Subscribe to Gizbot

ವೊಡಾಫೋನ್ ಗ್ರಾಹಕರು 1GB ಡಾಟಾ ಬೆಲೆಗೆ 10GB 4G ಡಾಟಾ ಪಡೆಯುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಈ ವರ್ಷದ ಅಂತ್ಯದವರೆಗೆ ಡಾಟಾ ಮತ್ತು ಕರೆಗಳು ಸೇರಿದಂತೆ ಉಚಿತ ಆಫರ್‌ಗಳನ್ನು ನೀಡಿರುವುದು ಗಿಜ್‌ಬಾಟ್‌ ಓದುಗರಿಗೆ ತಿಳಿದೇಇದೆ. ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಭಾರತಿ ಏರ್‌ಟೆಲ್‌, ವೊಡಾಫೋನ್, ಬಿಎಸ್‌ಎನ್‌ಎಲ್‌ ಮತ್ತು ಐಡಿಯಾ ಟೆಲಿಕಾಂಗಳು ಹೊಸ ಹೊಸ ಆಫರ್‌ಗಳನ್ನು ನೀಡಲು ಮುಂದಾಗಿವೆ.

ಅಕ್ಟೋಬರ್‌ ತಿಂಗಳ ಆರಂಭದಲ್ಲಿ ಏರ್‌ಟೆಲ್‌ ಕೇವಲ 1GB ಡಾಟಾ ರೀಚಾರ್ಜ್‌ ಬೆಲೆಗೆ 10GB 4G ಡಾಟಾ ಆಫರ್‌ ಮಾಡಿತ್ತು. ಈಗ ಏರ್‌ಟೆಲ್‌ಗೆ ಪೈಪೋಟಿಯಾಗಿ ವೊಡಾಫೋನ್ ಹೊಸ ಪ್ಲಾನ್‌ನೊಂದಿಗೆ ಏರ್‌ಟೆಲ್‌ ರೀತಿಯಲ್ಲೇ 1GB ಡಾಟಾ ಬೆಲೆಗೆ 10GB 4G ಡಾಟಾ ನೀಡುತ್ತಿದೆ. ವೊಡಾಫೋನ್(Vodafone) ಗ್ರಾಹಕರು ಈ ಆಫರ್‌ ಅನ್ನು ಪಡೆಯುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ವೊಡಾಫೋನ್ ಆಯ್ಕೆ ಮಾಡಿಕೊಂಡವರಿಗೆ 5 ಸ್ಟ್ರಾಂಗ್ ಬೆನಿಫಿಟ್‌ಗಳು; ಮಿಸ್‌ಮಾಡದಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈವೊಡಾಫೋನ್ ಆಪ್‌ ಡೌನ್‌ಲೋಡ್‌ ಮಾಡಿ

ಮೈವೊಡಾಫೋನ್ ಆಪ್‌ ಡೌನ್‌ಲೋಡ್‌ ಮಾಡಿ

ಮೊದಲಿಗೆ ವೊಡಾಫೋನ್‌ನ ಅಧಿಕೃತ ಆಪ್‌ 'MyVodafone' ಆಪ್ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಉಚಿತವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್‌ನಲ್ಲಿ ನಿಮ್ಮ ವೊಡಾಫೋನ್‌ ನಂಬರ್‌ನಿಂದ ಸೈನ್‌ ಇನ್‌ ಆಗಿರಿ

ಆಪ್‌ನಲ್ಲಿ ನಿಮ್ಮ ವೊಡಾಫೋನ್‌ ನಂಬರ್‌ನಿಂದ ಸೈನ್‌ ಇನ್‌ ಆಗಿರಿ

ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿದ ನಂತರ, ನಿಮ್ಮ ನಂಬರ್‌ನಿಂದ ಸೈನ್‌ ಇನ್‌ ಆಗಿ ವೈರಿಫೈ ಮಾಡಬೇಕು. ವೆರಿಫೈ ಮಾಡಲು ಆನ್‌ ಸ್ಕ್ರೀನ್‌ ಸೂಚನೆಗಳನ್ನು ಫಾಲೋ ಮಾಡಿ.

 'Now 1=10' ಬ್ಯಾನರ್‌ ಮೇಲೆ ಕ್ಲಿಕ್ ಮಾಡಿ

'Now 1=10' ಬ್ಯಾನರ್‌ ಮೇಲೆ ಕ್ಲಿಕ್ ಮಾಡಿ

ಅಪ್ಲಿಕೇಶನ್‌ ಓಪನ್ ಮಾಡಿದ ನಂತರ ಹೋಮ್‌ಸ್ಕ್ರೀನ್‌ನಲ್ಲಿ 'Now 1=10' ಪ್ರದರ್ಶನವಾಗುತ್ತದೆ. ಆ ಬ್ಯಾನರ್‌ ಮೇಲೆ ಕ್ಲಿಕ್ ಮಾಡಿ ಮುಂದಿನ ಹಂತವನ್ನು ಅನುಸರಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 1GB 4G ಡಾಟಾವನ್ನು ರೀಚಾರ್ಜ್‌ ಮಾಡಿಸಿ

1GB 4G ಡಾಟಾವನ್ನು ರೀಚಾರ್ಜ್‌ ಮಾಡಿಸಿ

ಈ ಹಂತದಲ್ಲಿ 1GB 4G ಡಾಟಾ ಪ್ಯಾಕ್‌ ಅನ್ನು 'Now 1=10' ಬ್ಯಾನರ್‌ ಕ್ಲಿಕ್ ಮಾಡಿದ ನಂತರ ರೀಚಾರ್ಜ್‌ ಮಾಡಿಸಿ. ನಂತರ 24-48 ಗಂಟೆಯೊಳಗೆ ಹೆಚ್ಚುವರಿ 9GB ಡಾಟಾ ನಿಮ್ಮ ನಂಬರ್‌ಗೆ ಕ್ರೆಡಿಟ್‌ ಆಗುತ್ತದೆ.

ಕೇವಲ 4G ವೃತ್ತಗಳಿಗೆ ಮಾತ್ರ

ಕೇವಲ 4G ವೃತ್ತಗಳಿಗೆ ಮಾತ್ರ

ವೊಡಾಫೋನ್‌ ನೀಡುತ್ತಿರುವ 1GB ಡಾಟಾ ಬೆಲೆಗೆ 10GB 4G ಡಾಟಾ ಆಫರ್ ಕೇವಲ 4G ವೃತ್ತಗಳಿಗೆ ಮಾತ್ರ. ಅಲ್ಲದೇ ಹೆಚ್ಚುವರಿ 9GB ಡಾಟಾವು ರಾತ್ರಿ ಡಾಟಾವಾಗಿ ಕ್ರೆಡಿಟ್‌ ಆಗುತ್ತದೆ. ಡಾಟಾವನ್ನು 12AM ನಿಂದ 6AM ವರೆಗೆ ಬಳಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here's How You can Get 10GB of 4G Data by Paying for Just 1GB Data in Vodafone! To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot