ವೈದ್ಯರ ಪ್ರಿಸ್ಕ್ರಿಪ್ಷನ್‌ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ; ಗೂಗಲ್‌ನಿಂದ ಹೊಸ ಉಪಕರಣ ಆವಿಷ್ಕಾರ!

|

'ಬ್ರಹ್ಮನ ಹಣೆಬರಹ ಬೇಕಾದ್ರೂ ಓದಬಹುದು ಆದ್ರೆ ಈ ಡಾಕ್ಟರ್‌ಗಳ ಕೈ ಬರಹ ಓದಲು ಆಗೋಲ್ಲ' ಎಂದು ಹಳ್ಳಿಕಡೆ ಮಾತನಾಡಿಕೊಳ್ಳುವುದುಂಟು. ಹಳ್ಳಿ ಕಡೆ ಯಾಕೆ ಕೆಲವರು ಉತ್ತಮ ಶಿಕ್ಷಣ ಪಡೆದರು ವೈದ್ಯರು ಏನು ಬರೆದಿದ್ದಾರೆ ಎನ್ನುವುದೇ ಆರ್ಥವಾಗುವುದಿಲ್ಲ. ಅಷ್ಟರ ಮಟ್ಟಿಗೆ ಅವರು ಇಂಗ್ಲಿಷ್‌ನಲ್ಲಿ ಪ್ರಿಸ್ಕ್ರಿಪ್ಷನ್‌ ಬರೆದು ಮೆಡಿಕಲ್‌ ಸ್ಟೋರ್‌ಗೆ ಕಳುಹಿಸುತ್ತಾರೆ. ಈ ಕೈ ಬರಹದಿಂದ ಅದೆಷ್ಟೋ ಅನಾಹುತಗಳು ಸಂಭವಿಸಿರುವುದು ನಮ್ಮ ಕಣ್ಣ ಮುಂದೆ ಇದೆ. ಹಾಗೆಯೇ ಈ ಕೈಬರಹದ ಯಡವಟ್ಟಿನಿಂದ ವೈದ್ಯರು ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್‌ ಗುಡ್‌ನ್ಯೂಸ್‌ ಒಂದನ್ನು ನೀಡಿದೆ.

ವೈದ್ಯರು

ಹೌದು, ವೈದ್ಯರು ಕಡ್ಡಾಯವಾಗಿ ಇಂಗ್ಲಿಷ್‌ನ ದೊಡ್ಡ ಅಕ್ಷರದಲ್ಲೇ ಚೀಟಿ ಬರೆಯಬೇಕು ಎಂಬುದನ್ನು ಕೆಲವು ರಾಜ್ಯಗಳು ವೈದ್ಯರಿಗೆ ಕಡ್ಡಾಯಗೊಳಿಸಿವೆಯಾದರೂ ಪ್ರಯೋಜನವಾಗಿಲ್ಲ. ಹಾಗೆಯೇ ವೈದ್ಯರು ತಮ್ಮ ಚಾಳಿಯನ್ನು ಸಹ ಬದಲಾಯಿಸಿಕೊಂಡಿಲ್ಲ. ಇದಕ್ಕೆಲ್ಲಾ ಪರಿಹಾರ ಎಂಬಂತೆ ಗೂಗಲ್‌ ಹೊಸ ಸೌಲಭ್ಯ ನೀಡಲು ಮುಂದಾಗಿದ್ದು, ವೈದ್ಯರು ಈಗ ಬರೆಯುವುದಕ್ಕಿಂತ ಇನ್ನೂ ಹೆಚ್ಚು ಕೆಟ್ಟದಾಗಿ ಬರೆದರೂ ಸಹ ಅದನ್ನು ಓದಬಹುದು ಹಾಗೂ ಆ ಔ‍ಷಧದ ಬಗ್ಗೆ ಮಾಹಿತಿ ಕಲೆಹಾಕಬಹುದು.

ಗೂಗಲ್‌ ಘೋಷಣೆ

ಗೂಗಲ್‌ ಘೋಷಣೆ

ಗೂಗಲ್ ಫಾರ್ ಇಂಡಿಯಾ 2022 ಈವೆಂಟ್‌ನ ಎಂಟನೇ ಆವೃತ್ತಿಯಲ್ಲಿ ಗೂಗಲ್ ಹೊಸ ಉಪಕರಣದ ಬಗ್ಗೆ ಘೋಷಣೆ ಮಾಡಿದ್ದು, ಇದು ಬಳಕೆದಾರರಿಗೆ ವೈದ್ಯರ ಕೈಬರಹವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವೈದ್ಯರ ಕೈಬರಹವನ್ನು ಓದುವುದು ಕಷ್ಟ. ಅದರಲ್ಲೂ ವೈದ್ಯರು ಸೂಚಿಸಿದ ಸೂಚನೆಗಳು ಮತ್ತು ಔಷಧಿಗಳನ್ನು ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಅಥವಾ ಅರ್ಥವೇ ಆಗುವುದಿಲ್ಲ.

ಏನಿದು ಉಪಕರಣ?

ಏನಿದು ಉಪಕರಣ?

ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆಯ ಮಾದರಿ ಬಗ್ಗೆ ಗೂಗಲ್‌ ಘೋಷಣೆ ಮಾಡಿದ್ದು, ಇದು ಕೈಬರಹದ ಪ್ರಿಸ್ಕ್ರಿಪ್ಷನ್‌ಗಳಲ್ಲಿ ಔಷಧಿಗಳನ್ನು ಗುರುತಿಸಲು ಮತ್ತು ಹೈಲೈಟ್ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಹೊಸ ಫೀಚರ್ಸ್‌ ಕೈಬರಹದ ವೈದ್ಯಕೀಯ ದಾಖಲೆಗಳನ್ನು ಡಿಜಿಟೈಜ್ ಮಾಡಲು ಸಹಾಯಕ ತಂತ್ರಜ್ಞಾನವಾಗಿ ಇದು ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ.

ಇದನ್ನು ಓದುವುದು ಹೇಗೆ?

ಇದನ್ನು ಓದುವುದು ಹೇಗೆ?

ಬಳಕೆದಾರರು ತಮ್ಮ ಫೋನ್‌ನ ಕ್ಯಾಮೆರಾವನ್ನು ಬಳಸಿಕೊಂಡೇ ವೈದ್ಯರ ಪ್ರಿಸ್ಕ್ರಿಪ್ಷನ್ ಓದಬಹುದಾಗಿದೆ. ಇದಕ್ಕೆ ಸ್ಕ್ಯಾನ್ ಆಯ್ಕೆ ನೀಡಲಾಗಿದ್ದು, ಗೂಗಲ್‌ನ ಹೊಸ ಉಪಕರಣವು AI ಮತ್ತು ML ಅನ್ನು ಬಳಕೆ ಮಾಡಿಕೊಂಡು ರೀಡ್ ಮಾಡುತ್ತದೆ. ಹಾಗೆಯೇ ಸ್ಕ್ಯಾನ್ ಮಾಡಿದ ದಾಖಲೆಗಳಲ್ಲಿ ಪಟ್ಟಿ ಮಾಡಲಾದ ಎಲ್ಲಾ ಔಷಧಿಗಳ ಮಾಹಿತಿ, ನಿರ್ದೇಶನಗಳು, ಸಂಯೋಜನೆ ಮತ್ತು ಅಡ್ಡ-ಪರಿಣಾಮಗಳ ಬಗ್ಗೆ ನಿಖರ ಮಾಹಿತಿಯನ್ನು ಅದು ಡಿಸ್‌ಪ್ಲೇ ಮಾಡುತ್ತದೆ.

ಸ್ಪೀಕರ್

ಇದಿಷ್ಟೇ ಅಲ್ಲದೆ, ಸ್ಪೀಕರ್ ಆಯ್ಕೆ ಸಹ ಇದ್ದು, ಇದರಿಂದಾಗಿ ಬಳಕೆದಾರರು ಮೆಡಿಕಲ್‌ ಸ್ಟೋರ್‌ಗೆ ಹೋದಾಗ ಅದನ್ನು ಹೇಗೆ ಉಚ್ಚರಿಸಬೇಕು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆಯೇ ಈ ಆಯ್ಕೆಯಲ್ಲಿ ಇತರೆ ಔಷಧಿಗಳನ್ನು ಸಹ ಸರ್ಚ್‌ ಮಾಡಬಹುದಾಗಿದೆ. ಆದಾಗ್ಯೂ, ಈ ತಂತ್ರಜ್ಞಾನವು ಒದಗಿಸಿದ ಮಾಹಿತಿ ಆಧರಿಸಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಕಂಪೆನಿಯು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಜನರಿಗೆ ಯಾವಾಗ ಲಭ್ಯ?

ಜನರಿಗೆ ಯಾವಾಗ ಲಭ್ಯ?

ಈ ಫೀಚರ್ಸ್‌ ಅನ್ನು ಪ್ರಾರಂಭಿಸಲು ಕಂಪೆನಿಯು ಯಾವುದೇ ಸಮಯದ ಚೌಕಟ್ಟನ್ನು ಘೋಷಿಸಲಿಲ್ಲ. ಆದರೆ, ಈ ವ್ಯವಸ್ಥೆಯು ಜಾಗತಿಕವಾಗಿ ಬಳಕೆಗೆ ಸಿದ್ಧವಾಗುವ ಮೊದಲು ಇನ್ನೂ ಹೆಚ್ಚಿನ ಕೆಲಸಗಳನ್ನು ಇದರಲ್ಲಿ ಮಾಡಬೇಕಿದೆ ಎಂದು ಗೂಗಲ್‌ ತಿಳಿಸಿದೆ. ಅಂತೆಯೇ ಈ ಸೌಲಭ್ಯವನ್ನು ಈವೆಂಟ್‌ನಲ್ಲಿ ಪ್ರದರ್ಶನ ಮಾಡಲಾಗಿದ್ದು, ಸದ್ಯಕ್ಕೆ ಅಭಿವೃದ್ಧಿಯಲ್ಲಿದೆ. ಗೂಗಲ್ ಲೆನ್ಸ್ ಈಗಾಗಲೇ ವಿವಿಧ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಭಾಷಾಂತರಿಸಲು ಸಮರ್ಥವಾಗಿದೆ. ಆದಾಗ್ಯೂ, ಈ ಫೀಚರ್ಸ್‌ ಕೈಬರಹದ ಟಿಪ್ಪಣಿಗಳನ್ನು ಅರ್ಥೈಸಿಕೊಳ್ಳುವ ಬಳಕೆದಾರರಿಗೆ ಮೌಲ್ಯಯುತವಾದ ಸೇರ್ಪಡೆಯಾಗಲಿದೆ.

Best Mobiles in India

Read more about:
English summary
Google will soon help you understand a doctor’s handwriting.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X