5G ಸೇವೆಗೆ ಮುಂದಾದ ಬಿಎಸ್‌ಎನ್‌ಎಲ್‌; ಯಾವಾಗ ಲಭ್ಯ!?

|

ಭಾರತದಲ್ಲಿ ಏರ್ಟೆಲ್‌, ಜಿಯೋ ಹಾಗೂ ವಿ ಟೆಲಿಕಾಂ ಪೂರೈಕೆದಾರರು ಗ್ರಾಹಕರನ್ನು ಹೆಚ್ಚು ಆಕರ್ಷಿಸಲು ರೀಚಾರ್ಜ್‌ ಪ್ಲ್ಯಾನ್‌ ಮೇಲೆ ಹಲವು ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದ್ದು, ಇದರ ನಡುವೆ ಈಗ 5G ವಿಭಾಗದಲ್ಲೂ ಗಣನೀಯ ಸಾಧನೆಗೆ ಮುಂದಾಗಿವೆ. ಇವುಗಳಿಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿರುವ ಬಿಎಸ್‌ಎನ್‌ಎಲ್‌ ಇದೀಗ ಭಾರತೀಯರು ಸಂತಸ ಪಡುವ ವಿಷಯವೊಂದನ್ನು ಪ್ರಕಟಿಸಿದೆ.

 ಭಾರತ್ ಸಂಚಾರ ನಿಗಮ

ಹೌದು, ಭಾರತ್ ಸಂಚಾರ ನಿಗಮ ಲಿಮಿಟೆಡ್‌ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆಯ ಮಾಲೀಕತ್ವದಲ್ಲಿದೆ. ಇನ್ನು ಈಗಾಗಲೇ ಖಾಸಗಿ ಟೆಲಿಕಾಂ ಸೇವೆಗಳು ಭಾರತದಲ್ಲಿ 5G ಸೇವೆ ಆರಂಭಿಸಿದ್ದು, ಬಿಎಸ್‌ಎನ್‌ಎಲ್‌ ಯಾವಾಗ ಈ ಸೇವೆ ನೀಡುತ್ತದೆ ಎಂದು ಎಲ್ಲರಲ್ಲೂ ಕಾತುರ ಇತ್ತು. ಅದಕ್ಕೆ ಈಗ ಐಟಿ ಸಚಿವರು ಪ್ರತ್ಯುತ್ತರಿಸಿದ್ದು, ಭಾರತದಲ್ಲಿ ಯಾವಾಗ ಈ ಸೇವೆ ಲಭ್ಯ ಎಂಬ ವಿವರವನ್ನು ಬಹಿರಂಗಪಡಿಸಿದ್ದಾರೆ.

ದೇಶಾದ್ಯಂತ ಟವರ್‌ ಸ್ಥಾಪನೆ

ದೇಶಾದ್ಯಂತ ಟವರ್‌ ಸ್ಥಾಪನೆ

ಬಿಎಸ್‌ಎನ್‌ಲ್‌ ಶೀಘ್ರದಲ್ಲೇ 5G ಸೇವೆಯನ್ನು ಹೊರತರಲಿದ್ದು, ಇದಕ್ಕಾಗಿ ಬಿಎಸ್‌ಎನ್‌ಎಲ್ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ದೇಶಾದ್ಯಂತ ಸುಮಾರು 1.35 ಲಕ್ಷ ಟವರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಯಾವಾಗ ಲಭ್ಯ?

ಯಾವಾಗ ಲಭ್ಯ?

ಈ ಸೇವೆ ಮುಂದಿನ ವರ್ಷದ ಅಕ್ಟೋಬರ್‌ನಿಂದ ಆರಂಭವಾಗಲಿದ್ದು, ಈ ಸಂಬಂಧದ ಕೆಲಸಗಳು ಕನಿಷ್ಠ 5 ರಿಂದ 7 ತಿಂಗಳು ತೆಗೆದುಕೊಳ್ಳಬಹುದು ಎನ್ನಲಾಗಿದೆ. ದೇಶದಲ್ಲಿ 5G ಸೇವೆ ಲಾಂಚ್‌ ಮಾಡುವ ಸಮಯದಲ್ಲಿ ವೈಷ್ಣವ್ ಅವರು ಬಿಎಸ್‌ಎನ್‌ಎಲ್‌ ಮುಂದಿನ ವರ್ಷ ಆಗಸ್ಟ್ 15 ರಿಂದ 5G ಸೇವೆಗಳನ್ನು ಒದಗಿಸಲಾಗುತ್ತದೆ ಹಾಗೂ ಮುಂಬರುವ 6 ತಿಂಗಳಲ್ಲಿ 200ಕ್ಕೂ ಹೆಚ್ಚು ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದರು. ಅದರಂತೆ ಈಗ ಮುಂದಿನ 2 ವರ್ಷಗಳಲ್ಲಿ ದೇಶದ 80-90% ಪ್ರದೇಶದಲ್ಲಿ 5G ಸೇವೆಗಳನ್ನು ಒದಗಿಸಲು ಈ ಮೂಲಕ ಪ್ರಯತ್ನಿಸಲಾಗುತ್ತಿದೆ.

ದೂರದ ಪ್ರದೇಶಗಳಲ್ಲೂ 5G ಲಭ್ಯ

ದೂರದ ಪ್ರದೇಶಗಳಲ್ಲೂ 5G ಲಭ್ಯ

ಸದ್ಯಕ್ಕೆ ಮೆಟ್ರೋ ನಗರಗಳಲ್ಲಿ ಖಾಸಗಿ ಟೆಲಿಕಾ ಸೇವಾ ಪೂರೈಕೆದಾರರು ಈ ಸೇವೆ ನೀಡುತ್ತಿದ್ದಾರೆ. ಆದರೆ, ಈ ಬಿಎಸ್‌ಎನ್‌ಎಲ್‌ನಲ್ಲಿ ಈ ಸೇವೆ ಆರಂಭವಾದ ನಂತರ ಭಾರತದ ಬಹುಪಾಲು ಎಲ್ಲಾ ಪ್ರದೇಶದಲ್ಲೂ ಈ 5G ಸೇವೆ ಸಿಗಲಿದೆ ಎಂದು ತಿಳಿದುಬಂದಿದೆ.

 ಸ್ಟಾರ್ಟ್‌ಅಪ್‌ಗೆ ಪ್ರೋತ್ಸಾಹ

ಸ್ಟಾರ್ಟ್‌ಅಪ್‌ಗೆ ಪ್ರೋತ್ಸಾಹ

ಇನ್ನು ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿಯನ್ನು ವರ್ಷಕ್ಕೆ 500 ಕೋಟಿ ರೂ.ಗಳಿಂದ 4,000 ಕೋಟಿ ರೂ.ಗೆ ಹೆಚ್ಚಿಸುವ ಮೂಲಕ ಹೊಸ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ತಿಳಿದುಬಂದಿದೆ. ರೈಲ್ವೇ ಹಾಗೂ ರಕ್ಷಣಾ ವಲಯದ ಅಡಿಯಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ಇದರಲ್ಲೂ ಸ್ಟಾರ್ಟ್‌ಅಪ್‌ ಗಳಿಗೆ ಪ್ರೋತ್ಸಾಹ ನೀಡಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಿಂದ 5G ಸೇವೆ

ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಿಂದ 5G ಸೇವೆ

ದೇಶದಲ್ಲಿ 5G ಸೇವೆ ಅನಾವರಣಗೊಂಡ ನಂತರ ಮೊದಲು ಏರ್‌ಟೆಲ್ ಮತ್ತು ನಂತರ ಜಿಯೋ ದೇಶದ ಅನೇಕ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ಪರಿಚಿಸಿವೆ. ಏರ್‌ಟೆಲ್ ದೆಹಲಿ, ಮುಂಬೈ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಸಿಲಿಗುರಿ, ಕೋಲ್ಕತ್ತಾ, ಪಾಟ್ನಾ ಮತ್ತು ಗುರುಗ್ರಾಮ್‌ನಲ್ಲಿ ಈ ಸೇವೆಯನ್ನು ಪರಿಚಯಿಸಿದರೆ . ಜಿಯೋ ದೆಹಲಿ, ಮುಂಬೈ, ಪುಣೆ, ವಾರಣಾಸಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಸಿಲಿಗುರಿ, ಕೋಲ್ಕತ್ತಾ, ಪಾಣಿಪತ್, ನಾಗ್ಪುರ, ಗುರುಗ್ರಾಮ್ ಮತ್ತು ಗುವಾಹಟಿಯಲ್ಲಿ ಈ ಸೇವೆಯನ್ನು ಈಗಾಗಲೇ ನೀಡುತ್ತಿದೆ.

Best Mobiles in India

English summary
Government has good news for BSNL subscribers about 5G.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X