ಈ 6 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

|

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 9 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಆಗಿರುವ ಆರು ಆಂಡ್ರಾಯ್ಡ್ ಆಪ್‌ಗಳಲ್ಲಿ 'PreAMo' ಮಾಲ್‌ವೇರ್‌ ಪತ್ತೆಯಾಗಿ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಶಾಕ್ ನೀಡಿದೆ. Selfie Camera, Total Cleaner, Smart Cooler, RAM Master ನಂತಹ ಆಪ್‌ಗಳಲ್ಲಿ ಈ ಮಾಲ್‌ವೇರ್‌ ಅನ್ನು ಸೇರಿಸಲಾಗಿದೆ ಎಂದು ಬಜ್‌ಫೀಡ್‌ ವರದಿ ಮೂಲಕ ತಿಳಿದುಬಂದಿದೆ. ಇವು ಫೋನ್‌ನ ಕಾರ್ಯಾಚರಣೆ ವೇಗ ಹೆಚ್ಚಿಸುವ ಭರವಸೆ ನೀಡುವ ಮೂಲಕ ಬಳಕೆದಾರರನ್ನು ವಂಚಿಸುತ್ತಿದೆ ಎಂದು ವರದಿ ಹೇಳಿದೆ.

ಹೌದು, Selfie Camera, Total Cleaner, Smart Cooler, RAM Master ನಂತಹ ಆಪ್‌ಗಳಲ್ಲಿ 'PreAMo' ಮಾಲ್‌ವೇರ್‌ ಮೂಲಕ ವಂಚನೆ ನಡೆಸಲಾಗುತ್ತಿದೆ. ಈ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ ಬಳಿಕ ಮೊಬೈಲ್‌ನಲ್ಲಿ ಅಂತರ್ಜಾಲ ಸಂಪರ್ಕ ಸಕ್ರಿಯಗೊಂಡಾಗ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಗಮನಿಸದೇ ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಮಾಹಿತಿ ಚೋರರು ಆಂಡ್ರಾಯ್ಡ್ ಮೊಬೈಲ್‌ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದು ಇತ್ತೀಚಿನ ಅಧ್ಯಯನದ ಮೂಲಕ ಸಾಬೀತಾಗಿದೆ.

ಈ 6 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

ಇಂತಹ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದಾಗ ಮಾಹಿತಿ ಚೋರರು ಆಂಡ್ರಾಯ್ಡ್ ಮೊಬೈಲ್‌ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುತ್ತದೆ ಎಂದಷ್ಟೇ ತಿಳಿದರೆ ಅದು ತಪ್ಪಾಗಬಹುದು, ಅದರಲ್ಲಿಯೂ ಆಪ್‌ ಬಳಸದೇ ಇರುವ ಸಂದರ್ಭದಲ್ಲಿಯೂ ಜಾಹೀರಾತಿನ ಮೇಲೆ ಕ್ಲಿಕ್ ಮಾಡುವಂತೆ ಮಾಡಲಾಗಿದೆ ಎನ್ನುವುದು ಮೊಬೈಲ್ ಬಳಕೆದಾರರಿಗೆ ಶಾಕ್ ನೀಡಿದೆ. 9 ಕೋಟಿಗೂ ಅಧಿಕ ಬಾರಿ ಡೌನ್‌ಲೋಡ್‌ ಆದತಂಹ ಜನಪ್ರಿಯ ಆಪ್‌ಗಳ ಮೂಲಕವೇ ಹೆಚ್ಚು ಮಾಹಿತಿ ಸೋರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನು ವರದಿ ಬೆಳಕಿಗೆ ಬಂದ ನಂತರ ಇಂತಹ ಆಪ್‌ಗಳಲ್ಲಿ ಇರುವ ಹಾನಿಕಾರಕ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮ ಉಲ್ಲಂಘನೆಯಾಗಿರುವುದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ. ಇಂತಹ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವ ಜತೆಗೆ ಮೊಬೈಲ್‌ನಲ್ಲಿ ಜಾಹೀರಾತು ನೀಡಲು ವೇದಿಕೆಯಾಗಿರುವ ಗೂಗಲ್‌ನ ಅಂಗಸಂಸ್ಥೆಯಾಗಿರುವ AdMobನಲ್ಲಿಯೂ ನಿಷೇಧ ಹೇರಲಾಗುವುದು' ಎಂದು ಗೂಗಲ್‌ನ ವಕ್ತಾರರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ 6 ಆಪ್‌ಗಳು ನಿಮ್ಮ ಫೋನಿನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

ಆಪ್‌ಗಳನ್ನು ಅಭಿವೃದ್ಧಿಪಡಿಸುವವರ ವಿಶ್ವಾಸಾರ್ಹತೆ ಮತ್ತು ನಿರ್ದಿಷ್ಟ ಆಪ್‌ ಅನ್ನು ಈಗಾಗಲೇ ಬಳಸಿರುವವರ ವಿಶ್ಲೇಷಣೆಯನ್ನು ಗಮನಿಸುವುದರಿಂದ ಒಂದು ಹಂತದ ವರೆಗೂ ಸುರಕ್ಷತೆ ಪಡೆಯಬಹುದು. ಆದರೆ, ಬಳಕೆದಾರನ ವೈಯಕ್ತಿಕ ಮಾಹಿತಿಗಳು ಕಳುವಾದ ಮೇಲೆಅಂತಹ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವ ಅಥವಾ ಆಪ್‌ ಅಭಿವೃದ್ಧಿಪಡಿಸುವ ಕಂಪನಿಗೆ ನಿಷೇಧ ಹೇರುವ ಗೂಗಲ್ ಇಂತಹ ಕಂಪೆನಿಗಳ ಬಗ್ಗೆಯೇ ಎಚ್ಚರಿಕೆಯಿಂದ ಇದ್ದರೆ ಆಂಡ್ರಾಯ್ಡ್ ಬಳಕೆದಾರರಿಗೂ ಒಳಿತು ಎಂದು ಹೇಳಬಹುದು.

ಓದಿರಿ: ಕಳ್ಳ ಕದ್ದ ಮೊಬೈಲ್ ಅನ್ನು ಸ್ಮಾರ್ಟ್‌ ಆಗಿ ಹುಡುಕಿದ ವಿದ್ಯಾರ್ಥಿನಿ!..ಪೊಲೀಸರಿಂದಲೇ ಶ್ಲಾಘನೆ!!

Best Mobiles in India

English summary
Why do Google remove Omni Cleaner, Smart Cooler, Total Cleaner and AIO Flashlight apps from play store?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X