ಗೂಗಲ್, ವಾಟ್ಸಾಪ್, ಫೇಸ್‌ಬುಕ್‌ ಬಳಕೆದಾರರೇ ಎಚ್ಚರ ವಹಿಸಿ

By Suneel
|

ಸ್ಮಾರ್ಟ್‌ಫೋನ್‌ ಬಳಸುವವರೆಲ್ಲಾ ಇಂದು ವಾಟ್ಸಾಪ್, ಫೇಸ್‌ಬುಕ್‌ ನಂತಹ ಹಲವು ಸಾಮಾಜಿಕ ಜಾಲತಾಣಗಳನ್ನು ಎಡೆಬಿಡದೆ ದಿನನಿತ್ಯ ಬಳಸುತ್ತಿದ್ದಾರೆ. ಅವುಗಳನ್ನು ಬಳಸುವ ನಾವೇ ಸ್ಮಾರ್ಟ್‌ ಎಂದು ತಿಳಿದ್ದಿದ್ದಾರೆ. ವಾಟ್ಸಾಪ್, ಫೇಸ್‌ಬುಕ್‌ ಬಳಸುವವರಿಗೆಲ್ಲಾ ಗಿಜ್‌ಬಾಟ್‌ ಒಂದು ಅಘಾತಕಾರಿ ಮಾಹಿತಿಯನ್ನು ನೀಡುತ್ತಿದೆ.

ಓದಿರಿ: ಸಮುದ್ರದ ನೀರನ್ನು ಶುದ್ಧ ಕುಡಿಯುವ ನೀರಾಗಿಸುವ ಟೆಕ್‌

ಗೂಗಲ್‌, ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ಗಳು ತಮ್ಮ ಬಳಕೆದಾರರ ವಯಕ್ತಿಕ ಮಾಹಿತಿಗಳ ಮೇಲೆ ಬೇಹುಗಾರಿಕಾ ಕ್ರಮ ಕೈಗೊಂಡಿದ್ದು, ಎಲ್ಲರ ಮಾಹಿತಿ ಕದ್ದು, ಖಾಸಗಿ ಮಾಹಿತಿಯನ್ನು ಉಲ್ಲಂಘಿಸಿವೆ. ಇದರ ಬಗ್ಗೆ ಸೈಬರ್‌ಸೆಕ್ಯೂರಿಟಿ ಸಂಸ್ಥೆ Avast ಮಾಹಿತಿ ನೀಡಿದೆ. ಗೂಗಲ್‌, ವಾಟ್ಸಾಪ್‌, ಫೇಸ್‌ಬುಕ್‌ ಬಳಕೆದಾರರು ತಿಳಿಯಲೇ ಬೇಕಾದ ವಿಶೇಷ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.

Avast- ಸೈಬರ್‌ಸೆಕ್ಯೂರಿಟಿ ಸಂಸ್ಥೆ

Avast- ಸೈಬರ್‌ಸೆಕ್ಯೂರಿಟಿ ಸಂಸ್ಥೆ

ಗೂಗಲ್‌, ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಜಾಲತಾಣಗಳು ತಮ್ಮ ಬಳಕೆದಾರರ ಮೇಲೆ ಗೂಢಚಾರ ಕಾರ್ಯ ನಿರ್ವಹಿಸುತ್ತಿವೆ ಎಂದಿದೆ ಸೈಬರ್‌ಸೆಕ್ಯೂರಿಟಿ ಸಂಸ್ಥೆ Avast.

ಗೂಢಚಾರವಹಿಸಿರುವ ಉದ್ದೇಶ

ಗೂಢಚಾರವಹಿಸಿರುವ ಉದ್ದೇಶ

ಗೂಗಲ್‌, ವಾಟ್ಸಾಪ್‌, ಫೇಸ್‌ಬುಕ್‌ ತಾಣಗಳು ತಮ್ಮ ಬಳಕೆದಾರರ ಮೇಲೆ ಬೇಹುಗಾರಿಕೆ ನೆಡೆಸುವುದರಿಂದ ಬಳಕೆದಾರರ ಆಸಕ್ತಿಗಳನ್ನು ತಿಳಿದು ಅವರ ಆಸಕ್ತಿಗಳಿಗೆ ಸಂಬಂಧಿಸಿದಂತೆ ಜಾಹಿರಾತು ನೀಡಲು ಉದ್ದೇಶಿಸಿವೆ ಎಂದಿದೆ Avast. ಆದರೆ, ಬಳಕೆದಾರರು ಎಚ್ಚರ ವಹಿಸಿದ್ದಾರೆ ಎಂದಿದೆ.

ಗೂಗಲ್‌

ಗೂಗಲ್‌

'ಗೂಗಲ್‌ ಜಾಹಿರಾತು ಕಂಪನಿ. ಗೂಗಲ್‌ ಆದಾಯ ಮೂಲ ಜಾಹಿರಾತು. ಬಳಕೆದಾರರ ಮೇಲೆ ಬೇಹುಗಾರಿಕೆ ನೆಡೆಸುತ್ತಿದೆ. ಬಳಕೆದಾರರ ಆಸಕ್ತ ವಿಷಯಗಳನ್ನು ತಿಳಿಯುತ್ತಿದೆ. ಈ ಮೂಲಕ ಅವರ ವ್ಯವಹಾರಕ್ಕೆ ಸಂಬಂಧಿಸಿದ ಜಾಹಿರಾತುಗಳ ಸೇವೆ ನೀಡುತ್ತಿದೆ.ಆದರೆ ಈ ಚಟುವಟಿಕೆಗೆ ಬಳಕೆದಾರರಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಬಳಕೆದಾರರು ಎಚ್ಚರ ವಹಿಸಿದ್ದಾರೆ', ಎಂದು Avast ಸಿಇಓ ವಿನ್ಸೆಂಟ್‌ ಸ್ಟೆಕ್ಲರ್‌ ಹೇಳಿದ್ದಾರೆ.

ಸಿಇಓ, ವಿನ್ಸೆಂಟ್‌ ಸ್ಟೆಕ್ಲರ್‌ ಹೇಳಿದ್ದು

ಸಿಇಓ, ವಿನ್ಸೆಂಟ್‌ ಸ್ಟೆಕ್ಲರ್‌ ಹೇಳಿದ್ದು

ಸೈಬರ್‌ಸೆಕ್ಯೂರಿಟಿ ಘಟನೆಗಳು ಮತ್ತು ಮೊಬೈಲ್‌ ಸೆಕ್ಯೂರಿಟಿ ತಂತ್ರಾಂಶಗಳ ಕಳ್ಳತನ ವಿರೋಧಿ ಸಮಸ್ಯೆಗಳನ್ನು ಬಿಡುಗಡೆ ಮಾಡಿರುವ Avast ಸಂಸ್ಥೆಯ ಪ್ರಮುಖ ಅಂಶಗಳ ಆಧಾರದ ಮೇಲೆ ಹೀಗೆ ಹೇಳಿದ್ದಾರೆ.

ವಾಟ್ಸಾಪ್‌

ವಾಟ್ಸಾಪ್‌

ವಾಟ್ಸಾಪ್‌ ಹೆಚ್ಚಿನದಾಗಿ ತನ್ನ ಬಳಕೆದಾರರ ವಯಕ್ತಿಕ ಮಾಹಿತಿಯನ್ನು ಉಲ್ಲಂಘನೆ ಮಾಡಿದೆ.

ವಾಟ್ಸಾಪ್‌ ಸಂವಾದ ಆಧಾರದಲ್ಲಿ, ಫೇಸ್‌ಬುಕ್‌ನಲ್ಲಿ ಜಾಹಿರಾತು ನೀಡುತ್ತಿದೆ.

ವಾಟ್ಸಾಪ್‌ ಸಂವಾದ ಆಧಾರದಲ್ಲಿ, ಫೇಸ್‌ಬುಕ್‌ನಲ್ಲಿ ಜಾಹಿರಾತು ನೀಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಮತ್ತು ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಲು ಆಗುವುದಿಲ್ಲ. ಆದರೆ ವಾಟ್ಸಾಪ್‌ನಲ್ಲಿ ಇದು ಸಾಧ್ಯ. ವಾಟ್ಸಾಪ್ ಫೇಸ್‌ಬುಕ್‌ ತಾಣಕ್ಕೆ ಮಾಹಿತಿ ಸಂಗ್ರಹಿಸಿ ಜಾಹಿರಾತು ನೀಡಲು ಸಹಕರಿಸುತ್ತಿದೆ.

ಗೂಗಲ್‌ ಪ್ರತಿಕ್ರಿಯೆ

ಗೂಗಲ್‌ ಪ್ರತಿಕ್ರಿಯೆ

ಇದರ ಬಗ್ಗೆ ಗೂಗಲ್‌ ನಲ್ಲಿ ಪ್ರತಿಕ್ರಿಯೆ ಕೇಳಿದಾಗ ಗೂಗಲ್‌ ಸ್ಫೋಕ್‌ಪರ್ಸನ್‌ 'ಪಾಲಿಸಿ ಪ್ರಕಾರ, ನಿರ್ದಿಷ್ಟ ವರದಿಯನ್ನು ನೋಡುವುದಕ್ಕಿಂತ ಮುನ್ನ ಇದರ ಬಗ್ಗೆ ನಾವು ಕಾಮೆಂಟ್‌ ನೀಡುವುದಿಲ್ಲ' ಎಂದಿದ್ದಾರೆ.

ಗೂಗಲ್‌ ಪಾಲಿಸಿ ಪೇಜ್‌ ಹೇಳಿಕೆ

ಗೂಗಲ್‌ ಪಾಲಿಸಿ ಪೇಜ್‌ ಹೇಳಿಕೆ

''ನೀವು ಯಾವಾಗ ಗೂಗಲ್‌ ಸೇವೆ ಪಡೆಯುತ್ತಿರೋ, ನಿಮ್ಮ ಮಾಹಿತಿಗೆ ಅನುಗುಣವಾಗಿ ನಮ್ಮನ್ನು ನಂಬಿ. ನೀವು ನೀಡಿದ ಮಾಹಿತಿಗೆ ಜಿ-ಮೇಲ್‌, ಮ್ಯಾಪ್ಸ್‌, ನಂತಹ ಸರ್ಚ್‌ ಸೇವೆ ಒದಗಿಸುತ್ತೇವೆ. ಈ ಡಾಟಾ ನಮಗೆ ಜಾಹಿರಾತು ನೀಡಲು ಸಹಕರಿಸುತ್ತದೆ ಹಾಗೂ ಉಚಿತ ಜಾಹಿರಾತನ್ನು ಪ್ರತಿಯೊಬ್ಬರಿಗು ನಾವು ನೀಡುತ್ತೇವೆ.'

ಫೇಸ್‌ಬುಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಫೇಸ್‌ಬುಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಫೇಸ್‌ಬುಕ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 ಸ್ಟೆಕ್ಲರ್‌ ಬಳಕೆದಾರರ ಕುರಿತು ಹೇಳಿದ್ದೇನು?

ಸ್ಟೆಕ್ಲರ್‌ ಬಳಕೆದಾರರ ಕುರಿತು ಹೇಳಿದ್ದೇನು?

ಬಳಕೆದಾರರು ಸಹ ತಮ್ಮ ಮೊಬೈಲ್‌ಗಳಲ್ಲಿ ಬಳಸುವ ಅಪ್ಲಿಕೇಶನ್‌ಗಳಿಗೆ ತಮ್ಮ ವಯಕ್ತಿಕ ಮಾಹಿತಿ ಮತ್ತು ಇತರೆ ಸಂಪರ್ಕದವರ ಮಾಹಿತಿ ಶೇರ್ ಮಾಡುವುದರ ಮೂಲಕ ವಯಕ್ತಿಕ ಮಾಹಿತಿ ಉಲ್ಲಂಘನೆ ಆಗುತ್ತಿದೆ ಎಂದಿದ್ದಾರೆ.

ನಿಮ್ಮ ಸ್ನೇಹಿತರ ಸಂಪರ್ಕ ಮಾಹಿತಿ ನೀಡುವ ಅಧಿಕಾರ ಇದೆಯೇ ?

ನಿಮ್ಮ ಸ್ನೇಹಿತರ ಸಂಪರ್ಕ ಮಾಹಿತಿ ನೀಡುವ ಅಧಿಕಾರ ಇದೆಯೇ ?

ವಾಟ್ಸಾಪ್‌ ಬಳಸುವ ಮೂಲಕ ನಿಮ್ಮ ಎಲ್ಲಾ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಸಂಪರ್ಕ ಮಾಹಿತಿಯನ್ನು ಫೇಸ್‌ಬುಕ್‌ಗೆ ನೀಡುತ್ತಿದ್ದೀರಿ, ನಿಮಗೆ ಈ ಅಧಿಕಾರ ಇದೆಯೇ ಎಂದು ವಿನ್ಸೆಂಟ್‌ ಸ್ಟೆಕ್ಲರ್‌ ಪ್ರಶ್ನೆ ಮಾಡಿದ್ದಾರೆ.

Best Mobiles in India

English summary
Cybersecurity firm Avast has said that Google, WhatsApp and Facebook spy on their users to find out their interest for serving targeted advertisements, but their users are well aware about this.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X