ಗ್ಯಾಲಕ್ಸಿ Z ಫ್ಲಿಪ್ 3 ಫೋನ್‌ಗೆ ಭರ್ಜರಿ ಆಫರ್‌; 95,999 ರೂ. ಫೋನ್‌ 38,499 ರೂ. ಗಳಿಗೆ!

|

ಸ್ಯಾಮ್‌ಸಂಗ್‌ ಕಂಪೆನಿಯು ಸುಧಾರಿತ ತಂತ್ರಜ್ಞಾನ ಹಾಗೂ ಧಕ್ಷತೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಮಾರುಕಟ್ಟೆಗೆ ಪರಿಚಯಿಸಿದ್ದು, ಬೇಡಿಕೆ ಸಹ ಹೆಚ್ಚಿದೆ. ಅದಕ್ಕೂ ಮಿಗಿಲಾಗಿ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿಯ ಕೆಲವು ಫೋನ್‌ಗಳು ಪ್ರಮುಖ ಇ-ಕಾಮರ್ಸ್‌ ತಾಣಗಳಲ್ಲಿ ಭಾರೀ ಡಿಸ್ಕೌಂಟ್‌ ಪಡೆದುಕೊಂಡಿದ್ದು, ಗ್ರಾಹಕರು ಕೈಗೆಟಕುವ ದರದಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ನ ಫೋಲ್ಡಬಲ್‌ ಫೋನ್‌ ಅನ್ನು ಸಹ ಅಧಿಕ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ.

ಸ್ಯಾಮ್‌ಸಂಗ್

ಹೌದು, ಸ್ಯಾಮ್‌ಸಂಗ್ ಕಂಪೆನಿಯು ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 3 ಸ್ಮಾರ್ಟ್‌ಫೊನ್‌ಗೆ ಭರ್ಜರಿ ರಿಯಾಯಿತಿ ನೀಡಿದೆ. ಈ ಫೋನ್‌ನ ಸಾಮಾನ್ಯ ದರ 95,999 ರೂ. ಗಳಾಗಿದ್ದು, ಇದನ್ನು ನೀವು ಅರ್ಧ ಬೆಲೆ ಖರೀದಿ ಮಾಡಬಹುದು ಎಂದರೆ ನಂಬಲೇ ಬೇಕು. ಯಾಕೆಂದರೆ ಈ ಫೋನ್ ಅನ್ನು ನೀವು 38,499 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಇಷ್ಟು ಕಡಿಮೆ ಬೆಲೆಗೆ ಈ ದುಬಾರಿ ಬೆಲೆಯ ಫೋನ್‌ ಅನ್ನು ಖರೀದಿಸುವುದು ಹೇಗೆ?, ಈ ಫೋನ್‌ನ ಖರೀಧಿ ಮಾಡಲು ವಿನಿಮಯ ಆಫರ್‌ ಎಷ್ಟಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಮಾರ್ಟ್‌ಫೋನ್‌

ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳು ಸದ್ಯಕ್ಕೆ ಭಾರೀ ಟ್ರೆಂಡಿಂಗ್‌ನಲ್ಲಿವೆ. ಹೀಗಾಗಿಯೇ ಸ್ಯಾಮ್‌ಸಂಗ್‌ ಮೊದಲ ಬಾರಿಗೆ ಈ ಫೋನ್‌ ಅನ್ನು ಕಳೆದ ವರ್ಷ ಲಾಂಚ್‌ ಮಾಡಿತ್ತು. ಇದಾದ ನಂತರ ಉಳಿದ ಕಂಪೆನಿಗಳು ಈ ರೀತಿಯ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಆದರೆ, ಸ್ಯಾಮ್‌ಸಂಗ್‌ನ ಈ ಫೋಲ್ಡಬಲ್‌ ಫೋನ್ ಮಾತ್ರ ಬಹಳ ವಿಭಿನ್ನವಾಗಿದ್ದು, ಇದರ ಕಾರ್ಯಕ್ಷಮತೆ ಹಾಗೂ ವಿನ್ಯಾಸ ಗ್ರಾಹಕರಿಗೆ ಮೆಚ್ಚುಗೆಯಾಗಿದೆ. ಈ ಕಾರಣಕ್ಕೆ ದುಬಾರಿ ಬೆಲೆಯ ಫೋನ್‌ ಅನ್ನು ಕೈಗೆಟಕುವ ಬೆಲೆಯಲ್ಲಿ ನೀಡಲು ಮುಂದಾಗಿದೆ. ಆದರೆ, ಈ ಆಫರ್‌ ಬೆಲೆಗೆ ಖರೀದಿಸಬೇಕು ಎಂದರೆ ಫ್ಲಿಪ್‌ಕಾರ್ಟ್‌ ತಾಣಕ್ಕೆ ಭೇಟಿ ನೀಡಬೇಕಿದೆ.

ಈ ಫೋನ್‌ನ ಮೂಲ ದರ 95, 999 ರೂ. ಗಳು

ಈ ಫೋನ್‌ನ ಮೂಲ ದರ 95, 999 ರೂ. ಗಳು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 3 ಫೋನ್‌ 95,999 ರೂ. ಗಳ ಮೂಲ ಬೆಲೆ ಹೊಂದಿದ್ದು, ಫ್ಲಿಪ್‌ಕಾರ್ಟ್‌ನ ಈ ಆಫರ್‌ನಲ್ಲಿ 59,999 ರೂ. ಗಳಿಗೆ ಖರೀದಿ ಮಾಡಬಹುದು. ಮೂಲದಲ್ಲೇ ಈ ಫೋನ್‌ಗೆ 37 % ರಿಯಾಯಿತಿ ಘೋಷಣೆ ಮಾಡಲಾಗಿರುವುದರಿಂದ 59,999 ರೂ. ಗಳ ಬೆಲೆ ಪಡೆದುಕೊಂಡಿದೆ. ಅದಾಗ್ಯೂ ನೀವು 38,499 ರೂ. ಗಳಿಗೆ ಹೇಗೆ ಕೊಂಡುಕೊಳ್ಳಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

ವಿನಿಮಯ ಆಫರ್

ವಿನಿಮಯ ಆಫರ್

ವಿನಿಯಮ ಆಫರ್‌ ಅನ್ನು ಸಹ ಫ್ಲಿಪ್‌ಕಾರ್ಟ್‌ ನೀಡಿದ್ದು, ಈ ಮೂಲಕ ನಿಮ್ಮ ಸುಸ್ತಿತಿಯಲ್ಲಿರುವ ಹಳೆಯ ಫೋನ್‌ ಅನ್ನು ಸುಮಾರು 21,500 ರೂ. ಗಳ ವರೆಗೂ ವಿನಿಮಯ ಮಾಡಿಕೊಂಡು ಈ ಆಫರ್‌ ಬೆಲೆಗೆ ಖರೀದಿ ಮಾಡಬಹುದು. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಖರೀದಿ ಮಾಡುವ ಸಮಯದಲ್ಲಿ ನಿಮ್ಮ ಪ್ರದೇಶದ ಪಿನ್‌ಕೋಡ್ ನಮೂದಿಸಿ ಈ ಆಫರ್‌ ನಿಮ್ಮ ಪ್ರದೇಶಕ್ಕೆ ಅನ್ವಯ ಆಗುತ್ತಿದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಬೇಕಿದೆ.

ಬ್ಯಾಂಕ್‌ ಆಫರ್

ಬ್ಯಾಂಕ್‌ ಆಫರ್

ಇದೆಲ್ಲದರ ಜೊತೆಗೆ ನಿಮಗೆ ಬ್ಯಾಂಕ್‌ ಆಫರ್‌ ಸಹ ಲಭ್ಯವಿದೆ. ಅಂದರೆ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಗ್ರಾಹಕರು 5 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಹಾಗೆಯೇ ಇದರಲ್ಲಿ ಬಿಟ್‌ ಕಾಯಿನ್‌ ಪಡೆಯುವ ಅವಕಾಶ ಸಹ ಇದೆ.

ಈ ಫೋನ್‌ನ ಪ್ರಮುಖ ಫೀಚರ್ಸ್‌

ಈ ಫೋನ್‌ನ ಪ್ರಮುಖ ಫೀಚರ್ಸ್‌

ಈ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್‌ 3 ಫೋನ್‌ 6.7 ಇಂದಿನ ಡಿಸ್‌ಪ್ಲೇ ಹೊಂದಿದ್ದು, ಇದು 1080x2640 ಪಿಕ್ಸೆಲ್‌ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಸ್ನಾಪ್‌ಡ್ರಾಗನ್ 888 5G ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಹಾಗೂ 128GB/256GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 3300mAh ಸಾಮರ್ಥ್ಯದ ಬ್ಯಾಟರಿಯಿಂದ ಈ ಫೋನ್‌ ಪ್ಯಾಕ್‌ ಆಗಿದೆ.

Best Mobiles in India

English summary
Great offer for Galaxy Z Flip 3 phone; you just buy for Rs 38,499.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X