ಅಗತ್ಯವಾದ ಆಡಿಯೋ ಫೀಚರ್ಸ್‌ ಲಾಂಚ್‌ಗೆ ಮುಂದಾದ ಗೂಗಲ್‌; ಏನದು? ಹೇಗೆ ಕೆಲಸ ಮಾಡುತ್ತೆ?

|

ಗೂಗಲ್‌ ತನ್ನ ಎಲ್ಲಾ ಸೇವೆಗಳಲ್ಲೂ ಭಿನ್ನ ವಿಭಿನ್ನ ಫೀಚರ್ಸ್‌ಗಳನ್ನು ಬಳಕೆದಾರರಿಗೆ ನೀಡುತ್ತಾ ಬರುತ್ತಿದೆ. ಅದರಲ್ಲೂ ಗೂಗಲ್‌ನ ಅಡಿಯಲ್ಲಿ ಕೆಲಸ ಮಾಡುವ ಹಲವಾರು ಆಪ್‌ಗಳು ಆಕರ್ಷಕ ಫೀಚರ್ಸ್‌ ಜೊತೆಗೆ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿವೆ. ಹಾಗೆಯೇ ನಿರಂತರವಾಗಿ ಅಪ್‌ಡೇಟ್‌ ಪ್ರಕ್ರಿಯೆಯಲ್ಲಿ ತೊಡಗಿರುವ ಗೂಗಲ್‌, ಆಂಡ್ರಾಯ್ಡ್‌ 13 ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ.

ಗೂಗಲ್‌

ಹೌದು, ಗೂಗಲ್‌ ಆಂಡ್ರಾಯ್ಡ್‌ 13 ಗೆ ಹೊಸ ಫೀಚರ್ಸ್‌ ಪರಿಚಯಿಸುತ್ತಿದ್ದು, ಈ ಸೌಲಭ್ಯದ ಮೂಲಕ ಯಾವ ಡಿವೈಸ್‌ ಅನ್ನು ಬಳಕೆ ಮಾಡಲಾಗುತ್ತಿದೆಯೋ ಅದರ ಆಧಾರ ಮೇಲೆ ಆಡಿಯೋ ಔಟ್‌ಪುಟ್‌ ಅನ್ನು ಬದಲಾಯಿಸಲು ಅನುಕೂಲ ಮಾಡಿಕೊಡಲಾಗಿದೆ. ಹಾಗಿದ್ರೆ, ಈ ಆಡಿಯೋ ಔಟ್‌ಪುಟ್‌ ಎಂದರೇನು?. ಇದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಫೋನ್

ಈ ಹೊಸ ಸೌಲಭ್ಯದಲ್ಲಿ ಫೋನ್, ಸ್ಪೀಕರ್‌ಗಳು, ಹೆಡ್‌ಫೋನ್‌ಗಳು, ಟಿವಿ, ಕಾರು ಮತ್ತು ಇನ್ನಿತರೆ ಹೆಚ್ಚಿನವುಗಳನ್ನು ಒಳಗೊಂಡಂತೆ ಹತ್ತಿರದ ಔಟ್‌ಪುಟ್ ಡಿವೈಸ್‌ಗೆ ಬದಲಾವಣೆ ತರಲು ಬಳಕೆದಾರರು ತಮ್ಮ ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳಲ್ಲಿ ನೋಟಿಫಿಕೇಶನ್ ಪಡೆಯುತ್ತಾರೆ.

ಗೂಗಲ್‌ ಹೇಳಿದ್ದೇನು?

ಗೂಗಲ್‌ ಹೇಳಿದ್ದೇನು?

ನಿಮ್ಮ ಆಡಿಯೊ ಕಂಟೆಂಟ್‌ ಸಹ ದಿನವಿಡೀ ನಿಮ್ಮೊಂದಿಗೆ ಚಲಿಸಲು ನಾವು ಒಂದು ಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಿಮ್ಮ ಡಿವೈಸ್‌ಗಳಲ್ಲಿ ನೋಟಿಫಿಕೇಶನ್ ಮೂಲಕ, ನೀವು ಕಾರಿನಲ್ಲಿ ಪಾಡ್‌ಕಾಸ್ಟ್ ಅನ್ನು ಆಲಿಸಲು ಟ್ಯಾಪ್ ಮಾಡಬಹುದಾಗಿದೆ. ನಿಮ್ಮ ಫೋನ್ ಮತ್ತು ಹೆಡ್‌ಫೋನ್‌ಗಳಲ್ಲಿ ಆರಂಭಿಸಿ ಮನೆಗೆ ತಲುಪಿದ ನಂತರ ನಿಮ್ಮ ಟಿವಿಯಲ್ಲಿ ಅಂತ್ಯಗೊಳಿಸಿ ಎಂದು ಗೂಗಲ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಮಾಹಿತಿ ಉಲ್ಲೇಖಿಸಿದೆ.

ಭೌತಿಕ

ನೀವು ನಿಮ್ಮ ಭೌತಿಕ ಸ್ಥಳವನ್ನು ತಲುಪಿದಾಗ ನಿಮ್ಮ ಫೋನ್ ಅಥವಾ ಇತರ ಡಿವೈಸ್‌ಗಳಲ್ಲಿ ನೀವು ಆಡಿಯೊವನ್ನು ಹತ್ತಿರದ ಡಿವೈಸ್‌ಗೆ ವರ್ಗಾಯಿಸಲು ಬಯಸುತ್ತೀರಾ ಎಂದು ಕೇಳುವ ಈ ಮೀಡಿಯಾ ನೋಟಿಫಿಕೇಶನ್‌ ಅನ್ನು ನೀವು ನೋಡುತ್ತೀರಿ. ಇದಕ್ಕಾಗಿ ಸ್ಪಾಟಿಫೈ ಹಾಗೂ ಯೂಟ್ಯೂಬ್ ಮ್ಯೂಸಿಕ್‌ ಜೊತೆ ಕೆಲಸ ಮಾಡಲಾಗುತ್ತದೆ ಎಂದು ಗೂಗಲ್‌ ಮಾಹಿತಿ ನೀಡಿದೆ.

ಈ ಆಡಿಯೊ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಆಡಿಯೊ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ಆಂಡ್ರಾಯ್ಡ್ 13 ನಲ್ಲಿ ಈ ಫೀಚರ್ಸ್‌ ಲಭ್ಯವಾದ ನಂತರ, ಬಳಕೆದಾರರು ತಮ್ಮ ಸ್ಥಳವನ್ನು ಆಧರಿಸಿ ಆಡಿಯೊ ಔಟ್‌ಪುಟ್ ಡಿವೈಸ್‌ ಅನ್ನು ಬದಲಾಯಿಸಲು ಸುಲಭವಾಗುತ್ತದೆ. ಉದಾಹರಣೆಗೆ, ನಿಮ್ಮ ಮಲಗುವ ಕೋಣೆಯ ಸ್ಪೀಕರ್‌ನಲ್ಲಿ ನೀವು ಸಂಗೀತ ಅಥವಾ ಪಾಡ್‌ಕಾಸ್ಟ್ ಅನ್ನು ಕೇಳುತ್ತಿದ್ದರೆ ಮತ್ತು ನೀವು ಇನ್ನೊಂದು ಸ್ಪೀಕರ್ ಹೊಂದಿರುವ ಸಾಮಾನ್ಯ ಕೋಣೆಗೆ ಹೋದರೆ. ಕಾಮನ್ ರೂಮ್‌ನಲ್ಲಿರುವ ಸ್ಪೀಕರ್‌ನಲ್ಲಿ ನೀವು ಸಂಗೀತವನ್ನು ಕೇಳಲು ಬಯಸುತ್ತೀರಾ ಎಂದು ಕೇಳುವ ನೋಟಿಫಿಕೇಶನ್‌ ಅನ್ನು ಫೋನ್ ಪಡೆಯುತ್ತದೆ. ಅದಕ್ಕೆ ನೀವು ಒಪ್ಪಿದರೆ ಸಾಮಾನ್ಯ ಕೋಣೆಯಲ್ಲಿ ಅದೇ ಮ್ಯೂಸಿಕ್‌ ಪ್ಲೇ ಆಗಲು ಆರಂಭ ಆಗುತ್ತದೆ.

ಕ್ರಾಸ್

ಈ ಫೀಚರ್ಸ್‌ ಕಳೆದ ವರ್ಷ ಬಿಡುಗಡೆ ಮಾಡಿದ ಕ್ರಾಸ್-ಡಿವೈಸ್ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕಿಟ್ (SDK) ಅನ್ನು ಬಳಕೆ ಮಾಡಿಕೊಂಡು ಕೆಲಸ ಮಾಡುತ್ತದೆ ಎಂದು ಗೂಗಲ್ ತಿಳಿಸಿದ್ದು, ತಂತ್ರಜ್ಞಾನವು ಬ್ಲೂಟೂತ್ ಲೋ ಎನರ್ಜಿ, ವೈ-ಫೈ ಮತ್ತು ಅಲ್ಟ್ರಾ-ವೈಡ್‌ಬ್ಯಾಂಡ್ ಅನ್ನು ಸಹ ಬಳಕೆ ಮಾಡುತ್ತದೆ. ಹಾಗೆಯೇ ಯಾವ ಆಡಿಯೊ ಡಿವೈಸ್‌ಗಳು ಭೌತಿಕವಾಗಿ ಬಳಕೆದಾರರ ಬಳಿ ಇವೆ ಎಂಬುದನ್ನು ಪತ್ತೆಹಚ್ಚಲು ಇದು ಅನುಕೂಲ ಮಾಡಿಕೊಡಲಾಗಿದೆ ಎಂದೂ ಸಹ ತಿಳಿಸಿದೆ.

ಸ್ಪೀಕರ್‌

ಇದರೊಂದಿಗೆ ಬಳಕೆದಾರರು ಕರೆಗೆ ಉತ್ತರಿಸಿದರೆ ತಂತ್ರಜ್ಞಾನವು ಬ್ಲೂಟೂತ್ ಸ್ಪೀಕರ್‌ನಿಂದ ಆಡಿಯೊ ಪ್ಲೇಬ್ಯಾಕ್ ಅನ್ನು ಮತ್ತೆ ಸ್ಮಾರ್ಟ್‌ಫೋನ್‌ಗೆ ಬದಲಾಯಿಸಿಕೊಳ್ಳುವ ಸೌಲಭ್ಯವನ್ನೂ ನೀಡುತ್ತದೆ. ಆಂಡ್ರಾಯ್ಡ್‌ 13 ಫೋನ್‌ನ ಲಾಕ್ ಸ್ಕ್ರೀನ್ ಮತ್ತು ನೋಟಿಫಿಕೇಶನ್‌ ವಿಭಾಗದಲ್ಲಿ ರಿಫ್ರೆಶ್ ಮಾಡಿದ ಮೀಡಿಯಾ ಪ್ಲೇಯರ್ ಅನ್ನು ಪಡೆದುಕೊಂಡಿದ್ದು, ಇದು ಕಂಟೆಂಟ್‌ ಅನ್ನು ಪ್ಲೇ ಮಾಡಲು ಯಾವ ಹೊಂದಾಣಿಕೆಯ ಬ್ಲೂಟೂತ್‌ ಅಥವಾ ಕ್ರೋಮಾಕಾಸ್ಟ್‌ ಇನ್‌ಬಿಲ್ಟ್‌ ಡಿವೈಸ್‌ಗಳನ್ನು ತ್ವರಿತವಾಗಿ ಆಯ್ಕೆ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.

Best Mobiles in India

English summary
Google to bring this audio feature in Android 13.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X