Subscribe to Gizbot

ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಹೋನರ್ 7 ಫೋನ್ ಸೇಲ್

Written By:

ಹುವಾವೆ ಸ್ಮಾರ್ಟ್‌ಫೋನ್ ಹೋನರ್ ಇತ್ತೀಚೆಗೆ ಲಾಂಚ್ ಮಾಡಿರುವ ಸ್ಮಾರ್ಟ್‌ಫೋನ್ ಹೋನರ್ 7 ಮೇಲೆ ಮಾರಾಟ ಪ್ರಾರಂಭವನ್ನು ಮಾಡಿದೆ. ಅಕ್ಟೋಬರ್ 15, 2015 ಕ್ಕೆ ಫೋನ್ ಮಾರಾಟ ಆರಂಭಗೊಳ್ಳಲಿದೆ.

ಓದಿರಿ: ಬಿಗ್ ಬಿಲಿಯನ್ ಡೇ ವಿಶೇಷ ಹೋನರ್ ಫೋನ್‌ಗಳ ಮೇಲೆ ದರಕಡಿತ

ಫ್ಲಿಪ್‌ಕಾರ್ಟ್‌ನಲ್ಲಿ ಅಕ್ಟೋಬರ್ 15 ರಂದು ಆರಂಭವಾಗಿ ಹೋನರ್ 7 ಎರಡು ಬಣ್ಣಗಳಲ್ಲಿ ಲಭ್ಯವಾಗುತ್ತಿದೆ, ಮಿಸ್ಟರಿ ಗ್ರೇ ಮತ್ತು ಫ್ಯಾಂಟಸಿ ಸಿಲ್ವರ್ ಬೆಲೆ ರೂ 22,999 ಆಗಿದೆ. ಖರೀದಿಸುವವರಿಗೆ ಕಂಪೆನಿಯು ಕ್ಯಾಶ್‌ಬ್ಯಾಕ್ ಮತ್ತು ವಿನಿಮಯ ಕೊಡುಗೆಗಳನ್ನು ಒದಗಿಸುತ್ತಿದ್ದು 10 ಶೇಕಡಾ ಕ್ಯಾಶ್‌ಬ್ಯಾಕ್ ಅನ್ನು ಆಯ್ಕೆಮಾಡಿದ ಬ್ಯಾಂಕ್‌ಗಳಲ್ಲಿ ರೂ 12,000 ಕ್ಕಿಂತ ವಿನಿಮಯವಾಗಿ ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ನೀಡುತ್ತಿದೆ. ಹೋನರ್ 7 ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅಧಿಕೃತ ವೆಬ್‌ಸೈಟ್‌ಗೆ ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ

ಹೋನರ್ 7

ಇನ್ನು ಫೋನ್‌ನ ವಿಶೇಷತೆಗಳತ್ತ ನೋಡುವುದಾದರೆ ಇದು 5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಮತ್ತು ರೆಸಲ್ಯೂಶನ್ 1080x1920 ಪಿಕ್ಸೆಲ್ ಇದರಲ್ಲಿದೆ. ಕಂಪೆನಿಯ 64 ಬಿಟ್ ಓಕ್ಟಾ ಕೋರ್ ಕಿರಿನ್ 935 ಪ್ರೊಸೆಸರ್ ಇದರಲ್ಲಿದ್ದು 3ಜಿಬಿ RAM ಅನ್ನು ಫೋನ್ ಒಳಗೊಂಡಿದೆ. ಸ್ಮಾರ್ಟ್‌ಫೋನ್ EMUI 3.1 ಸ್ಕಿನ್ ಅನ್ನು ಫೋನ್ ಮೇಲ್ಭಾಗದಲ್ಲಿ ಹೊಂದಿದೆ.

ಕ್ಯಾಮೆರಾ

ಹೋನರ್ 7

ಫೋನ್ ರಿಯರ್ ಕ್ಯಾಮೆರಾ 20 ಮೆಗಾಪಿಕ್ಸೆಲ್ ಆಗಿದ್ದು ಫೇಸ್ ಡಿಟೆಕ್ಶನ್ ಆಟೊಫೋಕಸ್ ಅನ್ನು ಫೋನ್ ಒಳಗೊಂಡಿದೆ. ಇನ್ನು ಆಟೊಫೋಕಸ್ ವೇಗ 0.1 ಸೆಕೆಂಡ್‌ಗಳಾಗಿದೆ. ಕ್ಯಾಮೆರಾವು ಸೋನಿ IMX230 ಸೆನ್ಸಾರ್ ಆಗಿದ್ದು, f/2.0 ಅಪಾರ್ಚರ್, 6 - ಲೆನ್ಸ್ ಮಾಡ್ಯೂಲ್ ಮತ್ತು ಮೇಲ್ಭಾಗದಲ್ಲಿ ಸಫಾಯರ್ ಗ್ಲಾಸ್ ಭದ್ರತೆಯನ್ನು ಹೊಂದಿದೆ.

ಮುಂಭಾಗ ಕ್ಯಾಮೆರಾ

ಹೋನರ್ 7

ಫೋನ್ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದು ರಿಯರ್ ಕ್ಯಾಮೆರಾದ ಬಲಕೆಳಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದೆ ಇದನ್ನು ಬಳಸಿ ಬಳಕೆದಾರರು ಸ್ಮಾರ್ಟ್‌ಫೋನ್ ಅನ್ನು ಅನ್‌ಲಾಕ್ ಮಾಡಬಹುದು. ಭಾರತದ ಯುವ ಮನಸಿಗೆ ಹಿತಕಾರಿಯಾಗಿರುವ ಶ್ರೇಣಿಯಲ್ಲಿ ಡಿವೈಸ್ ಲಭ್ಯವಾಗಲಿದ್ದು ನಿಜಕ್ಕೂ ಯುವಜನಾಂಗಕ್ಕೆ ಇದು ಸೂಕ್ತ ಆಯ್ಕೆ ಎಂದೆನಿಸಿದೆ.

ಮೆಟಾಲಿಕ್ ದೇಹ

ಹೋನರ್ 7

ಹೋನರ್ 7 ಪೂರ್ಣ ಮೆಟಾಲಿಕ್ ದೇಹ ವಿನ್ಯಾಸವನ್ನು ಪಡೆದುಕೊಂಡಿದ್ದು ಪ್ರೀಮಿಯಮ್ ಫಿನಿಶ್ ಇದರಲ್ಲಿದೆ. ಸಿಂಗಲ್ ಹ್ಯಾಂಡ್ ಬಳಕೆಗೆ ಇದು ಪರಿಪೂರ್ಣ ಎಂದೆನಿಸಿದೆ.

ಫಿಂಗರ್ ಪ್ರಿಂಟ್ ರೀಡರ್‌

ಹೋನರ್ 7

ಫೋನ್ ಫಿಂಗರ್ ಪ್ರಿಂಟ್ ರೀಡರ್‌ನೊಂದಿಗೆ ಬಂದಿದ್ದು ಸ್ಮಾರ್ಟ್ ಬಟನ್ ಅನ್ನು ಒಳಗೊಂಡಿದೆ.

ಗೌಪ್ಯತೆ

ಹೋನರ್ 7

ಗೌಪ್ಯತೆಯನ್ನು ರಕ್ಷಿಸುವುದಕ್ಕಾಗಿ ಅಪ್ಲಿಕೇಶನ್ ಲಾಕ್ ವ್ಯವಸ್ಥೆಯನ್ನು ಡಿವೈಸ್ ಒದಗಿಸುತ್ತಿದ್ದು ವಿಸಿಟರ್ ಮೋಡ್ ಇದರಲ್ಲಿದೆ. ಸ್ಕ್ರೀನ್ ಅನ್‌ಲಾಕ್ 0.5 ಸೆಕೆಂಡ್‌ಗಳಲ್ಲಿ ಪೂರ್ಣಗೊಳ್ಳುತ್ತದೆ.

ಫಿಂಗರ್ ಪ್ರಿಂಟ್ ಸೆನ್ಸಾರ್

ಹೋನರ್ 7

ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ನೀವು ಕೆಳಕ್ಕೆ ಸ್ವೈಪ್ ಮಾಡಿದಾಗ ಇದು ಅಧಿಸೂಚನೆ ಪ್ಯಾನಲ್ ಅನ್ನು ತೆರೆಯುತ್ತದೆ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್ ಮೇಲೆ ಡಬಲ್ ಟಚ್ ಮಾಡುವುದು ಎಲ್ಲಾ ಅಧಿಸೂಚನೆಗಳನ್ನು ನಿರ್ಗಮಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor, Huawei's Smartphone e-brand for digital natives, announced the sale commencement of its recently launched flagship smartphone Honor 7. The sale for the phone will commence at 00:00 hrs. on October 15, 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot