ಚಾಟ್‌ ಜಿಪಿಟಿ ಮೂಲಕ ಹ್ಯಾಕಿಂಗ್; ಹೆಚ್ಚಾಗುತ್ತಿವೆ ಸೈಬರ್‌ ಅಪರಾಧ!

|

ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾದಂತೆ ಅದರ ಹಲವಾರು ಪ್ರಯೋಜನಗಳೊಂದಿಗೆ ಹಲವು ಅನಾನುಕೂಲ ಸಹ ಸಂಭವಿಸುತ್ತಿದೆ. ದಿನನಿತ್ಯವೂ ಒಂದಲ್ಲಾ ಒಂದು ಸೈಬರ್‌ ಅಪರಾಧ ಪ್ರಕರಣಗಳು ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಂತೆ ಕಳೆದ ತಿಂಗಳು ಹಾಗೂ ಅದಕ್ಕಿಂತ ಹಿಂದಿನ ಅವಧಿಯಿಂದ AI ಟೂಲ್ ಚಾಟ್‌ ಜಿಪಿಟಿ ಮೂಲಕ ಸೈಬರ್‌ ಅಪರಾಧ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿರುವ ಸಂಬಂಧ ವರದಿಯಾಗಿದೆ.

ಚಾಟ್‌

ಹೌದು, ಟೆಕ್ ವಲಯದಲ್ಲಿ ಚಾಟ್‌ ಜಿಪಿಟಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಚಾಟ್‌ ಜಿಪಿಟಿ ವಿರುದ್ಧ ಅಪಸ್ವರ ಕೇಳಿಬರುತ್ತಿದೆ. ಇನ್ನು ಚಾಟ್‌ ಜಿಪಿಟಿ ಅನ್ನು ಪ್ರಶ್ನೆಗಳಿಗೆ ಉತ್ತರಿಸಲು, ವರದಿಗಳನ್ನು ಬರೆಯಲು ಬಳಕೆ ಮಾಡಲಾಗುತ್ತದೆ. ಹಾಗಿದ್ರೆ ಇದರಿಂದ ಏನೆಲ್ಲಾ ಘಟನೆಗಳು ಜರುಗಿವೆ. ಇದರಿಂದ ಹೇಗೆ ಎಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ದುರುದ್ದೇಶಕ್ಕೆ ಚಾಟ್‌ಜಿಪಿಟಿ ಬಳಕೆ

ದುರುದ್ದೇಶಕ್ಕೆ ಚಾಟ್‌ಜಿಪಿಟಿ ಬಳಕೆ

ಸೈಬರ್ ಅಪರಾಧಿಗಳು ದುರುದ್ದೇಶಪೂರಿತ ಚಟುವಟಿಕೆಗಳಿಗೆ ಚಾಟ್‌ಜಿಪಿಟಿ ಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಸೈಬರ್‌ ಸೆಕ್ಯುರಿಟಿ ಸಂಶೋಧನಾ ಸಂಸ್ಥೆಯ ಪ್ರಕಾರ, ದುರುದ್ದೇಶಪೂರಿತ ಡಿವೈಸ್‌ಗಳನ್ನು ಅಭಿವೃದ್ಧಿಪಡಿಸಲು ಅಪರಾಧಿಗಳು ಚಾಟ್‌ಜಿಪಿಟಿ ಅನ್ನು ಬಳಕೆ ಮಾಡಿದ್ದಾರೆ. ಅದರಲ್ಲೂ ಇನ್ಫೋಸ್ಟೀಲರ್‌ಗಳು, ಎನ್‌ಕ್ರಿಪ್ಶನ್ ಪರಿಕರಗಳನ್ನು ರಚಿಸುತ್ತಿದ್ದಾರೆ ಮತ್ತು ವಂಚನೆ ಚಟುವಟಿಕೆಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದಾರೆ ಎಂದು ಚೆಕ್‌ಪಾಯಿಂಟ್ ಸಂಶೋಧನೆಯಿಂದ ತಿಳಿದುಬಂದಿದೆ.

ಮರುಸೃಷ್ಟಿ

ಡಿಸೆಂಬರ್ 29, 2022 ರಂದು ಜನಪ್ರಿಯ ಭೂಗತ ಹ್ಯಾಕಿಂಗ್ ಫೋರಂನಲ್ಲಿ ಚಾಟ್‌ಜಿಪಿಟಿ - ಮಾಲ್‌ವೇರ್‌ನ ಪ್ರಯೋಜನಗಳು ಎಂಬ ಥ್ರೆಡ್ ಕಾಣಿಸಿಕೊಂಡಿದೆ. ಅಂತೆಯೇ ಮಾಲ್‌ವೇರ್ ಸ್ಟ್ರೈನ್‌ಗಳನ್ನು ಮರುಸೃಷ್ಟಿಸಲು ಚಾಟ್‌ಜಿಪಿಟಿಯನ್ನು ಪ್ರಯೋಗಿಸುತ್ತಿದ್ದಾರೆಂದು ಬಹಿರಂಗಪಡಿಸಿದ್ದಾರೆ. ಹಾಗೆಯೇ ವರದಿ ಮಾಡಲಾದ ಈ ಪೋಸ್ಟ್‌ಗಳಲ್ಲಿ ತಾಂತ್ರಿಕವಾಗಿ ಸಾಮರ್ಥ್ಯವಿರುವ ಸೈಬರ್ ಅಪರಾಧಿಗಳು ದುರುದ್ದೇಶಪೂರಿತ ಉದ್ದೇಶಗಳಿಗಾಗಿ ಚಾಟ್‌ಜಿಪಿಟಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಿದೆ.

ಪೋಸ್ಟ್‌ ಮಾಡಿದ್ದ ಸೈಬರ್‌ ಅಪರಾಧಿ

ಪೋಸ್ಟ್‌ ಮಾಡಿದ್ದ ಸೈಬರ್‌ ಅಪರಾಧಿ

ಡಿಸೆಂಬರ್ 21, 2022 ರಂದು, USDoD ಎಂದು ಕರೆಯಲ್ಪಡುವ ಸೈಬರ್‌ ಅಪರಾಧಿ ಪೈಥಾನ್ ಸ್ಕ್ರಿಪ್ಟ್ ಅನ್ನು ಪೋಸ್ಟ್ ಮಾಡಿದ್ದನಂತೆ. ಅದು ಅವನು ಅವರು ರಚಿಸಿದ ಮೊದಲ ಸ್ಕ್ರಿಪ್ಟ್ ಎಂದು ತಿಳಿದುಬಂದಿದೆ. ಕೋಡ್‌ನ ಶೈಲಿಯು ಓಪನ್‌ಎಐ ಕೋಡ್ ಅನ್ನು ಹೋಲುತ್ತದೆ ಎಂದು ಇನ್ನೊಬ್ಬ ಸೈಬರ್ ಕ್ರಿಮಿನಲ್ ಸಹ ಕಾಮೆಂಟ್ ಮಾಡಿದ್ದಾನೆ. ಯಾವುದೇ ಅಭಿವೃದ್ಧಿ ಕೌಶಲ್ಯಗಳನ್ನು ಹೊಂದಿರದ ಸಂಭಾವ್ಯ ಸೈಬರ್ ಅಪರಾಧಿಗಳು ದುರುದ್ದೇಶಪೂರಿತ ಡಿವೈಸ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ತಾಂತ್ರಿಕ ಸಾಮರ್ಥ್ಯಗಳೊಂದಿಗೆ ಸಂಪೂರ್ಣ ಸೈಬರ್ ಅಪರಾಧಿಗಳಾಗಲು ಚಾಟ್‌ಜಿಪಿಟಿ ಅನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು ಎಂದು ಚೆಕ್‌ಪಾಯಿಂಟ್ ರಿಸರ್ಚ್ ಉಲ್ಲೇಖಿಸಿದೆ.

ವಂಚನೆಗಾಗಿ ಚಾಟ್‌ಜಿಪಿಟಿ ಬಳಸುವುದು ಹೇಗೆ?

ವಂಚನೆಗಾಗಿ ಚಾಟ್‌ಜಿಪಿಟಿ ಬಳಸುವುದು ಹೇಗೆ?

ಚೆಕ್‌ಪಾಯಿಂಟ್ ರಿಸರ್ಚ್‌ನ ಪ್ರಕಾರ, ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಡಾರ್ಕ್ ವೆಬ್ ಮಾರ್ಕೆಟ್‌ಪ್ಲೇಸ್ ಸ್ಕ್ರಿಪ್ಟ್‌ಗಳನ್ನು ಹೇಗೆ ರಚಿಸುವುದು ಎಂದು ಸೈಬರ್ ಅಪರಾಧಿಗಳು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಕ್ರಿಪ್ಟೋಕರೆನ್ಸಿಗಳಲ್ಲಿನ ಎಲ್ಲಾ ಪಾವತಿಗಳೊಂದಿಗೆ ಕದ್ದ ಖಾತೆಗಳು ಅಥವಾ ಪಾವತಿ ಕಾರ್ಡ್‌ಗಳು, ಮಾಲ್‌ವೇರ್‌ ಅಥವಾ ಡ್ರಗ್ಸ್ ಮತ್ತು ಮದ್ದುಗುಂಡುಗಳಂತಹ ಅಕ್ರಮ ಅಥವಾ ಕದ್ದ ಸರಕುಗಳ ಆಟೋಮ್ಯಾಟಿಕ್‌ ವ್ಯಾಪಾರಕ್ಕೆ ಪ್ಲಾಟ್‌ಫಾರ್ಮ್‌ ಅನ್ನು ಒದಗಿಸುತ್ತದೆ.

ಸಂಬಂಧ

ಚೆಕ್ ಪಾಯಿಂಟ್‌ನಲ್ಲಿ ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್ ಮ್ಯಾನೇಜರ್ ಸೆರ್ಗೆಯ್ ಶೈಕೆವಿಚ್ ಈ ಸಂಬಂಧ ಮಾತನಾಡಿದ್ದು, ಸೈಬರ್ ಕ್ರಿಮಿನಲ್‌ಗಳು ಚಾಟ್‌ಜಿಪಿಟಿಯನ್ನು ತುಂಬಾ ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವಾರಗಳಲ್ಲಿ ದುರುದ್ದೇಶಪೂರಿತ ಕೋಡ್ ಅನ್ನು ಕ್ರಿಯೇಟ್‌ ಹ್ಯಾಕರ್‌ಗಳು ಅದನ್ನು ಬಳಸಲು ಪ್ರಾರಂಭಿಸಿರುವ ಪುರಾವೆಗಳನ್ನು ನಾವು ನೋಡಿದ್ದೇವೆ. ಕೋಡ್ ಬರವಣಿಗೆಯಲ್ಲಿ ಡೆವಲಪರ್‌ಗಳಿಗೆ ಸಹಾಯ ಮಾಡಲು ಚಾಟ್‌ಜಿಪಿಟಿಯನ್ನು ಉತ್ತಮವಾಗಿ ಹೇಗೆ ಬಳಕೆ ಮಾಡಿಕೊಳ್ಳಬಹುದೋ ಅದೇ ರೀತಿ ದುರುದ್ದೇಶಪೂರಿತ ಉದ್ದೇಶಗಳಿಗಾಗಿಯೂ ಬಳಸಬಹುದು ಎಂದು ತಿಳಿಸಿದ್ದಾರೆ.

Best Mobiles in India

English summary
How ChatGPT may be used by cybercriminals for hacking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X