ಮಂಗಳನಲ್ಲಿ ಬದುಕಲು ಹೀಗಿದ್ದರೆ ಹೇಗಿರುತ್ತದೆ?

By Shwetha
|

2030 ರಲ್ಲಿ ಮಾನವನ ವಾಸವನ್ನು ಮಂಗಳನಲ್ಲಿ ಸ್ಥಾಪಿಸಬೇಕು ಎಂಬುದು ನಾಸಾದ ಅತಿದೊಡ್ಡ ಗುರಿಯಾಗಿದೆ. ಹೆಚ್ಚಿನ ಸಂಶೋಧನೆ, ಪರಿಶೀಲನೆ ತಂತ್ರಜ್ಞಾನಗಳು ಮತ್ತು ಸುಧಾರಿತ ಮಾನವ ಆರೋಗ್ಯವನ್ನು ಇಲ್ಲಿನ ಹವಾಮಾನಕ್ಕೆ ಹೊಂದಿಸುವುದು ಮುಂದಿರುವ ಯೋಜನೆಯಾಗಿದೆ.

ಓದಿರಿ:ಮಂಗಳ ಗ್ರಹದಲ್ಲಿ ಅತ್ಯದ್ಭುತ ಸೆಲ್ಫಿ

ಮಂಗಳ ಗ್ರಹವನ್ನು ತಲುಪುವ ತನ್ನ ಯೋಜನೆಗಳನ್ನು ಬಾಹ್ಯಾಕಾಶ ಸಂಸ್ಥೆ ಹೊರಹಾಕಿದ್ದು ಇದಕ್ಕೆ ಮಂಗಳನಲ್ಲಿ ನಾಸಾದ ಪ್ರಯಾಣ ಎಂಬ ತಲೆಬರಹವನ್ನು ನೀಡಲಾಗಿದೆ. ಹಾಗಿದ್ದರೆ ಸಾಮಾನ್ಯ ಮಾನವ ಮಂಗಳ ಯಾನಕ್ಕೆ ಪ್ರವಾಣವನ್ನು ಬೆಳೆಸಬೇಕು ಭೂಮಿಯಂತಹ ವಾತಾವರಣವನ್ನು ವಿಜ್ಞಾನಿಗಳು ಅಲ್ಲಿ ಪಡೆದುಕೊಳ್ಳಬೇಕೆಂಬ ಶತತ ಪ್ರಯತ್ನ ಏಕೆ ನಡೆಯುತ್ತಿದೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಹೊಸ ಲೋಕದತ್ತ ಪಯಣ

ಹೊಸ ಲೋಕದತ್ತ ಪಯಣ

ಮಂಗಳನ ಯಾನ ಮಾನವರಿಗೆ ಹೊಸ ಹಾದಿಯ ಪ್ರಯಾಣವನ್ನು ತೋರಿಸುತ್ತದೆ. ಅಂದರೆ 60 ಮತ್ತು 70 ರ ದಶಕದಲ್ಲಿ ಅಪೋಲೋ ಬಾಹ್ಯಾಕಾಶಯಾನಿಗಳು ಮಾಡಿದ ಅದೇ ಹೆಜ್ಜೆ.

ಮಾನವ ಬ್ಯಾಕಪ್

ಮಾನವ ಬ್ಯಾಕಪ್

ಮಾನವತ್ವದ ಬ್ಯಾಕಪ್ ಅನ್ನು ನಾವು ಅಲ್ಲಿ ರಚಿಸುತ್ತಿದ್ದೇವೆ ಎಂದಾದಲ್ಲಿ ನಮ್ಮ ಪ್ರಯಾಣ ಮಂಗಳನಲ್ಲಿಗೆ ಅತ್ಯಗತ್ಯವಾಗಿದೆ.

ಹೆಚ್ಚುವರಿ ಸಂಪನ್ಮೂಲ

ಹೆಚ್ಚುವರಿ ಸಂಪನ್ಮೂಲ

ನೀರು, ಅತ್ಯಮೂಲ್ಯ ಲೋಹಗಳ ಅನ್ವೇಷಣೆ, ನಮ್ಮ ಮುಂದಿನ ಬದುಕಿಗೆ ಆಸರೆಯಾಗಿರಬಹುದಾದ ಕೆಲವೊಂದು ಅಂಶಗಳು ಕೆಂಪು ಗ್ರಹದಲ್ಲಿರಬಹುದು.

ನೈಸರ್ಗಿಕ ಗಮ್ಯಸ್ಥಾನ

ನೈಸರ್ಗಿಕ ಗಮ್ಯಸ್ಥಾನ

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಮಾರ್ಸ್ ಮುಂದಿನ ಗಮ್ಯಸ್ಥಾನ ಎಂದೆನಿಸಿದೆ. ಇನ್ನು ಮಾನವ ಸಂಕುಲವನ್ನು ರೇಡಿಯೇಶನ್‌ನಿಂದ ಕಾಪಾಡುವ ನೆಲದೊಳಗಿನ ನಿವಾಸವನ್ನಾಗಿ ಮಾರ್ಪಡಿಸಬಹುದಾದ ಗುಹೆ ವ್ಯವಸ್ಥೆಯ ಆಧಾರ ಮಂಗಳನ ನೆಲದಲ್ಲಿದೆ

ಸ್ಪೇಸ್ ಎಕ್ಸ್

ಸ್ಪೇಸ್ ಎಕ್ಸ್

ಮಂಗಳನಲ್ಲಿಗೆ ಮಾನವನನ್ನು ತಲುಪಿಸುವ ಸ್ಪೇಸ್ ಎಕ್ಸ್ ನಿರ್ಮಾಣ, ರಾಕೆಟ್‌ಗಳ ಕಟ್ಟುವಿಕೆ ಮತ್ತು ಇದಕ್ಕೆ ಬೆಂಬಲವನ್ನು ಒದಗಿಸುವ ಹಲವಾರು ಸಲಕರಣೆಗಳನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.

ಸುಂದರ ಪ್ರದೇಶ

ಸುಂದರ ಪ್ರದೇಶ

ಮಂಗಳನ ಅಂಗಳ ಅತ್ಯಂತ ಸುಂದರ ಪ್ರದೇಶವಾಗಿದೆ. ಕಡಿಮೆ ಅಂದರೆ 80,000 ಜನರ ವಾಸ್ತವ್ಯವನ್ನು ಇಲ್ಲಿ ಹೂಡಬೇಕೆಂಬುದು ಸಂಶೋಧಕರ ಅಭಿಮತವಾಗಿದೆ. ನಮ್ಮ ಸೌರ ವ್ಯವಸ್ಥೆಯಲ್ಲೇ ವಾಸಯೋಗ್ಯ ನೆಲವಾಗಿದೆ.

ಬದುಕು ಕೊಂಚ ಕಷ್ಟ

ಬದುಕು ಕೊಂಚ ಕಷ್ಟ

ಇಷ್ಟೆಲ್ಲಾ ಸವಲತ್ತುಗಳನ್ನು ಮಂಗಳ ಹೊಂದಿದ್ದರೂ ಇಲ್ಲಿ ಬದುಕು ನಡೆಸುವುದು ಕಷ್ಟಾಸಾಧ್ಯವಾಗಿದೆ. ಮಾನವನ ಆವಾಸ ಸ್ಥಾನವನ್ನಾಗಿ ಮಂಗಳನನ್ನು ಬದಲಾಯಿಸಬೇಕೆಂಬ ನಿರ್ಧಾರವಾದಲ್ಲಿ ನಮ್ಮ ಭೂಮಿಯ ವ್ಯವಸ್ಥಕ್ಕೆ ತಕ್ಕಂತೆ ಅದನ್ನು ಬದಲಾಯಿಸಬೇಕು.

ದುಬಾರಿ

ದುಬಾರಿ

ಭೂಮಿಯಿಂದಲೇ ಮಂಗಳನ ಅಂಗಳಕ್ಕೆ ನಾವು ಪ್ರತಿಯೊಂದು ಪದಾರ್ಥವನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ದುಬಾರಿ ವ್ಯವಸ್ಥೆ ಎಂದೇ ಪರಿಗಣಿಸಲಾಗಿದೆ.

ನಮ್ಮ ಆಹಾರವನ್ನು ನಾವೇ ತಯಾರಿಸಿಕೊಳ್ಳಬೇಕು

ನಮ್ಮ ಆಹಾರವನ್ನು ನಾವೇ ತಯಾರಿಸಿಕೊಳ್ಳಬೇಕು

ಇನ್ನು ಮಂಗಳನಲ್ಲಿಗೆ ಆಹಾರವನ್ನು ಆಮದು ಮಾಡಿಕೊಳ್ಳುವ ಬದಲಿಗೆ ಅಲ್ಲಿಯೇ ಆಹಾರವನ್ನು ನಾವು ಸಿದ್ಧಪಡಿಸಿಕೊಳ್ಳುತ್ತೇವೆ ಎಂದು ಹೊರಟಲ್ಲಿ ಇದು ಇನ್ನಷ್ಟು ತಲೆನೋವನ್ನುಂಟು ಮಾಡಬಹುದು.

ಮಂಗಳನ ಮಣ್ಣು

ಮಂಗಳನ ಮಣ್ಣು

ಬೆಳೆಗಳ ಬೆಳೆಸುವಿಕೆಗೆ ಮಂಗಳನ ಮಣ್ಣು ಯೋಗ್ಯವಿಲ್ಲ ಎಂದಾದಲ್ಲಿ ಅದರಲ್ಲಿರುವ ಪ್ರಬಲ ರಾಸಾಯನಿಕಗಳನ್ನು ತೆಗೆದುಹಾಕಬೇಕಾಗುತ್ತದೆ.

ಕಡಿಮೆ ಗುರುತ್ವಾಕರ್ಷಣ ಶಕ್ತಿ

ಕಡಿಮೆ ಗುರುತ್ವಾಕರ್ಷಣ ಶಕ್ತಿ

ನಮ್ಮ ಮುಂದಿನ ವಂಶಾವಳಿ ಕಡಿಮೆ ಗುರುತ್ವಾಕರ್ಷಣ ಶಕ್ತಿಗೆ ಹೊಂದಿಕೊಳ್ಳಬೇಕಾಗುತ್ತದೆ. ಹೆಚ್ಚುವರಿ ರೇಡಿಯೇಶನ್ ಮತ್ತು ಕಡಿಮೆ ಗಾಳಿಯ ಒತ್ತಡದ ಸಮಸ್ಯೆಗಳನ್ನು ಅವರು ಎದುರಿಸಬೇಕಾಗುತ್ತದೆ.

ಗ್ರೀನ್ ಹೌಸ್ ಗ್ಯಾಸ್

ಗ್ರೀನ್ ಹೌಸ್ ಗ್ಯಾಸ್

ಗ್ರಹವನ್ನು ಬೆಚ್ಚಗಿರಿಸಲು ನಾವು ಮೆಗಾಟನ್‌ಗಳಷ್ಟು ಗ್ರೀನ್ ಹೌಸ್ ಗ್ಯಾಸ್‌ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ.

ವರ್ಷಗಳೇ ಬೇಕು

ವರ್ಷಗಳೇ ಬೇಕು

ಆದರೆ ಇದೆಲ್ಲಾ ಬದಲಾವಣೆಗಳನ್ನು ನಾವು ಮಂಗಳನಲ್ಲಿ ಮಾಡಬೇಕು ಎಂದಾದಲ್ಲಿ ಇದಕ್ಕೆ ಸಾವಿರ ಮಿಲಿಯನ್ ವರ್ಷಗಳು ಹಿಡಿಯಬಹುದು. ಮತ್ತು ದುಬಾರಿ ಖರ್ಚನ್ನು ಭರಿಸಲು ನಾವು ಸಿದ್ಧರಾಗಿರಬೇಕು.

ಎಲ್ಲವನ್ನೂ ಎದುರಿಸಬೇಕು

ಎಲ್ಲವನ್ನೂ ಎದುರಿಸಬೇಕು

ಭೂಮಿಯ ವಾತಾವರಣಕ್ಕೆ ಹೊಂದಿಕೊಂಡ ನಾವು ಹೊಸ ಗ್ರಹದಲ್ಲಿ ಜೀವನ ಆರಂಭಿಸಬೇಕು ಎಂದಾದಲ್ಲಿ ಎಲ್ಲವನ್ನೂ ಸಹಿಸಲು ನಾವು ಸಿದ್ಧರಾಗಿರಬೇಕು.

ವಿಜ್ಞಾನಿಗಳ ಸತತ ಅನ್ವೇಷಣೆ

ವಿಜ್ಞಾನಿಗಳ ಸತತ ಅನ್ವೇಷಣೆ

ಮಾನವನ ಬದುಕನ್ನು ಮಂಗಳನಲ್ಲಿ ರೂಪಿಸಬೇಕೆಂಬ ಅದಮ್ಯ ಆಕಾಂಕ್ಷೆಯಲ್ಲಿ ತೊಡಗಿರುವ ವಿಜ್ಞಾನಿಗಳ ಇದಕ್ಕಾಗಿ ಸತತ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.

Most Read Articles
Best Mobiles in India

English summary
Why live on Earth when you can live on Mars? Well, strictly speaking, you can’t. Mars is a completely hostile environment to human life, combining extreme cold with an unbreathable atmosphere and intense radiation.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more