ನೀವು ಬಳಸಬಹುದಾದ ಅತ್ಯುತ್ತಮ ಲಾಕ್‌ಸ್ಕ್ರೀನ್‌ ಅಪ್ಲಿಕೇಶನ್‌ಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಸುವ ಬಹುತೇಕ ಮಂದಿ ಸ್ಕ್ರೀನ್‌ ಲಾಕ್‌ ಬಳಸುವುದು ಸಾಮಾನ್ಯ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಾಕ್‌ ಸ್ಕ್ರೀನ್‌ಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ವಿವಿಧ ಮಾದರಿಯ ಸ್ಲೈಡ್-ಟು-ಅನ್‌ಲಾಕ್ ವಿಧಾನಗಳನ್ನು ಕಾಣಬಹುದಾಗಿದೆ. ಅಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಾಕ್ ಸ್ಕ್ರೀನ್ ಮಾಡಲು ಬಳಸುವ ಅನೇಕ ಅಪ್ಲಿಕೇಶನ್‌ಗಳು ಕೂಡ ಲಭ್ಯವಿವೆ.

ಆಂಡ್ರಾಯ್ಡ್‌

ಹೌದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಾಕ್‌ ಸ್ಕ್ರೀನ್‌ ಬಳಸುವುದರಿಂದ ಬೇರೆಯವರು ನಿಮ್ಮ ಪೋನ್‌ ತೆರೆಯುವುದು ತಪ್ಪಲಿದೆ. ನಿಮ್ಮ ಸ್ಕ್ರೀನ್‌ ಆನ್‌ ಆಗುವುದನ್ನು ತಪ್ಪಿಸುವ ಮೂಲಕ ಬ್ಯಾಟರಿ ಶಕ್ತಿಯನ್ನು ಉಳಿಸಬಹುದಾಗಿದೆ. ಇದಕ್ಕಾಗಿ ನಿಮಗೆ ಪ್ಲೇ ಸ್ಟೋರ್‌ನಲ್ಲಿ ಅನೇಕ ಅಪ್ಲಿಕೇಶನ್‌ಗಳು ಲಭ್ಯವಿವೆ. ಹಾಗಾದ್ರೆ ನೀವು ನಿಮ್ಮ ಮೊಬೈಲ್‌ನಲ್ಲಿ ಬಳಸಬಹುದಾದ ಐದು ಅತ್ಯುತ್ತಮ ಲಾಕ್ ಸ್ಕ್ರೀನ್ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲಾಕ್‌ಸ್ಕ್ರೀನ್ ವಿಜೆಟ್ಸ್‌

ಲಾಕ್‌ಸ್ಕ್ರೀನ್ ವಿಜೆಟ್ಸ್‌

ಲಾಕ್‌ಸ್ಕ್ರೀನ್ ವಿಜೆಟ್ಸ್‌ ಹೊಸ ಲಾಕ್ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ನೀವು ವಿಜೆಟ್‌ಗಳನ್ನು ಹಾಕಬಹುದಾದ ಹಳೆಯ ಆಂಡ್ರಾಯ್ಡ್‌ ಫೀಚರ್ಸ್‌ ನೀಡಲಿದೆ. ಪ್ರತಿ ಪೇಜ್‌ಗೂ ಒಂದು ವಿಜೆಟ್ ಅನ್ನು ಹಾಕಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

ಆಲ್‌ವೇಸ್‌ ಅಮೋಲೆಡ್‌

ಆಲ್‌ವೇಸ್‌ ಅಮೋಲೆಡ್‌

ಆಲ್‌ವೇಸ್‌ ಅಮೋಲೆಡ್‌ನಲ್ಲಿ ಲಾಕ್ ಸ್ಕ್ರೀನ್ ಇಲ್ಲ, ಆದರೆ ಇದು ಆನ್‌ ಡಿಸ್‌ಪ್ಲೇ ಫೀಚರ್ಸ್‌ ಹೊಂದಿದೆ. ಈ ಅಪ್ಲಿಕೇಶನ್ ಸಮಯ, ಅಧಿಸೂಚನೆಗಳು ಮತ್ತು ಇತರ ವಿಷಯಗಳನ್ನು ತೋರಿಸುತ್ತದೆ. ಇದು ಬರ್ನ್-ಇನ್ ಅನ್ನು ತಪ್ಪಿಸಲು ಗಡಿಯಾರದ ಚಲನೆಯಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಅಪ್ಲಿಕೇಶನ್ ಚಾಲನೆಯಲ್ಲಿರುವಾಗ ಡೋಜ್ ಮೋಡ್ ಅನ್ನು ಸಹ ಪ್ರಾರಂಭಿಸಬಹುದು.

DIY ಲಾಕರ್

DIY ಲಾಕರ್

DIY ಲಾಕರ್ ಅಪ್ಲಿಕೇಶನ್‌ ಸುಲಭವಾಗಿ ಬಳಸಬಹುದಾದ ಲಾಕ್ ಸ್ಕ್ರೀನ್ ಆಗಿದೆ. ಇದು ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ಪಾಸ್ಕೋಡ್ ಅಥವಾ ಪ್ಯಾಟರ್ನ್ ಕೋಡ್‌ನಂತಹ ವಿಷಯಗಳನ್ನು ಹಾಕಲು ನಿಮಗೆ ಅನುಮತಿಸುತ್ತದೆ. ಅಲ್ಲದೆ, ನೀವು ಇಷ್ಟಪಡುವ ಜನರ ಫೋಟೋಗಳೊಂದಿಗೆ ಆ ಕಂಟೆಂಟ್‌ ಅನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಅಪ್ಲಿಕೇಶನ್‌ ನೋಟಿಫಿಕೇಶನ್‌ಗಳಿಗೆ ವಿಜೆಟ್ ಬೆಂಬಲ, ಮ್ಯೂಸಿಕ್ ಪ್ಲೇಯರ್ ಮತ್ತು ಅಪ್ಲಿಕೇಶನ್ ತ್ವರಿತ ಪ್ರಾರಂಭದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಎಸಿ ಡಿಸ್‌ಪ್ಲೇ

ಎಸಿ ಡಿಸ್‌ಪ್ಲೇ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಬಳಸಬಹುದಾದ ಜನಪ್ರಿಯ ಲಾಕ್‌ಸ್ಕ್ರೀನ್‌ಗಳಲ್ಲಿ ಎಸಿ ಡಿಸ್‌ಪ್ಲೇ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಈ ಅಪ್ಲಿಕೇಶನ್‌ ಮೂಲಕ ಬಳಕೆದಾರರು ತಮ್ಮ ಡಿಸ್‌ಪ್ಲೇಯನ್ನು ಅನ್‌ಲಾಕ್ ಮಾಡದೆಯೇ ನೋಟಿಫಿಕೇಶನ್‌ ಅನ್ನು ಪ್ಲೇ ಮಾಡಬಹುದು. ಈ ಅಪ್ಲಿಕೇಶನ್‌ ಫ್ರೀ ಆಗಿ ಡೌನ್‌ಲೋಡ್‌ ಮಾಡುವುದಕ್ಕೆ ಲಭ್ಯವಿದೆ.

ಸೋಲೋ ಲಾಕರ್

ಸೋಲೋ ಲಾಕರ್

ಸೋಲೋ ಲಾಕರ್ ನೀವು ಆಯ್ಕೆ ಮಾಡಬಹುದಾದ ಲಾಕ್‌ ಸ್ಕ್ರೀನ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್‌ ಮೂಲಕ ನೀವು ಬಯಸಿದಂತೆ ನಿಮ್ಮ ಲಾಕ್ ಸ್ಕ್ರೀನ್ ಅನ್ನು ಸೆಟ್‌ ಮಾಡಬಹುದಾಗಿದೆ. ಇದರಲ್ಲಿ ವಿವಿಧ ಲಾಕ್ ವಿಧಾನಗಳು, ವಾಲ್‌ಪೇಪರ್‌ಗಳು ಮತ್ತು ವಿಜೆಟ್‌ಗಳು ಕೂಡ ಲಭ್ಯವಿದೆ. ಹಾಗೆಯೇ ಇವುಗಳನ್ನು ನಿಮ್ಮ ಲಾಕ್ ಸ್ಕ್ರೀನ್ ಮಾಡಲು ಬಳಸಬಹುದು. ಈ ಅಪ್ಲಿಕೇಶನ್‌ ಅನ್ನು ನೀವು ಉಚಿತವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ.

DIY ಲಾಕ್ ಸ್ಕ್ರೀನ್

DIY ಲಾಕ್ ಸ್ಕ್ರೀನ್

ಈ ಅಪ್ಲಿಕೇಶನ್‌ ಸೂಪರ್ ಸಿಂಪಲ್, ಥೀಮ್ ಲಾಕ್ ಸ್ಕ್ರೀನ್ ಒಳಗೊಂಡಿದೆ. ಇದು ಪ್ರತಿಯೊಂದೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಫೋನ್ ಅನ್ನು ಲಾಕ್ ಮಾಡಿದ ನಂತರ ಇದು ಕಲರ್‌ಫುಲ್‌ ಲಾಕ್ ಸ್ಕ್ರೀನ್ ಅನ್ನು ಇರಿಸುತ್ತದೆ. ಜೊತೆಗೆ ಸುರಕ್ಷತೆಗಾಗಿ ನೀವು 4-ಅಂಕಿಯ ಪಾಸ್ಕೋಡ್‌ನಂತಹ ವಿಷಯಗಳನ್ನು ಸೇರಿಸಬಹುದಾಗಿದೆ.

Most Read Articles
Best Mobiles in India

English summary
We see our lock screens arguably more than any other part of our device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X