ನಿಮ್ಮ ಐಫೋನ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸುವುದು ಹೇಗೆ?

|

ನಮ್ಮ ದೇಶದಲ್ಲಿ ತುರ್ತು ಸಂದರ್ಭದಲ್ಲಿ ತಕ್ಷಣವೇ ಸಹಾಯ ಪಡೆಯುವುದಕ್ಕಾಗಿ ಹಲವು ಸಂಖ್ಯೆಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಪೊಲೀಸರಿಗೆ 100, ಆಂಬ್ಯುಲೆನ್ಸ್‌ಗೆ 108 ಮತ್ತು ಅಗ್ನಿಶಾಮಕ ದಳಕ್ಕೆ 101 ಸಂಖ್ಯೆಗಳನ್ನು ಗಮನಿಸಬಹುದು. ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕುಡ ತುರ್ತು ಸಂದರ್ಭದಲ್ಲಿ ಸಹಾಯ ಮಾಡುವ ಫೀಚರ್ಸ್‌ಗಳನ್ನು ಹೊಂದಿವೆ. ಅದರಲ್ಲೂ ಐಫೋನ್ ಮೂಲಕ ತುರ್ತು SOS ಫೀಚರ್ಸ್‌ ಅನ್ನು ಬಳಸಬಹುದು. ಇದು ಐಫೋನ್‌ ಮತ್ತು ಆಪಲ್ ವಾಚ್‌ನಲ್ಲಿ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

SOS

ಹೌದು, ತುರ್ತು ಸಂದರ್ಭದಲ್ಲಿ SOS ಫೀಚರ್ಸ್‌ ನಿಮಗೆ ಸಹಾಯ ಮಾಡಲಿದೆ. ನಿಮ್ಮ ಐಫೋನ್‌ನಲ್ಲಿ ನೀವು ತುರ್ತು SOS ಫೀಚರ್ಸ್‌ ಅನ್ನು ಬಳಸ ಬೇಕಾದರೆ ಮೊದಲಿಗೆ ತುರ್ತು ಸಂಪರ್ಕವನ್ನು ಗೊತ್ತುಪಡಿಸಬೇಕಿರುತ್ತದೆ. ನೀವು ತುರ್ತು ಸೇವೆಗಳಿಗೆ ಸೂಚನೆ ನೀಡಿದ ನಂತರ ನಿಮ್ಮ ಸ್ಥಳ ಮತ್ತು ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತದೆ. SOS ಫೀಚರ್ಸ್‌ ಬಳಸುವಾಗ ಕರೆನ್ಸಿ ಇರಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ. ಹಾಗಾದ್ರೆ ಐಫೋನ್‌ನಲ್ಲಿ SOS ಫೀಚರ್ಸ್‌ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಮರ್ಜೆನ್ಸಿ ಕಂಟ್ಯಾಕ್ಟ್‌ ಅನ್ನು ಸೆಟ್‌ ಮಾಡುವುದು ಹೇಗೆ?

ಎಮರ್ಜೆನ್ಸಿ ಕಂಟ್ಯಾಕ್ಟ್‌ ಅನ್ನು ಸೆಟ್‌ ಮಾಡುವುದು ಹೇಗೆ?

ನಿಮ್ಮ ಎಮೆರ್ಜೆನ್ಸಿ ಕಂಟ್ಯಾಕ್ಟ್‌ ಅನ್ನು ಸೆಟ್‌ ಮಾಡುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ:1 ಮೊದಲಿಗೆ ನಿಮ್ಮ ಫೋನ್ ಬುಕ್‌ ತೆರೆಯಿರಿ.
ಹಂತ:2 ನಿಮ್ಮ ಎಮರ್ಜೆನ್ಸಿ ಕಂಟ್ಯಾಕ್ಟ್‌ ಎಂದು ಬಯಸುವ ವ್ಯಕ್ತಿಯ ಸಂಪರ್ಕ ವಿವರಗಳನ್ನು ತೆರೆಯಿರಿ.
ಹಂತ:3 ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ಸೇರಿಸು ಆಯ್ಕೆಯನ್ನು ಟ್ಯಾಪ್ ಮಾಡಿ.

ನಿಮ್ಮ ಐಫೋನ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸುವುದು ಹೇಗೆ?

ನಿಮ್ಮ ಐಫೋನ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸುವುದು ಹೇಗೆ?

ನಿಮ್ಮ ಎಮರ್ಜೆನ್ಸಿ ಕಂಟ್ಯಾಕ್ಟ್‌ ಅನ್ನು ಸೆಟ್‌ ಮಾಡಿದ ನಂತರ ನಿಮ್ಮ ಐಫೋನ್‌ನಲ್ಲಿ SOS ಫೀಚರ್ಸ್‌ ಬಳಸಲು ಕೆಳಗಿನ ಹಂತಗಳನ್ನು ಪಾಲಿಸಿರಿ.
ನೀವು ಐಫೋನ್‌ 8 ಅಥವಾ ನಂತರದ ಮಾದರಿ ಬಳಸುತ್ತಿದ್ದರೆ ನೀವು ಹೀಗೆ ಮಾಡಿರಿ.
ಹಂತ:1 ಎಮರ್ಜೆನ್ಸಿ SOS ಸ್ಲೈಡರ್ ಕಾಣಿಸಿಕೊಳ್ಳುವವರೆಗೆ ಸೈಡ್ ಬಟನ್ ಮತ್ತು ವಾಲ್ಯೂಮ್ ಬಟನ್‌ಗಳಲ್ಲಿ ಒಂದನ್ನು ಒತ್ತಿ ಹಿಡಿದುಕೊಳ್ಳಿ.
ಹಂತ:2 ನಂತರ ಎಮರ್ಜೆನ್ಸಿ ಸೇವೆಗಳಿಗೆ ಕರೆ ಮಾಡಲು ತುರ್ತು SOS ಸ್ಲೈಡರ್ ಅನ್ನು ಎಳೆಯಿರಿ.

ಒಂದು ವೇಳೆ ನೀವು ಸೈಡ್ ಬಟನ್ ಮತ್ತು ವಾಲ್ಯೂಮ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರಿಸಿದರೆ, ಸ್ಲೈಡರ್ ಅನ್ನು ಎಳೆಯುವ ಬದಲು, ಕೌಂಟ್‌ಡೌನ್ ಪ್ರಾರಂಭವಾಗುತ್ತದೆ ಮತ್ತು ಎಚ್ಚರಿಕೆ ಧ್ವನಿಸುತ್ತದೆ. ಕೌಂಟ್‌ಡೌನ್ ಮುಗಿಯುವವರೆಗೆ ನೀವು ಬಟನ್‌ಗಳನ್ನು ಹಿಡಿದಿಟ್ಟುಕೊಂಡರೆ, ನಿಮ್ಮ ಐಫೋನ್ ಆಟೋಮ್ಯಾಟಿಕ್‌ ಎಮರ್ಜೆನ್ಸಿ ಸೇವೆಗಳಿಗೆ ಕರೆ ಮಾಡುತ್ತದೆ.

ನೀವು ಐಫೋನ್‌ 7 ಅಥವಾ ಹಳೆಯ ಮಾದರಿಯನ್ನು ಬಳಸುತ್ತಿದ್ದರೆ ಹೀಗೆ ಮಾಡಿ
ಹಂತ:1 ಮೊದಲಿಗೆ ನಿಮ್ಮ ಐಫೋನಿನ ಸೈಡ್ ಬಟನ್ ಅನ್ನು ಮೂರು ಬಾರಿ ತ್ವರಿತವಾಗಿ ಒತ್ತಿರಿ. ತುರ್ತು SOS ಸ್ಲೈಡರ್ ಕಾಣಿಸಿಕೊಳ್ಳುತ್ತದೆ.
ಹಂತ:2 ತುರ್ತು ಸೇವೆಗಳಿಗೆ ಕರೆ ಮಾಡಲು ಎಮರ್ಜೆನ್ಸಿ SOS ಸ್ಲೈಡರ್ ಅನ್ನು ಎಳೆಯಿರಿ.
ತುರ್ತು ಸೇವೆಗೆ ಕರೆ ಮುಗಿದ ನಂತರ, ನೀವು ಕರೆ ಸ್ಥಗಿತಗೊಳಿಸುವ ತನಕ ನಿಮ್ಮ ಐಫೋನ್‌ ನಿಮ್ಮ ಎಮರ್ಜೆನ್ಸಿ ಕಂಟ್ಯಾಕ್ಟ್‌ಗಳಿಗೆ ನಿಮ್ಮ ಪ್ರಸ್ತುತ ಸ್ಥಳದೊಂದಿಗೆ ಟೆಕ್ಸ್ಟ್‌ ಮೆಸೇಜ್‌ ಅನ್ನು ಸೆಂಡ್‌ ಮಾಡುತ್ತಲೇ ಇರುತ್ತದೆ. ಲೊಕೇಶನ್‌ ಸೇವೆಗಳು ಆಫ್ ಆಗಿದ್ದರೆ, ಅದು ತಾತ್ಕಾಲಿಕವಾಗಿ ಆನ್ ಆಗುತ್ತದೆ ಮತ್ತು ನಿಮ್ಮ ಸ್ಥಳ ಬದಲಾದರೆ, ನಿಮ್ಮ ಕಂಟ್ಯಾಕ್ಟ್‌ ಕೂಡ ಅಪ್ಡೇಟ್‌ ಪಡೆದುಕೊಳ್ಳಲಿದೆ.

ನಿಮ್ಮ ಆಪಲ್ ವಾಚ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸುವುದು ಹೇಗೆ?

ನಿಮ್ಮ ಆಪಲ್ ವಾಚ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸುವುದು ಹೇಗೆ?

ಬಳಕೆದಾರರು ತಮ್ಮ ಆಪಲ್ ವಾಚ್‌ನಲ್ಲಿ ಎಮರ್ಜೆನ್ಸಿ SOS ಫೀಚರ್ಸ್‌ ಬಳಸಲು ಈ ನಿಯಮಗಳನ್ನು ಪಾಲಿಸಿ.
ಹಂತ:1 ಎಮರ್ಜೆನ್ಸಿ SOS ಸ್ಲೈಡರ್ ಕಾಣಿಸಿಕೊಳ್ಳುವವರೆಗೆ ನಿಮ್ಮ ವಾಚ್‌ನ ಸೈಡ್ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
ಹಂತ:2 ತಕ್ಷಣವೇ ಕರೆ ಮಾಡಲು ಎಮರ್ಜೆನ್ಸಿ SOS ಸ್ಲೈಡರ್ ಅನ್ನು ಎಳೆಯಿರಿ.

Best Mobiles in India

English summary
Here is a step-by-step guide that will help you use SOS feature and get help from emergency services using your iPhone or your Apple Watch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X