ಗೂಗಲ್‌ ನಲ್ಲಿ ಈ ಫೀಚರ್ಸ್‌ಗಾಗಿಯೇ ಹಲವರು ಕಾಯುತ್ತಿದ್ದರು; ಯಾವುದದು!?

|

ಗೂಗಲ್‌ ಸಂಸ್ಥೆಯು ತನ್ನ ಸೇವೆಯ ಮೂಲಕ ಜಗತ್ತಿನ ಆಗು ಹೋಗುಗಳನ್ನು ಕ್ಷಣಮಾತ್ರದಲ್ಲಿ ನೀಡುತ್ತಾ ಬರುತ್ತಿದೆ. ಅದರಂತೆ ಗೂಗಲ್‌ ತನ್ನ ಇತರೆ ಸೇವೆಗಳಲ್ಲೂ ಅಂದರೆ ಗ್ಯಾಜೆಟ್‌ ವಿಭಾಗ ಹಾಗೂ ಆಪ್‌ಗಳ ವಿಭಾಗದಲ್ಲೂ ಹಲವಾರು ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಿದೆ. ಇದರ ನಡುವೆ ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ನಿಮ್ಮೆಲ್ಲರಿಗೂ ಇಷ್ಟವಾಗುವ ಫೀಚರ್ಸ್‌ ಒಂದನ್ನು ಪರಿಚಯಿಸಲು ಮುಂದಾಗಿದೆ.

ಗೂಗಲ್‌

ಹೌದು, ಗೂಗಲ್‌ ಸರ್ಚ್‌ ಇಂಜಿನ್‌ನಲ್ಲಿ ಗೂಗಲ್‌ ಹೊಸ ಫೀಚರ್ಸ್‌ ಪರಿಚಯಿಸಿದ್ದು, ಈ ಮೂಲಕ ನೀವು ತಡೆ ಇಲ್ಲದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಇದ್ದ ಫೀಚರ್ಸ್‌ ನಿಂದ ಕೆಲವರಿಗೆ ಇರುಸು ಮುರುಸಾಗುತ್ತಿತ್ತು. ಆದರೆ, ಈಗ ಪರಿಚಯಿಸಲಾಗುವ ಫೀಚರ್ಸ್‌ ಮೂಲಕ ಹುಡುಕಿದಷ್ಟು ಮಾಹಿತಿ ಒಂದೇ ಬಾರಿಗೆ ತೆರೆದುಕೊಳ್ಳುತ್ತದೆ.

ನಿರಂತರ ಸ್ಕ್ರೋಲಿಂಗ್ ಫೀಚರ್ಸ್

ನಿರಂತರ ಸ್ಕ್ರೋಲಿಂಗ್ ಫೀಚರ್ಸ್

ಈವರೆಗೂ ನಾವು ಗೂಗಲ್‌ ನಲ್ಲಿ ಏನೇ ಹುಡುಕಲು ಮುಂದಾದರೂ ರಿಸಲ್ಟ್‌ ವಿಭಾಗದಲ್ಲಿ ಒಂದು ಪೇಜ್‌ ಮಾಹಿತಿ ಮಾತ್ರ ಡಿಸ್‌ಪ್ಲೆ ಆಗುತ್ತಿದ್ದವು, ಹೆಚ್ಚಿನದು ಬೇಕು ಎಂದರೆ ರಿಸಲ್ಟ್‌ ಪೇಜ್‌ನ ಕೆಳಗೆ ಕಾಣಿಸಿಕೊಳ್ಳುವ ಮುಂದಿನ ಪೇಜ್‌ನ ಸಂಖ್ಯೆಗಳ ಮೇಲೆ ಕ್ಲಿಕ್‌ ಮಾಡಬೇಕಿತ್ತು. ಆದರೆ, ಇನ್ಮುಂದೆ ಈ ಪೇಜ್‌ಗಳ ಫೀಚರ್ಸ್‌ ಬದಲಿಗೆ ನೀವು ಎಲ್ಲಿಯವರೆಗೆ ಸ್ಕ್ರೋಲ್‌ ಮಾಡುತ್ತೀರೋ ಅಲ್ಲಿಯವರೆಗೂ ಮಾಹಿತಿ ಲಭಿಸುತ್ತವೆ.

ಒಂದೇ ಪೇಜ್‌ನಲ್ಲಿ ಆರು ಪೇಜ್‌ನಷ್ಟು ಮಾಹಿತಿ

ಒಂದೇ ಪೇಜ್‌ನಲ್ಲಿ ಆರು ಪೇಜ್‌ನಷ್ಟು ಮಾಹಿತಿ

ಸಾಮಾನ್ಯವಾಗಿ ಏನನ್ನೇ ಹುಡುಕಿದರೂ ಗೂಗಲ್‌ ಅದನ್ನು ಲಭ್ಯವಾಗಿಸುತ್ತದೆ. ಹಾಗೆಯೇ ನೀವು ಈ ಹೊಸ ಫೀಚರ್ಸ್‌ ಮೂಲಕ ಸರ್ಚ್‌ ಮಾಡಿದರೆ ಆರು ಪೇಜ್‌ಗಳಷ್ಟು ಮಾಹಿತಿಯನ್ನು ಒಂದೇ ಪೇಜ್‌ನಲ್ಲಿ ನೀಡುತ್ತದೆ. ಅದಾಗ್ಯೂ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದಾದರೆ ಮುಂದಿನ ಪೇಜ್‌ಗೆ ಹೋಗುವ ಅವಕಾಶ ಕಲ್ಪಿಸಿದೆ.

ಈ ಫೀಚರ್ಸ್‌ ಯಾಕೆ ?

ಈ ಫೀಚರ್ಸ್‌ ಯಾಕೆ ?

ಈಗಾಗಲೇ ಇದ್ದ ಫೀಚರ್ಸ್‌ ನಲ್ಲಿ ಕೆಲವು ಬಳಕೆದಾರರ ಬೇಸರವನ್ನು ಗೂಗಲ್‌ ಅರ್ಥ ಮಾಡಿಕೊಂಡಿದೆ. ಕೆಲವರು ಏನಾದರೂ ಸರ್ಚ್‌ ಮಾಡಿದಾದ ಮೊದಲ ಪುಟದಲ್ಲಿ ಲಭ್ಯವಾಗಲಿಲ್ಲ ಎಂದರೆ ಮುಂದಿನ ಪುಟಕ್ಕೆ ಹೋಗುವ ಮನಸ್ಸು ಮಾಡುವುದಿಲ್ಲ, ಬದಲಾಗಿ ಬೇರೆಯ ಪದ ಹಾಕಿ ಮಾಹಿತಿ ಪಡೆಯಲು ಮತ್ತೆ ಸರ್ಚ್‌ ಇಂಜಿನ್‌ ಕಡೆ ಮುಖ ಮಾಡುತ್ತಾರೆ. ಅದರಲ್ಲೂ ಎರಡನೇ ಪೇಜ್‌ ಲೋಡ್‌ ಆಗುವಾಗ ಆ ಲೋಡ್‌ ಪ್ರಕ್ರಿಯೆಯನ್ನೂ ಕೆಲವರು ಸಹಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಒಂದೆ ಬಾರಿಗೆ ಆರು ಪೇಜ್‌ನಷ್ಟು ಮಾಹಿತಿಯನ್ನು ನೀಡಲು ಗೂಗಲ್‌ ಮುಂದಾಗಿದೆ. ಇದು ಸರಿಯಾದ ಮಾಹಿತಿಯನ್ನು ತ್ವರಿತವಾಗಿ ಮತ್ತು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುತ್ತದೆ.

ಬಳಕೆದಾರರು ನಾಲ್ಕು ಪೇಜ್‌ ವರೆಗೆ ಮಾತ್ರ ಬರುತ್ತಿದ್ದರು..

ಬಳಕೆದಾರರು ನಾಲ್ಕು ಪೇಜ್‌ ವರೆಗೆ ಮಾತ್ರ ಬರುತ್ತಿದ್ದರು..

ಗೂಗಲ್‌ನಲ್ಲಿ ಮಾಹಿತಿಗಾಗಿ ಹುಡುಕಾಡುವಾಗ ಬಳಕೆದಾರರು ಸಾಮಾನ್ಯವಾಗಿ ನಾಲ್ಕು ಪೇಜ್‌ ವರೆಗೆ ಮಾತ್ರ ಓಪನ್‌ ಮಾಡುತ್ತಿದ್ದರಂತೆ. ಇದಕ್ಕಿಂತ ಮುಂದೆ ಹೋಗಲು ಬಯಸದೇ ಮತ್ತೆ ಹೊಸದಾಗಿ ಬೇರೆ ರೀತಿಯಲ್ಲಿ ಸರ್ಚ್‌ ಮಾಡಲು ಬಯಸುತ್ತಾರೆ ಎಂದು ಗೂಗಲ್‌ ಕಂಡುಕೊಂಡಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಒಂದೇ ಬಾರಿಗೆ ಆರು ಪೇಜ್‌ನಷ್ಟು ಮಾಹಿತಿಯನ್ನು ಲೋಡ್‌ ಮಾಡಲು ಗೂಗಲ್ ಮುಂದಾಗಿದೆ.

ಸಾಮಾನ್ಯವಾಗಿ ಸರ್ಚ್‌ ಇಂಜಿನ್‌ನಲ್ಲಿ ಏನನ್ನಾದರೂ ಸರ್ಚ್‌ ಮಾಡಿದಾಗ ಹೆಚ್ಚಿನ ಬ್ರ್ಯಾಂಡ್‌ಗಳು ಗೂಗಲ್‌ನ ಮೊದಲ ಪೇಜ್‌ನಲ್ಲೇ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತವೆ. ಅದರಂತೆ ಇಲ್ಲಿ ಕಾಣಿಸಿಕೊಳ್ಳುವ ಲಿಂಕ್ ಕ್ಲಿಕ್‌ಗಳು ನೀವು ಸ್ಕ್ರಾಲ್ ಮಾಡುವುದನ್ನು ಕಡಿಮೆಗೊಳಿಸುತ್ತದೆ. ಹಾಗೆಯೇ ಈ ಫೀಚರ್ಸ್‌ ಅನ್ನು ಕಾರ್ಯಗತಗೊಳಿಸಿದಾಗ ಮೊದಲ ಪೇಜ್‌ನಲ್ಲಿ ಬ್ರ್ಯಾಂಡ್‌ಗಳ ಸ್ಪರ್ಧೆಯು ಸ್ವಲ್ಪ ಕಡಿಮೆಯಾಗಬಹುದು ಎಂದು ತಿಳಿದುಬಂದಿದೆ.

ಈ ಸೇವೆ ಯಾವಾಗ ಮತ್ತು ಎಲ್ಲಿ ಲಭ್ಯ?

ಈ ಸೇವೆ ಯಾವಾಗ ಮತ್ತು ಎಲ್ಲಿ ಲಭ್ಯ?

ಪ್ರಾಯೋಗಿಕವಾಗಿ ಈ ಫೀಚರ್ಸ್‌ ಅನ್ನು ಡೆಸ್ಕ್‌ಟಾಪ್‌ಗೆ ಪರಿಚಯಿಸಲಾಗಿದ್ದು, ಅದರಲ್ಲೂ ಯುಎಸ್‌ ಬಳಕೆದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಇದನ್ನು ಪರಿಚಯಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಇಂಗ್ಲಿಷ್‌ ಅಕ್ಷರದಲ್ಲಿ ಹುಡುಕುವ ಪ್ರಕ್ರಿಯೆಯಲ್ಲಿ ಮಾತ್ರ ಈ ಫೀಚರ್ಸ್‌ ಸದ್ಯಕ್ಕೆ ಕೆಲಸ ಮಾಡುತ್ತಿದೆ.

Best Mobiles in India

Read more about:
English summary
Google Search brings continuous scrolling features to desktop.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X