ಗೂಗಲ್ ಹೇಳುವುದು ಸರಿಯಲ್ಲ: 'ಸೌಥ್ ಇಂಡಿಯನ್ ಮಸಲಾ' ಟೈಪ್ ಮಾಡಿದರೆ ಬರುವುದೇನು..? ಯಾಕೆ ಹೀಗೆ..?

Written By:

ದಿನ ಕಳೆದಂತೆ ಗೂಗಲ್ ಮೇಲಿನ ಅವಲಂಬನೆಯೂ ಅಧಿಕವಾಗುತ್ತಿದೆ. ಒಂದು ಸಣ್ಣ ವಸ್ತು ಬೇಕಿದ್ದರು ಗೂಗಲ್ ನಲ್ಲಿ ಹುಡುಕು, ಸಣ್ಣ ಮಾಹಿತಿ ಬೇಕಿದ್ದರೂ ಗೂಗಲ್ ಕೇಳು ಎನ್ನುವ ಪ್ರವೃತ್ತಿಯೂ ಹೆಚ್ಚುತ್ತಿದೆ. ನಮ್ಮೆಲ್ಲ ಪ್ರಶ್ನೆಗಳಿಗೆ ಗೂಗಲ್ ಉತ್ತರ ಸರಿಯಾಗಿ ನೀಡಲಿದೆ ಎಂಬ ಭ್ರಮೆಯೂ ನಮ್ಮ ಹುಟ್ಟಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ.

ಗೂಗಲ್ ಹೇಳುವುದು ಸರಿಯಲ್ಲ: 'ಸೌಥ್ ಇಂಡಿಯನ್ ಮಸಲಾ' ಟೈಪ್ ಮಾಡಿದರೆ ಬರುವುದೇನು.

ಓದಿರಿ: ಏನೀದು ಜಿಯೋ GST ಕಿಟ್: ವ್ಯಾಪಾರಿಗಳಿಗೆ ಇದರಿಂದ ಏನು ಲಾಭ.?!

ಕೆಲವೊಮ್ಮೆ ಗೂಗಲ್ ಹೇಳುವುದೇಲ್ಲವೂ ಸರಿಯಿಲ್ಲ ಎಂದು ಹೇಳುವುದಕ್ಕೆ ಸಾವಿರಾರು ಉದಾಹರಣೆಯನ್ನು ನಾವು ಕಾಣಬಹುದಾಗಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆಗಳನ್ನು ಈ ಕೆಳಗೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಗೂಗಲ್ ಹೇಳುವುದೇಲ್ಲವೂ ಸರಿಯಲ್ಲ ಎನ್ನುವುದು, ಅಲ್ಲದೇ ಇದು ಯಾಕೆ ಹೀಗೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಳ್ಳಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
south Indian masala ಎಂದರೆ ಬರುವುದೇನು..?

south Indian masala ಎಂದರೆ ಬರುವುದೇನು..?

ನೀವು ಅಡುಗೆ ತಯಾರಿಸುವ ಸಂದರ್ಭದಲ್ಲಿ ಗೂಗಲ್ ನಲ್ಲಿ ಹೋಗಿ ದಕ್ಷಿಣ ಭಾರತದ ರುಚಿಯನ್ನು ಹುಡುಕುವ ಸಲುವಾಗಿ south Indian masala ಎಂದು ಟೈಪ್ ಮಾಡಿದರೆ ನಿಮಗೆ ಅಲ್ಲಿ ಬರುವ ಮಾಹಿತಿಯೇ ಬೇರೆ, ದಕ್ಷಿಣ ಭಾರತದ ನಟಿ ಮಣಿಯರ ಹಾಟ್ ಫೋಟೋ ಗಳು ಕಾಣಿಸಿಕೊಳ್ಳಲಿದೆ.

north indian masala ಟೈಪ್ ಮಾಡಿರೆ..?

north indian masala ಟೈಪ್ ಮಾಡಿರೆ..?

ಇದೇ ಮಾದರಿಯಲ್ಲಿ ನೀವು north indian masala ಎಂದು ಟೈಪ್ ಮಾಡಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದೆ ನಿಮಗೆ ಉತ್ತರ ಭಾತರದ ರುಚಿಕರ ಖಾದ್ಯಗಳ ಚಿತ್ರಗಳು ಸೇರಿದಂತೆ ಅವುಗಳ ರೆಸಿಪಿ ಬರಲಿದೆ. ಇದನ್ನು ನೋಡಿದರೆ ಯಾಕೆ ಹೀಗೆ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳಲಿದೆ.

ಯಾಕೆ ಹೀಗೆ..?

ಯಾಕೆ ಹೀಗೆ..?

ನಾವು ಇಂಟರ್ನೆಟ್ ನಲ್ಲಿ ಯಾವುದೇ ಮಾಹಿತಿಯನ್ನು ಆಪ್ ಲೋಡ್ ಮಾಡುವ ಸಂದರ್ಭದಲ್ಲಿ ನಾವು ನೀಡುವ ಕೀ ವರ್ಡ್ ಗಳ ಆಧಾರದ ಮೇಲೆ ಗೂಗಲ್ ಸರ್ಚ್ ಇಂಜಿನ್ ಕಾರ್ಯನಿರ್ವಹಿಸುತ್ತದೆ. ಕೀಡಿಗೇಡಿಗಳು ನಟಿಯರ ಚಿತ್ರಗಳನ್ನು ಆಪ್ ಲೋಡ್ ಮಾಡುವ ಸಂದರ್ಭದಲ್ಲಿ south Indian masala ಎನ್ನುವ ಟ್ಯಾಗ್ ಗಳನ್ನು ನೀಡಿರುವ ಕಾರಣ ಗೂಗಲ್ ನಲ್ಲಿ ಆ ಮಾದರಿಯ ಚಿತ್ರಗಳು ತೋರಿಸುತ್ತಿದೆ.

ಗೂಗಲ್ ಸರಿ ಮಾಡಬಹುದು:

ಗೂಗಲ್ ಸರಿ ಮಾಡಬಹುದು:

ಇದನ್ನು ಮನಸು ಮಾಡಿದರೆ ಗೂಗಲ್ ಸರಿ ಮಾಡಬಹುದಾಗಿದೆ. ಈಗಾಗಲೇ ಹಲವು ಮಂದಿ ಈ ಮಾದರಿಯಲ್ಲಿ ಬರುವಂತಹ ಮಾಹಿತಿಯ ಸ್ಕ್ರಿನ್ ಶಾಟ್ ತೆಗೆದು ಗೂಗಲ್ ತಲುಪಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ನಿಮಗೂ ಈ ರೀತಿಯ ಅನುಭವದಲ್ಲಿ ಅದನ್ನು ಗೂಗಲ್ ಗೆ ತಿಳಿಸುವ ಕಾರ್ಯವನ್ನು ಮಾಡಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Google shows women in skimpy clothes in the image search when searched for "South Indian Masala". And if that is not odd enough. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot