120 ಇಂಚಿನ ಈ ಲೇಸರ್‌ ಸ್ಮಾರ್ಟ್‌ಟಿವಿಯ ಬೆಲೆ ಎಷ್ಟು ಗೊತ್ತೆ?..ಇದರ ಫೀಚರ್ಸ್‌ ಏನು?

|

ಇಂದಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದೆ. ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಸಖತ್‌ ಸೌಂಡ್‌ ಮಾಡುತ್ತಿವೆ. ಹೊಸ ಮಾದರಿಯ ತಂತ್ರಜ್ಞಾನ, ಆಕರ್ಷಕ ಡಿಸ್‌ಪ್ಲೇ ವಿನ್ಯಾಸ ಹಾಗೂ ವಿವಿಧ ಡಿಸ್‌ಪ್ಲೇ ಗಾತ್ರದ ಸ್ಮಾರ್ಟ್‌ಟಿವಿಗಳು ಗಮನಸೆಳೆಯುತ್ತಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮದೇ ಆದ ವಿಶೇಷ ಶೈಲಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಹಿಸೆನ್ಸ್‌ ಕಂಪೆನಿ ಕೂಡ ಸೇರಿದೆ. ಸದ್ಯ ಇದೀಗ ಹಿಸೆನ್ಸ್‌ ಕಂಪೆನಿ ಹೊಸ 120 ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ 120L9G ಅನ್ನು ಬಿಡುಗಡೆ ಮಾಡಿದೆ.

ಹಿಸೆನ್ಸ್‌

ಹೌದು, ಜಾಗತಿಕ ತಂತ್ರಜ್ಞಾನದ ಬ್ರ್ಯಾಂಡ್‌ ಎನಿಸಿಕೊಂಡಿರುವ ಹಿಸೆನ್ಸ್‌ ಕಂಪೆನಿ ಭಾರತದಲ್ಲಿ ಹೊಸ 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ, 120L9G ಅನ್ನು ಬಿಡುಗಡೆ ಮಾಡಿದೆ. ಹಿಸೆನ್ಸ್‌ ಕಂಪೆನಿ ತನ್ನ ಲೇಸರ್‌ ಟಿವಿ ಆವಿಷ್ಕಾರಗಳಿಗಾಗೊ ಜಾಗತಿಕವಾಗ ಅತಿ ಹೆಚ್ಚು ಪ್ರಶಸ್ತಿ ಹಾಗೂ ಮನ್ನಣೆ ಪಡೆದ ಬ್ರ್ಯಾಂಡ್‌ ಎನಿಸಿಕೊಂಡಿದೆ. 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ ಮೊದಲ 4K ಸ್ಮಾರ್ಟ್ ಲೇಸರ್‌ ಟಿವಿ ಆಗಿದೆ. ಇದು ನಮ್ಮ ಹೋಮ್‌ ಸಿನಿಮಾ ಅನುಭವವನ್ನು ಮರು ವ್ಯಾಖ್ಯಾನಿಸಲು ಎದುರು ನೋಡುತ್ತಿದ್ದೇವೆ ಎಂದು ಹಿಸೆನ್ಸ್ ಇಂಡಿಯಾ, ಸಿಒಒ, ರಿಷಿ ಟಂಡನ್, ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ

ಇನ್ನು 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ ಹೋಮ್‌ ಎಂಟರ್‌ಟೈನ್‌ಮೆಂಟ್‌ ಅನ್ನು ಇನ್ನಷ್ಟು ಹೊಸ ಅನುಭವದೊಂದಿಗೆ ನೀಡಲಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ಟ್ರಿಪಲ್ ಕಲರ್ ಲೇಸರ್ ತಂತ್ರಜ್ಞಾನವನ್ನು ಒಳಗೊಂಡಿರುವ ಸ್ಮಾರ್ಟ್‌ಟಿವಿ ಆಗಿದೆ. ಇದರಲ್ಲಿ ಶುದ್ಧಕೆಂಪು, ಹಸಿರು ಮತ್ತು ಬ್ಲೂ ಲೇಸರ್‌ಗಳನ್ನು ನೀಡಲಾಗಿದೆ. ನ್ಯೂ ಕಲರ್‌ ಕಾರ್ಯಕ್ಷಮತೆಯನ್ನು ಸಾಧಿಸಲು BT.2020 ಕಲರ್‌ ಸ್ಪೇಸ್‌ 107% ಅನ್ನು ತಲುಪುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯ ವಿಶೇ‍ಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಿಸೆನ್ಸ್‌

ಹಿಸೆನ್ಸ್‌ 120-ಇಂಚಿನ 4K ಸ್ಮಾರ್ಟ್ ಲೇಸರ್ ಟಿವಿ 120 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ವಿಶ್ವದ ಮೊಲ ಟ್ರಿಪಲ್‌ ಕಲರ್‌ ಲೇಸರ್‌ ಹೊಂದಿರುವ ಟಿವಿ ಆಗಿದ್ದು, ಇದರ ಹೈ ಡೈನಾಮಿಕ್ ರೇಂಜ್ (HDR) 3000 ಲ್ಯುಮೆನ್‌ಗಳ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇದು ಅತ್ಯುತ್ತಮ ಸ್ಪೆಕ್ಯುಲರ್ ಹೈಲೈಟ್‌ಗಳು ಮತ್ತು ಕಲರ್‌ ಡೆಪ್ತ್‌ ಅನ್ನು ಉತ್ಪಾದಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾ, ಸ್ಲೊವೇನಿಯಾ, ಸೆರ್ಬಿಯಾ, ಮೆಕ್ಸಿಕೊ, ಜೆಕ್ ರಿಪಬ್ಲಿಕ್ ಮುಂತಾದ ದೇಶಗಳಲ್ಲಿ ನೆಲೆಗೊಂಡಿರುವ 14 ಉತ್ಪಾದನಾ ಸೌಲಭ್ಯಗಳ ಜೊತೆಗೆ 160 ಕ್ಕೂ ಹೆಚ್ಚು ದೇಶಗಳಲ್ಲಿ ಉಪಸ್ಥಿತಿಯೊಂದಿಗೆ ಹಿಸೆನ್ಸ್ ಜಾಗತಿಕವಾಗಿ ತನ್ನ ಹೆಜ್ಜೆಗುರುತುಗಳನ್ನು ಹೊಂದಿದೆ.

ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿಯ ಆಡಿಯೊವನ್ನು ಇನ್ನಷ್ಟು ವರ್ಧಿಸಲು 40W ಡಾಲ್ಬಿ ಅಟ್ಮಾಸ್ ಸ್ಪೀಕರ್ ಅನ್ನು ಸೇರಿಸಿದೆ. ಇದು ಉತ್ತಮ ಗುಣಮಟ್ಟದ ಧ್ವನಿ ಅನುಭವವನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಅನ್ನು ಕೂಡ ಹೊಂದಿದೆ, ಇದರಿಂದ ನೀವು ಸ್ಮಾರ್ಟ್ ಲೇಸರ್ ಟಿವಿ ಮೂಲಕ ಹ್ಯಾಂಡ್ಸ್-ಫ್ರೀ ಸ್ಮಾರ್ಟ್ ಹೋಮ್ ಸಾಧನಗಳನ್ನು ನಿಯಂತ್ರಿಸಬಹುದು. ಇನ್ನು ಈ ಲೇಸರ್‌ ಟಿವಿ ತನ್ನ ಡಿಸ್‌ಪ್ಲೇ ಶ್ರೀಮಂತಿಕೆ ಮತ್ತು ಉತ್ಪತ್ತಿಯಾಗುವ ಬಣ್ಣಗಳ ಕಾರಣದಿಂದಾಗಿ ಒಟ್ಟಾರೆ ವೀಕ್ಷಣೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಲೇಸರ್‌

ಇನ್ನು ಹಿಸ್ಸೆನ್ಸ್ ಕಂಪೆನಿಯ ಈ ಹೊಸ ಲೇಸರ್‌ ಟಿವಿ ಭಾರತದಲ್ಲಿ 4,99,999ರೂ.ಬೆಲೆಯನ್ನು ಹೊಂದಿದೆ. ಇದು ಈಗಾಗಲೇ ಅಮೆಜಾನ್‌ ಪ್ಲಾಟ್‌ಫಾರ್ಮ್‌ ಮೂಲಕ ಭಾರತದಲ್ಲಿ ಲಭ್ಯವಿದೆ. ಲೇಸರ್‌ ಸ್ಮಾರ್ಟ್‌ಟಿವಿ ಭಾರತದಲ್ಲಿ ಹೊಸ ರೀತಿಯ ಅನುಭವ ನೀಡಲಿದೆ. ಈ ಮಾದರಿಯ ಸ್ಮಾರ್ಟ್‌ಟಿವಿ ಗ್ರಾಹಕರಿಗೆ ಹೊಸದಾಗಿದ್ದು, ಸಾಕಷ್ಟು ಸೌಂಡ್‌ ಮಾಡಲಿದೆ ಎಂದು ಹೇಳಲಾಗಿದೆ. ಇನ್ನು ಈ ಹಿಸೆನ್ಸ್‌ ಕಂಪೆನಿ ತನ್ನ ಮಧ್ಯಮ ಶ್ರೇಣಿಯ ಮತ್ತು ಪ್ರೀಮಿಯಂ ಟಿವಿ ಸರಣಿಯೊಂದಿಗೆ ಗುರುತಿಸಿಕೊಂಡಿದೆ. ಇದೀಗ ಲೇಸರ್‌ ಟಿವಿಯ ಮೂಲಕ ಹೆಚ್ಚಿನ ರೆಸಲ್ಯೂಶನ್ ಗುಣಮಟ್ಟದಲ್ಲಿ ವಿಷಯವನ್ನು ಪ್ರೊಜೆಕ್ಟ್ ಮಾಡಲು ಆದ್ಯತೆ ನೀಡುವವರಿಗೆ ಹೊಸ ಆಯ್ಕೆಯಾಗಿದೆ.

ಬಯಸಿದರೆ

ಒಂದು ವೇಳೆ ನೀವು ಭಾರತದಲ್ಲಿ 32 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಬಯಸಿದರೆ ಹಲವು ಆಯ್ಕೆಗಳನ್ನು ನೋಡಬಹುದು. ಇದರಲ್ಲಿ ನೀವು ಜನಪ್ರಿಯ ಸ್ಮಾರ್ಟ್‌ಟಿವಿ ಬ್ರ್ಯಾಂಡ್‌ಗಳು ಎನಿಸಿಕೊಂಡಿರುವ ಸೋನಿ, ಹಿಸೆನ್ಸ್‌, ತೋಷಿಭಾ ಟಿವಿಗಳು ಕೂಡ ಸೇರಿವೆ. ಹಿಸೆನ್ಸ್‌ ಕಂಪೆನಿಯ ಸ್ಮಾರ್ಟ್‌ಟಿವಿ ಕೂಡ 32 ಇಂಚಿನ ಆಯ್ಕೆಯಲ್ಲಿ ಲಭ್ಯವಿದೆ. ಪ್ರಸ್ತುತ ನೀವು 32 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ಈ ಕೆಳಗಿನ ಸ್ಮಾರ್ಟ್‌ಟಿವಿಗಳು ಬೆಸ್ಟ್‌ ಎನಿಸಲಿವೆ.

ಹಿಸೆನ್ಸ್ 32A56E

ಹಿಸೆನ್ಸ್ 32A56E

ಹಿಸೆನ್ಸ್‌ 32A56E ಸ್ಮಾರ್ಟ್‌ಟಿವಿ 32 ಇಂಚಿನ ಟಿವಿ HD ರೆಡಿ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇನ್ನು ಈ ಸ್ಮರ್ಟ್‌ಟಿವಿ ಕನೆಕ್ಟಿವಿಟಿ ಆಯ್ಕೆಗಾಗಿ 2 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ. ಹಾಗೆಯೇ ಈ ಟಿವಿ 1GB RAM ಮತ್ತು 8GB ROM ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಗೂಗಲ್ ಪ್ಲೇ ಸ್ಟೋರ್, ಗೂಗಲ್ ಅಸಿಸ್ಟೆಂಟ್ ಮತ್ತು ಕ್ರೋಮ್‌ಕಾಸ್ಟ್ ಇಂಟರ್‌ಬಿಲ್ಟ್‌ ಪ್ರವೇಶವನ್ನು ನೀಡುತ್ತದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ 16,999ರೂ.ಬೆಲೆಗೆ ದೊರೆಯಲಿದೆ.

ಸೋನಿ W830

ಸೋನಿ W830

32 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಬಯಸಿದರೆ ಸೋನಿ W830 ಟಿವಿ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV UI ನಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳ ಅನುಕೂಲಕ್ಕಾಗಿ ಪ್ಲೇ ಸ್ಟೋರ್‌ಗೆ ಪ್ರವೇಶವನ್ನು ಕೂಡ ಪಡೆಯಬಹುದಾಗಿದೆ. ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ಟಿವಿಗೆ ಕನೆಕ್ಟ್‌ ಮಾಡುವುದಕ್ಕೆ ಕ್ರೋಮಾಕಾಸ್ಟ್‌ ಅನ್ನು ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ ಎಕ್ಸ್-ಪ್ರೊಟೆಕ್ಷನ್ ಪ್ರೊನೊಂದಿಗೆ ಬರಲಿದೆ. ಪ್ರಸ್ತುತ ಈ ಸ್ಮಾರ್ಟ್‌ಟಿವಿ 31,290ರೂ.ಬೆಲೆಯನ್ನು ಹೊಂದಿದೆ.

Best Mobiles in India

Read more about:
English summary
Hisense has introduced its new 120-inch 4K Laser TV in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X