ಭಾರತದಲ್ಲಿ ಹೈಸೆನ್ಸ ಟಿವಿ ಲಾಂಚ್: ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್ ಇವೆ?
ಹೈಸೆನ್ಸ (HiSense) ಕಂಪೆನಿಯು ತನ್ನ ಕೆಲವು ಸ್ಮಾರ್ಟ್‌ಟಿವಿಗಳನ್ನು ಭಾರತದಲ್ಲಿ ಈಗಾಗಲೇ ಪರಿಚಯಿಸಿದೆ. ಹೈಸೆನ್ಸ್ ಸಂಸ್ಥೆಯು ಈಗ ಭಾರತದಲ್ಲಿ ನೂತನವಾಗಿ ಮತ್ತೆ ಎರಡು ಸ್ಮಾರ್ಟ್‌ಟಿವಿಗಳನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಸ್ಮಾರ್ಟ್‌ಟಿವಿಗಳ ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದೆ.

ಹೌದು, ಭಾರತದಲ್ಲಿ ಹೈಸೆನ್ಸ A7H ಮತ್ತು U7H 4K ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಗಳು 4K 120Hz ಪ್ಯಾನೆಲ್‌ನೊಂದಿಗೆ 55 ಮತ್ತು 65 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಎರಡು ಗಾತ್ರಗಳಲ್ಲಿ ಲಭ್ಯವಿದೆ. ಇದನ್ನು ಸಂಸ್ಥೆಯು ಪರಿಚಯಾತ್ಮಕವಾಗಿ ಕಡಿಮೆ ದರದಲ್ಲಿ ಮಾರಲು ಮುಂದಾಗಿದೆ.

ಈ ಎರಡೂ ಸ್ಮಾರ್ಟ್‌ಟಿವಿಗಳು ವಿಶೇಷ ಆಕರ್ಷಣೀಯ ಫೀಚರ್ಸಗಳನ್ನು ಒಳಗೊಂಡಿವೆ. ಈ ಟಿವಿಗಳನ್ನು ಖರೀದಿ ಮಾಡಿದರೆ ಇದರ ಜೊತೆಗೆ ಫೈರ್ ಟಿವಿ 4K ಅನ್ನು ಸಹ ಉಚಿತವಾಗಿ ಪಡೆಯಬಹುದಾಗಿದೆ. ಹಾಗಿದ್ರೆ ಭಾರತದಲ್ಲಿಈ ಸ್ಮಾರ್ಟ್‌ಟಿವಿಗಳ ಬೆಲೆ ಎಷ್ಟು? ಏನೆಲ್ಲಾ ಫೀಚರ್ಸ್‌ಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಹೈಸೆನ್ಸ U7H TV ಫೀಚರ್ಸ್
ಹೈಸೆನ್ಸ U7H QLED TV ಮೊದಲೇ ಹೇಳಿದಂತೆ ಎರಡು ರೀತಿಯ ಗಾತ್ರಗಳಲ್ಲಿ ಲಭ್ಯವಾಗುತ್ತವೆ. 3840×2160 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ ಇದರಲ್ಲಿ 55 ಹಾಗೂ 65 ಇಂಚಿನ 4K IPS ಡಿಸ್‌ಪ್ಲೇ ಇದ್ದು, 120Hz ರಿಫ್ರೆಶ್ ದರದ ಆಯ್ಕೆ ಪಡೆದಿದೆ. ಜೊತೆಗೆ ಉತ್ತಮ ಟಿವಿ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಕ್ವಾಂಟಮ್ ಡಾಟ್ ತಂತ್ರಜ್ಞಾನದ ವಿಶೇಷತೆಯನ್ನು ಇದರಲ್ಲಿ ನೀಲಾಗಿದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್‌ನ ಆಯ್ಕೆ ಪಡೆದಿದೆ.

ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಯು ಗೇಮರ್‌ಗಳಿಗೆ ತುಂಬಾನೇ ಇಷ್ಟವಾಗಲಿದೆ. AMD ಉಚಿತ ಸಿಂಕ್ ಪ್ರೀಮಿಯಂ, ಆಟೋ ಲೋ ಲೇಟೆನ್ಸಿ ಮೋಡ್ (ALLM) ಮತ್ತು ವೇರಿಯಬಲ್ ರಿಫ್ರೆಶ್ ರೇಟ್ (VRR) ನಂತಹ ವೈಶಿಷ್ಟ್ಯ ಇದರಲ್ಲಿದೆ. ಗೇಮಿಂಗ್ ಕನ್ಸೋಲ್‌ಗಳಿಗೆ ಬೆಂಬಲ ನೀಡುವ ಸಲುವಾಗಿ ಇದರಲ್ಲಿ HDMI 2.1 ಮತ್ತು e-ARC ಆಯ್ಕೆ ನೀಡಲಾಗಿದೆ. ಹಾಗೆಯೇ ಇದು 3GB/8GB ಸ್ಟೋರೇಜ್ ಆಯ್ಕೆ ಪಡೆದಿದೆ.

ಈ ಸ್ಮಾರ್ಟ್ ಟಿವಿ ಗೂಗಲ್ ಅಸಿಸ್ಟೆಂಟ್ ಮತ್ತು ಅಲೆಕ್ಸಾಗೆ ಬೆಂಬಲಿಸಲಿದ್ದು, 5,999 ರೂ. ಮೌಲ್ಯದ ಉಚಿತ ಅಮೆಜಾನ್ ಫೈರ್ ಟಿವಿ ಸ್ಟಿಕ್ 4K ಯನ್ನು ಸಹ ಪಡೆಯಬಹುದಾಗಿದೆ.

ಹೈಸೆನ್ಸ ಟೊರೊಂಡೋ 2.0 A7H TV
ಈ ಸ್ಮಾರ್ಟ್‌ಟಿವಿ 3840×2160 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 55 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಪಿಕ್ಸೆಲ್ ಟ್ಯೂನಿಂಗ್, ಡಾಲ್ಬಿ ವಿಷನ್ ಮತ್ತು HDR10 ಆಯ್ಕೆ ಪಡೆದಿದೆ. ಈ ಸ್ಮಾರ್ಟ್‌ಟಿವಿ ಸಹ ಆಟೋ ಲೋ ಲೇಟೆನ್ಸಿ ಮೋಡ್ (ALLM) ಆಯ್ಕೆಯ ಜೊತೆಗೆ ವೇರಿಯಬಲ್ ರಿಫ್ರೆಶ್ ರೇಟ್ (VRR) ಗೇಮಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಸ್ಮಾರ್ಟ್‌ಟಿವಿಯು ಆರು ಸ್ಪೀಕರ್ ಆಯ್ಕೆಯಗಳನ್ನು ಪಡೆದಿದ್ದು, ಇದು 120W ಸೌಂಡ್ ಔಟ್‌ಪುಟ್ ನೀಡಲಿದೆ. ಇದರಲ್ಲಿ ಜೆಬಿಎಲ್ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ. ಈ ಸ್ಮಾರ್ಟ್‌ಟಿವಿಯಲ್ಲಿ ಕ್ರೋಮ್‌ಕಾಸ್ಟ್ ಮೂಲಕ ಗೂಗಲ್ ಟಿವಿ ವೀಕ್ಷಣೆ ಮಾಡಬಹುದಾಗಿದೆ. ಈ ಸ್ಮಾರ್ಟ್‌ಟಿವಿ 2GB/16GB ಸ್ಟೋರೇಜ್ ಸಾಮರ್ಥ್ಯ ಆಯ್ಕೆಯನ್ನು ಪಡೆದಿದೆ.

ಬೆಲೆ ಹಾಗೂ ಲಭ್ಯತೆ
55 ಇಂಚಿನ ಹೈಸೆನ್ಸ್ U7H ಸ್ಮಾರ್ಟ್‌ಟಿವಿ ಯ ಬೆಲೆ 51,990 ರೂ. ಇದ್ದು, 65 ಇಂಚಿನ ಸ್ಮಾರ್ಟ್‌ಟಿವಿ ಬೆಲೆ 71,990 ರೂ. ಗಳು. ಆದರೆ ಅಮೆಜಾನ್ ಇಂಡಿಯನ್ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಈ ಸ್ಮಾರ್ಟ್‌ಟಿವಿಗಳನ್ನು ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಬಹುದಾಗಿದೆ. ಹೈಸೆನ್ಸ್ A7H ಗೆ 42,990 ರೂ.ಗಳ ರಿಯಾಯಿರಿ ದರ ನಿಗದಿ ಮಾಡಲಾಗಿದೆ. ಅಮೆಜಾನ್ ಅಷ್ಟೇ ಅಲ್ಲದೆ ಫ್ಲಿಪ್‌ಕಾರ್ಟ್ ಮೂಲಕವೂ ಈ ಸ್ಮಾರ್ಟ್‌ಟಿವಿ್ಳನ್ನು ಕೊಂಡುಕೊಳ್ಳಬಹುದಾಗಿದೆ.

ಆಫರ್
ಇನ್ನು ಈ ಸ್ಮಾರ್ಟ್‌ಟಿವಿ ಖರೀದಿದಾರರಿಗೆ ಕಂಪೆನಿ ಮತ್ತೊಂದು ಆಫರ್ ಘೋಷಣೆ ಮಾಡಿದೆ. ಕತಾರ್‌ನಲ್ಲಿ ಲೈವ್ ಫಿಫಾ ಪಂದ್ಯವನ್ನು ವೀಕ್ಷಿಸಲು ಟಿಕೆಟ್‌ಗಳನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಕಂಪೆನಿಯು ಫಿಫಾ ಪಂದ್ಯಕ್ಕೆ ಅಧಿಕೃತ ಪ್ರಾಯೋಜಕ ಕಂಪೆನಿಯಾಗಿರುವ ಕಾರಣ ಈ ಆಫರ್ ಘೋಷಣೆ ಮಾಡಿದೆ.


Click it and Unblock the Notifications








