Subscribe to Gizbot

ನೆಟ್‌ಫ್ಲಿಕ್ಸ್‌-ಅಮೆಜಾನ್ ಪ್ರೈಮ್ ಹಿಂದಿಕ್ಕಿದ ಹಾಟ್ ಸ್ಟಾರ್ ನಂ.01

Written By:

ಭಾರತದಲ್ಲಿ 4G ಡೇಟಾ ಅತೀ ಕಡಿಮೆ ಬೆಲೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಮೊಬೈಲ್‌ನಲ್ಲಿ ವಿಡಿಯೋ ಸ್ಟ್ರಿಮಿಂಗ್ ಆಪ್‌ ಹಾಗೂ ವೆಬ್‌ ಸೈಟ್‌ಗಳ ಹಾವಳಿಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ವಿಡಿಯೋ ಸ್ಟ್ರೀಮಿಂಗ್ ಸೇವೆಗಳನ್ನು ನೀಡುತ್ತಿರುವ OTTಗಳ ಪಟ್ಟಿಯೂ ಬಿಡುಗಡೆಯಾಗಿದ್ದು, ಹಾಟ್‌ ಸ್ಟಾರ್ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ನೆಟ್‌ಫ್ಲಿಕ್ಸ್‌-ಅಮೆಜಾನ್ ಪ್ರೈಮ್ ಹಿಂದಿಕ್ಕಿದ ಹಾಟ್ ಸ್ಟಾರ್ ನಂ.01

ಓದಿರಿ: ಆಪಲ್ ಐಫೋನ್‌ ಗ್ರಾಹಕರಿಗೆ ಮಾಡಿದ್ಯಾ ಮೋಸ.? ಕ್ಷಮೆ ಕೇಳಿದ್ದು ಯಾಕೆ? ತಪ್ಪಿಗೆ ಪರಿಹಾರ?

ಈಗಾಗಲೇ ಮಾರುಕಟ್ಟೆಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಸೇವೆ ಸೇರಿದಂತೆ ಹಲವು OTT ವಿಡಿಯೋ ಸ್ಟ್ರೀಮಿಂಗ್ ಗಳು ಸೇವೆಯನ್ನು ನೀಡುತ್ತಿದ್ದು, ಇವುಗಳಲ್ಲಿ ಯಾವುದು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದೆ ಎಂಬುದರ ಪಟ್ಟಿಯೊಂದು ಬಿಡುಗಡೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾಟ್ ಸ್ಟಾರ್ ನಂ.1 ಪಟ್ಟ:

ಹಾಟ್ ಸ್ಟಾರ್ ನಂ.1 ಪಟ್ಟ:

OTT ವಿಡಿಯೋ ಸ್ಟ್ರೀಮಿಂಗ್ ಗಳಲ್ಲೇ ಹಾಟ್ ಸ್ಟಾರ್ 75 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ನಂ.1 ಪಟ್ಟವನ್ನು ಅಲಂಕರಿಸಿದೆ ಎನ್ನಲಾಗಿದೆ. ನಂತರದ ಎರಡನೇ ಸ್ಥಾನದಲ್ಲಿ ವಯೋಕಾಮ್ ಒಡೆತನದ ವೂಟ್ ಕಾಣಿಸಿಕೊಂಡಿದ್ದು, 15 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

How to Sharing a Mobile Data Connection with Your PC (KANNADA)
ಮೂರನೇ ಸ್ಥಾನದಲ್ಲಿ ಅಮೆಜಾನ್:

ಮೂರನೇ ಸ್ಥಾನದಲ್ಲಿ ಅಮೆಜಾನ್:

ಈ ವರ್ಷದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿರುವುದರಲ್ಲಿ ಅಮೆಜಾನ್ ಪ್ರೈಮ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, 11 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಸೋನಿ LIV ಕಾಣಿಸಿಕೊಂಡಿದ್ದು, ಒಟ್ಟು 5 ಮಿಲಿಯನ್ ಬಳಕೆದಾರರನ್ನು ತನ್ನದಾಗಿಸಿಕೊಂಡಿದೆ.

ನೆಟ್‌ಫ್ಲಿಕ್ಸ್ 5ನೇ ಸ್ಥಾನದಲ್ಲಿದೆ:

ನೆಟ್‌ಫ್ಲಿಕ್ಸ್ 5ನೇ ಸ್ಥಾನದಲ್ಲಿದೆ:

ದಿನದಿಂದ ದಿನಕ್ಕೆ ನೆಟ್‌ಫ್ಲಿಕ್ಸ್‌ ಖ್ಯಾತಿಯನ್ನು ಪಡೆದುಕೊಂಡಿದ್ದು, 5 ಮಿಲಿಯನ್ ಬಳಕೆದಾರರನ್ನು ಹೊಂದಿರುವ ನೆಟ್‌ಫ್ಲಿಕ್ಸ್ 5ನೇ ಸ್ಥಾನದಲ್ಲಿದೆ ಎನ್ನಲಾಗಿದ್ದು, ದಿನದಿಂದ ದಿನಕ್ಕೆ ವಿಡಿಯೋ ಸ್ಟ್ರೀಮಿಂಗ್‌ಗಲೂ ಬೆಳೆಯುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Hotstar Tops OTT Video Streaming List in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot