ಭಾರತದ 400 ರೈಲು ನಿಲ್ದಾಣಗಳಲ್ಲಿ ಶೀಘ್ರವೇ ಉಚಿತ ವೈಫೈ

By Suneel
|

ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಹೆಚ್ಚು ಜನರಿಗೆ ತಲುಪಿಸುವ ಸಲುವಾಗಿ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಯಾಣ ಸೇವೆಯಲ್ಲೂ ಜನರು ಉಚಿತ ಇಂಟರ್ನೆಟ್ ಅನ್ನು ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುತ್ತಿದ್ದು ಜನರು ಅಂತರ್ಜಾಲ ತಾಣಕ್ಕೆ ಇನ್ನಷ್ಟು ಹತ್ತಿರವಾಗಿ ಮಾಹಿತಿಯನ್ನು ಪಡೆದುಕೊಳ್ಳಲಿ ಎಂಬುದು ಇದರ ಮೂಲ ಉದ್ದೇಶವಾಗಿದೆ.

ಓದಿರಿ: ಹ್ಯಾಕರ್‌ಗಳ ಕಪಿಮುಷ್ಠಿಯಿಂದ ನಿಮ್ಮ ಖಾತೆಯ ಸಂರಕ್ಷಣೆ ಹೇಗೆ?

ಇದೀಗ ಕೇಂದ್ರ ಸರಕಾರವು ಹೊಸ ಯೋಜನೆಯನ್ನು ಕೈಗೊಳ್ಳಲಿದ್ದು ಆ ಸಲುವಾಗಿ 400 ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫೈ ಸಂಪರ್ಕವನ್ನು ಪ್ರಯಾಣಿಕರಿಗೆ ಒದಿಸುವ ನಿಟ್ಟಿನಲ್ಲಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡಿದ್ದೇವೆ.

ಉಚಿತ ವೈಫೈ ನೆಟ್‌ವರ್ಕ್

ಉಚಿತ ವೈಫೈ ನೆಟ್‌ವರ್ಕ್

ಗೂಗಲ್ ಫೈಬರ್ ಭಾರತಕ್ಕೆ ರಸ್ತೆಗಳನ್ನು ನಿರ್ಮಿಸಲಿದೆ. ಭಾರತ ರೈಲ್ವೆ ಸೇವೆ ಮತ್ತು ಗೂಗಲ್ ಫೋರ್ಸ್‌ನೊಂದಿಗೆ ಒಗ್ಗೂಡಿ ದೇಶದ 400 ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫೈ ನೆಟ್‌ವರ್ಕ್ ಅನ್ನು ತರಲು ಮುಂದಾಗಿವೆ.

34 ನಿಮಿಷಗಳಿಗೆ ಉಚಿತ ಇಂಟರ್ನೆಟ್

34 ನಿಮಿಷಗಳಿಗೆ ಉಚಿತ ಇಂಟರ್ನೆಟ್

ವರದಿಗಳ ಪ್ರಕಾರ, ಮೊದಲ 34 ನಿಮಿಷಗಳಿಗೆ ಬಳಕೆದಾರರನ್ನು ಉಚಿತ ಇಂಟರ್ನೆಟ್ ಬಳಸಲು ಅನುಮತಿಯನ್ನು ನೀಡಲಿದ್ದು ನಂತರ ಇಂಟರ್ನೆಟ್ ವೇಗ ಕುಗ್ಗಲಿದೆ.

ಪ್ರಾಜೆಕ್ಟ್ ನೀಲಗಿರಿ

ಪ್ರಾಜೆಕ್ಟ್ ನೀಲಗಿರಿ

ಈ ಸೇವೆಯು ಪ್ರಾಜೆಕ್ಟ್ ನೀಲಗಿರಿ ಎಂದಾಗಿದ್ದು, ಮೊದಲ ಹಂತವೆಂಬಂತೆ ನಾಲ್ಕು ತಿಂಗಳ ಅವಧಿಯಲ್ಲಿ ವೈಫೈ ಹಾಟ್‌ಸ್ಪಾಟ್‌ಗಳನ್ನು 400 ನಿಲ್ದಾಣಗಳಲ್ಲಿ ದೊರೆಯಲಿದೆ.

ಗೂಗಲ್‌ ಫೈಬರ್‌ ತಂತ್ರಜ್ಞಾನ

ಗೂಗಲ್‌ ಫೈಬರ್‌ ತಂತ್ರಜ್ಞಾನ

ಈ ಯೋಜನೆಯ ಹಂತ ಇನ್ನು ಆರಂಭ ಹಂತದಲ್ಲಿದ್ದು, ಗೂಗಲ್‌ ಫೈಬರ್‌ ತಂತ್ರಜ್ಞಾನವನ್ನು ಅವಲಂಬಿಸಿದೆ.

ಒನ್ ಟೈಮ್ ಪಾಸ್‌ವರ್ಡ್

ಒನ್ ಟೈಮ್ ಪಾಸ್‌ವರ್ಡ್

ಎಸ್‌ಎಮ್ಎಸ್‌ಗೆ ಕಳುಹಿಸಲಾದ ಒನ್ ಟೈಮ್ ಪಾಸ್‌ವರ್ಡ್ ಮೂಲಕ ಮೊಬೈಲ್ ಸಂಖ್ಯೆ ಪರಿಶೀಲನೆಯನ್ನು ಮಾಡಿದ ನಂತರ ವೈಫೈ ಸಂಪರ್ಕವನ್ನು ಉಚಿತವಾಗಿ ದೊರೆಯುವಂತೆ ಮಾಡಲಾಗುತ್ತದೆ ಎಂದು ಐಆರ್‌ಸಿಟಿಸಿ ವೆಬ್‌ಸೈಟ್ ತಿಳಿಸಿದೆ.

ಸ್ಯಾಟಲೈಟ್ ಕಮ್ಯುನಿಕೇಶನ್ ತಂತ್ರಜ್ಞಾನ

ಸ್ಯಾಟಲೈಟ್ ಕಮ್ಯುನಿಕೇಶನ್ ತಂತ್ರಜ್ಞಾನ

ಸ್ಯಾಟಲೈಟ್ ಕಮ್ಯುನಿಕೇಶನ್ ತಂತ್ರಜ್ಞಾನವನ್ನು ಬಳಸಿಕೊಂಡು, ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ಆಯ್ದ ಚಲಿಸುವ ರೈಲುಗಳಲ್ಲಿ ವೈಫೈ ಸಂಪರ್ಕವನ್ನು ಭಾರತೀಯ ರೈಲ್ವೇ ಪ್ರಸ್ತುತ ಒದಗಿಸುತ್ತಿದೆ.

ಚಲಿಸುವ ರೈಲು

ಚಲಿಸುವ ರೈಲು

ಎರಡನೇ ಹಂತದಲ್ಲಿ ಗೂಗಲ್‌ ಭಾರತದ ರೈಲು ಮಂಡಳಿಯಿಂದ ಚಲಿಸುವ ರೈಲುಗಳಿಗೆ ವೈಫೈ ಸೇವೆ ನೀಡಲಿದೆ.

ಯೋಜನೆ

ಯೋಜನೆ

ಯೋಜನೆಯನ್ನು ನಿಖರವಾಗಿ ಯಾವ ದಿನಾಂಕ ಮತ್ತು ಯಾವ ಸಮಯದಲ್ಲಿ ಕೈಗೊಳ್ಳಲಾಗುತ್ತದೆ ಎಂಬುದನ್ನು ಕುರಿತ ಯಾವುದೇ ಮಾಹಿತಿ ಇದುವರೆಗೆ ಲಭ್ಯವಾಗಿಲ್ಲ.

Best Mobiles in India

English summary
Google Fiber might finally be making in-roads to India. Indian Railways and Google have joined forces to create a network of free Wi-Fi across 400 railway stations across the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X