ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!..ಬೆಲೆ ಕೇಳಿ ಹೌಹಾರಿದ ಪ್ರಯಾಣಿಕರು!!

|

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಬಳಸಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ, ಇದೇ ಅಕ್ಟೋಬರ್‌ ತಿಂಗಳಿನಲ್ಲಿ ವಿಮಾನದಲ್ಲೂ ಮೊಬೈಲ್‌ ಮತ್ತು ಇಂಟರ್‌ನೆಟ್‌ ಬಳಕೆಗೆ ಅವಕಾಶ ಸಿಗಲಿದೆ ಎನ್ನುವ ಸುದ್ದಿ ವಿಮಾನ ಪ್ರಯಾಣಿಕರಿಗೆ ಸಿಹಿಸುದ್ದಿ ಜೊತೆಗೆ ಶಾಕಿಂಗ್ ಸುದ್ದಿ ಸಹ ಸಿಕ್ಕಿದೆ.

ಹೌದು, ಸದ್ಯ ವಿಮಾನದೊಳಗೆ ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆ ನಿಷಿದ್ಧವಿದೆ. ಮೊಬೈಲ್‌ ಬಳಕೆ ಹೆಚ್ಚಿರುವ ಈ ದಿನಮಾನಗಳಲ್ಲಿ ಆ ಸೇವೆಗೆ ಅವಕಾಶ ಕಲ್ಪಿಸಲು ವಿಮಾನದೊಳಗಣ ಸಂಪರ್ಕ ವ್ಯವಸ್ಥೆಯನ್ನು ವಿಮಾನ ಕಂಪನಿಗಳು ರೂಪಿಸಿಕೊಳ್ಳಲು ಸರ್ಕಾರ ಅನುಮತಿ ನೀಡಲುದ್ದೇಶಿಸಿದೆ. ಆದರೆ ಆ ವ್ಯವಸ್ಥೆಯು ಪ್ರಯಾಣಿಕರಿಗೆ ಭಾರೀ ದುಬಾರಿಯಾಗಿ ಪರಿಣಮಿಸಲಿದೆ.

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!..ಬೆಲೆ ಕೇಳಿ ಹೌಹಾರಿದ ಪ್ರಯಾಣಿಕರು!!

ಇದೀಗ ಹೊರಬಿದ್ದಿರುವ ಶಾಕಿಂಗ್ ಸುದ್ದಿ ವಿಮಾನ ಪ್ರಯಾಣಿಕರನ್ನು ಬೆಸ್ತುಬೀಳುವಂತೆ ಮಾಡಿದ್ದು, ವಿಮಾನ ಪ್ರಯಾಣದ ವೇಳೆ ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಹೆಚ್ಚಾಗಿರುತ್ತದೆ. ಹಾಗಾದರೆ, ವಿಮಾನ ಪ್ರಯಾಣದ ವೇಳೆ ಇಂಟರ್‌ನೆಟ್ ಬಳಸಲು ಎಷ್ಟು ಹಣ ಪಾವತಿಸಬೇಕು ಎಂಬುದನ್ನು ಮುಂದೆ ಓದಿ ತಿಳಿಯಿರಿ.!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ!

ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡುವ ತಂತ್ರಜ್ಞಾನ ಈಗ ಲಭ್ಯವಿದ್ದು, 3000 ಮೀಟರ್‌ಗಿಂತ ಮೇಲೆ ಹಾರಲು ಆರಂಭಿಸಿದ ಬಳಿಕ ಇಂಟರ್‌ನೆಟ್‌ ಸಂಪರ್ಕ ನೀಡಬಹುದು ಎನ್ನುವುದು ಟ್ರಾಯ್‌ ಹೇಳಿದ ನಂತರ ವಿಮಾನದಲ್ಲಿ ಇಂಟರ್‌ನೆಟ್‌ ಸೌಲಭ್ಯ ನೀಡಲು ಸಂವಹನ ಇಲಾಖೆ ಮುಂದಾಗಿದೆ.!

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ!

ಅಂತಾರಾಷ್ಟ್ರೀಯ ದರ್ಜೆ ಸೌಲಭ್ಯ!

ವಿಮಾನ ಪ್ರಯಾಣದ ವೇಳೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನದ ವೇಳೆ ವೈಫೈ ಸೌಲಭ್ಯ ಒದಗಿಸುವುದರಿಂದ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ. ಹಾಗಾಗಿ, ಇನ್-ಫ್ಲೈಟ್ ವೈಫೈ ಸೌಲಭ್ಯಕ್ಕೆ ಪ್ರಯಾಣದ ದರದ ಶೇ.30ಕ್ಕಿಂತ ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆ ಇದೆ ಈಗ ನಿಜವಾಗಿದೆ.!

ಗಂಟೆಗೆ 1,000 ರೂ.ಶುಲ್ಕ!

ಗಂಟೆಗೆ 1,000 ರೂ.ಶುಲ್ಕ!

ವಿಮಾನ ಪ್ರಯಾಣದ ವೇಳೆ ಮೊಬೈಲ್ ಮತ್ತು ವೈಫೈ ಸೌಲಭ್ಯ ಸಿಗುವುದಕ್ಕಿಂತಲೂ ಹೆಚ್ಚಾಗಿ ಅಲ್ಲಿ ನೀಡುವ ಇಂಟರ್‌ನೆಟ್ ಬೆಲೆ ಎಲ್ಲರನ್ನು ಹೌರಾರುವಂತೆ ಮಾಡಿದೆ. ಪ್ರಯಾಣದ ವೇಳೆ ಅರ್ಧ ಗಂಟೆ ಇಂಟರ್‌ನೆಟ್ ಬಳಕೆಗೆ 500 ರೂ. ಹಾಗೂಗಂಟೆಗೆ 1,000 ರೂಪಾಯಿ ಶುಲ್ಕ ವಿಧಿಸಲಾಗಿದ್ದು, ಪ್ರಯಾಣಿಕರು ಹೌರಾರಿದ್ದಾರೆ.!

ಪ್ರಯಾಣಿಕರು ಶಾಕ್.

ಪ್ರಯಾಣಿಕರು ಶಾಕ್.

ವಿಮಾನಪ್ರಯಾಣದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಸುದ್ದಿ ಕೇಳಿ ಖುಷಿಯಾಗಿದ್ದೆವು. ಆದರೆ, ಅರ್ಧಗಂಟೆ ಇಂಟರ್‌ನೆಟ್ ಬಳಕೆಗೆ 500 ರಿಂದ 1,000 ರೂಪಾಯಿ ಶುಲ್ಕ ವಿಧಿಸುವುದನ್ನು ಕೇಳಿ ಶಾಕ್ ಆಗಿದೆ ಎಂದು ವಿಮಾನ ಪ್ರಯಾಣಿಕರು ಹೇಳಿದ್ದಾರೆ.!

ಬೆಲೆ ಏಕೆ ಹೆಚ್ಚು?

ಬೆಲೆ ಏಕೆ ಹೆಚ್ಚು?

ಇಂಟರ್‌ನೆಟ್ ಸೇವೆಯನ್ನು ಅಳವಡಿಸಲು ಪ್ರತಿ ವಿಮಾನಕ್ಕೂ 36ರಿಂದ 72 ಲಕ್ಷ ರು.ವರೆಗೂ ವೆಚ್ಚವಾಗಲಿದೆ. ಆ ವೆಚ್ಚವನ್ನು ಪ್ರಯಾಣಿಕರಿಗೆ ಬಳಕೆ ಶುಲ್ಕದ ರೂಪದಲ್ಲಿ ಕಂಪನಿಗಳು ಹೇರಲಿವೆ ಎಂದು ವರದಿಗಳು ಪ್ರಕಟಿಸಿವೆ. ಆದರೆ, ಉಚಿತ ಡೇಟಾದ ನಿರೀಕ್ಷೆಯಲ್ಲಿರುವ ಜನರು ಇದನ್ನು ಒಪ್ಪುತ್ತಾರ ಎಂಬುದನ್ನು ಕಾದುನೋಡಬೇಕಿದೆ.!

Best Mobiles in India

English summary
Travellers flying through Indian airspace will be able to make phone calls and surf theInternet in the next month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X