ರಿಲಾಯನ್ಸ್ ಜಿಯೋ 'ವೆಲ್ಕಮ್ ಆಫರ್‌' ಅನ್ನು 2017 ಡಿಸೆಂಬರ್‌ ವರೆಗೆ ವಿಸ್ತರಣೆ ಹೇಗೆ?

By Suneel
|

ರಿಲಾಯನ್ಸ್ ಜಿಯೋ 4G ಸಿಮ್ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲೇ ಹೊಸ ಅಲೆಯನ್ನು ಎಬ್ಬಿಸಿರುವ ಬಗ್ಗೆ ಎಲ್ಲರಿಗೂ ಮಾಹಿತಿ ತಿಳಿದೇ ಇದೆ. ಪ್ರಿವೀವ್‌ ಆಫರ್‌ ನಂತರ 'ಮುಕೇಶ್‌ ಅಂಬಾನಿ' ಸೆಪ್ಟೆಂಬರ್‌ 5 ರಿಂದ ಪ್ರತಿಯೊಬ್ಬರಿಗೂ ಸಿಮ್‌ ದೊರೆಯಲಿದ್ದು, ವೆಲ್ಕಮ್‌ ಆಫರ್ 2016 ಡಿಸೆಂಬರ್‌ ಅಂತ್ಯದವರೆಗೂ ಮಾತ್ರ ಇರುತ್ತದೆ ಎಂದು ಪ್ರಕಟಣೆ ಹೊರಡಿಸಿದ್ದರು. ಆದರೆ ಇಂದಿನ ಲೇಖನದಲ್ಲಿ ಯಾವುದೇ 4G ಸ್ಮಾರ್ಟ್‌ಫೊನ್ ಬಳಕೆದಾರರು 2017 ಡಿಸೆಂಬರ್‌ ಅಂತ್ಯದ ವರೆಗೂ ವೆಲ್ಕಮ್‌ ಆಫರ್ ಅನ್ನು ಹೇಗೆ ವಿಸ್ತರಣೆ ಮಾಡಿಕೊಳ್ಳಬಹುದು ಎಂದು ತಿಳಿಸುತ್ತಿದ್ದೇವೆ.

ರಿಲಾಯನ್ಸ್ ಜಿಯೋ (Reliance Jio) 'ವೆಲ್ಕಮ್‌ ಆಫರ್'‌ಗಳನ್ನು ಕಂಪನಿಯ ಲೈಫ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ 2017 ಡಿಸೆಂಬರ್‌ ವರೆಗೆ ವಿಸ್ತರಣೆ ಮಾಡುತ್ತಿದೆ ಎಂಬ ಮಾಹಿತಿ ಆನ್‌ಲೈನ್‌ ವೇದಿಕೆಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ ವೆಲ್ಕಮ್‌ ಆಫರ್‌ನಲ್ಲಿ 2017 ಡಿಸೆಂಬರ್‌ ಅಂತ್ಯದ ವರೆಗೆ ಕೇವಲ ಅನ್‌ಲಿಮಿಟೆಡ್ ಡಾಟಾ ಸೇವೆ ಲಭ್ಯವಿದ್ದು, ಜಿಯೋ ಆಪ್‌ಗಳು ಮತ್ತು ಎಸ್‌ಎಂಎಸ್‌ ಸೇವೆಗಳು ಇರುವುದಿಲ್ಲ.

ರಿಲಾಯನ್ಸ್ ಜಿಯೋ 4G ಸಿಮ್ ಡೌನ್‌ಲೋಡ್‌ ವೇಗವನ್ನು, ಮೊಬೈಲ್‌ ಬ್ರೌಸರ್‌ನೊಂದಿಗೆ ಹೆಚ್ಚಿಸಲು ಟ್ರಿಕ್ಸ್‌ಗಳು

ಇಂದಿನ ಲೇಖನದಲ್ಲಿ 4G ಸಪೋರ್ಟ್‌ ಆಗುವ ಯಾವುದೇ ಫೋನ್‌ಗಳಲ್ಲಿ, ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್‌ ಅನ್ನು 2017 ಡಿಸೆಂಬರ್‌ ಅಂತ್ಯದ ವರೆಗೆ ಹೇಗೆ ವಿಸ್ತರಣೆ(ಬಳಕೆ) ಮಾಡಿಕೊಳ್ಳುವುದು ಎಂಬ ಟ್ರಿಕ್ಸ್‌ಗಳನ್ನು ತಿಳಿಸುತ್ತಿದ್ದೇವೆ. ಮಾಹಿತಿಯನ್ನು ಲೇಖನದ ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ಹಂತ 1ːನಿಮ್ಮ ಸ್ಮಾರ್ಟ್‌ಫೋನ್ ರೂಟೆಡ್‌ ಆಗಿರಲಿ

ಹಂತ 1ːನಿಮ್ಮ ಸ್ಮಾರ್ಟ್‌ಫೋನ್ ರೂಟೆಡ್‌ ಆಗಿರಲಿ

ಪ್ರಕ್ರಿಯೆ ಆರಂಭಿಸುವ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ ರೂಟೆಡ್ ಆಗಿದೆಯೇ ಎಂದು ಪರಿಶೀಲಿಸಿ. ಫೋನ್‌ ರೂಟ್‌ ಆಗದೇ ಈ ಟ್ರಿಕ್ಸ್ ವರ್ಕ್‌ ಆಗುವುದಿಲ್ಲ. ಅಂದಹಾಗೆ ಈ ಎಂಜಾಯ್ ಆಫರ್‌ ಐಫೋನ್‌ ಬಳಕೆದಾರರಿಗೆ ಲಭ್ಯವಿಲ್ಲ.

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ಹೇಗೆ?

ಹಂತ 2ː Xposed Installer ಮತ್ತು IMEI Changer ಆಪ್‌ ಇನ್‌ಸ್ಟಾಲ್‌ ಮಾಡಿ

ಹಂತ 2ː Xposed Installer ಮತ್ತು IMEI Changer ಆಪ್‌ ಇನ್‌ಸ್ಟಾಲ್‌ ಮಾಡಿ

ಈ ಹಂತದಲ್ಲಿ 'Xposed Installer' ಆಪ್‌ ಡೌನ್‌ಲೋಡ್‌ ಮಾಡಿ. ಈ ಆಪ್‌ ಸುಲಭವಾಗಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಡಿವೈಸ್‌ಗೆ ಇನ್‌ಸ್ಟಾಲ್‌ ಆಗುತ್ತದೆ. ಆದರೆ ಲಾಲಿಪಪ್‌ ಮತ್ತು ಮಾರ್ಷ್‌ಮಲ್ಲೋ ಬಳಕೆದಾರರು ರಿಕವರಿಯಿಂದ ಫೈಲ್‌ ಅನ್ನು ಫ್ಲ್ಯಾಶ್‌ ಮಾಡಬೇಕು. ನಂತರ ಇನ್‌ಸ್ಟಾಲ್ ಮಾಡಬೇಕು.

'Xposed Installer' ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರ, Xposed IMEI Changer' ಆಪ್‌ ಅನ್ನು ಡೌನ್‌ಲೋಡ್‌ ಮಾಡಿ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.

ಹಂತ 3ː  IMEI Changer ಅನ್ನು ಎನೇಬಲ್‌ ಮಾಡಿ, ಸ್ಮಾರ್ಟ್‌ಫೋನ್‌ ರೀಬೂಟ್‌ ಮಾಡಿ

ಹಂತ 3ː IMEI Changer ಅನ್ನು ಎನೇಬಲ್‌ ಮಾಡಿ, ಸ್ಮಾರ್ಟ್‌ಫೋನ್‌ ರೀಬೂಟ್‌ ಮಾಡಿ

ಎರಡು ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿದ ನಂತರ, Xposed Installer ಆಪ್‌ನಲ್ಲಿ IMEI Changer ಅನ್ನು ಎನೇಬಲ್ ಮಾಡಿ. ನಂತರ ಸ್ಮಾರ್ಟ್‌ಫೋನ್‌ ಅನ್ನು ರೀಬೂಟ್‌ ಮಾಡಿ. ಈ ಟ್ರಿಕ್ ವರ್ಕ್‌ ಆಗಲು ರಿಬೂಟ್‌ ಮಾಡುವುದು ಮುಖ್ಯ.

ಹಂತ 4ː  ಸ್ಮಾರ್ಟ್‌ಫೋನ್‌ನ IMEI ನಂಬರ್ ಬದಲಿಸಿ

ಹಂತ 4ː ಸ್ಮಾರ್ಟ್‌ಫೋನ್‌ನ IMEI ನಂಬರ್ ಬದಲಿಸಿ

ಈ ಹಂತದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನ IMEI ನಂಬರ್‌ ಅನ್ನು ಬದಲಿಸಿ. ಲೈಫ್‌ ಫೋನ್‌ ಬಳಕೆದಾರರು ನಿಮ್ಮ ಹತ್ತಿರದ ರಿಲಾಯನ್ಸ್ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಿ ಸುಲಭವಾಗಿ IMEI ನಂಬರ್‌ ಅನ್ನು ಪಡೆಯಿರಿ. ಲೈಫ್‌ ಸ್ಮಾರ್ಟ್‌ಫೋನ್‌ ಬಳಕೆದಾರರಾಗಿರದಿದ್ದಲ್ಲಿ ಕೆಳಗೆ ತಿಳಿಸಿದ IMEI ನಂಬರ್‌ ಅನ್ನು ಬಳಸಿರಿ. ಆದರೆ ಕೊನೆಯ ನಾಲ್ಕು ಸಂಖ್ಯೆಗಳನ್ನು ನಿಮ್ಮದೇ ಆದ ಸಂಖ್ಯೆ ನೀಡಿರಿ.
IMEI Number:91150425388****

ಹಂತ 5ː  MyJio ಆಪ್ ಡೌನ್‌ಲೋಡ್ ಮಾಡಿ

ಹಂತ 5ː MyJio ಆಪ್ ಡೌನ್‌ಲೋಡ್ ಮಾಡಿ

IMEI ನಂಬರ್ ಬದಲಿಸಿದ ನಂತರ, ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಮೈಜಿಯೋ ಆಪ್ ಅನ್ನು ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿ. 'Install All' ಬಟನ್‌ ಕ್ಲಿಕ್ ಮಾಡಿ ಎಲ್ಲಾ ಜಿಯೋ ಆಪ್‌ಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿ. ಈ ಪ್ರಕ್ರಿಯೆ ಎಲ್ಲಾ ಲೈಪ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಕಡ್ಡಾಯ.

ಹಂತ 6ː  ಮತ್ತೊಮ್ಮೆ ಫೋನ್‌ ರೀಬೂಟ್‌ ಮಾಡಿ

ಹಂತ 6ː ಮತ್ತೊಮ್ಮೆ ಫೋನ್‌ ರೀಬೂಟ್‌ ಮಾಡಿ

ಎಲ್ಲಾ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿದ ನಂತರ ಮತ್ತೊಮ್ಮೆ ಸ್ಮಾರ್ಟ್‌ಫೋನ್ ರೀಬೂಟ್ ಮಾಡಿ

ಹಂತ 7ː   ಮೈಜಿಯೋ ಆಪ್‌ ಓಪನ್ ಮಾಡಿ ಸೈನಪ್‌ ಆಗಿ

ಹಂತ 7ː ಮೈಜಿಯೋ ಆಪ್‌ ಓಪನ್ ಮಾಡಿ ಸೈನಪ್‌ ಆಗಿ

ಸ್ಮಾರ್ಟ್‌ಫೋನ್‌ ರೀಬೂಟ್ ಆದ ನಂತರ ಮೈಜಿಯೋ ಆಪ್ ಓಪನ್‌ ಮಾಡಿ ಸೈನಪ್‌ ಆಗಿ. ನಂತರ ಪ್ರೊಸೆಸ್‌ ಮುಂದುವರೆಸಿ. ಒಮ್ಮೆ ಸೈನ್‌ ಇನ್‌ ಆದರೆ , ನಂತರ ನೀವು ವೆಲ್ಕಮ್ ಆಫರ್‌ 2017 ಡಿಸೆಂಬರ್‌ ವರೆಗೆ ವಿಸ್ತರಣೆ ಆಗಿರುವುದನ್ನು ನೋಡಬಹುದು. ಅಲ್ಲದೇ 2017 ಡಿಸೆಂಬರ್‌ ಅಂತ್ಯದವರೆಗೆ ಜಿಯೋದ ಉಚಿತ ಸೇವೆ ಪಡೆಯಬಹುದು.

Best Mobiles in India

Read more about:
English summary
How to Extend Reliance Jio Welcome Offer Until December 2017 [100% Working]. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X