲಿ ಈ ಹೊಸ ಪ್ರೊಡಕ್ಟ್‌ ಅನ್ನು ಅನಾವರಣ ಮಾಡಬಹುದು ಎಂದು ಊಹಿಸಲಾಗಿದೆ.

ಗೂಗಲ್ ಇನ್ನೂ ಸಹ ಈ ಟ್ರ್ಯಾಕಿಂಗ್ ಟ್ಯಾಗ್ ತಯಾರು ಮಾಡಲು ಯೋಜಿಸುತ್ತಿದೆ. ಆದರೆ, ಆಪಲ್ ಈಗಾಗಲೇ ಟ್ರ್ಯಾಕಿಂಗ್ ಕೋಡ್ ಅನ್ನು ಸಿದ್ಧಪಡಿಸಿ ಜಾಗತಿಕವಾಗಿ ಲಭ್ಯವಾಗುವಂತೆ ಮಾಡಿದೆ. ಇದರ ನಡುವೆ ಸ್ಯಾಮ್‌ಸಂಗ್ ಟ್ರ್ಯಾಕಿಂಗ್ ಟ್ಯಾಗ್‌ಗಳನ್ನು ಸಹ ಹೊಂದಿದ್ದು, ಈ ಗ್ಯಾಜೆಟ್‌ಗಳು ಭಾರತದಲ್ಲಿಯೂ ಲಭ್ಯ ಇವೆ.

ಸ್ಯಾಮ್‌ಸಂಗ್‌ ತನ್ನ ಈ ಟ್ಯಾಗ್‌ಗೆ ಗ್ಯಾಲಕ್ಸಿ ಟ್ಯಾಗ್‌ ಎಂದು ಹೆಸರಿಡಲಾಗಿದ್ದು, ಗೂಗಲ್‌ನಂತೆಯೇ ಈ ಟ್ಯಾಗ್‌ಗಳು ಸಹ ಬಹಳ ಸುಧಾರಿತ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಈ ಎರಡು ಕಂಪೆನಿಗಳ ಹೊರತಾಗಿ, ಟ್ರ್ಯಾಕಿಂಗ್ ಟ್ಯಾಗ್‌ಗಳನ್ನು ಈಗಾಗಲೇ ಹಲವಾರು ಕಂಪೆನಿಗಳು ಮಾರುಕಟ್ಟೆಗೆ ಪರಿಚಯಿಸಿವೆ.

ಟ್ರ್ಯಾಕಿಂಗ್ ಟ್ಯಾಗ್‌ ಲಾಂಚ್‌ಗೆ ಮುಂದಾದ ಗೂಗಲ್‌; ಇದರಿಂದಾಗುವ ಪ್ರಯೋಜನ ಏನು!?

ಈಗಾಗಲೇ ಆಪಲ್ ಸಿದ್ಧಪಡಿಸಿದ ಏರ್‌ಟ್ಯಾಗ್‌ ಹಲವಾರು ರೀತಿಯಲ್ಲಿ ಬಳಕೆದಾರಿಗೆ ಅನುಕೂಲ ಮಾಡಿಕೊಡುತ್ತಿದೆ. ಅಂದರೆ ಹಲವಾರು ಜನರು ತಮ್ಮ ಮಕ್ಕಳ ಬಟ್ಟೆಯ ಪಾಕೆಟ್‌ನಲ್ಲಿ ಅಥವಾ ಸಾಕುಪ್ರಾಣಿಗಳ ಕುತ್ತಿಗೆಗೆ ಹಾಕುವುದರಿಂದ ಅವರ ಸ್ಥಳವನ್ನು ನಿಖರವಾಗಿ ಟ್ರ್ಯಾಕ್ ಮಾಡಬಹುದಾಗಿದೆ. ಈ ಮೂಲಕ ತಮ್ಮ ಯಾವುದೇ ವಸ್ತುಗಳು ಕಳೆದುಹೋಗದಂತೆ ಬಳಕೆದಾರರು ಎಚ್ಚರಿಕೆ ವಹಿಸಬಹುದಾಗಿದೆ.
Best Mobiles in India

English summary
Google is about to offer a new service in which it plans to introduce Google Tracking Tag. Information in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X