ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌ ಮಾಡೋರಿಗೆ ಕೇಂದ್ರ ಸರ್ಕಾರದಿಂದ ಬಿಗ್‌ ಶಾಕ್‌!

|

ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌ ಮಾಡುವವರಿಗೆ ಕೇಂದ್ರ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ಹಣ ಪಡೆದುಕೊಂಡು ಪ್ರಚಾರದ ಬಗ್ಗೆ ತಿಳಿಸಲು ವಿಫಲವಾದರೆ 50 ಲಕ್ಷ ರೂ.ವರೆಗೆ ದಂಡ ವಿಧಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆ ಫಾಲೋವರ್‌ಗಳನ್ನು ಹೊಂದಿರುವ ಸೊಶೀಯಲ್‌ ಮೀಡಿಯಾ ಪೇಜ್‌ಗಳು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಬ್ರ್ಯಾಂಡ್‌ಗಳ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುವುದು ಸಾಮಾನ್ಯವಾಗಿದೆ.

ಸೊಶೀಯಲ್‌

ಹೌದು, ಸೊಶೀಯಲ್‌ ಮೀಡಿಯಾದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಪಡೆದುಕೊಂಡಿದ್ದೀರಾ. ನಿಮ್ಮ ಸೊಶೀಯಲ್‌ ಮೀಡಿಯಾ ಪೇಜ್‌ನಲ್ಲಿ ಯಾವುದಾದರೂ ಪ್ರಾಡಕ್ಟ್‌ಗಳ ಬಗ್ಗೆ ಹಣ ಪಡೆದು ಪ್ರಮೋಷನ್‌ ಮಾಡ್ತಾ ಇದ್ದೀರಾ. ಹಾಗಾದ್ರೆ ಇನ್ಮುಂದೆ ಈ ನಿಯಮವನ್ನು ಫಾಲೋ ಮಾಡೋದು ಅನಿವಾರ್ಯವಾಗಲಿದೆ. ನಿಮ್ಮ ಸೊಶೀಯಲ್‌ ಮೀಡಿಯಾ ಪೇಜ್‌ನಲ್ಲಿ ಪೇಯ್ಡ್‌ ಪ್ರಮೋಷನ್‌ ಬಗ್ಗೆ ಫಾಲೋವರ್‌ಗಳಿಗೆ ಮಾಹಿತಿ ನೀಡದೇ ಹೋದರೆ 50 ಲಕ್ಷದ ವರೆಗೆ ದಂಡ ಪಾವತಿಸಬೇಕಾಗುತ್ತದೆ. ಹಾಗಾದ್ರೆ ಈ ನಿಯಮ ಜಾರಿಯಾಗಿದೆಯಾ? ಈ ರೀತಿಯ ಪ್ಲಾನ್‌ಗೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರಮೋಷನ್‌

ಸೊಶೀಯಲ್‌ ಮೀಡಿಯಾದಲ್ಲಿ ಪೇಯ್ಡ್‌ ಪ್ರಮೋಷನ್‌ ಅನ್ನೊದು ಇಂದಿನ ಜಮಾನದ ಒಂದು ಪ್ರಚಾರದ ತಂತ್ರವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಮೋಷನ್‌ ಹೊಂದಿರುವ ಸೊಶೀಯಲ್‌ ಮೀಡಿಯಾ ಪೇಜ್‌ಗಳಿಗೆ ಹಣಕೊಟ್ಟು ಕೆಲವು ಬ್ರ್ಯಾಂಡ್‌ಗಳು ತಮ್ಮ ಪ್ರಾಡಕ್ಟ್‌ಗಳ ಬಗ್ಗೆ ಪ್ರಚಾರವನ್ನು ಮಾಡಿಸುತ್ತವೆ. ಇಂತಹ ಸೊಶೀಯಲ್‌ ಮೀಡಿಯಾ ಪೇಜ್‌ಗಳು ಪ್ರಚಾರದ ಕಾರಣದಿಂದ ಅವರ ಫಾಲೋವರ್ಸ್‌ಗಳಿಗೆ ಈ ಪ್ರಾಡಕ್ಟ್‌ನ ಮಾಹಿತಿ ತಲುಪಲಿದೆ. ಇದು ಕೂಡ ಇಂದಿನ ಜಮಾನ ಬ್ಯುಸಿನೆಸ್‌ ಸ್ಟಾಟರ್ಜಿ ಆಗಿದೆ.

ಸೊಶೀಯಲ್‌

ಆದರೆ ಸೊಶೀಯಲ್‌ ಮೀಡಿಯಾ ಪೇಜ್‌ಗಳು ಹಣಕ್ಕಾಗಿ ಪ್ರಾಡಕ್ಟ್‌ನ ಗುಣಮಟ್ಟ ಹೇಗೆ ಇದ್ದರೂ ಕೂಡ ಅತ್ಯುತ್ತಮ ಎಂಬಂತೆ ಪ್ರಚಾರ ಮಾಡುತ್ತವೆ. ಇದರಿಂದ ಫಾಲೋವರ್‌ಗಳು ಎಷ್ಟೋ ಭಾರಿ ದಾರಿ ತಪ್ಪಿರುವುದು ಉಂಟೂ. ಆದರಿಂದ ಕೇಂಸ್ರ ಸರ್ಕಾರ ಹೀಗೆ ಸೊಶೀಯಲ್‌ ಮೀಡಿಯಾದಲ್ಲಿ ಪ್ರಮೋಷನ್‌ ನಡೆಸುವ ಪೇಜ್‌ಗಳು ತಾವು ಮಾಡುತ್ತಿರುವ ಪೇಯ್ಡ್‌ ಪ್ರಮೋಷನ್‌ ಎಂಬುದನ್ನು ಗ್ರಾಹಕರಿಗೆ ತಿಳಿಸಬೇಕು. ಇಲ್ಲದಿದ್ದರೆ ಸರ್ಕಾರದ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.

ಮೀಡಿಯಾ

ಸೊಶೀಯಲ್‌ ಮೀಡಿಯಾ ಪ್ರಭಾವಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಾಕ್ಸಿ ಪಾವತಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸದಿದ್ದರೆ, ಅವರ ವಿರುದ್ದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ (ಸಿಸಿಪಿಎ) ದೂರು ನೀಡಬಹುದು. ಇದರಲ್ಲಿ ತಪ್ಪು ಕಂಡು ಬಂದರೆ 50ಲಕ್ಷ ರೂ.ವರೆಗೆ ದಂಡ ವಿಧಿಸಬಹುದು ಎಂದು ವರದಿ ಹೇಳಿದೆ. ಯಾಕೆಂದರೆ ಕೆಲವು ಪೇಜ್‌ಗಳು ಹಣದ ಕಾರಣಕ್ಕೆ ಗುಣಮಟ್ಟವಿಲ್ಲದ ಪ್ರಾಡಕ್ಟ್‌ಗಳ ಬಗ್ಗೆಯೂ ಹೆಚ್ಚಿನ ಪ್ರಚಾರ ನೀಡುವುದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.

ಯಾವುದೇ

ಪ್ರಸ್ತುತ ದಿನಗಳಲ್ಲಿ ಈ ರೀತಿಯ ಪ್ರಾಕ್ಸಿ ಪ್ರಚಾರಗಳನ್ನು ತಡೆಯಲು ಸರ್ಕಾರದ ಬಳಿ ಯಾವುದೇ ಮಾರ್ಗಸೂಚಿಗಳನ್ನು ಹೊಂದಿಲ್ಲ. ಆದರೆ, ಈ ಪದ್ಧತಿಯನ್ನು ತಡೆಯಲು ಸರ್ಕಾರ ಈಗ ಹೊಸ ನಿಯಮಾವಳಿಗಳನ್ನು ತರಲು ಪ್ರಯತ್ನಿಸುತ್ತಿದೆ. ಹೊಸ ಮಾರ್ಗಸೂಚಿಗಳು ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಸೆಲೆಬ್ರಿಟಿಗಳು, ಆರ್ಥಿಕ ಪ್ರಭಾವಿಗಳಿಗೂ ಅನ್ವಯಿಸುತ್ತದೆ ಎಂದು ವರದಿಯಾಗಿದೆ.

ಸುಖಾ

ಅಂದರೆ ಸುಖಾ ಸುಮ್ಮನೆ ಹಣವನ್ನು ಪಡೆದುಕೊಂಡು ಪ್ರಾಡಕ್ಟ್‌ಗಳು ಸ್ವತಃ ತಾವು ಕೂಡ ಬಳಸದೆ ಸಾಮಾಜಿಕವಾಗಿ ಜನರನ್ನು ಬಳಸುವಂತೆ ಕರೆ ನೀಡುವ ಹಾಗೂ ಅವರನ್ನು ಪ್ರೇರೆಪಿಸುವ ಎಲ್ಲರಿಗೂ ಇದು ಅನ್ವಯವಾಗಲಿದೆ. ಇದರಿಂದ ಸರ್ಕಾರ ಸೊಶೀಯಲ್‌ ಮಿಡಿಯಾದಲ್ಲಿ ಪೇಯ್ಡ್‌ ಪ್ರಮೋಷನ್‌ ಮಾಡುವವರ ವಿರುದ್ದ ಹೊಸ ಹೆಜ್ಜೆ ಇಟ್ಟಿದೆ. ಗುಣಟ್ಟವಿಲ್ಲದ ಪ್ರಾಡಕ್ಟ್‌ಗಳ ಬಳಕೆಯಿಂದ ಸಾಕಷ್ಟು ಮಂದಿ ನಷ್ಟ ಅನುಭವಿಸಿರುವುದನ್ನುಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Best Mobiles in India

English summary
Govt is planning to impose fines of up to Rs 50 lakh on Social media influencers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X